ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಸಂಘರ್ಷವಾಗಲಿದೆ
– ಸ್ವಪಕ್ಷದ ವಿರುದ್ಧವೇ ಮಾಜಿ ಸಚಿವ ಗುಡುಗುPauseUnmute Loaded: 29.16% Remaining Time -8:11Close Player ಚಿತ್ರದುರ್ಗ: ಬಿಜೆಪಿ, ಜೆಡಿಎಸ್ ಮೈತ್ರಿ ಕೇವಲ ರಾಷ್ಟ್ರೀಯ ನಾಯಕರ ಮಧ್ಯೆ ಚರ್ಚೆ ಆಗಿದೆ. ಆದರೆ ಕಾರ್ಯಕರ್ತರಲ್ಲಿ ಸಾಮರಸ್ಯ ಮೂಡದಿದ್ದರೆ ಎರಡು ಪಕ್ಷಗಳ ಮಧ್ಯೆ ಸಂಘರ್ಷವಾಗಲಿದೆ ಎಂದು ಮಾಜಿ ಸಚಿವ ಬಿಜೆಪಿ ಮುಖಂಡ ರೇಣುಕಾಚಾರ್ಯ ಭವಿಷ್ಯ ನುಡಿದಿದ್ದಾರೆ. ಚಿತ್ರದುರ್ಗದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳೊಂದಿಗೆ ರೇಣುಕಾಚಾರ್ಯ ಮಾತನಾಡಿದರು. ನಿನ್ನೆಯಷ್ಟೇ ಸ್ವಪಕ್ಷಿಯರ ವಿರುದ್ಧ ಮಾಜಿ ಸಚಿವ ಸೋಮಣ್ಣ ಗುಡುಗಿದ್ದರು. ಇದರ ಬೆನ್ನಲ್ಲೆ ಬಿಜೆಪಿ ನಾಯಕರ […]







































































































































































































































































































































































































































































































































































































































































































































































































































































































































































































































































































































