November 4, 2026

ಯಾದವ ಸಮಾಜವನ್ನ ಕಡೆಗಣಿಸಿತು; ಬಿಜೆಪಿ ತೊರೆಯಲು ಕಾರಣ ತಿಳಿಸಿದ ಪೂರ್ಣಿಮಾ ಶ್ರೀನಿವಾಸ್‌

ಚಿತ್ರದುರ್ಗ: ಹಿರಿಯೂರು ಕ್ಷೇತ್ರದ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಕಾಂಗ್ರೆಸ್‌ ಸೇರಲು ನಿರ್ಧರಿಸಿದ್ದಾರೆ. ಇದೇ ತಿಂಗಳ ಅ.20 ರಂದು ಸೇರ್ಪಡೆಯಾಗುವ ಸಾಧ್ಯತೆಗಳಿದ್ದು, ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದಾರೆ. ಚಿತ್ರದುರ್ಗದ ಕೃಷ್ಣ ಯಾದವಾನಂದ ಮಠಕ್ಕೆ ಭೇಟಿ ನೀಡಿದ್ದ ಮಾಜಿ ಶಾಸಕಿ ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ. ಕೃಷ್ಣ ಯಾದವಾನಂದ ಶ್ರೀ ಸಮ್ಮುಖದಲ್ಲಿ ಸಮಾಜದ ಮುಖಂಡರೊಂದಿಗೆ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಬಿಜೆಪಿ ಪಕ್ಷ ತೊರೆಯಲು ಕಾರಣ ತಿಳಿಸಿದ್ದಾರೆ.  ಅಕ್ಟೋಬರ್‌ 20ಕ್ಕೆ ಕಾಂಗ್ರೆಸ್‌ […]

ಪ್ರಿಯತಮೆಯ ಬೆತ್ತಲೆ ಫೋಟೋ ಸ್ನೇಹಿತರೊಂದಿಗೆ ಹಂಚಿಕೊಳ್ತಿದ್ದ ವಿಕೃತ ಕಾಮಿ ಅಂದರ್

ಬೆಂಗಳೂರು: ಅವರಿಬ್ಬರದ್ದು ಸರಿಸುಮಾರು 10 ವರ್ಷದ ಪ್ರೀತಿ. ಇನ್ನೇನು ಮದುವೆಯ ಖುಷಿಯಲ್ಲಿದ್ದ ಆ ಯುವತಿಗೆ ಶಾಕ್ ನೀಡಿತ್ತು ಅದೊಂದು ಫೋಟೋ. ಫೋಟೋ ಬೆನ್ನತ್ತಿದ್ದ ಪೊಲೀಸರು ಆ ಕೇಸ್‌ಗೆ ಬಿಗ್ ಟ್ವಿಸ್ಟ್ ನೀಡಿದ್ದಾರೆ. ಪ್ರಿಯತಮೆಯ ಬೆತ್ತಲೆ ಫೋಟೋಗಳನ್ನು ಸ್ನೇಹಿತರೊಂದಿಗೆ ಹಂಚಿಕೊಂಡು ವಿಕೃತ ಆನಂದ ಪಡ್ತಿದ್ದ ಯುವಕ ಪೊಲೀಸರ ಅತಿಥಿಯಾಗಿದ್ದಾನೆ. ತಮಿಳುನಾಡು ಮೂಲದ ಆ ಯುವಕ-ಯುವತಿ ಸುಮಾರು 10 ವರ್ಷದಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಶಿಕ್ಷಣ ಮುಗಿದ ತಕ್ಷಣ ಮದುವೆ ಆಗೋ ಪ್ಲಾನ್ ಕೂಡ ಮಾಡಿದ್ದರು. ಅಷ್ಟರಲ್ಲಿ ಯುವತಿಯ ಬೆತ್ತಲೆ ಫೋಟೋವೊಂದು […]

ಸ್ವಾವಲಂಬಿ ಭಾರತವನ್ನು ರಚಿಸಲು ಬದ್ಧರಾಗಿ: ವಿದ್ಯಾರ್ಥಿಗಳಿಗೆ ರಾಜ್ಯಪಾಲರ ಕರೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಶಿಕ್ಷಣವನ್ನು ಕೌಶಲ್ಯ ಮತ್ತು ನೈತಿಕ ಮೌಲ್ಯಗಳೊಂದಿಗೆ ಜೋಡಿಸುವ ಮೂಲಕ ಸ್ವಾವಲಂಬಿ ಭಾರತವನ್ನು ರಚಿಸಲು ಬದ್ಧರಾಗಿದ್ದಾರೆ. ಈ ಬದ್ಧತೆಯನ್ನು ಪೂರೈಸಲು ಪ್ರತಿಯೊಬ್ಬರ ಕೊಡುಗೆಯನ್ನು ನಿರೀಕ್ಷಿಸಲಾಗಿದೆ. ಪ್ರಧಾನಿಗಳ ಈ ಆಶಯವನ್ನು ಈಡೇರಿಸಲು ವಿದ್ಯಾರ್ಥಿಗಳು ಕೈಜೋಡಿಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕರೆಕೊಟ್ಟಿದ್ದಾರೆ. ನಗರದ ರೇವಾ ವಿಶ್ವವಿದ್ಯಾಲಯದ 8ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯದ 75 ವರ್ಷಗಳಲ್ಲಿ ದೇಶವು ಎಲ್ಲಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿಯನ್ನು ಸಾಧಿಸಿದೆ. ದೇಶದ ಆರ್ಥಿಕತೆಯನ್ನು ಬಲಪಡಿಸಿದೆ. ಇಂದು ನಮ್ಮ ಆರ್ಥಿಕತೆಯು ವಿಶ್ವದ […]

ವೀರಪ್ಪನ್‌ ದೇವರು, ಮಲೆ ಮಹದೇಶ್ವರ ದೆವ್ವ ಅಂತಾರೆ:

ಮೈಸೂರು: ಮಹಿಷಾ ದಸರಾದಂತಹ ವಿಕೃತಿಗಳನ್ನು ಈಗಲೇ ಸದೆ ಬಡಿಯಬೇಕು. ಇಲ್ಲದಿದ್ದರೆ ವೀರಪ್ಪನ್ ನಮ್ಮ ದೇವರು. ಮಲೆ ಮಹದೇಶ್ವರ ದೆವ್ವ ಎನ್ನುತ್ತಾರೆ ಎಂದು ಮಹಿಷ ದಸರಾ ಆಚರಿಸುವವರ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದರು. ನಗರದಲ್ಲಿ ಚಾಮುಂಡಿ ಬೆಟ್ಟ ಚಲೋ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಹಿಷ ದಸರಾದಂಥ ವಿಕೃತಿಗಳನ್ನು ಈಗಲೇ ಸದೆಬಡಿಯಬೇಕು. ಇಲ್ಲದೆ ಇದ್ದರೆ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿ ವೀರಪ್ಪನ್ ನಮ್ಮ ದೇವರು. ನಮ್ಮ ಮೂಲ ಪುರುಷ ಅಂತ ಹೇಳಿ ಮಲೈ ಮಹದೇಶ್ವರನನ್ನು ದೆವ್ವ ಮಾಡುತ್ತಾರೆ. […]

ಬೈಕ್‌ಗೆ ಬಿಎಂಟಿಸಿ ಬಸ್ ಡಿಕ್ಕಿ – ಮೂರು ವರ್ಷದ ಮಗು ಸಾವು

ಬೆಂಗಳೂರು: ಬೈಕ್‌ಗೆ ಹಿಂಬದಿಯಿಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡದ ಪರಿಣಾಮ ಮೂರು ವರ್ಷದ ಮಗು ಸ್ಥಳದಲ್ಲೇ ಸಾವನ್ನಪಿರುವ ಘಟನೆ ಬೆಂಗಳೂರಿನ ಗಾರೇಪಾಳ್ಯ ಜಂಕ್ಷನ್‌ನಲ್ಲಿ ನಡೆದಿದೆ. ಅಯಾನ್ (3) ಮೃತಪಟ್ಟ ಮಗು. ಬೆಂಗಳೂರಿನ ಗಾರೇಪಾಳ್ಯ ಜಂಕ್ಷನಲ್ಲಿ ಭಾನುವಾರ ಸಂಜೆ ಘಟನೆ ನಡೆದಿದೆ. ಮಗು ದೊಡ್ಡಮ್ಮನ ಜೊತೆ ವಾಸವಾಗಿತ್ತು. ಭಾನುವಾರ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದ ಸಂದರ್ಭ ಹಿಂಬಂದಿಯಿಂದ ಬೈಕ್‌ಗೆ ಬಿಎಂಟಿಸಿ ಬಸ್ ಡಿಕ್ಕಿಯಾಗಿದೆ. ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಮಗು ಕೆಳಗಡೆ ಬಿದ್ದಿದೆ.  ಮಗು ಕೆಳಗಡೆ ಬೀಳುತ್ತಿದ್ದಂತೆ ಬಿಎಂಟಿಸ್ ಬಸ್ಸಿನ ಚಕ್ರ […]

ಪಂಚ ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟ – ನ.7 ಕ್ಕೆ ಮೊದಲ, ನ.30 ರಂದು ಕೊನೆ ಚುನಾವಣೆ

ನವದೆಹಲಿ: ಮಿಜೋರಾಂ, ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳ ವಿಧಾನಸಭೆಗಳಿಗೆ ಕೊನೆಗೂ ಚುನಾವಣಾ ದಿನಾಂಕ ಘೋಷಣೆಯಾಗಿದೆ. ನವೆಂಬರ್‌ 7 ರಿಂದ 30 ರ ವರೆಗೆ ಪಂಚ ರಾಜ್ಯಗಳಿಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ನವೆಂಬರ್‌ 7 ರಂದು ಮಿಜೋರಾಂನಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಛತ್ತೀಸಗಢದಲ್ಲಿ ನ.7 ಮತ್ತು ನ.17 ರಂದು ಎರಡು ಹಂತಗಳಲ್ಲಿ ಮತದಾನ ಇರುತ್ತದೆ. ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯು ನ.17 ರಂದು ಒಂದೇ ಹಂತದಲ್ಲಿ ನಡೆಯಲಿದೆ. ನಂತರ ನ.23 ರಂದು ರಾಜಸ್ಥಾನದಲ್ಲಿ […]

ಟೊಮೆಟೋ ದರ ಭಾರೀ ಇಳಿಕೆ – ಕೆಜಿಗೆ 4 ರೂ.

ಕೋಲಾರ: ಕಳೆದ ಮೂರು ತಿಂಗಳ ಹಿಂದೆ ಕಿಚನ್ ಕ್ವೀನ್ ಟೊಮೆಟೋಗೆ ಬಂಗಾರದ ಬೆಲೆ ಬಂದಿತ್ತು. ಟೊಮೆಟೋ ಬೆಳೆದ ರೈತರೇ ಕೋಟ್ಯಧಿಪತಿಗಳು ಎಂಬಂತೆ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದ್ದರು. ಆದರೆ ಅಂಥಾದೊಂದು ಸಮಯ ಕಳೆದು ಇನ್ನೂ ಮೂರು ತಿಂಗಳು ಕಳೆದಿಲ್ಲ. ಅಷ್ಟರಲ್ಲೇ ಟೊಮೆಟೋ ಬೆಳೆದ ರೈತನೇ ದುರಾದೃಷ್ಟವಂತ ಎನ್ನುವಂತ ಸ್ಥಿತಿಗೆ ಬಂದು ನಿಂತಿದೆ. ಅದಕ್ಕಾಗಿಯೇ ಟೊಮೆಟೋವನ್ನು ಜೂಜಾಟದ ಬೆಳೆ ಎಂದು ಇಲ್ಲಿನ ರೈತರು ಕರೆಯುತ್ತಾರೆ. ಟೊಮೆಟೋಗೆ ಬೆಲೆ ಬಂದರೆ ಬಂಪರ್, ಇಲ್ಲವಾದರೆ ಬೆಳೆ ಬೆಳೆದ ರೈತರ ಪಾಪರ್ ಎನ್ನುವಂತಾಗಿದೆ. […]

ಬೆಳಗಾವಿ ಹಿಂಡಲಗಾ ಜೈಲಿಗೆ ಬಾಂಬ್ ಬೆದರಿಕೆ ಕರೆ!

ಬೆಳಗಾವಿ: ಬಂದಿಖಾನೆ ಇಲಾಖೆಯ ಉತ್ತರ ವಲಯ ಡಿಐಜಿಪಿ ಟಿಪಿ ಶೇಷ ಅವರಿಗೆ ಅನಾಮಧೇಯ ಬೆದರಿಕೆ ಕರೆ ಬಂದಿದ್ದು ಜೈಲು ಅಧಿಕಾರಿಗಳಲ್ಲಿ ಆತಂಕ ಶುರುವಾಗಿದೆ. ಬೆಂಗಳೂರು ಕಾರಾಗೃಹ, ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹ ಸ್ಫೋಟಿಸಲಾಗುವುದು. ಅಲ್ಲದೇ ತಾವು ವಾಸಿಸುವ ವಸತಿ ಗೃಹದ ಮೇಲೆ ಬಾಂಬ್ ಸ್ಫೋಟಿಸುವುದಾಗಿ ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದೆ. ಹಿಂಡಲಗಾ ಜೈಲಿನ ಸಿಬ್ಬಂದಿಯ ಪರಿಚಯಸ್ಥನೆಂದು ಹೇಳಿ ಬೆದರಿಕೆ ಕರೆ ಮಾಡಿ, ಜೈಲಿನಲ್ಲಿ ಗಲಭೆ ಸೃಷ್ಟಿಸಿ ಹಲ್ಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಹಿಂಡಲಗಾ ಜೈಲಿನ ಹೆಡ್ ವಾಡರ್‌ಗಳಾದ […]

ದೇವೇಗೌಡರ ಮೈತ್ರಿ ನಿರ್ಧಾರಕ್ಕೆ ನನ್ನ ಒಪ್ಪಿಗೆ ಇದೆ

ಬೆಂಗಳೂರು: ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೂ ಪಕ್ಷದ ಸಿದ್ಧಾಂತ ಬಿಡುವುದಿಲ್ಲ. ದೇವೇಗೌಡರ ನಿರ್ಧಾರ ಜೊತೆ ನಾನು ಇರುತ್ತೇನೆ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್ ತಿಳಿಸಿದ್ದಾರೆ. ಬಿಜೆಪಿ ಜೊತೆ ಮೈತ್ರಿ ವಿಚಾರವಾಗಿ ಮುಸ್ಲಿಂ ಸಮುದಾಯದ ನಾಯಕರ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದೇವೇಗೌಡರ ಮನೆಗೆ ನಾನು ಮೊದಲ ಬಾರಿಗೆ ಹೋದ ಕೂಡಲೇ ನನ್ನನ್ನು ಆಯ್ಕೆ ಮಾಡಿದ್ದರು. ದೇವೇಗೌಡರಿಗೆ ನಿಷ್ಠೆಯಾಗಿ ಇರುತ್ತೇನೆ ಅಂತ ಅವತ್ತೇ ನಾನು ಹೇಳಿದ್ದೆ. ಈಗಲೂ ನಾನು ದೇವೇಗೌಡರ ಜೊತೆ […]

ಕೆಆರ್‌ಎಸ್‌ ಡ್ಯಾಂನಿಂದ ತಮಿಳುನಾಡಿಗೆ ಮುಂದುವರಿದ ನೀರು ಬಿಡುಗಡೆ

ಮಂಡ್ಯ: ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಬಿಡುಗಡೆ ಮುಂದವರಿಕೆಯಾಗಿದ್ದು, ಇಂದು (ಸೋಮವಾರ) 2 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ತಮಿಳುನಾಡಿಗೆ ಹೋಗುತ್ತಿದೆ. ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಬೇಕೆಂದು ನಿತರಂತರವಾಗಿ ಹೋರಾಟ ನಡೆಯುತ್ತಿದೆ. ಆದರೆ ಸರ್ಕಾರ ಹೋರಾಟಕ್ಕೆ ಸೊಪ್ಪು ಹಾಕದೆ ತಮಿಳುನಾಡಿಗೆ ನೀರು ಹರಿಸುತ್ತಿದೆ. ಇಂದು ನಾಲೆ ಹಾಗೂ ತಮಿಳುನಾಡಿಗೆ ಸೇರಿ ಡ್ಯಾಂನಿಂದ 5,973 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಡ್ಯಾಂ ಒಳಹರಿವಿನ ಪ್ರಮಾಣ 3503 ಕ್ಯೂಸೆಕ್‌ಗೆ ಕುಸಿತ ಕಂಡಿದ್ದು, 124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ 100.92 ಅಡಿ […]