November 4, 2026

42 ಕೋಟಿ ಹಣ ಸಿಕ್ಕಿದ್ದು ಅಂಬಿಕಾಪತಿ ಮಗಳ ನಿವಾಸದಲ್ಲಿ!

ಬೆಂಗಳೂರು: ಸಿಲಿಕಾನ್ ಸಿಟಿಯ ಇತಿಹಾಸದಲ್ಲಿಯೇ ಅತೀ ದೊಡ್ಡ ಐಟಿ ದಾಳಿಯಾಗಿದ್ದು, ಅಧಿಕಾರಿಗಳಿಗೆ ಬರೋಬ್ಬರಿ 42 ಕೋಟಿ ರೂ. ಸಿಕ್ಕಿದೆ. ಈ ಹಣ ಸಿಕ್ಕಿದ್ದು ಬಿಬಿಎಂಪಿ ಗುತ್ತಿಗಾರರ ಸಂಘದ ಅಧ್ಯಕ್ಷ ಆರ್. ಅಂಬಿಕಾಪತಿ ಮಗಳ ನಿವಾಸದಲ್ಲಿ. ಹೌದು. ಅಂಬಿಕಾಪತಿಗೆ ಇಬ್ಬರು ಹೆಣ್ಮಕ್ಕಳಿದ್ದಾರೆ. ಇದೀಗ ಓರ್ವ ಮಗಳು ದಿವ್ಯಾ ಮನೆಯಲ್ಲಿ ಐಟಿ ಅಧಿಕಾರಿಗಳಿಗೆ ಕಂತೆ ಕಂತೆ ಹಣ ಸಿಕ್ಕಿದೆ ಎಂಬ ಮಾಹಿತಿ ಲಭಿಸಿದೆ. ಮಾನ್ಯತಾ ಟೆಕ್ ಪಾರ್ಕ್‍ನಲ್ಲಿರುವ ಮನೆ ಮೇಲೆ ಗುರುವಾರ ಮಧ್ಯರಾತ್ರಿಯೇ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾಲ್ವರು ಐಟಿ […]

ಸಿಎಂ ಇಬ್ರಾಹಿಂ ಎಲ್ಲೂ ಹೋಗಲ್ಲ, ಜೆಡಿಎಸ್‌ನಲ್ಲೇ ಇರ್ತಾರೆ

ವಿಜಯಪುರ: ಸಿಎಂ ಇಬ್ರಾಹಿಂ ಜೆಡಿಎಸ್ ಬಿಡೋದಿಲ್ಲ. ಬಿಜೆಪಿ ಜೊತೆಗೆ ಹೋಗಲು ಇಬ್ರಾಹಿಂ ವಿರೋಧವಿಲ್ಲ. ಅವರೇ ಮುಂದೆ ನಿಂತು ನನ್ನ ಅಧ್ಯಕ್ಷ ಸ್ಥಾನ ಘೋಷಣೆ ಮಾಡಿದ್ದಾರೆ, ನೀವೆ ನೋಡಿದ್ದೀರಿ ಎಂದು ವಿಜಯಪುರದಲ್ಲಿ ಜೆಡಿಎಸ್ ಹಿರಿಯ ನಾಯಕ ಜಿ. ಟಿ ದೇವೆಗೌಡ ಹೇಳಿಕೆ ನೀಡಿದ್ದಾರೆ. ಸಿ.ಎಂ ಇಬ್ರಾಹಿಂ ಜೆಡಿಎಸ್ ಪಕ್ಷದಿಂದ ಒಂದು ಕಾಲು ಹೊರಗಿಟ್ಟ ವಿಚಾರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಎಂ ಇಬ್ರಾಹಿಂ ಅವರದ್ದು ಈಗ ಏನು ಚರ್ಚೆ ಇಲ್ಲ. ಮುಂದೆ ಒಟ್ಟಾಗಿ ಹೇಗೆ ಹೋಗಬೇಕು ಅನ್ನೋದು ಇಬ್ರಾಹಿಂ […]

ಯುವಕ ನಾಪತ್ತೆ ಪ್ರಕರಣ – ರಾತ್ರಿಯಿಡೀ ಹುಡುಕಿದ ಸ್ನೇಹಿತರು; ಮನೆಯಲ್ಲಿ ಆರಾಮವಾಗಿ ಮಲಗಿದ್ದ ದೀಕ್ಷಿತ್!

ಚಿಕ್ಕಮಗಳೂರು: ದೇವರಮನೆಗೆ ಪ್ರವಾಸಕ್ಕೆ ಹೋಗಿದ್ದ ಯುವಕ ಕಣ್ಮರೆಯಾಗಿದ್ದ ಪ್ರಕರಣ ಸುಖಾಂತ್ಯ ಕಂಡಿದೆ. ನಾಪತ್ತೆ ಎಂದುಕೊಂಡು ಯುವಕನ ಸ್ನೇಹಿತರು ಇಡೀ ರಾತ್ರಿ ಪೊಲೀಸರೊಂದಿಗೆ ಸೇರಿ ಹುಡುಕುತ್ತಿದ್ದರೆ ಆತ ಮಾತ್ರ ಆರಾಮವಾಗಿ ಮನೆಗೆ ಹೋಗಿ ಮಲಗಿದ್ದ. ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ದೀಕ್ಷಿತ್ (27) ನಾಲ್ವರು ಸ್ನೇಹಿತರ ಜೊತೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣ ದೇವರಮನೆ ಗುಡ್ಡಕ್ಕೆ ಆಗಮಿಸಿದ್ದರು. ಈ ವೇಳೆ ಸ್ನೇಹಿತರ ಜೊತೆ ಜಗಳ ಮಾಡಿಕೊಂಡು ಹೋದ ದೀಕ್ಷಿತ್ ಗುಡ್ಡದ ಬಳಿ ನಾಪತ್ತೆಯಾಗಿದ್ದ. ನಾಲ್ವರು ಯುವಕರು […]

ಉಡುಪಿಯಲ್ಲಿ ಮಹಿಷಾ ದಸರಾ ಯಾಕೆ?: ಶೋಭಾ ಕರಂದ್ಲಾಜೆ

ಉಡುಪಿ: ದಸರಾದಲ್ಲಿ ದೇವಿಯರನ್ನು ನಾವು ಆರಾಧನೆ ಮಾಡುತ್ತೇವೆ. ಮಹಿಷಾ ದಸರಾ ಮೂಲಕ ನಮ್ಮ ನಂಬಿಕೆಯನ್ನು ಪ್ರಶ್ನೆ ಮಾಡುವ ಶಕ್ತಿಗಳು ಹುಟ್ಟಿಕೊಳ್ಳುತ್ತಿದೆ ಎಂದು ಕೇಂದ್ರ ಸಚಿವೆ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ನಮ್ಮ ನಂಬಿಕೆ ನಮ್ಮದು ದೇಶದಲ್ಲಿ ಎಲ್ಲರಿಗೂ ಅವಕಾಶ ಇದೆ. ಆಸ್ತಿಕರಿಗೂ ನಾಸ್ತಿಕರಿಗೂ ನಮ್ಮ ದೇಶದಲ್ಲಿ ಅಭಿಪ್ರಾಯ ವ್ಯಕ್ತಪಡಿಸಬಹುದು. ವಿಕೃತವಾದ ಮಹಿಷಾ ದಸರಾದಿಂದ ಹಿಂದುಗಳ ಭಾವನೆಗೆ ಧಕ್ಕೆಯಾಗಯತ್ತದೆ ಎಂದರು. ಯಾವ ಆಧಾರದಲ್ಲಿ ಮಹಿಷಾ ದಸರಾ ಆಚರಣೆ ಮಾಡುತ್ತೀರಿ ಗೊತ್ತಿಲ್ಲ, ಇದರ ಹಿಂದೆ ಇರುವ ಶಕ್ತಿ […]

ಡಿಕೆಶಿ ಕಾಲಿಗೆ ಬಿದ್ದ ಶಾಸಕ ಮುನಿರತ್ನ

ಬೆಂಗಳೂರು: ಶಾಸಕ ಮುನಿರತ್ನ ಅವರು ಅರಮನೆ ಮೈದಾನದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಅವರ ಕಾಲಿಗೆ ಬಿದ್ದು ಅನುದಾನ ನೀಡುವಂತೆ ಮನವಿ ಪತ್ರ ಸಲ್ಲಿಕೆ ಮಾಡಿದ್ದಾರೆ. ಅರಮನೆ ಮೈದಾನದಲ್ಲಿ ಕಂಬಳ ಭೂಮಿ ಪೂಜೆ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭ ಶಾಸಕ ಮುನಿರತ್ನ ಅವರು ವೇದಿಕೆ ಮುಂಭಾಗದಲ್ಲಿ ಡಿಕೆಶಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲು ಕಾಯುತ್ತಿದ್ದರು. ಕಾರ್ಯಕ್ರಮದ ಬಳಿಕ ಡಿಕೆ ಶಿವಕುಮಾರ್ ಅವರು ವೇದಿಕೆಯಿಂದ ಕೆಳಗೆ ಬಂದ ವೇಳೆ ಮುನಿರತ್ನ ಅವರು ಡಿಕೆಶಿ ಅವರ ಕಾಲಿಗೆ […]

ಬಾಲಕೃಷ್ಣ ಮೊದಲು ತಮ್ಮ ಅನುದಾನ ಪಡೆಯಲಿ: ಬೊಮ್ಮಾಯಿ

ಚಿಕ್ಕಬಳ್ಳಾಪುರ: ಇದು ಝೀರೊ ಅನುದಾನ ಸರ್ಕಾರವಾಗಿದ್ದು, ಯಾರಿಗೂ ಅನುದಾನ ಬಿಡುಗಡೆ ಮಾಡುತ್ತಿಲ್ಲ. ನಾವು ಅನುದಾನ ಹಂಚಿಕೆಯಲ್ಲಿ ಯಾರಿಗೂ ತಾರತಮ್ಯ ಮಾಡಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ವಿರೋಧ ಪಕ್ಷದ ಶಾಸಕರಿಗೆ ಅನುದಾನ ನೀಡಿದ್ದೇವೆ. ಎಲ್ಲರಿಗೂ ಸಮಾನವಾಗಿ ನೀಡಿದ್ದೆವು ಎಂದರು. ಮಾಗಡಿ ಶಾಸಕ ಹೆಚ್‌ಸಿ ಬಾಲಕೃಷ್ಣ ಅವರು ಆಡಳಿತ ಪಕ್ಷದ ಶಾಸಕರಿಗೆ ಮಾತ್ರ ಅನುದಾನ ನೀಡುವುದಾಗಿ ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಾಲಕೃಷ್ಣ ಅವರು ಸರ್ಕಾರ ಅಲ್ಲ. […]

ಅಖಂಡ ಭಾರತ ಕೇಸರಿಮಯ ಆಗಲಿದೆ

ಉಡುಪಿ: ಇಲ್ಲಿನ ಹಿಂದೂ ಸಮಾಜೋತ್ಸವಕ್ಕೆ ನಗರದಲ್ಲಿ ಕೇಸರಿ ಪತಾಕೆ ಮತ್ತು ಭಗವಾಧ್ವಜ ಅಳವಡಿಸಲು ಪೊಲೀಸ್ ಇಲಾಖೆ 10 ಮತ್ತು 20 ಲಕ್ಷದ ಬಾಂಡ್ ಬರೆಸಿಕೊಂಡಿದ್ದಾರೆ ವಿಶ್ವ ಹಿಂದೂ ಪರಿಷತ್‌ ಪ್ರಧಾನ ಕಾರ್ಯದರ್ಶಿ ದಿನೇಶ್ ಮೆಂಡನ್ ಅಸಮಾಧಾನ ಹೊರಹಾಕಿದ್ದಾರೆ. ಉಡುಪಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2024ರಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಭಗವಾಧ್ವಜ ಹಾಕುತ್ತೇವೆ. ಆಗ ಎಷ್ಟು ಲಕ್ಷ ಬಾಂಡ್‌ ಬರೆಸಿಕೊಳ್ಳುತ್ತೀರಿ..? ಎಂದು ಪ್ರಶ್ನಿಸಿದರಲ್ಲದೇ, ನಾಉ ಒಂದು ಕೋಟಿ ರೂಪಾಯಿ ಬಾಂಡ್‌ ಕೊಡಲು ಸಿದ್ಧರಿದ್ದೇವೆ ಎಂದು ಗುಡುಗಿದ್ದಾರೆ.  2024ಕ್ಕೆ ಶ್ರೀರಾಮಂದಿರ ಉದ್ಘಾಟನೆಗೊಳ್ಳಲಿದೆ. ಆಗ […]

ಯಡಿಯೂರಪ್ಪ ಮನವೊಲಿಕೆ – ಉಪವಾಸ ಸತ್ಯಾಗ್ರಹ ವಾಪಸ್‌ ಪಡೆದ ಶಾಸಕ ಮುನಿರತ್ನ

ಬೆಂಗಳೂರು: ಶಾಸಕ ಮುನಿರತ್ನ ಅವರ ಪ್ರತಿಭಟನೆಗೆ ಮಾಜಿ ಸಿಎಂ ಯಡಿಯೂರಪ್ಪ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ ಮುನಿರತ್ನ ಅವರ ಮನವೊಲಿಸಿ ಉಪವಾಸ ಸತ್ಯಾಗ್ರಹ ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆ ಸದ್ಯ ಶಾಸಕರು ತಮ್ಮ ಉಪವಾಸ ಧರಣಿಯನ್ನು ಹಿಂಪಡೆದಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಕೊಟ್ಟ ಅನುದಾನ ರದ್ದುಪಡಿಸಿ ಸೇಡಿನ ರಾಜಕೀಯ ಮಾಡಿದ್ದಾರೆ. ನಾನು ಸಿಎಂ ಜೊತೆ ಮಾತನಾಡುತ್ತೇನೆ. ಸಿಎಂ ಜೊತೆ ಮಾತನಾಡಿ ಇದನ್ನು ಸರಿ ಮಾಡುತ್ತೇನೆ. ಇದು ಮೇಲ್ನೋಟಕ್ಕೆ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ಎಲ್ಲರಿಗೂ ಕೊಟ್ಟಂತೆ ಅನುದಾನ […]

ಕಾಂಗ್ರೆಸ್‍ಗೆ ಮತ ಹಾಕದಿದ್ರೆ ಅಭಿವೃದ್ಧಿ ಮಾಡಲ್ಲ

ರಾಮನಗರ: ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ ಅವರು ಇದೀಗ ಹೇಳಿಕೆಯೊಂದನ್ನು ನೀಡಿ ಭಾರೀ ಚರ್ಚೆಗೆ ಗ್ರಾಸವಾಗುವ ಮೂಲಕ ವಿವಾದಕ್ಕೀಡಾಗಿದ್ದಾರೆ. ಕಾಂಗ್ರೆಸ್‍ಗೆ ವೋಟು ಹಾಕುವ ಊರುಗಳಿಗೆ ಮಾತ್ರ ಕೆಲಸ ಮಾಡುತ್ತೇವೆ. ವೋಟ್ ಹಾಕದೇ ಇರೋರ ಬಗ್ಗೆ ಆಲೋಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಶಾಸಕರ ಈ ಬೇಜಾವಾಬ್ದಾರಿ ಹೇಳಿಕೆಗೆ ಭಾರೀ ಖಂಡನೆ ವ್ಯಕ್ತವಾಗುತ್ತಿದೆ. ಅಲ್ಲದೆ ದ್ವೇಷದ ರಾಜಕಾರಣಕ್ಕೆ ಶಾಸಕರು ಮುಂದಾದ್ರಾ ಎಂಬ ಪ್ರಶ್ನೆಯೂ ಎದ್ದಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್‍ಗೆ ಅನುಕೂಲವಾಗಲಿದೆ. ಕಾಂಗ್ರೆಸ್ ಮತಗಳು ವಿಭಜನೆ ಆಗಲ್ಲ. ರಾಜ್ಯದಲ್ಲಿ ಮುಂದಿನ ಐದು ವರ್ಷ […]

ದನಗಳ ಮೈ ತೊಳೆಯಲು ಹೋದ ರೈತ ನೀರು ಪಾಲು

ದೊಡ್ಡಬಳ್ಳಾಪುರ: ದನಗಳ ಮೈ ತೊಳೆಯಲು ನೀರಿಗಿಳಿದಿದ್ದ ರೈತನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಒಡೇರಹಳ್ಳಿ ಸಮೀಪದ ಜಾಲಿಕಟ್ಟೆಯಲ್ಲಿ ಸಂಭವಿಸಿದೆ. ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ರಾಮಪುರ ಗ್ರಾಮದ ಕುಮಾರ್ (44) ಮೃತ ರೈತ. ಒಡೇರಹಳ್ಳಿ ಸಮೀಪದ ಜಾಲಿಕಟ್ಟೆಯಲ್ಲಿ ದನಗಳ ಮೈ ತೊಳೆಯಲು ನೀರಿಗಿಳಿದಿದ್ದ ವೇಳೆ ಕಾಲು ಜಾರಿ ಬಿದ್ದು ಸಾವನಪ್ಪಿದ್ದಾರೆ ಎನ್ನಲಾಗಿದೆ. ಮಂಗಳವಾರ ಮಧ್ಯಾಹ್ನ 06 ದನಗಳ ಮೈತೊಳೆಯಲು ತೆರಳಿದ್ದ ವೇಳೆ ಘಟನೆ ಸಂಭವಿಸಿದ್ದು, ದನಗಳು ಮನೆಗೆ ಹಿಂದಿರುಗಿ ಬಂದರೂ ಕುಮಾರ್ […]