ನೈಂಟಿ ಎಣ್ಣೆ ಕೊಡಿಸದಿದ್ದಕ್ಕೆ ವ್ಯಕ್ತಿ ಮೇಲೆ ಇಟ್ಟಿಗೆಯಿಂದ ಹಲ್ಲೆ!
ಬೆಂಗಳೂರು:ನೈಂಟಿ ಎಣ್ಣೆ ಕೊಡಿಸದಿದ್ದಕ್ಕೆ ಹಿರಿಯ ನಾಗರೀಕನ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರು ನಗರದ ಗಿರಿನಗರದಲ್ಲಿ ನಡೆದಿದೆ. ಸಿಂಗಾರ ವೇಲು ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಧರ್ಮ ಕೃತ್ಯದ ನಂತರ ತಲೆಮರೆಸಿಕೊಂಡಿರುವ ಆರೋಪಿಯಾಗಿದ್ದಾನೆ.ಗಿರಿನಗರದ ಮೂಕಾಂಭಿಕನಗರದಲ್ಲಿ ಸಿಂಗಾರ ವೇಲು ಎಂಬುವವರು ತಮ್ಮ ಮನೆಯ ಬಳಿ ಕಬಾಬ್ ತಿನ್ನುತ್ತಿದ್ದರು. ಈ ವೇಳೆ ಆರೋಪಿ ಧರ್ಮ ಬಂದು ತನಗೆ ನೈಂಟಿ ಎಣ್ಣೆ ಕೊಡಿಸು ಅಂತ ಪೀಡಿಸಿದ್ದಾನೆ. ಕೊಡಿಸದಿದ್ದಾಗ ಕುಪಿತಗೊಂಡ ಧರ್ಮ, ಸಿಂಗಾರ ವೇಲು ಅವರಿಗೆ ಕಾಲಲ್ಲಿ ಒದ್ದಿದ್ದಲ್ಲದೇ, ಇಟ್ಟಿಗೆಯಿಂದ ಮುಖಕ್ಕೆ ಹಲ್ಲೆ ನಡೆಸಿ […]







































































































































































































































































































































































































































































































































































































































































































































































































































































































































































































































































































































