ಸಿದ್ದರಾಮಯ್ಯನವ್ರೆ ನಿಮ್ದೇನು ಸರ್ಕಾರನಾ? ಸರ್ವಾಧಿಕಾರನಾ
ಹುಬ್ಬಳ್ಳಿ:ಕರಸೇವಕ ಶ್ರೀಕಾಂತ್ ಪೂಜಾರಿ ಮೇಲೆ 16 ಕೇಸ್ ಇವೆ ಎಂದು ಯಾವ ಆಧಾರದ ಮೇಲೆ ಹೇಳಿದ್ದೀರಿ? ಸಿದ್ದರಾಮಯ್ಯನವರೇ ನಿಮ್ದೇನು ಸರ್ಕಾರನಾ? ಸರ್ವಾಧಿಕಾರನಾ? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿ ಕಿಡಿಕಾರಿದ್ದಾರೆ.ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ಎಲ್ಲಿದ್ದೀರಿ? ಶ್ರೀಕಾಂತ್ ಮೇಲೆ ಯಾವ ಕೇಸ್ ಇಲ್ಲ. ಜೋಶಿ ಅವರೇನು ಕಾನೂನು ತಜ್ಞರಾ ಎಂದು ಕೇಳಿದ್ದರು. ನಾನು ಕಾನೂನು ತಜ್ಞ ಹೌದೋ ಅಲ್ಲವೋ ನಿಮ್ಮ ಕಡೆ ಕಾನೂನು ತಜ್ಞರು ಇದಾರೋ ಇಲ್ವೋ ಕೇಸ್ ಏನಾಗಿದೆ ಅನ್ನೋದನ್ನ ತಿಳಿದುಕೊಳ್ಳಬೇಕಿತ್ತು. ಈ […]







































































































































































































































































































































































































































































































































































































































































































































































































































































































































































































































































































































