ದಪ್ಪ ಇದ್ದೀನಿ.. ನೋಡೋಕೆ ಚೆನ್ನಾಗಿ ಕಾಣ್ತಿಲ್ಲ ಅಂತ MBBS ವಿದ್ಯಾರ್ಥಿನಿ ಆತ್ಮಹತ್ಯೆ
ಮಂಗಳೂರು: ದಪ್ಪ ಇದ್ದೀನಿ. ನೋಡೋಕೆ ಚೆನ್ನಾಗಿ ಕಾಣ್ತಿಲ್ಲ ಎಂದು ಬೇಸರಗೊಂಡು ಎಂಬಿಬಿಎಸ್ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಎಂಬಿಬಿಎಸ್ ವಿದ್ಯಾರ್ಥಿನಿ ಪ್ರಕೃತಿ ಶೆಟ್ಟಿ (20) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ. ಈಕೆ ಮಂಗಳೂರಿನ ಮೆಡಿಕಲ್ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಜೀವನದಲ್ಲಿ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಡೆತ್‌ನೋಟ್ ಬರೆದಿಟ್ಟಿದ್ದಳು. ನಂತರ ಹಾಸ್ಟೆಲ್‌ನ 6ನೇ ಮಹಡಿಯಿಂದ ಜಿಗಿದು ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಡೆತ್‌ನೋಟ್‌ನಲ್ಲೇನಿತ್ತು?ದಪ್ಪ ಇದ್ದೀನಿ.. ನೋಡೋಕೆ ಚೆನ್ನಾಗಿ ಕಣ್ತಾ ಇಲ್ಲ. ಎಂಬಿಬಿಎಸ್ ಮುಗಿಸಬೇಕು ಅಂತಾ ತುಂಬಾ […]







































































































































































































































































































































































































































































































































































































































































































































































































































































































































































































































































































































