August 1, 2026

ರೈತರ ಆಕ್ರೋಶಕ್ಕೆ ತಮಿಳಿನ ಚಂದ್ರಮುಖಿ 2 ಚಿತ್ರದ ಪೋಸ್ಟರ್ ಚಿಂದಿ ಚಿತ್ರಾನ್ನ

ಚಾಮರಾನಗರ: ಕಾವೇರಿಗಾಗಿ ಕರುನಾಡು ಕೂಗುತ್ತಿದೆ. ಜೀವಜಲಕ್ಕಾಗಿ ಆಕ್ರೋಶದ ಜ್ವಾಲೆ ಭುಗಿಲೆದ್ದಿದೆ. ಒಂದು ಹನಿ ನೀರನ್ನ ಬಿಡ್ಬಬಾರದು ಎಂದು ರಾಜ್ಯದ ಜಿಲ್ಲೆ ಜಿಲ್ಲೆಯಲ್ಲೂ, ಗಲ್ಲಿ ಗಲ್ಲಿಯಲ್ಲೂ ಕಾವೇರಿ ನಮ್ಮದು ಎನ್ನುವ ಧ್ವನಿ ಮಾರ್ಧನಿಸಿದೆ. ನಮ್ಮ ರಾಜ್ಯದ ರೈತರಿಗೆ ಅನ್ಯಾಯ ಮಾಡಿ, ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಕಾವೇರಿ ನೀರು ಬಿಡುಗಡೆ ಮಾಡಬಾರದು ಎನ್ನುವ ಆಗ್ರಹ ಜೋರಾಗಿದೆ. ಹೀಗಾಗಿ ಇವತ್ತು ಕರ್ನಾಟಕ ಬಂದ್ ಆಚರಿಸಲಾಗುತ್ತಿದ್ದು, ವಿವಿಧ ಸಂಘಟನೆಗಳು ಸಿದ್ದರಾಮಯ್ಯ ಹಾಗೂ ತಮಿಳುನಾಡು ಸಿಎಂ ಪ್ರಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿವೆ. ಇದರ ಮಧ್ಯೆ […]

ಹನುಮಂತನಗರ ಠಾಣೆಯಲ್ಲಿ ಸೀಮಂತ

ಬೆAಗಳೂರು: ಹನುಮಂತನಗರ ಪೊಲೀಸರು ತಮ್ಮ ಠಾಣೆಯ ಇಬ್ಬರು ಗರ್ಭಿಣಿ ಕಾನ್‌ಸ್ಟೇಬಲ್‌ಗಳಿಗೆ ಠಾಣೆಯಲ್ಲೇ ಶಾಸ್ತ್ರೋಕ್ತವಾಗಿ ಸೀಮಂತ ಕರ‍್ಯಕ್ರಮ ನಡೆಸಿದರು. ಕಾನ್‌ಸ್ಟೇಬಲ್‌ಗಳಾದ ನೀಲವ್ವ ಹಾಗೂ ಪ್ರಿಯಾಂಕ ಪಾಟೀಲ್ ಅವರಿಗೆ ಸೀರೆ, ಬಳೆ ಹಾಗೂ ಹೂ-ಹಣ್ಣು ಕೊಟ್ಟು ಮಡಿಲು ತುಂಬುವ ಶಾಸ್ತ್ರವನ್ನು ಅದೇ ಠಾಣೆಯ ಇತರೆ ಮಹಿಳಾ ಕಾನ್‌ಸ್ಟೇಬಲ್‌ಗಳು ನೆರವೇರಿಸಿದರು. ಹನುಮಂತನಗರ ಠಾಣೆಯ ಮಹಡಿಯಲ್ಲಿ ಸಂಭ್ರಮದಿAದ ಈ  ಕಾರ್ಯಕ್ರಮ ಜರುಗಿತು. ಸಿಬ್ಬಂದಿಗೆ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ಕರ‍್ಯಕ್ರಮದಲ್ಲಿ ವಿವಿ ಪುರ ಉಪ ವಿಭಾಗದ ಎಸಿಪಿ ನಾಗರಾಜ್, ಇನ್‌ಸ್ಟೆಕ್ಟರ್ ವಿನೋದ್ […]

ಮಂಗಳೂರು, ಉಡುಪಿಯಲ್ಲಿ ಬಂದ್‌ಗೆ ಬೆಂಬಲವೇ ಇಲ್ಲ

ಮಂಗಳೂರು: ಕಾವೇರಿ ನದಿ ನೀರಿಗಾಗಿ ಇಂದು ರೈತಪರ, ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಬೆಂಗಳೂರು ಸೇರಿದಂತೆ ಹತ್ತಾರು ಜಿಲ್ಲೆಗಳಲ್ಲಿ ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತವಾಗಿದೆ. ಆದರೆ ಕರಾವಳಿ ಜಿಲ್ಲೆಗಳಲ್ಲಿ ಮಾತ್ರ ಎಂದಿನಂತೆ ಈ ಬಾರಿಯೂ ಬಂದ್‌ಗೆ ಕನಿಷ್ಠ ಬೆಂಬಲವೂ ಸಿಕ್ಕಿಲ್ಲ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಭಾಗದಲ್ಲಿ ಜನಜೀವನ ಎಂದಿನಂತೆ ನಡೆಯುತ್ತಿದ್ದು, ಅಂಗಡಿ ಮುಂಗಟ್ಟುಗಳು ತೆರೆದಿವೆ. ಶಾಲಾ ಕಾಲೇಜುಗಳು ಕೂಡ ನಡೆಯುತ್ತಿದ್ದು, ಜನರಿಗೆ ಬಂದ್‌ನ ಅರಿವೇ […]

ಹಾಸನ, ಕೋಲಾರದಲ್ಲಿ ತೀವ್ರಗೊಂಡ ಪ್ರತಿಭಟನೆ; ಸರ್ಕಾರಿ ಬಸ್‌ ಸಂಚಾರಕ್ಕೆ ಹೋರಾಟಗಾರರಿಂದ ತಡೆ!

ಹಾಸನ: ಕಾವೇರಿ ನದಿ ನೀರಿಗಾಗಿ ಇಂದು ರೈತಪರ, ಕನ್ನಡಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಿವೆ. ಬೆಂಗಳೂರು ಸೇರಿದಂತೆ ಹತ್ತಾರು ಜಿಲ್ಲೆಗಳಲ್ಲಿ ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತವಾಗಿದೆ. ಈ ಮಧ್ಯೆ ಹಾಸನದಲ್ಲಿ ಕೂಡ ಹೋರಾಟಗಾರರು ಬಂದ್‌ ನಡೆಸುವಂತೆ ಪಟ್ಟು ಹಿಡಿದಿದ್ದು ಈ ವೇಳೆ ಹೋರಾಟಗಾರರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆದ ಘಟನೆ ನಡೆದಿದೆ. ಬಂದ್ ಇದ್ದರೂ ಜನಸಾಮಾನ್ಯರು ಲೆಕ್ಕಿಸದೆ ತಮ್ಮ ಎಂದಿನ ಕಾರ್ಯದಲ್ಲಿ ತೊಡಗಿಕೊಳ್ಳಲು ಮುಂದಾಗಿದ್ದರು. ಬಸ್ ಸಂಚಾರ […]

ಕನ್ನಡ ಹೋರಾಟಗಾರರು ಗೂಂಡಾಗಳಲ್ಲ

ಬೆಂಗಳೂರು: I.N.D.I.A ಒಕ್ಕೂಟಕ್ಕೆ ಮಾತುಕತೆ ಮಾಡಲು ಆಗುತ್ತದೆ. ಆದರೆ ಕಾವೇರಿ ವಿಚಾರಕ್ಕೆ ಮಾತಾಡಲು ಸಾಧ್ಯವಿಲ್ಲವೇ ಎಂದು ಸರ್ಕಾರದ ವಿರುದ್ಧ ಕರವೇ ಸಂಘಟನೆಯ ಪ್ರವೀಣ್ ಶೆಟ್ಟಿಯವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕನ್ನಡಪರ ಹೋರಾಟಗಾರರಿಗೆ ನೋಟಿಸ್ ನೀಡಿದ ಹಿನ್ನೆಲೆ ಬೆಂಗಳೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು ಸರ್ಕಾರ ಪೊಲೀಸರ ಮೂಲಕ ನೋಟಿಸ್ ಕೊಡುವ ಕೆಲಸ ಮಾಡುತ್ತಿದೆ. ಕನ್ನಡ ಹೋರಾಟಗಾರು ಗೂಂಡಗಳಲ್ಲ, ಅವರು ಯಾವುದೇ ಬಸ್‍ಗಳಿಗೆ ಬೆಂಕಿ ಹಾಕಿಲ್ಲ. ಅಂಗಡಿಗಳ ಮೇಲೆ ದಾಳಿ ಮಾಡಿಲ್ಲ. ಆದರೂ ಸರ್ಕಾರ ನೋಟಿಸ್ ನೀಡಿರುವುದು ಸರಿಯಾದ […]

ಸರ್ಕಾರಿ ಬಸ್‌ಗಳಿದ್ದರೂ ಪ್ರಯಾಣಿಕರು ಇಲ್ಲ

ಬೆಂಗಳೂರು: ಕರ್ನಾಟಕ ಬಂದ್‌ಗೆ ಸರ್ಕಾರಿ ಸಾರಿಗೆ ಬೆಂಬಲ ನೀಡದೇ ಇದ್ದರೂ ಜನ ಬಾರದ ಕಾರಣ ಕಡಿಮೆ ಪ್ರಮಾಣದಲ್ಲಿ ಬಸ್ಸುಗಳು ರಸ್ತೆಗೆ ಇಳಿದಿದೆ. ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ (Majestic Bus Stand) ಬಸ್ಸುಗಳಿದ್ದರೂ ಪ್ರಯಾಣಿಕರು ಬರುತ್ತಿಲ್ಲ. ಪ್ಲಾಟ್ ಫಾರ್ಮ್ ಕೂಡಾ ಬಿಕೋ ಎನ್ನುತ್ತಿದ್ದು, ಕಡಿಮೆ ಸಂಖ್ಯೆಯ ಪ್ರಯಾಣಿಕರು ಬಸ್ಸು ಹತ್ತಿದ್ದಾರೆ.  ಉತ್ತರ ಕರ್ನಾಟಕ ಭಾಗ, ಮಲೆನಾಡು, ಕರಾವಳಿ ಭಾಗಕ್ಕೆ ತೆರಳುವ ಬಸ್ಸುಗಳ ಪ್ರಯಾಣಿಕರ ಸಂಖ್ಯೆ ಭಾರೀ ಇಳಿಕೆಯಾಗಿದೆ. ಬಂದ್‌ ಹಿನ್ನೆಲೆಯಲ್ಲಿ 50% ಕೆಎಸ್‌ಆರ್‌ಟಿಸಿ ಬಸ್ಸುಗಳು ಮಾತ್ರ ರಸ್ತೆಗೆ ಇಳಿದಿದೆ. ಘಟಕ […]

ವಿಮಾನಗಳಿಗೂ ತಟ್ಟಿದ ಕರ್ನಾಟಕ ಬಂದ್ ಬಿಸಿ, 44 ವಿಮಾನಗಳ ಹಾರಾಟ ಸ್ಥಗಿತ

ಬೆಂಗಳೂರು: ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಇಂದು(ಸೆ.29) ಕರ್ನಾಟಕ ಬಂದ್ ಆಚರಿಸಲಾಗುತ್ತಿದ್ದು, ರಾಜ್ಯದ ವಿವಿದೆಡೆ ಹಲವು ಸಂಘಟನೆಗಳು ರಸ್ತೆಗಳಿದು ಪ್ರತಿಭಟನೆ ಮಾಡುತ್ತಿವೆ. ಇನ್ನು ಈ ಕರ್ನಾಟಕ ಬಂದ್ ಬಿಸಿ ವಿಮಾನಗಳಿಗೂ ತಟ್ಟಿದೆ. ಹೌದು… ಇಂದು ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸುವ ಮತ್ತು ನಿರ್ಗಮಿಸುವ ವಿಮಾನಗಳು ರದ್ದಾಗಿವೆ. ಪ್ರಯಾಣಿಕರು ಇಲ್ಲದ ಕಾರಣ ಒಟ್ಟು 44 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ದೆಹಲಿ, ಮುಂಬೈ, ಕೊಲ್ಕತ್ತಾ ಮಂಗಳೂರು ಸೇರಿದಂತೆ ವಿವಿದೆಡೆಯಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ಒಟ್ಟು 22 ವಿಮಾನಗಳು […]

ಬಂದ್‌ ಇದ್ದರೂ ಬಸ್ಸುಗಳು ರಸ್ತೆಯಲ್ಲಿ ಸಂಚರಿಸುತ್ತೆ

ಬೆಂಗಳೂರು: ನಾಳೆ ಕರ್ನಾಟಕ ಬಂದ್‌ ಇದ್ದರೂ ಬಸ್‌ಗಳ ಸಂಚಾರ ಇರಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಮಾತನಾಡಿದ ಅವರು, ವಿಮಾನ ನಿಲ್ದಾಣ ಸೇರಿದಂತೆ ಎಲ್ಲಾ ಎಲ್ಲಾ ಭಾಗಕ್ಕೂ ಕಡಿಮೆ ಪ್ರಮಾಣದಲ್ಲಿ ಬಸ್ ಸಂಚಾರ ಇರಲಿದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಬಸ್ ನಿರ್ವಹಣೆ ಮಾಡುತ್ತೇವೆ ಎಂದು ಹೇಳಿದರು. ಬಂದ್ ಮಾಡುವವರು ಶಾಂತಿಯುತವಾಗಿ ಬಂದ್ ಮಾಡಲಿ. ಇವತ್ತಿನ ಕಾವೇರಿ ಸಮಸ್ಯೆಗೆ (Cauvery Problem) ಬಿಜೆಪಿಯೇ ಕಾರಣ. ಪ್ರಧಾನಿ ನರೇಂದ್ರ ಮೋದಿ ಸಮಸ್ಯೆ ಪರಿಹಾರ ಮಾಡಲು ಮುಂದಾಗಬೇಕು ಎಂದು ರಾಮಲಿಂಗಾರೆಡ್ಡಿ […]

ಭಾರತಕ್ಕೆ ಬಂದ ಪಾಕ್‌ ತಂಡಕ್ಕೆ ಕೇಸರಿ ಶಾಲು ಹಾಕಿ ಸ್ವಾಗತ 

ಹೈದರಾಬಾದ್‌: ಭಾರತದ ಆತಿಥ್ಯದಲ್ಲಿ ಇದೇ ಅಕ್ಟೋಬರ್‌ 5 ರಿಂದ ನಡೆಯಲಿರುವ ಏಕದಿನ ವಿಶ್ವಕಪ್‌ ಟೂರ್ನಿಯನ್ನಾಡಲು ಪಾಕಿಸ್ತಾನ ಕ್ರಿಕೆಟ್​ ತಂಡ ಬುಧವಾರ ತಡರಾತ್ರಿ ಹೈದರಾಬಾದ್​ಗೆ ಬಂದಿಳಿದಿದೆ. ಈ ವೇಳೆ ಪಾಕಿಸ್ತಾನ ತಂಡದ ಆಟಗಾರರಿಗೆ ವಿವಿಧ ರೀತಿಯ ಶಾಲುಗಳನ್ನ ಹೊದಿಸಿ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಗಿದೆ.PauseUnmute ಈ ನಡುವೆ ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕ ಬಾಬರ್‌ ಆಜಂ ಸೇರಿದಂತೆ ಕೆಲವು ಆಟಗಾರರಿಗೆ ಕೇಸರಿ ಶಾಲು ಹಾಕಿ ಸ್ವಾಗತಿಸಿದ್ದು, ಇದೀಗ ಟ್ವಿಟರ್​ನಲ್ಲಿ ಸಖತ್‌ ಟ್ರೆಂಡ್​ ಆಗಿದೆ. ಹೈದರಾಬಾದ್​ ವಿಮಾನ ನಿಲ್ದಾಣಕ್ಕೆ ಬಂದ ಪಾಕಿಸ್ತಾನ ತಂಡದ ಆಟಗಾರರಿಗೆ […]

ಒಂದೇ ವಾರದಲ್ಲಿ ಎರಡು ದಿನ ಬಂದ್, ರಾಜ್ಯಕ್ಕೆ 4,000 ಕೋಟಿ ರೂ. ನಷ್ಟ!

ಬೆಂಗಳೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿ ಬಿಡದಂತೆ ವಿವಿಧ ರೈತ ಸಂಘಟನೆಗಳು ಹಾಗೂ ಕನ್ನಡಪರ ಹೋರಾಟಗಾರರು ಮಂಗಳವಾರ (ಸೆ.26) ಬೆಂಗಳೂರು ಬಂದ್ ನಡೆಸಿದ್ದರು. ಇದೇ ವಿಚಾರವಾಗಿ ನಾಳೆ (ಸೆ.29) ಇಡೀ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಹೀಗಾಗಿ ನಾಳೆ ರಾಜ್ಯದ ವಿವಿಧ ಭಾಗಗಳಲ್ಲಿ ರೈತರು ಪ್ರತಿಭಟನೆ ನಡೆಸುವ ನಿರೀಕ್ಷೆಯಿದೆ. ಈ ಬಂದ್ ಗೆ ವಿವಿಧ ಕನ್ನಡ ಪರ ಸಂಘಟನೆಗಳ ಜೊತೆಗೆ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಎಎಪಿ ಕೂಡ ಕೈಜೋಡಿಸಿವೆ. ಹೀಗಾಗಿ ನಾಳೆಯ ಬಂದ್ ಇನ್ನೊಮ್ಮೆ ವಿವಿಧ […]