August 1, 2026

ಬಿಬಿಎಂಪಿ ಚುನಾವಣೆ: ಮತದಾರರ ಕರಡು ಪಟ್ಟಿ ಬಿಡುಗಡೆಗೆ ಕೊನೆಗೂ ಮುಹೂರ್ತ ಫಿಕ್ಸ್

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಆಧಾರದ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಕ್ಟೋಬರ್ 27 ರಂದು ಮತದಾರರ ಕರಡು ಪಟ್ಟಿಯನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಬಿಬಿಎಂಪಿಯ ಬಹು ನಿರೀಕ್ಷಿತ ಚುನಾವಣೆಯ ತಯಾರಿಯಲ್ಲಿ ಇದು ನಿರ್ಣಾಯಕ ಹೆಜ್ಜೆಯಾಗಿದೆ. ಅಂತಿಮ ಮತದಾರರ ಪಟ್ಟಿಯನ್ನು 2024 ರ ಜನವರಿ 5 ರಂದು ಪ್ರಕಟಿಸಲು ನಿರ್ಧರಿಸಲಾಗಿದೆ. ಬಿಬಿಎಂಪಿ ಪ್ರಕಾರ, ಕೇಂದ್ರ ಚುನಾವಣಾ ಆಯೋಗದ ಸೆಪ್ಟೆಂಬರ್ 25 ರ ನಿರ್ದೇಶನಗಳ ಆಧಾರದ ಮೇಲೆ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲು ಸಿದ್ಧತೆಗಳನ್ನು ಪ್ರಾರಂಭಿಸಲಾಗಿದೆ, ಬಿಬಿಎಂಪಿ ವಾರ್ಡ್ […]

ಇಂದು ಮಧ್ಯರಾತ್ರಿಯಿಂದಲೇ ಬೆಂಗಳೂರಲ್ಲಿ 144 ಸೆಕ್ಷನ್ ಜಾರಿ

ಬೆಂಗಳೂರು: ಕರ್ನಾಟಕ ಬಂದ್ ಕರೆ ಬೆನ್ನಲ್ಲೇ ಇಂದು ಮಧ್ಯರಾತ್ರಿಯಿಂದಲೇ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್, ಇಂದು ಮಧ್ಯರಾತ್ರಿ 12 ಗಂಟೆಯಿಂದ ನಾಳೆ ಮಧ್ಯರಾತ್ರಿ 12 ಗಂಟೆಯವರೆಗೆ 144 ಸೆಕ್ಷನ್ ಜಾರಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 144 ಸೆಕ್ಷನ್ ಜಾರಿ ವೇಳೆ ಐದಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ, ಗುಂಪು ಸೇರುವಂತೆ ಇಲ್ಲ. ಬಂದ್‌ಗಳನ್ನು ಕರೆಯುವುದು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಬಂದ್ ವೇಳೆ ಆಸ್ತಿ […]

ಬುದ್ಧಿವಾದ ಹೇಳಿದ ಪೊಲೀಸಪ್ಪನ ಬೈಕ್‍ಗೆ ಬೆಂಕಿ ಹಚ್ಚಿದ ಭೂಪ

ಚಿಕ್ಕಬಳ್ಳಾಪುರ: ಅಣ್ಣ-ತಮ್ಮಂದಿರ ಮೇಲೆ ಹಲ್ಲೆ ಮಾಡಿ ಆಸ್ಪತ್ರೆಯಲ್ಲಿ ರಂಪಾಟ ಮಾಡ್ತಿದ್ದ ಅಸಾಮಿಗೆ ಎಎಸ್‍ಐ ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು. ಪೊಲೀಸಪ್ಪನ ಫಾಲೋ ಮಾಡಿಕೊಂಡು ಹೋಗಿ ಮನೆಯ ಮುಂದೆ ನಿಲ್ಲಿಸಿದ್ದ ಹೊಸ ಸ್ಕೂಟಿಗೆ ಬೆಂಕಿ ಹಚ್ಚಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ವಿವೇಕಾನಂದ ನಗರದಲ್ಲಿ ನಡೆದಿದೆ. ಗುಡಿಬಂಡೆ ನಗರದ ಹಣ್ಣಿನ ವ್ಯಾಪಾರಿ ಖಲೀಂ ಉಲ್ಲಾ ತನ್ನ ಸಹೋದರರ ಜೊತೆ ಗಲಾಟೆ ಮಾಡಿಕೊಂಡು ಆಸ್ಪತ್ರೆಗೆ ಆಗಮಿಸಿದ್ದು ಆಸ್ಪತ್ರೆಯಲ್ಲಿ ವಿನಾಕಾರಣ ಕೂಗಾಟ ನಡೆಸಿ ರಂಪಾಟ ಮಾಡ್ತಿದ್ದ. ವಿಷಯ ತಿಳಿದು ರಾತ್ರಿ ಪಾಳಿ ಕರ್ತವ್ಯದಲ್ಲಿದ್ದ […]

ಕಾಂಗ್ರೆಸ್‌ಗೆ ಹೋಗೋರ ಬಗ್ಗೆ ನಾವು ತಲೆಕೆಡಿಸಿಕೊಳ್ಳಲ್ಲ

ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ವರ್ಚಸ್ಸು ಕಳೆದುಕೊಂಡಿದೆ. ಹೀಗಾಗಿ ಮತ್ತೆ ಆಪರೇಶನ್‌ಗೆ ಕಾಂಗ್ರೆಸ್ ಮುಂದಾಗಿದೆ. ಇದು ಕಾಂಗ್ರೆಸ್‌ನ ವೀಕ್‌ನೆಸ್ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಾಜಿ ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ಗಾಳ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕೆಲವರು ಟಿಕೆಟ್ ಸಿಗದೇ ಇದ್ದವರು ಕಾಂಗ್ರೆಸ್‌ಗೆ ಹೋಗುತ್ತಾರೆ. ಅದರಿಂದ ಕಾಂಗ್ರೆಸ್‌ಗೆ ಯಾವುದೇ ಲಾಭವಿಲ್ಲ. ಟಿಕೆಟ್ ಸಿಗದೇ ಇದ್ದವರು ಹೋಗೋದು ಸಹಜ. ಅದರ ಬಗ್ಗೆ ನಾವೇನು ಹೆಚ್ಚು ತಲೆ ಕೆಡಿಸಿಕೊಳ್ಳಲ್ಲ. ಕಾಂಗ್ರೆಸ್‌ನ ಈ ಆಪರೇಶನ್‌ನಿಂದ ರಾಜಕೀಯವಾಗಿ […]

ರಸ್ತೆಯಲ್ಲಿ ಮಹಿಳೆಗೆ ಕಾಪಾಳಮೋಕ್ಷ ಮಾಡಿ, ತಲೆಗೂದಲೆಳೆದು ಸ್ಪಾ ಮಾಲೀಕನಿಂದ ಅಮಾನುಷ ಹಲ್ಲೆ

ಸ್ಪಾ ಮಾಲೀಕನೊಬ್ಬ ರಸ್ತೆಯಲ್ಲಿ ಮಹಿಳೆಯ ತಲೆಗೂದಲು ಹಿಡಿದು ಅಮಾನುಷವಾಗಿ ಥಳಿಸಿರುವ ಘಟನೆ ಅಹಮದಾಬಾದ್​ನಲ್ಲಿ ನಡೆದಿದೆ. ಅಹಮದಾಬಾದ್‌ನ ಸಿಂಧು ಭವನ ರಸ್ತೆಯಲ್ಲಿರುವ ಕಾಂಪ್ಲೆಕ್ಸ್‌ನಲ್ಲಿ 24 ವರ್ಷದ ಮಹಿಳೆಯ ಮೇಲೆ ಸ್ಪಾ ಮಾಲೀಕ ನಿರ್ದಯವಾಗಿ ಹಲ್ಲೆ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸಿಸಿಟಿವಿಯಲ್ಲಿ ಸ್ಪಾ ಮಾಲೀಕ ಪದೇ ಪದೇ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾನೆ, ಆಕೆಯ ಕೂದಲು ಹಿಡಿದು, ಬಟ್ಟೆಗಳನ್ನು ಹರಿದು ಹಿಂಸೆ ಕೊಟ್ಟಿದ್ದಾನೆ. ಏನೇ ಮಾಡಿದರೂ ಆಕೆಗೆ ಆತನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಆಘಾತಕಾರಿ ವಿಡಿಯೋ ಅಹಮದಾಬಾದ್​ನಲ್ಲಿರುವ ಗ್ಯಾಲೆಕ್ಸಿ ಸ್ಪಾ ಬಳಿ ನಡೆದಿದೆ. […]

ನಾಳಿನ ಕರ್ನಾಟಕ ಬಂದ್ ವೇಳೆ KSRTC, BMTC ಸಂಚಾರ

ಬೆಂಗಳೂರು: ಕಾವೇರಿ ನದಿ ನೀರಿಗಾಗಿ ನಾಳೆ(ಸೆಪ್ಟೆಂಬರ್ 29) ಕರ್ನಾಟಕ ಬಂದ್​ಗೆ (Karnataka Bandh)ಕರೆ ನೀಡಲಾಗಿದೆ. ಈ ಬಂದ್​ಗೆ ಸಂಘ-ಸಂಸ್ಥೆಗಳು ಸೇರಿದಂತೆ ನೂರಾರು ಸಂಘಟನೆಗಳು ಬೆಂಬಲ ನೀಡಿವೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಬಹುತೇಕ ಅಖಂಡ ಕರ್ನಾಟಕ ಸ್ತಬದ್ಧವಾಗಲಿದೆ. ಇದರ ನಡುವೆ ಸಾರ್ವಜನಿಕರ ಸಂಚಾರನಾಡಿ ಕೆಎಸ್​ಆರ್​ಟಿಸಿ ಹಾಗೂ ಬಿಎಂಪಿಟಿಸಿ ಬಸ್ ಸಂಚಾರಕ್ಕೆ ನಿಗಮಗಳು ತೀರ್ಮಾನಿಸಿವೆ. ಈ ಹಿನ್ನೆಲೆಯಲ್ಲಿ ನೌಕರರಿಗೆ ನಾಳೆ ಕಡ್ಡಾಯ ಹಾಜರಾತಿಗೆ ಸೂಚನೆ ನೀಡಲಾಗಿದೆ. ಹೌದು… ಕೆಎಸ್​ಆರ್​ಟಿಸಿ ಹಾಗೂ ಬಿಎಂಟಿಸಿ ನೌಕರರಿಗೆ ಕಡ್ಡಾಯ ಹಾಜರಾತಿಗೆ ಸೂಚನೆ ನೀಡಲಾಗಿದೆ. ದೀರ್ಘಾವಧಿ, ವಾರದ […]

ಮಣಿಪುರದಲ್ಲಿ ಮತ್ತೆ ಆಫ್ಸ್ಪಾ ಜಾರಿ

ಇಂಫಾಲ: ಮತ್ತೆ ಹಿಂಸಾಚಾರ ಆರಂಭವಾಗಿರುವ ನಡುವೆಯೇ ಮಣಿಪುರದಲ್ಲಿ ಆಫ್ಸ್ಪಾ (ಸಶಸ್ತ್ರ ಪಡೆಗಳ ವಿಶೇಷಾಧಿಕಾರ) ಕಾಯ್ದೆಯನ್ನು ಇನ್ನೂ 6 ತಿಂಗಳ ಕಾಲ ವಿಸ್ತರಿಸಲಾಗಿದೆ. ಶಾಂತಿ ಸಾಪನೆಗೆ ನಿಯೋಜಿಸಲಾಗಿರುವ ಆಫ್ಸ್ಫಾ ಅ.1ರಿಂದ ಜಾರಿಯಾಗುವಂತೆ ರಾಜ್ಯಪಾಲರು ನಿರ್ಧಾರ ಕೈಗೊಂಡಿದ್ದಾರೆ. ಮೈತೆಯೇ ಸಮುದಾಯದ ಇಬ್ಬರು ವಿದ್ಯಾರ್ಥಿಗಳಿಬ್ಬರ ಮೃತದೇಹ ಫೋಟೋ ವೈರಲ್ ಆದ ಬಳಿಕ ರಾಜ್ಯ ಮತ್ತೆ ಉದ್ವಿಗ್ನಗೊಂಡಿದೆ. ಸೆ.26 ರಂದು ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಮೊಬೈಲ್‌ ಇಂಟರ್‌ನೆಟ್‌ ಸೇವೆಯನ್ನು ಕೆಲ ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ.   ಮಣಿಪುರದಲ್ಲಿ ಹಿಂಸಾಚಾರ ತೀವ್ರಗೊಂಡಿದ್ದಾಗ ಜುಲೈ 6 […]

ಅಂತರ್ಜಾತಿ ವಿವಾಹವಾದ ವಿಕಲಚೇತನ ಜೋಡಿಗೆ ಬಹಿಷ್ಕಾರ

ಚಿತ್ರದುರ್ಗ: ದೇಶದಲ್ಲಿ ಅಂತರ್ಜಾತಿಯ ವಿವಾಹಗಳು ಹೆಚ್ಚಾಗಿ ಆಗುವುದರಿಂದ ಜಾತೀಯತೆ ವ್ಯವಸ್ಥೆ ತೊಲಗಿಸಬಹುದು ಎಂದು ಹಿರಿಯರು ಮಾತನಾಡುತ್ತಾರೆ. ಆದರೆ ಈ ಆಧುನಿಕ ಯುಗದಲ್ಲಿ ಅಂತರ್ಜಾತಿ ವಿವಾಹವಾದ ವಿಕಲಚೇತನ ಜೋಡಿಗೆ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಎನ್ ದೇವರಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ವಾಕ್, ಶ್ರವಣ ಇಲ್ಲದ ಎನ್ ದೇವರಹಳ್ಳಿ ಗ್ರಾಮದ ಸಾವಿತ್ರಮ್ಮ ಹಾಗೂ ಆಂಧ್ರ ಮೂಲದ ಮಣಿಕಂಠ ಕಳೆದ 3 ವರ್ಷದ ಹಿಂದೆ ಬೆಂಗಳೂರಿನಲ್ಲಿ ಪ್ರೀತಿಸಿ ಮದುವೆ ಆಗಿದ್ದರು. 3 ವರ್ಷದ ಬಳಿಕ ಸಾವಿತ್ರಮ್ಮ ತವರು […]

ಇಂದು ರಾತ್ರಿಯಿಂದ್ಲೇ ತಮಿಳುನಾಡಿಗೆ ಬಸ್ ಸಂಚಾರ ಬಂದ್

ಬೆಂಗಳೂರು: ಕಾವೇರಿ ನೀರಿಗಾಗಿ ನಾಳೆ ಕರ್ನಾಟಕ ಬಂದ್ ಆಗಲಿದ್ದು, ಈ ಹಿನ್ನೆಲೆಯಲ್ಲಿ ಇಂದು ರಾತ್ರಿಯಿಂದಲೇ ತಮಿಳುನಾಡು ಸಾರಿಗೆ ಬಸ್ ಗಳ ಸಂಚಾರ ಬಂದ್ ಮಾಡಲಾಗುತ್ತದೆ. ಬೆಂಗಳೂರು ಟು ತಮಿಳುನಾಡು ಸಂಚಾರ ಮಾಡುವ ತಮಿಳುನಾಡು ಸಾರಿಗೆಯ 350ಕ್ಕೂ ಹೆಚ್ಚು ಬಸ್‍ಗಳು ನಾಳೆ ಸ್ಥಗಿತವಾಗಲಿವೆ. ತಮಿಳುನಾಡು ಸಾರಿಗೆ ಬಸ್ ಗಳು ರಾತ್ರಿ 10 ಗಂಟೆಗೆ ಸಂಪೂರ್ಣ ಓಡಾಟ ನಿಲ್ಲಿಸಲಿವೆ.  ತಮಿಳುನಾಡಿನಿಂದ ಆಗಮಿಸುವ ಬಸ್‍ಗಳು ರಾತ್ರಿ 10 ಗಂಟೆ ವೇಳೆಗೆ ಕರ್ನಾಟಕ ಗಡಿ ಪ್ರವೇಶಿಸಿ ಮತ್ತೆ ವಾಪಸ್ ಆಗಲಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರಿನ […]

ನಮ್ಮ ರಾಜ್ಯವನ್ನು ತಮಿಳುನಾಡಿಗೆ ಅಡ ಇಟ್ಟಿದ್ದಾರೆ

ಹಾಸನ: 2024ರ ಲೋಕಸಭಾ ಚುನಾವಣಾ (Lok Sabha Elections) ದೃಷ್ಟಿಯಿಂದ ನಮ್ಮ ರಾಜ್ಯವನ್ನು ತಮಿಳುನಾಡಿಗೆ ಅಡ ಇಟ್ಟಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಹಾಸನದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಸರ್ಕಾರ ಆರಂಭಿಕ ಹಂತದಲ್ಲೇ ಮುಗ್ಗರಿಸಿದೆ. ಟ್ರಿಬ್ಯೂನಲ್ (ನ್ಯಾಯಾಧಿಕರಣ) ಮುಂದೆ ನೀರಿಲ್ಲ ಅನ್ನುತ್ತಾರೆ, ಹೊರಗೆ ಬಂದು ಒಳಹರಿವು 10,000 ಕ್ಯೂಸೆಕ್ ಇದೆ ಅಂತ ಹೇಳ್ತಿದ್ದಾರೆ. CWRC ತೀರ್ಪು ಬರುಬ ಮುಂಚೆಯೇ ಒಳಹರಿವಿನ ಬಗ್ಗೆ ಹೇಳ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆ […]