ಬರ ಪೀಡಿತ ಜಿಲ್ಲೆ ಎಂದು ಘೋಷಿಸಿ ಸೈಲೆಂಟ್ ಆದ ಸರ್ಕಾರ, ಆಕ್ರೋಶಗೊಂಡ ರೈತರು
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಭೀಕರ ಬರಗಾಲ ತಾಂಡವವಾಡುತ್ತಿದೆ. ರೈತಾಪಿ ವರ್ಗ ಬಿತ್ತಿದ ಬೆಳೆ ಕೈಗೆ ಸಿಗದೆ ಕಂಗಾಲಾಗಿ ಕುಳಿತಿದೆ. ಜಮೀನಿನಲ್ಲೇ ಒಣಗಿ ಹೋದ ಬೆಳೆ ಜಾನುವಾರುಗಳ ಪಾಲಾಗಿವೆ. ಸಾಲಸೋಲ ಮಾಡಿ ಬಿತ್ತಿ ಬೆಳೆದ ಬೆಳೆ ಕೈಗೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಹೂವು, ಶೇಂಗಾ, ರಾಗಿ, ಮೆಕ್ಕೆಜೋಳ ಬೆಳೆಗಳು ಹಾಳಾಗಿವೆ. ಆದರೆ ಸರ್ಕಾರ ಮಾತ್ರ ಬರ ಪೀಡಿತ ಜಿಲ್ಲೆ ಎಂದು ಘೋಷಿಸಿ ಸೈಲೆಂಟಾಗಿರುವುದು ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಸುಮಾರು ಒಂದೂವರೆ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, ನಲವತ್ತು ಸಾವಿರ […]












































































































































































































































































































































































































































































































































































































































































































































































































































































































































































































































































































































