August 1, 2026

ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಮನೆ ಮೇಲೆ ಇಡಿ ದಾಳಿ

ಶಿವಮೊಗ್ಗ: ನಗರದಲ್ಲಿ ಏಕಕಾಲಕ್ಕೆ 3 ಕಡೆಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ಸೇರಿದ ಮನೆಗಳ ಮೇಲೆ ಇಡಿ ದಾಳಿ ನಡೆಸಿದೆ. ತೀರ್ಥಹಳ್ಳಿಯ ಬೆಟ್ಟಮಕ್ಕಿಯಲ್ಲಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್‌ಎಂ ಮಂಜುನಾಥ್ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುಂಜಾನೆಯೇ 2 ಕಾರಿನಲ್ಲಿ ಆಗಮಿಸಿದ ಅಧಿಕಾರಿಗಳು ಮನೆಗೆ ಬೀಗ ಹಾಕಿದ್ದ ಹಿನ್ನೆಲೆ ಹೊರಗಡೆ ಕಾದು ಕುಳಿತಿದ್ದಾರೆ.  ಮಂಜುನಾಥ್ ಅವರಿಗೆ ಸೇರಿದ ಒಟ್ಟು 3 ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಬೆಟ್ಟಮಕ್ಕಿಯಲ್ಲಿರುವ ನಿವಾಸ, […]

ಕಾಂಗ್ರೆಸ್ ಅಂದ್ರೆ ಹಿಂದೂ ವಿರೋಧಿ ಅನ್ನೋದು ಸ್ಪಷ್ಟವಾಗಿದೆ

ಬೆಂಗಳೂರು: ಕಾಂಗ್ರೆಸ್ ಎಂದರೆ ಹಿಂದೂ ವಿರೋಧಿ ಅನ್ನೋದನ್ನು ಆ ಪಕ್ಷದ ನಾಯಕರೇ ಸ್ಪಷ್ಟವಾಗಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ ಹೇಳಿಕೆ ನೀಡಿದ್ದಾರೆ. ಶಿವಮೊಗ್ಗ ಗಲಭೆ ಪ್ರಕರಣದ ಹಿನ್ನೆಲೆ ಸ್ಥಳಕ್ಕೆ ಬಿಜೆಪಿ ಸತ್ಯ ಶೋಧನೆ ತಂಡ ಭೇಟಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ವಾಸ್ತವತೆ ಮತ್ತು ನೊಂದ ನಾಗರಿಕರನ್ನು ಮಾತನಾಡಿಸಿ ವಾಸ್ತವ ಸ್ಥಿತಿ ಪರಿಶೀಲನೆ ಮಾಡುತ್ತೇವೆ. ಬಳಿಕ ಸರ್ಕಾರದ ಮೇಲೆ ಸೂಕ್ತ ಕ್ರಮ ವಹಿಸುವ ಬಗ್ಗೆ ಸಮಾಲೋಚನೆ ಮಾಡುತ್ತೇವೆ ಎಂದು ತಿಳಿಸಿದರು. ಭಯದ […]

ಇದು ಪ್ರಿ ಅರೇಂಜ್ ಮ್ಯಾರೇಜ್

ಬೆಂಗಳೂರು: ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ನನ್ನ ಜೊತೆ ಚರ್ಚೆ ಮಾಡಿಲ್ಲ ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮತ್ತೊಮ್ಮೆ ಜೆಡಿಎಸ್ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮೈತ್ರಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಮೈತ್ರಿ ಮಾಡಿಕೊಂಡವರು ಹೇಳಬೇಕು. ಬಿಜೆಪಿ ಸಿದ್ದಾಂತ ಒಪ್ಪಿ ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿದೆಯಾ? ಅಥವಾ ಜೆಡಿಎಸ್ ಸಿದ್ದಾಂತವನ್ನು ಬಿಜೆಪಿ ಒಪ್ಪಿದೆಯೋ? ಕುವೆಂಪು ಪಠ್ಯವನ್ನು ಕೈಬಿಟ್ಟಾಗ ಪ್ರತಿಭಟನೆ ನಾವು ಮಾಡಿದ್ದೆವು. ಈ ಬಗ್ಗೆ ಮೈತ್ರಿ ಆಗೋವಾಗ ಚರ್ಚೆ ಮಾಡಿದ್ದೀರಾ. ಜಾತ್ಯಾತೀತ, ಸಮಾಜವಾದ ಪದವನ್ನ ಸಂವಿಧಾನದಿಂದ ತೆಗೆಯಲಾಗಿದೆ. ಇದರ […]

ಬೆಂಗಳೂರಲ್ಲಿ ಐಟಿ ಭರ್ಜರಿ ಬೇಟೆ- 60 ಕಡೆ ದಾಳಿ; 2,500 ಕೋಟಿ ಅಕ್ರಮ ಬಯಲಿಗೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಬೃಹತ್ ಐಟಿ ದಾಳಿ ನಡದಿದೆ. ದಾಳಿಯಲ್ಲಿ ಕೋಟ್ಯಂತರ ಮೌಲ್ಯದ ಹಣ, ಚಿನ್ನಾಭರಣ, ನಗದು ಪತ್ತೆಯಾಗಿದೆ. ಕಾವೇರಿ ಥೇಯೇಟರ್ ಬಳಿಯ ಗಜರಾಜ್ ಜ್ಯುವೆಲ್ಲರಿ ಶಾಪ್, ಸದಾಶಿವನಗರದ ಭೂಮಿಕಾ ಅಪಾರ್ಟ್‍ಮೆಂಟ್, ಶಾಂತಿನಗರ, ವಿಜಯನಗರ, ಹುಳಿಮಾವು ಸೇರಿದಂತೆ ವಿವಿಧ ಕಡೆಗಳಲ್ಲಿ ಚಿನ್ನದ ಅಂಗಡಿ ಮಾಲೀಕರು, ಆಸ್ಪತ್ರೆ ಮಾಲೀಕರು, ರಿಯಲ್ ಎಸ್ಟೇಟ್ ಉದ್ಯಮಿಗಳು, ಶಿಕ್ಷಣ ಸಂಸ್ಥೆ ಮಾಲೀಕರ ಮನೆಗಳು ಸೇರಿದಂತೆ ಪೂವಾರ್ಂಕರ ಇನ್ಫಾ ಮತ್ತು ಪೂವಾರ್ಂಕರ ಗ್ರೂಪ್ ಮೇಲೆ ದಾಳಿ ನಡೆಸಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ರು. 7 […]

ಹೋಟೆಲ್ ಮಾಲೀಕನ ಮೇಲೆ ಹಲ್ಲೆ ಮಾಡಿ 1 ಲಕ್ಷ ರೂ. ದರೋಡೆ – ಆರೋಪಿಗಳು ಅರೆಸ್ಟ್

ಕೋಲಾರ: ಹೋಟೆಲ್ ಮಾಲೀಕನ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು (Police) ಬಂಧಿಸಿದ್ದಾರೆ. ಬಂಧಿತರನ್ನು ಬೆಂಗಳೂರಿನ ಕೆಂಪೇಗೌಡ ನಗರದ ಮನೋಜ್ ಹಾಗೂ ಅಭಿಷೇಕ್ ಎಂದು ಗುರುತಿಸಲಾಗಿದೆ. ಆರೋಪಿಗಳು ಕೋಲಾರ ನಗರದ ಹೋಟೆಲ್ ಒಂದರ ಮಾಲೀಕ ನವೀನ್ ಶೆಟ್ಟಿ ಎಂಬವರ ಮೇಲೆ ಕಳೆದ ತಿಂಗಳು 17ರ ರಾತ್ರಿ ಅಡ್ಡಗಟ್ಟಿ ಹಲ್ಲೆ ಮಾಡಿದ್ದರು. ಬಳಿಕ ಅವರ ಬಳಿ ಇದ್ದ 1 ಲಕ್ಷ ರೂ. ಹಣ ದೋಚಿ ಪರಾರಿಯಾಗಿದ್ದರು. ಈ ವೇಳೆ ಮಧು ಎಂಬ ಆರೋಪಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ […]

ನಮ್ಮ ಸರ್ಕಾರ ಜಾತಿಗಣತಿ ವರದಿ ಬಿಡುಗಡೆ ಮಾಡಲಿದೆ

ಬೆಂಗಳೂರು: ನಮ್ಮ ಸರ್ಕಾರ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಲಿದೆ. ಜಾತಿಗಣತಿ ಬಿಡುಗಡೆಯಿಂದ ಮೀಸಲಾತಿ ನೀಡಲು ಅನುಕೂಲ ಆಗುತ್ತದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ಜಾತಿಗಣತಿ ಬಿಡುಗಡೆ ವಿಚಾರ‌ವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು,ಜಾತಿ ಗಣತಿಯನ್ನು ನಮ್ಮ ಸರ್ಕಾರ ಬಿಡುಗಡೆ ಮಾಡುತ್ತದೆ. ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಆದಷ್ಟು ಬೇಗ ವರದಿ ಸರ್ಕಾರಕ್ಕೆ ಕೊಡುತ್ತೇನೆ ಎಂದು ಹೇಳಿದ್ದಾರೆ. ಆ ವರದಿ ಬಂದ ಮೇಲೆ ಚರ್ಚೆ ಮಾಡುತ್ತೇವೆ. ವರದಿ ಬಂದರೆ ಯಾವ ಯಾವ ಸಮುದಾಯಗಳು ಎಷ್ಟು ಇದ್ದಾರೆ ಎನ್ನುವುದು […]

ಹಿಂದೂ ಕಾರ್ಯಕರ್ತರ ವಿರುದ್ಧ ಮಾತ್ರನಾ ನಿಮ್ಮ ಪೌರುಷ

ಬೆಂಗಳೂರು: ಬಾಲ ಬಿಚ್ಚಿದ್ರೆ ಬಾಲ ಕಟ್ ಮಾಡ್ತೀವಿ ಅಂತ ಮರಿ ಖರ್ಗೆ (ಪ್ರಿಯಾಂಕ್ ಖರ್ಗೆ) ಹೇಳಿದ್ರು. ಹಿಂದೂ ಕಾರ್ಯಕರ್ತರ ವಿರುದ್ಧ ಮಾತ್ರನಾ ನಿಮ್ಮ ಪೌರುಷ ಎಂದು ಮಾಜಿ ಸಚಿವ ಸಿ.ಟಿ. ರವಿ ಪ್ರಶ್ನಿಸಿದರು. ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಮತಾಂಧರ ಕಟೌಟ್ ಹಾಕಿದ ಉದ್ದೇಶ ಏನು? ವಿಭಜನೆಯಿಂದ ಇನ್ನೂ ನೀವು ಸಮಾಧಾನ ಆಗಿಲ್ಲ ಅಂತ ಅರ್ಥಾನಾ? ಭಾರತದಲ್ಲಿ ಮತ್ತೊಂದು ವಿಭಜನೆಗೆ ಸರ್ಕಾರ ಪ್ರೋತ್ಸಾಹ ಕೊಡ್ತಿದೆಯಾ? ಬಾಲ ಬಿಚ್ಚಿದ್ರೆ ಬಾಲ ಕಟ್ ಮಾಡ್ತೀವಿ ಅಂತ ಮರಿ […]

ಮಾರ್ಬಲ್ ತುಂಬಿದ್ದ ಲಾರಿ ಪಲ್ಟಿ- ನಾಲ್ವರು ಕಾರ್ಮಿಕರು ಗಂಭೀರ

ಮಂಗಳೂರು: ಮಾರ್ಬಲ್ ತುಂಬಿದ್ದ ಲಾರಿಯೊಂದು ಪಲ್ಟಿಯಾಗಿ ನಾಲ್ವರು ಕಾರ್ಮಿಕರು ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಒಡಿಯೂರು ಸಮೀಪ ಈ ದುರ್ಘಟನೆ ನಡೆದಿದೆ. ಗಾಯಗೊಂಡ ಕಾರ್ಮಿಕರು ಉತ್ತರ ಭಾರತ ಮೂದವರು ಎಂಬುದಾಗಿ ತಿಳಿದುಬಂದಿದೆ. ಘಟನೆ ವಿವರ: ಮಾರ್ಬಲ್ ಅನ್ ಲೋಡ್‍ಗಾಗಿ ಲಾರಿಯನ್ನು ರಿವರ್ಸ್ ತೆಗೆದುಕೊಳ್ಳಲಾಗುತ್ತಿತ್ತು. ಈ ವೇಳೆ ಬ್ರೇಕ್ ಫೈಲ್ ಆಗಿ ಲಾರಿ ಪಲ್ಟಿಯಾಯಿತು. ಅಲ್ಲದೆ ಹೋಗಿ ನೀರಿನ ತೊಟ್ಟಿಗೆ ಬಿದ್ದಿದೆ. ಪರಿಣಾಮ ಲಾರಿಯಲ್ಲಿದ್ದ ನಾಲ್ವರು ಕಾರ್ಮಿಕರ ಕೈ-ಕಾಲು ಛಿದ್ರ […]

ಬಿಜೆಪಿ ಕಾರ್ಯಕರ್ತರೇ ವೇಷ, ಹೆಸರು ಬದಲಿಸಿಕೊಂಡು ಕಿಡಿಗೇಡಿತನ ಮಾಡ್ತಾರೆ

ಬೆಂಗಳೂರು: ಬಿಜೆಪಿ ಕಾರ್ಯಕರ್ತರೇ ವೇಷ ಹಾಗೂ ಹೆಸರು ಬದಲಿಸಿಕೊಂಡು ಕಿಡಿಗೇಡಿತನದಲ್ಲಿ ಭಾಗಿಯಾಗುತ್ತಾರೆ. ಈ ರೀತಿ ಗಲಾಟೆ ಹಾಗೂ ಗಲಭೆ ಮಾಡಿಸುವುದು ಅವರ ಹುಟ್ಟುಗುಣ ಎಂದು ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ನಡೆದ ಗಲಾಟೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಯವರು ಕಿತಾಪತಿ ಮಾಡಿ ಕಿತ್ತಾಟ ತಂದಿಡುವ ಕೆಲಸವನ್ನು ಯಾವಾಗಲೂ ಮಾಡುತ್ತಾರೆ. ಕೋಮುಗಲುಭೆ ಮಾಡಿಸುವುದು ಜಗಳ ಮಾಡಿಸುವುದು ಹಾಗೂ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುವ ಕೆಲಸವನ್ನ ಮೊದಲಿನಿಂದಲೂ ಬಿಜೆಪಿಗರು ಮಾಡಿಕೊಂಡು […]

ಉಡುಪಿ ಹಿಂದೂ ಸಮಾಜೋತ್ಸವಕ್ಕೆ ತಟ್ಟಿದ ಶಿವಮೊಗ್ಗ ಗಲಾಟೆ ಬಿಸಿ

ಉಡುಪಿ: ಶಿವಮೊಗ್ಗ ಈದ್ ಮಿಲಾದ್ ಮೆರವಣಿಗೆಯಲ್ಲಿ ನಡೆದ ಪುಂಡಾಟದ ಎಫೆಕ್ಟ್ ಉಡುಪಿಯ ಹಿಂದೂ ಸಮಾಜೋತ್ಸವದ ಮೇಲೆ ಬಿದ್ದಿದೆ. ಔರಂಗಜೇಬ್, ಟಿಪ್ಪು ಕಟೌಟ್ ಮಲೆನಾಡಿನ ಕಿಚ್ಚಿಗೆ ಕಾರಣವಾಗಿತ್ತು. ಈ ಕಾರಣಕ್ಕಾಗಿಯೇ ಉಡುಪಿ ಸಮಾಜೋತ್ಸವದ 30ಕ್ಕೂ ಹೆಚ್ಚು ಬ್ಯಾನರ್‌ಗಳಿಗೆ ಎಸ್‌ಪಿ ಕತ್ತರಿ ಹಾಕಿದ್ದಾರೆ. ವಿಶ್ವ ಹಿಂದೂ ಪರಿಷತ್ ಬಜರಂಗದಳ ಬಿಜೆಪಿ ಶಾಸಕರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದ ಈದ್ ಮಿಲಾದ್ ಮೆರವಣಿಗೆಯಲ್ಲಿ ಯುವಕರ ಗುಂಪು ಪುಂಡಾಟ ಮೆರೆದಿತ್ತು. ಈ ಘಟನೆ ನಡೆಯುತ್ತಿದ್ದಂತೆ ಸರ್ಕಾರ ಎಲ್ಲಾ ಜಿಲ್ಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ. […]