August 1, 2026

ರಾಜ್ಯಾಧ್ಯಕ್ಷ ಸ್ಥಾನದಿಂದ ಸಿಎಂ ಇಬ್ರಾಹಿಂ ಪದಚ್ಯುತಿ- ಹಂಗಾಮಿ ಅಧ್ಯಕ್ಷರಾಗಿ ಹೆಚ್‌ಡಿಕೆ ನೇಮಕ

ಬೆಂಗಳೂರು: ಪಕ್ಷದ ಮೈತ್ರಿ ನಿರ್ಧಾರ, ಪಕ್ಷದ ನಾಯಕರ ವಿರುದ್ಧ ಬಂಡೆದಿದ್ದ ಸಿಎಂ ಇಬ್ರಾಹಿಂ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಪದಚ್ಯುತಿ ಮಾಡಲಾಗಿದೆ. ಈ ಮೂಲಕ ಪಕ್ಷದ ವಿರುದ್ಧ ಸಮರ ಸಾರಿದ್ದ ಸಿಎಂ ಇಬ್ರಾಹಿಂ ಅವರಿಗೆ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಕೌಂಟರ್ ಕೊಟ್ಟಿದ್ದಾರೆ. ಕಳೆದ ಸೋಮವಾರಷ್ಟೇ ಬೆಂಬಲಿಗರ ಸಭೆ ಮಾಡಿದ್ದ ಸಿಎಂ ಇಬ್ರಾಹಿಂ, ನಮ್ಮದೇ ಒರಿಜಿನಲ್ ಜೆಡಿಎಸ್ ಅಂದಿದ್ದರು. ಕುಮಾರಸ್ವಾಮಿಯವರನ್ನೇ ಉಚ್ಛಾಟನೆ ಮಾಡುವ ಸೂಚನೆ ಕೊಟ್ಟಿದ್ದರು. ಇದರಿಂದ ಕೆರಳಿದ್ದ ವರಿಷ್ಠ ದೇವೇಗೌಡರು ಇಂದು ಕೋರ್ ಕಮಿಟಿ ಸಭೆ, ಶಾಸಕಾಂಗ ಸಭೆ, […]

ಈಶ್ವರಪ್ಪ ನ್ಯಾಯಾಧೀಶರಾಗಿ ನನ್ನ ಜೈಲಿಗೆ ಕಳುಹಿಸಲಿ: ಡಿಸಿಎಂ

ಬೆಂಗಳೂರು: ಈಶ್ವರಪ್ಪನವರು ಯಾಕೆ ತಡ ಮಾಡುತ್ತಿದ್ದಾರೆ ಮೊದಲು ಅವರು ನ್ಯಾಯಾಧೀಶರಾಗಿ ನನ್ನನ್ನು ಜೈಲಿಗೆ ಕಳಿಸಿ ಬಿಡಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಈಶ್ವರಪ್ಪನವರ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ. ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಾಯ ಮೀರಿ ಆಧಿಕ ಆಸ್ತಿ ಗಳಿಕೆ ಪ್ರಕರಣದ ವಿಚಾರವಾಗಿ ಮಾಜಿ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ನಾನು ಇದುವರೆಗೂ ಒಬ್ಬ ಗುತ್ತಿಗೆದಾರನಿಗೆ ಕೆಲಸ ಕೊಟ್ಟಿಲ್ಲ. ಎಲ್ಲಾ ಕಾಂಟ್ರ್ಯಾಕ್ಟ್ ಕೊಟ್ಟಿದ್ದು ಬಿಜೆಪಿ ಸರ್ಕಾರ. ಬಿಜೆಪಿಯವರದ್ದನ್ನು ನಾವು ಇನ್ನೂ ಈಚೆ ತೆಗೆದಿಲ್ಲ. ಈಗ ಆ […]

ಅನುಕಂಪವನ್ನು ನಮ್ಮ ದೇಶದಲ್ಲಿ ಹೇಗೆ ಬೇಕಾದ್ರು ಉಪಯೋಗ ಮಾಡಿಕೊಳ್ತಾರೆ

ಬೆಂಗಳೂರು: ಸಿಬಿಐ ಕೊಟ್ಟ ಮಾಹಿತಿಗಳ ಆಧಾರದಲ್ಲಿ ಡಿಕೆ ಶಿವಕುಮಾರ್ ಮೇಲಿನ ತನಿಖೆಗೆ ಹೈಕೋರ್ಟ್ ಅಸ್ತು ಎಂದಿದೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಡಿಕೆ ಶಿವಕುಮಾರ್ ವಿರುದ್ದ ಸಿಬಿಐ ತನಿಖೆಗೆ ಅಸ್ತು ಎಂದ ಹೈಕೋರ್ಟ್ ಆದೇಶಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಬಿಐ ಕೊಟ್ಟ ಮಾಹಿತಿಗಳ ಆಧಾರದಲ್ಲಿ ಕೋರ್ಟ್ ತೀರ್ಪು ಕೊಟ್ಟಿರಬಹುದು. ಕೋರ್ಟ್ ಕೂಡಾ 3 ತಿಂಗಳಲ್ಲಿ ತನಿಖೆ ಮುಗಿಸಿ ಎಂದು ಗಡುವು ಕೊಟ್ಟಿದ್ದಾರೆ. ಮುಂದೆ ಏನಾಗುತ್ತದೆ ಕಾದು ನೋಡೋಣ ಎಂದರು.  ಹೈಕೋರ್ಟ್ ತೀರ್ಪು ಸ್ವಾಗತ ಮಾಡೋದು, […]

ಭಿಕ್ಷೆ ಬೇಡಲು ಹೋಗಿದ್ದೆ: ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕ ಕಿಡಿ

ಬೆಳಗಾವಿ: ಐತಿಹಾಸಿಕ ಕಿತ್ತೂರು ಉತ್ಸವಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಬಿಡುಗಡೆ ಆಗದಿರುವ ವಿಚಾರಕ್ಕೆ ರಾಜ್ಯ ಸರ್ಕಾರದ ವಿರುದ್ಧ ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿತ್ತೂರು ಉತ್ಸವಕ್ಕೆ ಇನ್ನಷ್ಟು ಅನುದಾನ ನೀಡಿ ಎಂದು ಭಿಕ್ಷೆ ಬೇಡಲು ಬೆಂಗಳೂರಿಗೆ ಹೋಗಿದ್ದೆ. ಈಗಾಗಲೇ ಉತ್ಸವಕ್ಕೆ ಸರ್ಕಾರ 2 ಕೋಟಿ ರೂ. ಅನುದಾನ ನೀಡಿದೆ. ಇನ್ನಷ್ಟು ಅನುದಾನ ಕೊಡಲಿ ಎಂದು ಭಿಕ್ಷೆ ಬೇಡಲು ಹೋಗಿದ್ದೆ. ಕಳೆದ ವರ್ಷದಿಂದ ರಾಜ್ಯಮಟ್ಟದ ಉತ್ಸವವಾಗಿ ಕಿತ್ತೂರು ಉತ್ಸವ ಆಚರಿಸಲಾಗಿತ್ತು ಎಂದಿದ್ದಾರೆ.  […]

ಡಿಕೆಶಿ ಹಸ್ತಕ್ಷೇಪಕ್ಕೆ ಸತೀಶ್ ಕಿಡಿ – ಕಾಂಗ್ರೆಸ್‌ಗೂ ಬೆಳಗಾವಿ ರಾಜಕೀಯ ಕಂಟಕನಾ?

ಬೆಂಗಳೂರು: ಬೆಳಗಾವಿಯಲ್ಲಿ ರಾಜಕಾರಣ ಬೆಂಕಿ ಉರಿದಾಗ ಅನಾಹುತವೇ ನಡೆದಿದೆ. ಈ ಬಾರಿಯೂ ಏನಾದರೊಂದು ರಾಜಕೀಯ ಅವಘಡಕ್ಕೆ ಸುಳಿವು ಕೊಡುತ್ತಿದ್ಯಾ ಕುಂದಾನಗರಿ ಪವರ್ ಪಾಲಿಟಿಕ್ಸ್ ಎಂಬ ಅನುಮಾನ ಈಗ ಶುರುವಾಗಿದೆ. ಹಿಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಬೆಳಗಾವಿ ರಾಜಕಾರಣ ಮುಳುವಾಗಿತ್ತು. ಈಗ ಮತ್ತೊಮ್ಮೆ ರಾಜಕಾರಣ ಗರಿಗೆದರಿದ್ದು, ಇಬ್ಬರು ಪ್ರಭಾವಿ ಸಚಿವರ ಮಧ್ಯೆ ಕಿತ್ತಾಟ ಈಗ ಭುಗಿಲೆದ್ದಿದೆ. ಸಚಿವ ಸತೀಶ್ ಜಾರಕಿಹೊಳಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಪವರ್ ಪ್ರತಿಷ್ಠೆ ಶುರುವಾಗಿದೆ. ಜಿಲ್ಲೆ ಮೇಲಿನ ತಮ್ಮ ಪ್ರಭಾವ, ಹಿಡಿತ ಕಮ್ಮಿ […]

ಮೈತ್ರಿ ಮಾತುಕತೆಗೆ ತಮ್ಮನ್ನು ಕರೆದುಕೊಂಡು ಹೋಗಿಲ್ಲ ಅನ್ನೋದು ಸಿಎಂ ಇಬ್ರಾಹಿಂ ಸಿಟ್ಟು

ಬೆಂಗಳೂರು: ಬಿಜೆಪಿ ನಾಯಕರ ಜೊತೆ ಕುಮಾರಸ್ವಾಮಿ ಮಾತನಾಡಲು ಹೋದಾಗ ತಮ್ಮನ್ನು ಕರೆದುಕೊಂಡು ಹೋಗಿಲ್ಲ ಎಂಬ ಸಿಟ್ಟಿನಿಂದ ಸಿಎಂ ಇಬ್ರಾಹಿಂ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ತಿಳಿಸಿದ್ದಾರೆ. ಒರಿಜಿನಲ್ ಜೆಡಿಎಸ್ ನಮ್ಮದೆ ಎಂಬ ಸಿಎಂ ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್‌ನಲ್ಲಿ ಯಾವುದೇ ಬಂಡಾಯ ಇಲ್ಲ. ವಿಧಾನಸಭೆ ಚುನಾವಣೆ ಮುಗಿದ ಕೂಡಲೇ ಇಬ್ರಾಹಿಂ ರಾಜೀನಾಮೆ ಕೊಟ್ಟರು. ಪಕ್ಷ ಸೋತಿದೆ ಅಂತ ರಾಜೀನಾಮೆ ಕೊಟ್ಟಿದ್ದರು. ರಾಷ್ಟ್ರೀಯ ಅಧ್ಯಕ್ಷರು ರಾಜೀನಾಮೆ ಬೇಡ ಅಧ್ಯಕ್ಷನಾಗಿ ಮುಂದುವರಿ […]

ಹಳ್ಳಿತಪ್ಪಿದ ಕಾರಟಗಿ-ಯಶವಂತಪುರ ಎಕ್ಸ್‌ಪ್ರೆಸ್ ರೈಲು

ಕೊಪ್ಪಳ: ಕಾರಟಗಿ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿಯ ರೈಲ್ವೆ ನಿಲ್ದಾಣದ ಸಮೀಪ ನಡೆದಿದೆ. ರೈಲು ಯಶವಂತಪುರದಿಂದ ಕಾರಟಗಿ ನಿಲ್ದಾಣಕ್ಕೆ ಆಗಮಿಸುವ ವೇಳೆ ಘಟನೆ ನಡೆದಿದೆ. ರೈಲ್ವೆ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ. ಸದ್ಯ ರೈಲು ನಿಧಾನವಾಗಿ ಚಲಿಸುತ್ತಿದ್ದರಿಂದ ಹಳಿ ತಪ್ಪಿದರೂ ಯಾವುದೇ ಪ್ರಾಣಾಪಾಯವಾಗಿಲ್ಲ. ರೈಲಿನ ಎಂಜಿನ್ ಸಂಪೂರ್ಣವಾಗಿ ಹಳ್ಳಿ ತಪ್ಪಿದ್ದು, ರೈಲ್ವೆ ನಿಲ್ದಾಣ ಸಮೀಪದಲ್ಲಿ ಅದರ ಬೋಗಿಗಳು ನಿಂತಿವೆ. ರೈಲ್ವೆ ಹಳಿ ತಪ್ಪಿದ್ದರಿಂದ 2 ರೈಲ್ವೆ ಸಂಚಾರದಲ್ಲಿ ಅಡೆತಡೆ ಉಂಟಾಗಿದೆ. […]

ತುಂಬಾ ಸಂತೋಷದಿಂದ ನಾನು ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ್ದೇನೆ: ಹೆಚ್‍ಡಿಡಿ

ಬೆಂಗಳೂರು: ತುಂಬಾ ಸಂತೋಷದಿಂದಲೇ ನಾನು ಈ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡ ಹೇಳಿದ್ದಾರೆ. ಶಿಕ್ಷಣ ಪುಸ್ತಕ ಜ್ಞಾನ, ಅಕ್ಷರ ಜ್ಞಾನ ಮಾತ್ರ ಅಲ್ಲ ವಿದ್ಯೆ ಹೃದಯವಂತಿಕೆ ಬೆಳೆಸಬೇಕು. ವಿದ್ಯಾರ್ಥಿ ಜೀವನ ತಪ್ಪಸ್ಸು ಇದ್ದಂತೆ. ವಿದ್ಯೆ ಒಬ್ಬನ ಜೀವನ ಕಟ್ಟಿಕೊಳ್ಳವುದು ಮಾತ್ರವಲ್ಲ, ದೇಶವನ್ನು ಸಮಾಜವನ್ನು ಕಟ್ಟುತ್ತದೆ. ಪ್ರಸ್ತುತ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣದ ಅಗತ್ಯ ಹೆಚ್ಚಿದೆ ಎಂದು ತಿಳಿಸಿದರು. ಇದೇ ವೇಳೆ ಇಸ್ರೋ ಅಧ್ಯಕ್ಷ ಸೋಮನಾಥ್ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ. ಸೋಮನಾಥ್ ಅವರಿಗೆ […]

ಒರಿಜಿನಲ್ ಅಂತ ಸಿಎಂ ಇಬ್ರಾಹಿಂ ಬೋರ್ಡ್ ಹಾಕಿಕೊಳ್ಳಲಿ: ಹೆಚ್‍ಡಿಕೆ

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನಡೆಗೆ ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ರಾಹಿಂ ಒರಿಜಿನಲ್ ಅಂತ ಬೋರ್ಡ್ ಹಾಕಿಕೊಳ್ಳಲಿ. ಉಚ್ಛಾಟನೆ ಮಾಡಿಕೊಳ್ಳಲಿ ಅವರು ಫ್ರೀ ಇದ್ದಾರೆ. ಸಿಎಂ ಇಬ್ರಾಹಿಂ ಮಾತನ್ನ ಇಷ್ಟೊಂದು ಸೀರಿಯಸ್ ಆಗಿ ತೆಗೆದುಕೊಳ್ಳುವ ಆಗತ್ಯ ಇಲ್ಲ ಎಂದರು. ಇಬ್ರಾಹಿಂ ಅವರು ಏನು ಮಾಡುತ್ತಾರೆ ಮಾಡಲಿ. ದಯವಿಟ್ಟು ಇಂತಹ ಸಿಲ್ಲಿ ವಿಷಯವನ್ನ ಗಂಭೀರವಾಗಿ ತೆಗೆದುಕೊಳ್ಳಬೇಡಿ. ಉತ್ತರ ಕೊಡುವ ವಿಷಯವಲ್ಲ. ಪಕ್ಷದ ವಿಚಾರ ನಾವು ಬಗೆಹರಿಸಿಕೊಳ್ಳುತ್ತೇವೆ, ನೀವು ಹೆಚ್ಚು […]

ಬೊಮ್ಮಾಯಿ ಆಸ್ಪತ್ರೆಗೆ ದಾಖಲು

ಬೆಂಗಳೂರು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಆರೋಗ್ಯದಲ್ಲಿ ಏರುಪೇರಾಗಿರುವ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೊಣಕಾಲು ನೋವಿನಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಇರುವುದು ಪತ್ತೆಯಾಗಿದೆ. ಹೀಗಾಗಿ ಅವರನ್ನು ಹೃದಯ ಶಸ್ತ್ರಚಿಕಿತ್ಸೆಗೆ (Heart Surgery) ಒಳಪಡಿಸಲಾಗಿದೆ. ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಬೊಮ್ಮಾಯಿ ಶೀಘ್ರ ಚೇತರಿಕೆಯಾಗುವಂತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾರೈಸಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ನಿಕಟಪೂರ್ವ ಮುಖ್ಯಮಂತ್ರಿಗಳು, ಆತ್ಮೀಯರೂ ಆದ ಬಸವರಾಜ ಬೊಮ್ಮಾಯಿ ಅವರು ಆದಷ್ಟು ಶೀಘ್ರದಲ್ಲಿ […]