August 1, 2026

ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಬಸ್

ಹಾಸನ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಮನೆಗೆ ನುಗ್ಗಿದ ಘಟನೆ ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ, ಅಗ್ಗುಂದ ಗ್ರಾಮದಲ್ಲಿ ನಡೆದಿದೆ. ಅರಸೀಕೆರೆಯಿಂದ ಹುಳಿಯಾರಿಗೆ ತೆರಳುತ್ತಿದ್ದ ಸಾರಿಗೆ ಬಸ್ ಇದಾಗಿದ್ದು, ಚಾಲಕನ ನಿಯಂತ್ರಣ ಸಿಗದೆ ಮನೆಯೊಂದಕ್ಕೆ ನುಗ್ಗಿದೆ. ಅಪಘಾತದಿಂದಾಗಿ ಮನೆ ಜಖಂ ಆಗಿದೆ. 4-5 ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ದೊಡ್ಡ ಅನಾಹುತ ತಪ್ಪಿದೆ.  ಬಸ್ ಗುದ್ದಿದ ರಭಸಕ್ಕೆ ಮನೆಯ ಗೋಡೆ ಹಾಗೂ ಕಾಂಪೌಂಡ್ ನೆಲಕ್ಕುರುಳಿವೆ. ಬಸ್ ಹಾಗೂ ವಾಸದ ನಿವಾಸಕ್ಕೆ ಹಾನಿಯಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ […]

ಒಂದೇ ನಗರಸಭೆಗೆ ಇಬ್ಬರು ಆಯುಕ್ತರು – ಕುರ್ಚಿಗಾಗಿ ಅಧಿಕಾರಿಗಳ ಕಿತ್ತಾಟ

ಬಾಗಲಕೋಟೆ: ಇಲ್ಲಿನ ನಗರಸಭೆ ಆಯುಕ್ತರ ಸ್ಥಾನಕ್ಕಾಗಿ ಇಬ್ಬರು ಅಧಿಕಾರಿಗಳ ನಡುವೆ ಕಿತ್ತಾಟ ಶುರುವಾಗಿದೆ. ಇಬ್ಬರು ಅಧಿಕಾರಿಗಳು ಒಂದೇ ಚೇಂಬರ್‍ನಲ್ಲಿ ಕುಳಿತು ಕಿತ್ತಾಟ ಆರಂಭಿಸಿದ್ದಾರೆ. ಹಿಂದಿನ ನಗರಸಭಾ ಆಯುಕ್ತರಾಗಿದ್ದ ವಾಸಣ್ಣ.ಆರ್ ಹಾಗೂ ಈಗಿನ ಆಯುಕ್ತ ರಮೇಶ್ ಜಾಧವ್ ಮಧ್ಯೆ ಕುರ್ಚಿ ಕಿತ್ತಾಟ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ವಾಸಣ್ಣ ಅವರನ್ನು ಆ.11 ರಂದು ವರ್ಗಾವಣೆ ಮಾಡಲಾಗಿತ್ತು. ಅವರ ಸ್ಥಾನಕ್ಕೆ ರಮೇಶ್ ಜಾಧವ್ ಅವರನ್ನು ನಿಯೋಜಿಸಲಾಗಿತ್ತು. ಬಳಿಕ ವಾಸಣ್ಣ ಅವರು ಕೆಇಟಿ ಮೆಟ್ಟಿಲೇರಿದ್ದರು.  ಇದಿಗ ಕೆಇಟಿ ಆದೇಶ ತಂದಿದ್ದೇನೆ ಎಂದು […]

5 ವರ್ಷದ ಮಗಳನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿದ ತಾಯಿ!

ದಾವಣಗೆರೆ: ಐದು ವರ್ಷದ ಮಗಳನ್ನು ಸೊಂಟಕ್ಕೆ ಕಟ್ಟಿಕೊಂಡು ತಾಯಿ ಕೆರೆಗೆ ಹಾರಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಕವಿತಾ (27) ಹಾಗೂ ನಿಹಾರಿಕಾ (05) ಆತ್ಮಹತ್ಯೆ ಮಾಡಿಕೊಂಡ ತಾಯಿ-ಮಗಳು. ಮೃತ ಕವಿತಾ ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದ ನಿವಾಸಿ ಮಂಜುನಾಥ್ ಪತ್ನಿ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಬಳಿ ಇರುವ ಐತಿಹಾಸಿಕ ಪ್ರವಾಸಿ ತಾಣ ಸೂಳೆಕೆರೆಯಲ್ಲಿ ಈ ಘಟನೆ ನಡೆದಿದೆ. ಕಳೆದ ಶುಕ್ರವಾರ ಮಗಳು ನಿಹಾರಿಕಾಳೊಂದಿಗೆ ಕವಿತಾ ಕಾಣೆಯಾಗಿದ್ದಳು. ಈ ಬಗ್ಗೆ ಪತಿ ಮಂಜುನಾಥ್ ಪೊಲೀಸರಿಗೆ ದೂರು ಕೊಟ್ಟಿದ್ದರು. […]

ರೇಡ್ ಪಾಲಿಟಿಕ್ಸ್ ಆರೋಪಕ್ಕೆ ಕೌಂಟರ್‌ 

ಬೆಂಗಳೂರು: ರೇಡ್ ಪಾಲಿಟಿಕ್ಸ್ (Raid Politics) ಆರೋಪ ಪ್ರತ್ಯಾರೋಪದ ನಡುವೆ ಕೌಂಟರ್ ಅಸ್ತ್ರ ಜೋರಾಗಿದೆ. ಮೆಡಿಕಲ್ ಹಗರಣ, ಬಿಟ್ ಕಾಯಿನ್ ಹಗರಣದ ತನಿಖೆಯ ಶಾಕ್ ನೀಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಈಗ ಲಭ್ಯವಾಗಿದೆ. ರೇಡ್ ಪಾಲಿಟಿಕ್ಸ್ ಜಾಸ್ತಿಯಾದ್ರೆ ಟಕ್ಕರ್ ನೀಡಲು ಕಾಂಗ್ರೆಸ್‌ ಪಾಳಯ ಸಿದ್ದತೆ ಮಾಡಿಕೊಂಡಿದೆ. ರಾಜ್ಯದಲ್ಲಿ ಐಟಿ ರೇಡ್ ದಿನ ಕಳೆದಂತೆ ಜೋರಾಗುತ್ತಿದ್ದು, ಅಕ್ರಮವಾಗಿ ಸಿಕ್ಕ ಹಣದ ಮೂಲ ಕಾಂಗ್ರೆಸ್ ಎಂಬ ಆರೋಪವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ.    ಯಾವುದೇ ದಾಖಲೆ ಇಲ್ಲದೆ ಮಾಡುತ್ತಿರುವ ಆರೋಪ […]

ಅಂಬಿಕಾಪತಿ, ಸಂತೋಷ್‌ ಕೃಷ್ಣಪ್ಪ ರಾಜ್ಯದ ನಂ 1, ನಂ 2 ಅವರ ಬೇನಾಮಿಗಳು

ಬೆಂಗಳೂರು: ಅಂಬಿಕಾಪತಿ ಮತ್ತು ಸಂತೋಷ್‌ ಕೃಷ್ಣಪ್ಪ ಇಬ್ಬರೂ ಈ ರಾಜ್ಯದ ನಂಬರ್ 1 ಮತ್ತು ನಂಬರ್ 2 ಅವರ ಬೇನಾಮಿಗಳು ಎಂದು ಮಾಜಿ ಸಚಿವ ಸಿಟಿ ರವಿ ಹೇಳಿದ್ದಾರೆ. ಬೆಂಗಳೂರು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸದ್ಯಕ್ಕೆ ಇಬ್ಬರು ಬೇನಾಮಿಗಳು ಬಯಲಾಗಿದ್ದಾರೆ. ಸಿಎಂ, ಡಿಸಿಎಂ ಇಬ್ಬರೂ ತಮ್ಮ ಅಕ್ರಮ‌ ಚಟುವಟಿಕೆಗಳಿಗಾಗಿ ಎಲ್ಲ ಜಿಲ್ಲೆಗಳಲ್ಲೂ ಇನ್ನೂ ಹಲವು ಬೇನಾಮಿಗಳನ್ನು ಇಟ್ಟುಕೊಂಡಿದ್ದಾರೆ. ಸಿಬಿಐ ತನಿಖೆಗೆ ವಹಿಸಿದರೆ ಎಲ್ಲ ಸತ್ಯ ಹೊರಗೆ ಬರಲಿದೆ ಎಂದು ಗಂಭೀರ ಆರೋಪ ಮಾಡಿದರು.  ಪಂಚ ರಾಜ್ಯಗಳ […]

ನಾನು ಅಪ್ಪನ ಹೆಗಲ ಮೇಲೆ ಕೂತು ದಸರಾ ನೋಡಿದ್ದೆ

ಮೈಸೂರು: ನಾನು ಚಿಕ್ಕವನಾಗಿದ್ದಾಗ ನಮ್ಮ ಅಪ್ಪ ದಸರಾಗೆ ಕರೆದುಕೊಂಡು ಬಂದಿದ್ದರು. ನಾನು ನನ್ನ ಅಪ್ಪನ ಹೆಗಲ ಮೇಲೆ ಕೂತು ಮೈಸೂರು ದಸರಾ ನೋಡಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ದಸರಾ ನೆನಪನ್ನು ಮೆಲುಕು ಹಾಕಿದ್ದಾರೆ. ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನಗೆ ಆಗ ಐದಾರು ವರ್ಷ ಇರಬಹುದು. ನನ್ನ ಅಪ್ಪನ ಹೆಗಲ ಮೇಲೆ ಕುಳಿತು ದಸರಾ ನೋಡಿದ್ದೆ. ನೋಡು ನೋಡು ಮೈಸೂರು ಮಹಾರಾಜ ಎನ್ನುತ್ತಿದ್ದರು. ನನಗೆ ಕಾಣದಿದ್ದರೂ ನಮಸ್ಕಾರ ಮಾಡಿದ್ದೆ. ಮೈಸೂರಿಗೆ ಓದಲು […]

ಮಹಿಷ ದಸರಾ ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವುದಿಲ್ಲ

ಚಿಕ್ಕೋಡಿ: ಮಹಿಷಾಸುರ ದುರ್ಗುಣಗಳ ಪ್ರತೀಕ ಎಂದು ಮಹಿಷ ದಸರಾ ಉತ್ಸವ ಆಚರಣೆ ಕುರಿತು ಉಡುಪಿಯ ಪೇಜಾವರ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ಹುಕ್ಕೇರಿ ಹಿರೇಮಠದ ದಸರಾ ಉತ್ಸವದಲ್ಲಿ ಭಾಗಿಯಾಗಿ ಪೇಜಾವರ ಶ್ರೀಗಳು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದರು. ಮಹಿಷಾಸುರ ಮರ್ದಿನಿ ಎಂದು ಚಾಮುಂಡೇಶ್ವರಿ ಪೂಜೆ ಮಾಡುತ್ತೇವೆ. ದುಷ್ಟ ಅಂತ ಹೇಳಿ ಚಾಮುಂಡೇಶ್ವರಿ ಮಹಿಷಾಸುರನನ್ನು ಮರ್ದನ ಮಾಡಿದ್ದಾಳೆ ಎಂದು ತಿಳಿಸಿದರು. ಚಾಮುಂಡೇಶ್ವರಿ ಉತ್ಸವವನ್ನು ಸರ್ಕಾರವೇ ಮಾಡುತ್ತಿದೆ. ಮತ್ತೊಂದು ಕಡೆ ಮಹಿಷಾಸುರನ ಉತ್ಸವ ಮಾಡುವಲ್ಲಿ ಅರ್ಥವಿಲ್ಲ. ದುರ್ಗುಣಗಳ […]

ಲಗ್ಗೆರೆಯಲ್ಲಿ ಭಾರೀ ಅಗ್ನಿ ಅವಘಡ

ಬೆಂಗಳೂರು: ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸಿಡಿದು ಗುಜರಿ ಅಂಗಡಿಗೆ ಬೆಂಕಿ ತಗುಲಿದ್ದು, ಸುತ್ತಮುತ್ತಲಿನ ಮನೆಗೂ ಬೆಂಕಿ ಆವರಿಸಿದ ಘಟನೆ ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿದೆ. ಘಟನೆಯಲ್ಲಿ ಗುಜರಿ ಅಂಗಡಿ ಪಕ್ಕದಲ್ಲಿದ್ದ ಐದಾರು ಬೈಕ್‍ಗಳು ಭಸ್ಮವಾಗಿವೆ. ಅಲ್ಲದೇ ಭಾರೀ ಪ್ರಮಾಣದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಆದರೂ ಬೆಂಕಿ ಹತೋಟಿಗೆ ಬರುತ್ತಿಲ್ಲ.  ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ಆಗಮಿಸಿದ್ದು ಬೆಂಕಿ ನಿಯಂತ್ರಿಸಲು ಪ್ರಯತ್ನಪಡುತ್ತಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಟ್ರಾನ್ಸ್‌ಫಾರ್ಮರ್ ಸಿಡಿದಿರುವ ಶಂಕೆ ಇದೆ.

ಹನಿಟ್ರ್ಯಾಪ್ ಆರೋಪ ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ

ಬೆಳಗಾವಿ: ಹನಿಟ್ರ್ಯಾಪ್ ಮಾಡುತ್ತಿರುವ ಆರೋಪ ಹೊರಿಸಿ ಮಹಿಳೆಯೊಬ್ಬಳಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಅಮಾನವೀಯ ಘಟನೆ ಗೋಕಾಕ್‌ನ ಘಟಪ್ರಭಾದಲ್ಲಿ ನಡೆದಿದೆ. ಮಹಿಳೆ ವಿರುದ್ಧ ಹನಿಟ್ರ‍್ಯಾಪ್ ಹಾಗೂ ಬ್ಲಾಕ್‌ಮೇಲ್ ಆರೋಪವನ್ನು ನಗರದ ಮಹಿಳೆಯರು ಹಾಗೂ ಸ್ಥಳೀಯರು ಮಾಡಿದ್ದಾರೆ. ಇದೇ ಕಾರಣಕ್ಕೆ ನಗರದ ಮೃತ್ಯುಂಜಯ ಸರ್ಕಲ್‌ನಲ್ಲಿ ಮಹಿಳೆ ಮೇಲೆ ಈ ರೀತಿಯಾಗಿ ವರ್ತಿಸಿದ್ದಾರೆ. ಮಹಿಳೆ ಬ್ಲಾಕ್‌ಮೇಲ್ ಮಾಡುತ್ತಿರುವ ವಿಚಾರವಾಗಿ ಈ ಹಿಂದೆ ಸಹ ಗಲಾಟೆಯಾಗಿತ್ತು ಎನ್ನಲಾಗಿದೆ.  ಆಗಾಗ ಊರಿನವರು ಹಾಗೂ ಮಹಿಳೆಯ ನಡುವೆ ಗಲಾಟೆ ನಡೆಯುತ್ತಿತ್ತು. ಮಹಿಳೆ ಹನಿಟ್ರ್ಯಾಪ್ ಮಾಡುತ್ತಿರುವ […]

ರಾಗಿಗುಡ್ಡ ಗಲಭೆಯಲ್ಲಿ ನಿಷೇಧಿತ PFI ಕಾರ್ಯಕರ್ತರ ಕೈವಾಡ?

ಶಿವಮೊಗ್ಗ: ಇಲ್ಲಿನ ರಾಗಿಗುಡ್ಡದಲ್ಲಿ ಅಕ್ಟೋಬರ್ 1 ರಂದು ಈದ್ ಮಿಲಾದ್ ಹಬ್ಬದ ಮೆರವಣಿಗೆ ಆಯೋಜಿಸಲಾಗಿತ್ತು. ಸಂಜೆ ಮೆರವಣಿಗೆ ಆರಂಭವಾದ ನಂತರ ರಾಗಿಗುಡ್ಡದ ಶನೇಶ್ವರ ದೇವಸ್ಥಾನದ ಬಳಿ ಮೆರವಣಿಗೆ ಸಾಗುತ್ತಿದ್ದ ವೇಳೆ ಮೆರವಣಿಗೆಯಲ್ಲಿದ್ದವರ ಮೇಲೆ ಒಂದು ಕಲ್ಲು ತೂರಿ ಬಂದಿದೆ. ಇದರಿಂದ ರೊಚ್ಚಿಗೆದ್ದ ಮೆರವಣಿಗೆಯಲ್ಲಿ ಇದ್ದವರು ಪ್ರತಿಯಾಗಿ ಕಲ್ಲು ತೂರಾಟ ನಡೆಸಿದ್ದರು. ಹಿಂದೂಗಳ ಮನೆಗಳನ್ನು ಗುರಿಯಾಗಿಸಿಕೊಂಡು ಮನೆಗಳ ಮೇಲೆ ದಾಳಿ ನಡೆಸಿದ್ದರು. ವಾಹನಗಳ ಜಖಂಗೊಳಿಸಿದ್ದರು. ಘಟನೆಯಲ್ಲಿ 7 ಮಂದಿ ನಾಗರಿಕರು ಸೇರಿದಂತೆ ಪೊಲೀಸರು ಗಾಯಗೊಂಡಿದ್ದರು. ಘಟನೆ ಬಳಿಕ ಸ್ಥಳದಲ್ಲಿ 144 […]