July 30, 2026

ಗಾಜಾ ಪಟ್ಟಿ ಮೇಲೆ ದಾಳಿ ಹೆಚ್ಚಿಸಿದ ಇಸ್ರೇಲ್: 24 ಗಂಟೆಗಳಲ್ಲಿ 700 ಮಂದಿ ಸಾವು; ಅಮೆರಿಕಾ ಕಳವಳ

ಜೆರುಸಲೇಂ: ಹಮಾಸ್‌ ಉಗ್ರರನ್ನು ನಿರ್ನಾಮ ಮಾಡಲು ಪಣತೊಟ್ಟಿರುವ ಇಸ್ರೇಲ್‌, ಗಾಜಾ ಪಟ್ಟಿ ಮೇಲೆ ನಡೆಸುತ್ತಿರುವ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಮಂಗಳವಾರ ತಡರಾತ್ರಿ ಗಾಜಾ ನಗರದ ಮೇಲೆ ಇಸ್ರೇಲ್ ರಾಕೆಟ್ ದಾಳಿ ನಡೆಸಿದ್ದು, ಕಳೆದ 24 ಗಂಟೆಗಳಲ್ಲಿ 700ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆಂದು ಹಮಾಸ್ ಉಗ್ರರೇ ಮಾಹಿತಿ ನೀಡಿದ್ದಾರೆ. ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ಸಮರ ಆರಂಭವಾದ ಬಳಿಕ ಇಸ್ರೇಲ್‌ ನಡೆಸಿದ ಭೀಕರ ದಾಳಿ ಇದಾಗಿದೆ ಎಂದು ತಿಳಿದುಬಂದಿದೆ. ಹಮಾಸ್‌ನ 400 ಪ್ರಮುಖ ಉಗ್ರರನ್ನು ಗುರಿಯಾಗಿಸಿ ಇಸ್ರೇಲ್‌ ರಾತ್ರೋರಾತ್ರಿ […]

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕಚೇರಿ ಲಾಕರ್‌ನಲ್ಲಿದ್ದ 1.24 ಕೋಟಿ ಕಳವು

ಧಾರವಾಡ: ಇಡೀ ನಾಡು ದಸರಾ ಸಂಭ್ರಮದಲ್ಲಿದೆ. ಅದರಲ್ಲಿಯೂ ಈ ಸಲದ ದಸರಾ ಭಾನುವಾರ ಹಿಡಿದುಕೊಂಡೇ ಬಂದಿದ್ದರಿಂದ ಭರ್ಜರಿ ರಜೆಯ ಆಫರನ್ನೇ ನೀಡಿತ್ತು. ಆದರೆ ಈ ರಜೆಯ ಪ್ರಯೋಜನ ಪಡೆದುಕೊಂಡ ಕಳ್ಳರು ಧಾರವಾಡದಲ್ಲಿ ಭರ್ಜರಿ ಕರಾಮತ್ ತೋರಿಸಿದ್ದಾರೆ. ಹೌದು. ಧಾರವಾಡದ ರಾಯಾಪುರ ಬಡಾವಣೆಯಲ್ಲಿರೋ ಧರ್ಮಸ್ಥಳ ಗ್ರಾಮಾಭಿವದ್ಧಿ ಸಂಘದ ಕಚೇರಿಯ ಲಾಕರ್ ಅನ್ನೇ ಕಳ್ಳರು ಲೂಟಿ ಮಾಡಿದ್ದಾರೆ. 1 ಕೋಟಿ 24 ಲಕ್ಷ ರೂ. ಹಣ ಎಗರಿಸಿದ್ದಾರೆ. ಇಲ್ಲಿರೋ ಒಟ್ಟು ನಾಲ್ಕೂ ಲಾಕರ್ ಗಳನ್ನು ಮುರಿದಿರುವ ಕಳ್ಳರು, ಅಲ್ಲಿದ್ದ ಒಂದು ಪೈಸೆಯನ್ನೂ […]

ಬೆಂಗಳೂರಿನಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ಮಾಡುತ್ತಿದ್ದ ಜಾಲ ಪತ್ತೆ, ದಂಧೆಗೆ ವೈದ್ಯರೇ ಸಾಥ್

ಬೆಂಗಳೂರು: ಹೆಣ್ಣು ಭ್ರೂಣ ಲಿಂಗ ಪತ್ತೆ ಹಚ್ಚಿ ಬಳಿಕ ಗರ್ಭಪಾತ ಮಾಡಿಸುತ್ತಿದ್ದ ಜಾಲವೊಂದನ್ನು ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಭೇದಿಸಿದ್ದು, ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಮೈಸೂರಿನ ಬನ್ನೂರು ರಸ್ತೆ ವಸಂತನಗರದ ಶಿವಲಿಂಗೇಗೌಡ, ಮಂಡ್ಯ ಜಿಲ್ಲೆ ಕೂಳೇನಹಳ್ಳಿಯ ನಯನ್‌ಕುಮಾರ್, ಪಾಂಡವಪುರ ತಾಲೂಕಿನ ಸುಂಕದನ್ನೂರು ಗ್ರಾಮದ ನವೀನ್‌ಕುಮಾರ್, ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದ ಟಿ.ಎಂ.ವೀರೇಶ್ ಬಂಧಿತರು. ಈ ದಂಧೆಯಲ್ಲಿ ವೈದ್ಯರು ಸಹ ಇದ್ದು, 15 ರಿಂದ 20 ಸಾವಿರ ರೂಪಾಯಿ ಪಡೆದುಕೊಂಡು ಈ ದಂಧೆಗೆ ಸಾಥ್ […]

ಡಿಕಾಕ್‌ ಡಿಚ್ಚಿಗೆ ಬಾಂಗ್ಲಾ ಬರ್ನ್‌ – 149 ರನ್‌ಗಳ ಜಯದೊಂದಿಗೆ 2ನೇ ಸ್ಥಾನಕ್ಕೆ ಜಿಗಿದ ಹರಿಣರು

ಮುಂಬೈ: ಕ್ವಿಂಟನ್‌ ಡಿಕಾಕ್‌ , ಹೆನ್ರಿಚ್‌ ಕ್ಲಾಸೆನ್‌ ಸ್ಫೋಟಕ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಬಾಂಗ್ಲಾದೇಶದ ವಿರುದ್ಧ 149 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಪೈಕಿ 4ರಲ್ಲಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದಿದೆ. 5ರಲ್ಲಿ 5 ಪಂದ್ಯಗಳಲ್ಲೂ ಗೆಲುವು ಸಾಧಿಸಿರುವ ಭಾರತ ಮೊದಲ ಸ್ಥಾನದಲ್ಲಿದ್ದರೆ, 4 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ನ್ಯೂಜಿಲೆಂಡ್‌ ತಂಡ 3ನೇ ಸ್ಥಾನಕ್ಕೆ ಕುಸಿದಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ […]

ದೆಹಲಿಯತ್ತ ಮಾಜಿ ಸಿಎಂ ಪ್ರಯಾಣ

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಹುದ್ದೆ ಮತ್ತು ವಿರೋಧ ಪಕ್ಷದ ನಾಯಕ ನೇಮಕ ವಿಳಂಬವಾಗಿದೆ. ಈ ತಿಂಗಳ ಅಂತ್ಯದೊಳಗೆ ಇದಕ್ಕೆ ಮುಕ್ತಿ ಸಿಗುವುದೋ ಅಥವಾ ಪಂಚರಾಜ್ಯಗಳ ಚುನಾವಣೆ ಮುಗಿಯುವವರೆಗೆ ಕಾಯಬೇಕೇ ಎಂಬುದು ಕುತೂಹಲಕರವಾಗಿದೆ. ಇದರ ನಡುವೆ ಪಕ್ಷದ ವಿರುದ್ಧವೇ ಅಸಮಾಧಾನಗೊಂಡಿರುವ ಮಾಜಿ ಸಿಎಂ ಡಿ.ವಿ.ಸದಾನಂದಗೌಡರಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಈ ಹಿನ್ನೆಲೆ ಇಂದು ಸದಾನಂದಗೌಡರು ‌, ಬಿಜೆಪಿ ಹೈಕಮಾಂಡ್‌ ನಾಯಕರ ಭೇಟಿಗೆ ದೆಹಲಿಗೆ ತೆರಳಲಿದ್ದಾರೆ. ಪಕ್ಷದ ವಿದ್ಯಮಾನಗಳ ಕುರಿತಂತೆ ಚರ್ಚಿಸಲು ತಮ್ಮನ್ನು ಭೇಟಿ ಆಗುವಂತೆ ಬಿಜೆಪಿ ರಾಷ್ಟ್ರೀಯ […]

ಕುಡಿದ ಅಮಲಿನಲ್ಲಿ ಪೊಲೀಸ್ ಠಾಣೆಯಲ್ಲಿ ದುರ್ವರ್ತನೆ: ‘ಜೈಲರ್’ ನಟನ ಬಂಧನ

ಇತ್ತೀಚೆಗೆ ಬಿಡುಗಡೆ ಆಗಿ ಸೂಪರ್ ಡೂಪರ್ ಹಿಟ್ ಆಗಿರುವ ರಜನೀಕಾಂತ್  ನಟನೆಯ ‘ಜೈಲರ್’ ಸಿನಿಮಾದ ವಿಲನ್ ವಿನಾಯಗನ್ ನಿಜ ಜೀವನದಲ್ಲಿಯೂ ವಿಲನ್ ಪ್ರವೃತ್ತಿ ತೋರಿಸಿ ಪೊಲೀಸರ ಅತಿಥಿಯಾಗಿದ್ದಾರೆ. ಕುಡಿದು ಪೊಲೀಸ್ ಠಾಣೆಗೆ ಬಂದಿದ್ದು ಮಾತ್ರವಲ್ಲದೆ ಠಾಣೆಯಲ್ಲಿ ದುರ್ವರ್ತನೆ ತೋರಿರುವ ವಿನಾಯಗನ್ ಅನ್ನು ಕೇರಳದ ಉತ್ತರ ಎರ್ನಾಕುಲಂ ಪೊಲೀಸರು ಬಂಧಿಸಿದ್ದಾರೆ. ಎರ್ನಾಕುಲಂ ಪೊಲೀಸ್ ಠಾಣೆಯಲ್ಲಿ ವಿನಾಯಕನ್ ವಿರುದ್ಧ ದೂರೊಂದು ದಾಖಲಾಗಿತ್ತು. ವಿನಾಯಗನ್ ವಾಸವಿರುವ ಅಪಾರ್ಟ್​ಮೆಂಟ್​ನವರು ಅತಿಯಾದ ಶಬ್ದ, ಲೇಟ್ ನೈಟ್ ಪಾರ್ಟಿಗಳು ಮಾಡುತ್ತಿದ್ದ ವಿನಯ್ ವಿರುದ್ಧ ದೂರು ನೀಡಿದ್ದರು. ಇದೇ […]

ಹೆಬ್ಬಾಳ್ಕರ್, ಜಾರಕಿಹೊಳಿ ಸಮರ – ಸಹೋದರನ ಪರ ರಮೇಶ್ ಬ್ಯಾಟಿಂಗ್

ಚಿಕ್ಕೋಡಿ: ಸಚಿವ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಶೀತಲ ಸಮರದ ವಿಚಾರವಾಗಿ ಸತೀಶ್ ಪರ ಸಹೋದರ ರಮೇಶ್ ಜಾರಕಿಹೊಳಿ ಬ್ಯಾಟ್ ಬೀಸಿದ್ದಾರೆ. ಅಥಣಿಯ ನಂದಗಾವ ಗ್ರಾಮದಲ್ಲಿ ಮಾತಾಡಿದ ಅವರು, ನಾನು ಬಂಡಾಯ ಎದ್ದಾಗ ಎಲ್ಲರೂ ನನ್ನನ್ನು ಬೈದಿದ್ದರು. ನಾನು ಯಾಕೆ ಬಂಡಾಯ ಎದ್ದಿದ್ದೆ ಎಂಬುದಕ್ಕೆ ಇಂದು ಉತ್ತರ ಸಿಕ್ಕಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿರುವ ಕಾಲದಲ್ಲಿಯೇ ಸತೀಶ್ ಅವರಿಗೆ ಹಿಂಸೆ ಆಗುತ್ತಿದೆ. ಬೇರೆ ಯಾರಾದರೂ ಸಿಎಂ ಆಗಿದ್ದರೆ ಸತೀಶ್ ಅವರ ಪರಿಸ್ಥಿತಿ ಏನಾಗುತ್ತಿತ್ತು ಎಂದು ಪ್ರಶ್ನಿಸಿದ್ದಾರೆ. ಈ […]

ತಮ್ಮ ಖಜಾನೆ ವೃದ್ಧಿಗೆ ಕನಕಪುರ ಹೆಸರು ಹೇಳಿ ಹೊಸ ನಾಟಕ ಶುರು ಮಾಡಿದ್ದಾರೆ

ಬೆಂಗಳೂರು: ರಾಮನಗರ ಜಿಲ್ಲೆಯಿಂದ ಕನಕಪುರ ತಾಲೂಕನ್ನು ಬೇರ್ಪಡಿಸಿ ಬೆಂಗಳೂರಿಗೆ ಸೇರಿಸುವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆ ಸರಿಯಲ್ಲ. ಕನಕಪುರ ಸುತ್ತಮುತ್ತ ಇರುವ ತಮ್ಮ ಆಸ್ತಿಗಳ ಮೌಲ್ಯವನ್ನು ಹೆಚ್ಚಿಸಿಕೊಂಡು ತಮ್ಮ ಖಜಾನೆ ವೃದ್ಧಿ ಮಾಡಿಕೊಳ್ಳುವ ಏಕೈಕ ದುರುದ್ದೇಶದಿಂದ ಅವರು ಕನಕಪುರ ಜನರ ನೆಪ ಹೇಳಿಕೊಂಡು ಈ ಹೊಸ ನಾಟಕ ಶುರು ಮಾಡಿದ್ದಾರೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಎಕ್ಸ್ ಪೋಸ್ಟ್‌ನಲ್ಲಿ ಗುಡುಗಿದ್ದಾರೆ. ಎಕ್ಸ್ ಪೋಸ್ಟ್‌ನಲ್ಲೇನಿದೆ?ಕನಕಪುರದವರು ರಾಮನಗರ ಜಿಲ್ಲೆಯವರಲ್ಲ, ಬೆಂಗಳೂರು ಜಿಲ್ಲೆಯವರು ಎಂಬುದನ್ನು ನೆನಪಿಟ್ಟುಕೊಳ್ಳಿ ಎನ್ನುವ ಅವರ […]

ಕೇಂದ್ರ ಕಾರಾಗೃಹದ ಮೇಲೆ ದಾಳಿ – ತಪಾಸಣೆ ನಡೆಸಿದ ಪೊಲೀಸರಿಗೆ ಸಿಕ್ಕಿದ್ದೇನು?

ಶಿವಮೊಗ್ಗ: ಕೇಂದ್ರ ಕಾರಾಗೃಹದ ಮೇಲೆ ತುಂಗಾನಗರ ಠಾಣೆಯ ಪೊಲೀಸರು ದಾಳಿ ನಡೆಸಿದ್ದು, ಬೀಡಿ, ಮೊಬೈಲ್ ಸೇರಿದಂತೆ ಹಲವುವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಕಾರಾಗೃಹದ ಎಲ್ಲಾ ಬ್ಲಾಕ್‌ನ ಸೆಲ್‌ಗಳಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ತುಂಗಾನಗರ ಮೆಗಾ ಬ್ಲ್ಯಾಕ್‌ನ ಕೊಠಡಿ ಸಂಖ್ಯೆ 12ರ ಮುಂಭಾಗದ ಕೈ ತೋಟದಲ್ಲಿ ಗಿಡಗಳ ಮಧ್ಯೆ ತಪಾಸಣೆ ನಡೆಸಿದ ಪೊಲೀಸರಿಗೆ ಅನೇಕ ವಸ್ತುಗಳ ಸಿಕ್ಕಿವೆ.  ಮಣ್ಣು ಅಗೆದು ಪರಿಶೀಲಿಸಿದಾಗ ಪ್ಲಾಸ್ಟಿಕ್ ಕವರ್ ನಲ್ಲಿ ಮುಚ್ಚಿಟ್ಟಿದ್ದ ಮೊಬೈಲ್ ಪತ್ತೆಯಾಗಿದೆ. ಪತ್ತೆಯಾದ ಮೊಬೈಲ್ ನಲ್ಲಿ ಯಾವುದೇ ಸಿಮ್ ಇರಲಿಲ್ಲ ಎನ್ನಲಾಗಿದೆ.  ಇನ್ನೂ […]

ರಾಮನಗರವನ್ನು ಬೆಂಗಳೂರು ಜಿಲ್ಲೆಯಾಗಿ ಮರುನಾಮಕರಣ ಮಾಡ್ತೀನಿ: ಡಿಕೆಶಿ

ರಾಮನಗರ: ಇನ್ಮುಂದೆ ರಾಮನಗರ ಜಿಲ್ಲೆ ಇರೋದಿಲ್ಲ, ಇದನ್ನು ಬೆಂಗಳೂರು ಜಿಲ್ಲೆಯಾಗಿ ಮರುನಾಮಕರಣ ಮಾಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ. ಕನಕಪುರದ ವೀರಭದ್ರಸ್ವಾಮಿ ದೇವಸ್ಥಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇನ್ಮುಂದೆ ರಾಮನಗರ ಜಿಲ್ಲೆ ಇರೋದಿಲ್ಲ. ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಯಾರೋ ಹೆಸರು ಮಾಡಿಕೊಳ್ಳಬೇಕು ಅಂತಾ ರಾಮನಗರ ಜಿಲ್ಲೆ ಮಾಡಿದ್ರು. ಮತ್ತೆ ರಾಮನಗರವನ್ನು ಬೆಂಗಳೂರು ಜಿಲ್ಲೆಯಾಗಿ ಮರುನಾಮಕರಣ ಮಾಡುತ್ತೇನೆ ಎಂದರಲ್ಲದೇ ರಾಮನಗರ ಇಲ್ಲ.. ಬೆಂಗಳೂರು ಅಷ್ಟೇ ಎಂದು ದೇವರ ಮೇಲೆ ಪ್ರಮಾಣ ಮಾಡಿದ್ದಾರೆ.  ಇದೇ ವೇಳೆ ರೈತರು ಭೂಮಿ ಮಾರಾಟ […]