ಲಾಭದ ಹಾದಿಗೆ ಮರಳಿದ ನಮ್ಮ ಮೆಟ್ರೋ 9 ತಿಂಗಳಲ್ಲಿ ಬರೋಬ್ಬರಿ 450 ಕೋಟಿ ರೂ. ಆದಾಯ
ಬೆಂಗಳೂರು:ನಷ್ಟದಲ್ಲಿ ಸಾಗುತ್ತಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ನಡುವೆ ನಮ್ಮ ಮೆಟ್ರೋ ಲಾಭದ ಹಳಿಗೆ ಮರಳಿದೆ. ಮೊದಲ ಬಾರಿಗೆ ನಷ್ಟದ ಹಾದಿಯಿಂದ ಲಾಭದ ಹಾದಿಗೆ ಬಂದಿರುವ ನಮ್ಮ ಮೆಟ್ರೋ, ಕಳೆದ 9 ತಿಂಗಳಿನಲ್ಲಿ ಬಿಎಂಆರ್‌ಸಿಎಲ್‌ಗೆ ಬರೊಬ್ಬರಿ 450 ಕೋಟಿ ರೂ. ಆದಾಯ ಗಳಿಸಿಕೊಟ್ಟಿದೆ. ಮೆಟ್ರೋ ಜಾಲ ವಿಸ್ತರಣೆ, ನಿಲ್ದಾಣ ಹಾಗೂ ರೈಲಿನ ಒಳಗೆ ಜಾಹೀರಾತಿಗೆ ಅವಕಾಶ ನೀಡಿರುವುದು ಆದಾಯ ಏರಿಕೆಗೆ ನೆರವಾಗಿದೆ ಎನ್ನಲಾಗಿದೆ.ನಮ್ಮ ಮೆಟ್ರೋ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಜಾಹೀರಾತಿನ ಮೂಲಕ ಬರೊಬ್ಬರಿ 50 ಕೋಟಿ ರೂ. ಆದಾಯ ಗಳಿಸಿದೆ. […]







































































































































































































































































































































































































































































































































































































































































































































































































































































































































































































































































































































