September 16, 2026

ಸ್ತಬ್ಧಚಿತ್ರ ರಾಜಕಾರಣ ಸಿಎಂಗೆ ಶೋಭೆ ತರಲ್ಲ: ಪ್ರಹ್ಲಾದ್ ಜೋಶಿ

ಬೆಂಗಳೂರು:ಗಣರಾಜ್ಯೋತ್ಸವಕ್ಕೆ ಕರುನಾಡಿನ ಸ್ತಬ್ಧಚಿತ್ರ ಆಯ್ಕೆ ಆಗದಿರುವುದನ್ನೇ ಮುಂದಿಟ್ಟುಕೊAಡು ಕೀಳುಮಟ್ಟದ ರಾಜಕಾರಣ ಮಾಡುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಕಿವಿಮಾತು ಹೇಳಿದ್ದಾರೆ.ಗಣರಾಜ್ಯೋತ್ಸವಕ್ಕೆ ಕರ್ನಾಟಕದ ಸ್ತಬ್ಧಚಿತ್ರವನ್ನು ಆಯ್ಕೆ ಮಾಡದೆ ಕರುನಾಡಿಗೆ ಕೇಂದ್ರ ಸರ್ಕಾರ ಅವಮಾನ ಮಾಡಿದೆ ಎಂಬ ಸಿದ್ದರಾಮಯ್ಯ ಟೀಕೆಗೆ ಜೋಶಿ ಅವರು ಎಕ್ಸ್ ಮೂಲಕ ಪ್ರತ್ಯುತ್ತರ ಕೊಟ್ಟಿದ್ದಾರೆ.ಎಕ್ಸ್ನಲ್ಲೇನಿದೆ..?: ಸಿದ್ದರಾಮಯ್ಯನವರೇ ರಾಜಕೀಯ ಮಾಡಬೇಕು ನಿಜ. ಆದರೆ ಎಲ್ಲದರಲ್ಲೂ ರಾಜಕೀಯ ಮಾಡುವುದು, ಸುಳ್ಳು ಹೇಳಿಕೊಂಡು ಜನರನ್ನು ಮೂರ್ಖರನ್ನಾಗಿಸುವುದು ನಿಮಗಾಗಲಿ, ನಿಮ್ಮ ಸ್ಥಾನಕ್ಕಾಗಲಿ […]

ನಾವು ಶ್ರೀರಾಮಚಂದ್ರನನ್ನು ಪೂಜಿಸ್ತೀವಿಬಿಜೆಪಿ ರಾಜಕೀಯಕ್ಕೆ ನಮ್ಮ ವಿರೋಧ

ಬೆಂಗಳೂರು:ನಾವು ಶ್ರೀರಾಮಚಂದ್ರನ ವಿರುದ್ಧ ಇಲ್ಲ. ಬಿಜೆಪಿ ಅವರು ರಾಮ ಮಂದಿರವನ್ನು ರಾಜಕೀಯ ವಸ್ತುವನ್ನಾಗಿ ಮಾಡಿಕೊಂಡಿದ್ದಾರೆ. ಅದನ್ನು ನಾವು ಖಂಡಿಸುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಬೆಂಗಳೂರಲ್ಲಿ ಮಾತನಾಡಿದ ಅವರು, ನಾವು ಶ್ರೀರಾಮಚಂದ್ರನ ಭಕ್ತರು, ನಾವು ಶ್ರೀರಾಮಚಂದ್ರನ ಪೂಜೆ ಮಾಡುತ್ತೇವೆ. ಕೇದ್ರ ಸಚಿವರುಗಳು ರಾಜಕೀಯ ಮಾತನಾಡುತ್ತಿದ್ದಾರೆ ಅಷ್ಟೇ. ರಾಜಕೀಯ ಮಾತನಾಡೋರಿಗೆ ಔಷಧವಿಲ್ಲ ಎಂದು ಕಿಡಿಕಾರಿದರು.ನಾವು ಶ್ರೀರಾಮಚಂದ್ರನ ವಿರುದ್ಧವಿಲ್ಲ. ಶ್ರೀರಾಮಚಂದ್ರನನ್ನ ನಾವು ಗೌರವಿಸುತ್ತೇವೆ, ಪೂಜೆ ಮಾಡುತ್ತೇವೆ. ಭಜನೆ ಮಾಡುತ್ತೇವೆ. ರಾಮಮಂದಿರಕ್ಕೆ ನಮ್ಮದು ವಿರೋಧವಿಲ್ಲ. ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಅದಕ್ಕೆ ನಮ್ಮ ವಿರೋಧ […]

ಕೇಂದ್ರದ ವಿರುದ್ಧ ಮಹದೇವಪ್ಪ ಕಿಡಿ

ಬೆಂಗಳೂರು:ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡದ ಕೇಂದ್ರ ಸರ್ಕಾರ ಧರ್ಮದ ಹೆಸರಲ್ಲಿ ಅಕ್ಷತೆಯ ಗಂಟನ್ನು ಮನೆ ಮನೆಗೆ ಕಳಿಸುತ್ತಿರುವುದು ನೈಜ ಧರ್ಮದ ಕಲ್ಪನೆಗೆ ವಿರುದ್ಧವಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌ಸಿ ಮಹದೇವಪ್ಪ ಕಿಡಿಕಾರಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಈ ಸಂಬAಧ ಕೇಂದ್ರ ಸರ್ಕಾರ ನಡೆಯನ್ನು ವಿರೋಧಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಪೋಸ್ಟ್ನಲ್ಲಿ ಏನಿದೆ?ಹಸಿವು ಮುಕ್ತ ಕರ್ನಾಟಕದ ಉದ್ದೇಶದಿಂದ ಜಾರಿಗೊಳಿಸಿದ್ದ ಅನ್ನಭಾಗ್ಯ ಯೋಜನೆಗೆ ಹೆಚ್ಚಿನ ಹಣ ನೀಡಿ ಕೊಂಡುಕೊಳ್ಳುತ್ತೇವೆ ಎಂದಾಗಲೂ ಕೇಂದ್ರದಿAದ ಅಕ್ಕಿ ನೀಡದವರು ಈ ದಿನ ಧರ್ಮದ ಹೆಸರಲ್ಲಿ ಅಕ್ಷತೆಯ ಗಂಟನ್ನು ಮನೆ […]

ತನ್ನ ಪ್ರೀತಿಗೆ ಅಡ್ಡಿಯಾದ ಅಂತಭಾವನನ್ನೆ ಕೊಲ್ಲಿಸಿದ ನಾದಿನಿ

ಕಲಬುರಗಿಆವತ್ತು ನಿರ್ಜನ ಪ್ರದೇಶದಲ್ಲಿ ವ್ಯಕಿಯೋರ್ವನ ಶವ ಪತ್ತೆಯಾಗಿತ್ತು. ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಅಂಬರಾಯ ಎಂಬಾತನನ್ನು ಅದ್ಯಾರೋ ಬರ್ಬರ ಹತ್ಯೆ ಮಾಡಿದ್ದರು. ಆ ಹತ್ಯೆ ಕೇಸ್ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪತ್ನಿಯ ತಂಗಿಯೇ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಮರ್ಡರ್ ಮಾಡಿಸಿದ್ದಾಳೆ.ಹೌದು. ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಓಕಳಿ ರಸ್ತೆಯ, ನಿರ್ಜನ ಪ್ರದೇಶದಲ್ಲಿ ವ್ಯಕ್ತಿಯೋರ್ವನ ಶವ ಸಿಕ್ಕಿದ್ದ ಕೇಸ್‌ಗೆ ಮೆಗಾ ಟ್ವಿಸ್ಟ್ ಸಿಕ್ಕಿದೆ. ಕೇಸ್ ಬೆನ್ನತ್ತಿದ ಪೊಲೀಸರಿಗೆ ಶಾಕ್ ಆಗಿದೆ. ಯಾಕೆಂದರೆ ಅಲ್ಲಿ ಕೊಲೆಗಾರರು ಬರ‍್ಯಾರು […]

3 ಡಿಸಿಎಂ ಬಗ್ಗೆ ಕುಮಾರಸ್ವಾಮಿ ಲೇವಡಿ

ಚಿಕ್ಕಮಗಳೂರು:ಕಾಂಗ್ರೆಸ್ ಸರ್ಕಾರದಲ್ಲಿ ಮೂರು ಡಿಸಿಎಂ ಹುದ್ದೆಗಳ ಸೃಷ್ಟಿ ಬಗ್ಗೆ ಚರ್ಚೆ ವಿಚಾರವಾಗಿ ವ್ಯಂಗ್ಯವಾಡಿರುವ ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ, ಕಾಂಗ್ರೆಸ್ ಯಾರದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದೆ ಎಂದು ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಜಾತಿಗೊಂದು ಡಿಸಿಎಂ ಸ್ಥಾನ ಕೊಟ್ಟುಬಿಡಿ. 30-35 ಶಾಸಕರಿಗೆ ಡಿಸಿಎಂ ಸ್ಥಾನ ಕೊಡುವುದು ಒಳ್ಳೆಯದು. ಆಗ ಪ್ರತಿನಿತ್ಯ ಡಿಸಿಎಂ ಸ್ಥಾನದ ಬೇಡಿಕೆ ಬಗ್ಗೆ ಗೊಂದಲ ಇರಲ್ಲ ಎಂದು ಲೇವಡಿ ಮಾಡಿದ್ದಾರೆ.ಈಗ ಗ್ಯಾರಂಟಿ ನೋಡಿಕೊಳ್ಳೋದಕ್ಕೆ ಓರ್ವ ಅಧ್ಯಕ್ಷ ನೇಮಕ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ […]

ಕೋಟಿ ಕೋಟಿ ಹಣದಾಸೆಗೆ ವೇಶ್ಯಾವಾಟಿಕೆ ಆರಂಭಿಸಿದ ಟೆಕ್ಕಿ

ಬೆಂಗಳೂರು:ಒಂದೂವರೆ ಲಕ್ಷ ಸಂಬಳದ ಕೆಲಸದಲ್ಲಿದ್ದ ಟೆಕ್ಕಿ ಹಣದ ದಾಹಕ್ಕೆ ಬಿದ್ದು ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡು ಲಕ್ಷಲಕ್ಷ ಸಾಲ ಮಾಡಿದನು. ಆದರೆ ತಂತ್ರಜ್ಞಾನದಲ್ಲಿ ಹೆಚ್ಚಿನ ಜ್ಞಾನ ಹೊಂದಿದ್ದ ಈತ ಕೆಲಸಕ್ಕೆ ಗುಡ್‌ಬೈ ಹೇಳಿ ಮ್ಯಾಟ್ರಿಮೋನಿ ಮಾದರಿಯ ಆ್ಯಪ್ ಅಭಿವೃದ್ಧಿ ಮಾಡಿ ಹಣ ಸಂಪಾದಿಸುತ್ತಿದ್ದನು. ನಂತರ ಕೋಟ್ಯಾಂತರ ರೂಪಾಯಿ ಸಂಪಾದಿಸಲು ಈ ಟೆಕ್ಕಿ ಹಿಡಿದಿದ್ದೇ ವೇಶ್ಯಾವಾಟಿಕೆ ದಂಧೆಯ ಹಾದಿ!ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ವೈಶಾಕ್‌ಗೆ ವೇತನಕ್ಕೇನು ಕೊರತೆ ಇರಲಿಲ್ಲ. ತಿಂಗಳಿಗೆ ಒಂದೂವರೆ ಲಕ್ಷ […]

3 ರೋಜಸ್ ನಕಲಿ ಟೀ ಪುಡಿ ಮಾಡ್ತಿದ್ದ ಮನೆ ಮೇಲೆ ಪೊಲೀಸರ ದಾಳಿ; 200 ಕೆಜಿ ಟೀ ಪುಡಿ, ಮಷಿನ್ ಜಪ್ತಿ

ನೆಲಮಂಗಲ: 3 ರೋಜಸ್​​​ ನಕಲಿ ಟೀ ಪುಡಿ ಮಾಡ್ತಿದ್ದ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಬೆಂಗಳೂರು ನಗರ ಉತ್ತರ ತಾಲೂಕಿನ ಗಂಗೊಂಡಹಳ್ಳಿಯಲ್ಲಿ ನಕಲಿ 3 ರೋಜಸ್ ಟೀ ಪುಡಿ ತಯಾರು ಮಾಡುತ್ತಿದ್ದ ಮನೆ ಮೇಲೆ 3 ರೋಜಸ್​​​ ಕಂಪನಿ ಅಧಿಕಾರಿಗಳು ಹಾಘೂ ಪೊಲೀಸರ ತಂಡ ದಾಳಿ ನಡೆಸಿದೆ. ಕೃತ್ಯಕ್ಕೆ ಬಳಸಿದ್ದ 200 ಕೆಜಿ ಟೀ ಪುಡಿ, ಮಷಿನ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ದಾಳಿ ವೇಳೆ ಕೃತ್ಯದಲ್ಲಿ ಭಾಗಿಯಾಗಿದ್ದ ಮನೆ ಮಾಲೀಕ ಮಾಧುಸಿಂಗ್​​ ಪರಾರಿಯಾಗಿದ್ದಾನೆ. ಮಾದನಾಯಕನಹಳ್ಳಿ ಪೊಲೀಸ್ […]

ಅಣ್ಣಾಮಲೈ ವಿರುದ್ಧ ಎಫ್‍ಐಆರ್ ದಾಖಲು

ಚೆನ್ನೈ: ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಎರಡು ಗುಂಪುಗಳ ನಡುವೆ ಧಾರ್ಮಿಕ ದ್ವೇಷಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಧರ್ಮಪುರಿಯ ಬೊಮ್ಮಿಡಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಜನವರಿ 8 ರಂದು ಪಾಪ್ಪಿರೆಡ್ಡಿಪಟ್ಟಿ ಬಳಿಯ ಬೊಮ್ಮಿಡಿಯ ಸೇಂಟ್ ಲೂಡ್ರ್ಸ್ ಚರ್ಚ್‍ನ ಹೊರಗೆ ನಡೆದ ರ‍್ಯಾಲಿಯಲ್ಲಿ ಚರ್ಚ್‍ಗೆ ಅವರು ಪ್ರವೇಶಿಸುವುದನ್ನು ವಿರೋಧಿಸಿದ ಕ್ರಿಶ್ಚಿಯನ್ ಯುವಕರ ಗುಂಪಿನೊಂದಿಗೆ ಅಣ್ಣಾಮಲೈ ವಾಗ್ವಾದ ನಡೆಸಿದ್ದರು. ಈ ವೇಳೆ ಚರ್ಚ್ ಪ್ರವೇಶಿಸದಂತೆ ತಡೆದ ಪ್ರತಿಭಟನಾಕಾರರು ಮತ್ತು ಬಿಜೆಪಿ ಮುಖಂಡರ […]

ರಾಮ ಮಂದಿರ ಉದ್ಘಾಟನೆ ಭಾರತದ ಹಬ್ಬ: ಹೆಚ್‌ಡಿಕೆ

ಚಿಕ್ಕಮಗಳೂರು: ರಾಮ ಮಂದಿರ ಉದ್ಘಾಟನೆ ಭಾರತದ ಹಬ್ಬ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣವಾಗಬೇಕು ಎನ್ನುವುದು ದೇಶದ ಜನರ ನಿರೀಕ್ಷೆ. ಹಲವು ವರ್ಷಗಳ ಗೊಂದಲಕ್ಕೆ ಸುಪ್ರೀಂ ಕೋರ್ಟ್ ತೆರೆ ಎಳೆದಿದೆ ಎಂದರು.  ಕಾಂಗ್ರೆಸ್ಸಿಗರು ರಾಮ ಮಂದಿರ ಉದ್ಘಾಟನೆಗೆ ಹೋಗದ ವಿಚಾರಕ್ಕೆ ಕೇಳಿದ ಪ್ರಶ್ನೆಗೆ, ಯಾಕೆ ಹೋಗುವುದಿಲ್ಲ ಎಂದು ಅವರೇ ಹೇಳಬೇಕು. ಅವರ ತೀರ್ಮಾನ ನನಗೆ ಸಂಬಂಧವಿಲ್ಲ. ರಾಮ ಮಂದಿರ ನಿಜವಾದ ರಾಮ ರಾಜ್ಯದ ಕನಸು ಎಂದು ಹೇಳಿದರು. […]

ಹಾವೇರಿಯಲ್ಲಿ ನೈತಿಕ ಪೊಲೀಸ್ ಗಿರಿ

ಹಾವೇರಿ:ಹಾವೇರಿ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಬೆಳಕಿಗೆ ಬಂದಿದೆ. ಅನ್ಯಕೋಮಿನ ಪುರುಷನೊಂದಿಗೆ ಸಿಕ್ಕಿ ಬಿದ್ದ ಮಹಿಳೆಯನ್ನು ಥಳಿಸಿ, ಖಾಸಗಿ ಅಂಗಾಗವನ್ನು ಗಾಸಿ ಗೊಳಿಸಿ ಗ್ಯಾಂಗ್ ರೇಫ್ ಮಾಡಲು ವಿಫಲ ಯತ್ನ ನಡೆಸಿದ ಘಟನೆ ಎರಡು ದಿನದ ನಂತರ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬAಧ ಇಬ್ಬರನ್ನು ಬಂಧಿಸಲಾಗಿದ್ದು ಉಳಿದ ಆರೋಪಿಗಳಿಗೆ ಬಲೆ ಬೀಸಲಾಗಿದೆ. ಮತ್ತೊಂದೆಡೆ ನೈತಿಕ ಪೊಲೀಸ್ ಗಿರಿ ಪ್ರಕರಣದ ಆರೋಪಿಗಳ ಮತ್ತೊಂದು ವಿಡಿಯೋ ವೈರಲ್ ಆಗಿದೆ.ಹಾವೇರಿಯಲ್ಲಿ ನೈತಕ ಪೊಲೀಸ್ ಗಿರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. […]