November 3, 2026

ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮ- ಗಗನಕ್ಕೇರಿದ ಹೂ, ಹಣ್ಣುಗಳ ದರ

ಬೆಂಗಳೂರು: ನಾಡಿನಾದ್ಯಂತ ಆಯುಧ ಪೂಜೆ ಹಾಗೂ ವಿಜಯದಶಮಿ ಸಂಭ್ರಮ ಮನೆ ಮಾಡಿದೆ. ಇಂದು ಆಯುಧ ಪೂಜೆ ಹಿನ್ನೆಲೆ ಹೂವು-ಹಣ್ಣುಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ನಗರದ ಕೆ.ಆರ್.ಮಾರ್ಕೆಟ್, ಮಲ್ಲೇಶ್ವರಂ, ಜಯನಗರ, ಬಸವನಗುಡಿ, ಮಡಿವಾಳ ಮಾರ್ಕೆಟ್‍ಗಳಲ್ಲಿ ಜನಸ್ತೋಮವೇ ತುಂಬಿ ತುಳುಕುತ್ತಿದೆ. ಹೌದು, ಬೆಲೆ ಏರಿಕೆ ನಡುವೆಯೂ ಕೆ.ಆರ್ ಮಾರ್ಕೆಟ್‍ನಲ್ಲಿ ಹೂ, ಹಣ್ಣು, ತರಕಾರಿ ಖರೀದಿಗೆ ಜನಸಾಗರವೇ ಹರಿದುಬಂದಿದೆ. ಆಯುಧ ಪೂಜೆಗೆ ಬೂದುಕುಂಬಳಕಾಯಿ ಹಾಗೂ ಬಾಳೆ ಕಂಬಕ್ಕೆ ಫುಲ್ ಡಿಮ್ಯಾಂಡ್ ಇದ್ದು, ಹಬ್ಬದ ಸಂಭ್ರಮದಲ್ಲಿ ಇರುವವರಿಗೆ ಹೂ-ಹಣ್ಣಿನ ದರ ಏರಿಕೆ ಬಿಸಿ ತಟ್ಟಿದೆ. […]

ಡಿಕೆಶಿ ವಾರ್ನಿಂಗ್‍ಗೂ ಡೋಂಟ್‍ಕೇರ್- ಸಚಿವ ಆಕಾಂಕ್ಷಿಗಳಿಂದ ಬದಲಾವಣೆ ಚರ್ಚೆ

ಬೆಂಗಳೂರು: ಪಕ್ಷದ ಕುರಿತಾಗಿ ಯಾರು ಕೂಡ ಬಹಿರಂಗ ಹೇಳಿಕೆ ನೀಡಬಾರದು ಎನ್ನುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹುಕುಂ ರಾಜ್ಯ ಕಾಂಗ್ರೆಸ್‍ನಲ್ಲಿ ಸಂಚಲನ ಮೂಡಿಸಿದೆ. ಒಳಗೊಳಗೆ ಈ ಬಗ್ಗೆ ಅಸಮಾಧಾನ ವ್ಯಕ್ತವಾಗ್ತಿದ್ರೂ ಬಹಿರಂಗವಾಗಿ ಯಾರು ಕೂಡ ಇದರ ವಿರುದ್ಧ ಮಾತಾಡ್ತಿಲ್ಲ. ಬದಲಿಗೆ ಡಿಕೆ ಶಿವಕುಮಾರ್ ಸೂಚನೆ ಸರಿಯಾಗಿಯೇ ಇದೆ ಎಂದು ಹೇಳುತ್ತಲೇ, ಅವರ ಸೂಚನೆಯನ್ನು ಉಲ್ಲಂಘಿಸತೊಡಗಿದ್ದಾರೆ. ಪಕ್ಷದ ವಿಚಾರ ಬಹಿರಂಗವಾಗಿ ಮಾತಾಡಬೇಡಿ ಅಂದ್ರೂ ಕೇಳದ ಶಾಸಕರು, ಸಚಿವ ಸಂಪುಟ ಪುನಾರಚನೆಗೆ ಪಟ್ಟು ಹಿಡಿದಿರುವ ಲಕ್ಷಣಗಳು ಕಾಣ್ತಿವೆ. 135 […]

ಪರಶುರಾಮ ಹೆಸರಲ್ಲಿ ಕಾಂಗ್ರೆಸ್, ಬಿಜೆಪಿ ಸಂಘರ್ಷ- ಎರಡೂ ಪಕ್ಷಗಳ ವಿರುದ್ಧ FIR

ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮತ್ತೊಂದು ರಾಜಕೀಯ ಫೈಟ್ ನಡೆಯುತ್ತಿದೆ. ಪರಶುರಾಮ ಮೂರ್ತಿಯ ಹೆಸರಿನಲ್ಲಿ ಕಾಂಗ್ರೆಸ್-ಬಿಜೆಪಿ ಜಟಾಪಟಿ ನಡೆಸುತ್ತಿದೆ. ಕಾರ್ಕಳ ತಾಲೂಕಿನ ಪರಶುರಾಮ ಥೀಂ ಪಾರ್ಕ್ ಒಟ್ಟು 14 ಕೋಟಿ ರೂಪಾಯಿಯ ಪ್ರಾಜೆಕ್ಟ್. ಸರ್ಕಾರದಿಂದ ಬಿಡುಗಡೆಯಾಗಿರುವುದು ಸುಮಾರು ಆರು ಕೋಟಿ ಚಿಲ್ಲರೆ. ಚುನಾವಣೆಯ ತರಾತುರಿಯಲ್ಲಿ ಬಿಜೆಪಿ ಕಂಚು ಮತ್ತು ಫೈಬರ್ ಮಿಶ್ರಿತ ಮೂರ್ತಿಸ್ಥಾಪನೆ ಮಾಡಿ ಯೋಜನೆಯನ್ನು ಉದ್ಘಾಟಿಸಿತು. ಬಾಕಿ ಉಳಿದ ಕಾಮಗಾರಿಗೆ ಚಾಲನೆ ಸಿಗುತ್ತಿದ್ದಂತೆ ಕಾಂಗ್ರೆಸ್ ಬಿಜೆಪಿ ನಡುವೆ ದೊಡ್ಡ ಜಟಾಪಟಿ ನಡೆಯುತ್ತಿದೆ. ಕಳೆದ ಎರಡು ತಿಂಗಳಿನಿಂದ ಈಚೆಗೆ […]

‘70 MLA ಬೆಂಬಲ ಇದೆ’; ಡಿಸಿಎಂ ಡಿಕೆಶಿ ಪರ ಶಿವಗಂಗಾ ಬ್ಯಾಟಿಂಗ್​!

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಇದು ಡಬಲ್ ಸ್ಟೇರಿಂಗ್ ಸರ್ಕಾರ ಅಂತ ವಿರೋಧ ಪಕ್ಷಗಳು ಟೀಕೆ ಮಾಡಿದ್ದವು. ಸದ್ಯ ಕಾಂಗ್ರೆಸ್ ನಲ್ಲಿ ಆಗ್ತಾ ಇರೋ ಬೆಳವಣಿಗೆ ಗಮನಿಸಿದರೆ ಮನೆಯೊಂದು ಮೂರು ಬಾಗಿಲು ಅನ್ನೋದು ಗೊತ್ತಾಗ್ತಾ ಇದೆ. ಪಕ್ಷ ಅಧಿಕಾರಕ್ಕೆ ಬಂದು 6 ತಿಂಗಳು ಕಳೆಯುವ ವೇಳೆಗೆ ನೂತನ ಸಿಎಂ ಪರ ವಿರೋಧ ಚರ್ಚೆ ಆರಂಭವಾಗಿದೆ. ಇದು ಸಿಎಂ ಹಾಗೂ ಡಿಸಿಎಂಗೆ ಇರುಸು ಮುರುಸು ಸೃಷ್ಟಿಸಿದೆ. ಕಾಂಗ್ರೆಸ್‌ನಲ್ಲಿ ಬುಸುಗುಟ್ಟಿದ ಬಣ ರಾಜಕೀಯ! ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯ ಬಣ, […]

ಕಾಂಗ್ರೆಸ್‌ ಬೆಂಬಲಿತ ಗ್ರಾಪಂ ಸದಸ್ಯನ ಕೊಲೆ

ಕೋಲಾರ: ಹಾಡಹಗಲೆ ಗ್ರಾಮ ಪಂಚಾಯಿತಿ ಸದಸ್ಯನೊಬ್ಬನನ್ನು ಬರ್ಬರವಾಗಿ ರಸ್ತೆ ಮಧ್ಯೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಕೋಡಿಹಳ್ಳಿ ಕ್ರಾಸ್ ಬಳಿ ಘಟನೆ ನಡೆದಿದ್ದು, 40 ವರ್ಷದ ಅನಿಲ್ ಕೊಲೆಯಾಗಿರುವ ಗ್ರಾಮ ಪಂಚಾಯಿತಿ ಸದಸ್ಯ.  ಮಿಣಸಂದ್ರ ಗ್ರಾಮದವರಾದ ಹಾಲಿ ಜಯಮಂಗಲ ಗ್ರಾಮ ಪಂಚಾಯಿತಿ ಸದಸ್ಯನಾಗಿರುವ ಮೃತ ಅನಿಲ್ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರಾಗಿದ್ದರು. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಳೆ ದ್ವೇಷದ ಹಿನ್ನೆಲೆ ಕೊಲೆ ಮಾಡಿರುವ ಸಾಧ್ಯತೆ ಇದ್ದು, […]

ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ 

ನೆಲಮಂಗಲ: ದಿನೇ ದಿನೆ ಬಿಎಂಟಿಸಿ ಬಸ್‌ಗೆ ಬಲಿಯಾಗುತ್ತಿರುವವರರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂತಹದೇ ಒಂದು ಪ್ರಕರಣ ಶನಿವಾರವೂ ನಡೆದಿದೆ. ವೇಗವಾಗಿ ಬಂದ ಬಿಎಂಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನೆಲಮಂಗಲದಲ್ಲಿ ನಡೆದಿದೆ. ನೆಲಮಂಗಲ ಸಮೀಪದ ಬಿನ್ನಮಂಗಲ ಬಳಿ ಘಟನೆ ನಡೆದಿದೆ. ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ಗುದ್ದಿದ್ದು, ಗುದ್ದಿದ ರಭಸಕ್ಕೆ ಬೈಕ್ ಸವಾರ ನೆಲಕ್ಕೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ […]

ಆಪರೇಷನ್ ಅಜಯ್ ತಂಡದಲ್ಲಿ ಕಾರವಾರದ ಮಹಿಮಾ

ಕಾರವಾರ: ಇಸ್ರೇಲ್‌ನಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರ್ಕಾರ ಇತ್ತೀಚೆಗೆ ನಡೆಸಿದ ‘ಆಪರೇಷನ್ ಅಜಯ್’ ತಂಡದಲ್ಲಿ ಕಾರವಾರ ತಾಲೂಕಿನ ಬಿಣಗಾದ ಮಹಿಮಾ ಶೆಟ್ಟಿಯವರು ಭಾಗವಹಿಸಿ ಇಸ್ರೇಲ್‌ನಿಂದ ಭಾರತೀಯರನ್ನು ಕರೆತರಲು ಶ್ರಮವಹಿಸುವ ಮೂಲಕ ಜಿಲ್ಲೆಯ ಹಿರಿಮೆ ಹೆಚ್ಚಿಸಿದ್ದಾರೆ. ಸದ್ಯ ಗೋವಾದ ಪರ್ವೊರಿಮ್‌ನಲ್ಲಿ ನೆಲೆಸಿರುವ ದುರ್ಗಪ್ಪ ಶೆಟ್ಟಿ ಮತ್ತು ನಯನಾ ದಂಪತಿಯ ಪುತ್ರಿ ಮಹಿಮಾ ಶೆಟ್ಟಿ ಆಪರೇಷನ್ ಅಜಯ್ ತಂಡದಲ್ಲಿ ಭಾಗಿಯಾಗಿದ್ದರು. ಏರ್ ಇಂಡಿಯಾದಲ್ಲಿ ಗಗನಸಖಿ ಆಗಿರುವ ಅವರು ಇಸ್ರೇಲ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತರುವ ಆರು ಮಂದಿಯ ತಂಡದಲ್ಲಿ ಇವರು […]

ಬಿಜೆಪಿಯಿಂದ ಕಾಂಗ್ರೆಸ್ ಕಲೆಕ್ಷನ್ ವಂಶಾವಳಿ, ನಿಗಮ ಮಂಡಳಿಗಳ ರೇಟ್ ಕಾರ್ಡ್ ರಿಲೀಸ್

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಲೆಕ್ಷನ್ ಮಾಸ್ಟರ್ ಆರೋಪ ಹೊರಿಸಿದೆ. ವಲಯವಾರು ಹಣ ಕಲೆಕ್ಷನ್ ಮಾಡಿ ಕಾಂಗ್ರೆಸ್ ಹೈಕಮಾಂಡ್‍ಗೆ ಕೊಡುತ್ತಿದೆ ಬಿಜೆಪಿ ಆರೋಪಿಸಿದೆ. ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಸುದ್ದಿಗೋಷ್ಠಿ ನಡೆಸಿ ಎಟಿಎಂ ಸರ್ಕಾರದ ಕಲೆಕ್ಷನ್ ವಂಶಾವಳಿ ರಿಲೀಸ್ ಮಾಡಿದ್ದಾರೆ. ಸುರ್ಜೇವಾಲಾಗೆ ಸಿಎಂ ಮತ್ತು ಪುತ್ರ ಯತೀಂದ್ರ ಕಲೆಕ್ಷನ್ ಕಲೆಕ್ಟ್ ಮಾಡಿ ಕೊಡುತ್ತಾರೆ. ವೇಣುಗೋಪಾಲ ಅವರಿಗೆ ಡಿಕೆಶಿ ಕಲೆಕ್ಷನ್ ಸಂಗ್ರಹಿಸಿ ಕೊಡುತ್ತಿದ್ದಾರೆ. ಸಿಎಂ, ಡಿಸಿಎಂ ಗುಂಪುಗಳಿಗೆ ಅವರರವರ ಬಣದ ಗುತ್ತಿಗೆದಾರರು ಕಮೀಷನ್ ಸಂಗ್ರಹಿಸಿ ಕೊಡ್ತಿದ್ದಾರೆ. ಸಂಗ್ರಹ ಮಾಡಿದ […]

2.5 ವರ್ಷವಾದ ಮೇಲೆ ಸಚಿವ ಸಂಪುಟ ಬದಲಾವಣೆ

ಬೆಂಗಳೂರು: ಎರಡೂವರೆ ವರ್ಷದ ಮೇಲೆ ಸಚಿವ ಸಂಪುಟ ಬದಲಾವಣೆ ಆಗಲಿದೆ ಎಂದು ಹೇಳಿಕೆ ನೀಡುವ ಮೂಲಕ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್‌ ಹೊಸ ಬಾಂಬ್‌ ಸಿಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಈಗ ಎಲ್ಲರಿಗೂ ಮಂತ್ರಿಸ್ಥಾನ ನೀಡಲು ಸಾಧ್ಯವಿಲ್ಲ. ಹೀಗಾಗಿ ಎರಡೂವರೆ ವರ್ಷದ ಬಳಿಕ ನೀಡುವುದಾಗಿ ಸುರ್ಜೇವಾಲ ಸೇರಿದಂತೆ ಎಲ್ಲಾ ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ. ಸಚಿವ ಸಂಪುಟ ಬದಲಾವಣೆ ಮಾಡುವ ಪ್ರಸ್ತಾಪವಿದೆ ಎಂದು ಹೇಳಿದ್ದಾರೆ ಎನ್ನುವ ಮೂಲಕ ಸಂಚಲನ ಮೂಡಿಸಿದ್ದಾರೆ. ನಾನು ಸೀನಿಯರ್‌ ಆಗಿದ್ದರಿಂದ ಮಂತ್ರಿ ಸ್ಥಾನ ಸಿಗಬೇಕಿತ್ತು. […]

ಪರಶುರಾಮ ಮೂರ್ತಿ ಫೈಬರ್ ಅಲ್ಲ ಕಂಚು

ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನ ಪರಶುರಾಮ ಥೀಂ ಪಾರ್ಕ್ ಪ್ರತಿದಿನ ಸುದ್ದಿಯಲ್ಲಿದೆ. 33 ಅಡಿ ಎತ್ತರದ ಪ್ರತಿಮೆ ಕಂಚಿನದ್ದಲ್ಲ ಫೈಬರ್ ಎಂಬುದು ಕಾಂಗ್ರೆಸ್ ಆರೋಪ ಮಾಡಿದೆ. ರಟ್ಟು ಫೈಬರ್ ನಿಂದ ಮೂರ್ತಿ ನಿರ್ಮಾಣ ಮಾಡಿದ್ದಾರೆ ಎಂದು ಕಾಂಗ್ರೆಸ್ ನಿರಂತರವಾಗಿ ಆರೋಪ ಪ್ರತಿಭಟನೆ ಮಾಡುತ್ತಿದೆ. ಈ ಬಗ್ಗೆ ಒಂದು ವೀಡಿಯೋ ಕೂಡ ಬಿಡುಗಡೆ ಮಾಡಿತ್ತು. ಕಾಂಗ್ರೆಸ್ ಆರೋಪದ ಬೆನ್ನಲ್ಲೇ ಇದೀಗ ಬಿಜೆಪಿ ಕಾರ್ಯಕರ್ತರು, ಕ್ಷೇತ್ರ ಅಧ್ಯಕ್ಷರು ವೀಡಿಯೋ ಬಿಟ್ಟಿದ್ದಾರೆ. ಇದು ಕಂಚಿನ ಪ್ರತಿಮೆ ಎಂದು ಸಾಬೀತು ಮಾಡಿದ್ದಾರೆ. 15 […]