ಫುಟ್‌ಪಾತ್‌ಗಳ ಒತ್ತುವರಿ ತೆರವು ವಿಚಾರಬಿಬಿಎಂಪಿಗೆ ಹೈಕೋರ್ಟ್ ತರಾಟೆ
ಬೆಂಗಳೂರು:ನಗರದಲ್ಲಿ ಫುಟ್‌ಪಾತ್‌ಗಳ ಒತ್ತುವರಿ ತೆರವು ವಿಚಾರವಾಗಿ ಕ್ರಮ ಕೈಗೊಳ್ಳದ ಬಿಬಿಎಂಪಿಗೆ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ. ಬಿಬಿಎಂಪಿ ಜನಗಳಿಂದ ತೆರಿಗೆ ಸಂಗ್ರಹಿಸುತ್ತದೆ. ಸರಿಯಾದ ರಸ್ತೆ, ಫುಟ್‌ಪಾತ್ ನಿರ್ಮಿಸಲು ತೆರಿಗೆ ನೀಡುತ್ತೇವೆ. ಆದರೆ ರಸ್ತೆ, ಫುಟ್‌ಪಾತ್ ಸುಧಾರಿಸಲು ಬಿಬಿಎಂಪಿ ಮುಂದಾಗುತ್ತಿಲ್ಲ. ಒತ್ತುವರಿ ತೆರವಿಗೆ ಸ್ವಯಂಪ್ರೇರಿತ ಪಿಐಎಲ್ ದಾಖಲಿಸುತ್ತೇವೆ. ಕೆಲವರು ಫುಟ್‌ಪಾತ್‌ಗಳನ್ನು ಕಾರು ಪಾರ್ಕಿಂಗ್‌ಗಾಗಿ ಬಳಸುತ್ತಿದ್ದಾರೆ. ಎಲ್ಲಾ ಫುಟ್‌ಪಾತ್‌ಗಳ ಒತ್ತುವರಿಗಳನ್ನು ತೆರವುಗೊಳಿಸಬೇಕು. ಹೈಕೋರ್ಟ್ನ ಹಂಗಾಮಿ ಸಿಜೆ ಪಿ.ಎಸ್.ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡರಿದ್ದ ಪೀಠದಿಂದ ಸೂಚನೆ ನೀಡಲಾಗಿದೆ. ಫೆ.೧ರಂದು ಬಿಬಿಎಂಪಿ ಮುಖ್ಯ […]







































































































































































































































































































































































































































































































































































































































































































































































































































































































































































































































































































































