ಚುನಾವಣಾ ರಾಜಕೀಯ ನಿವೃತ್ತಿಯ ಮಾತುಗಳನ್ನಾಡಿದ ಮಾಜಿ ಸಚಿವ
ವಿಜಯನಗರ: ಮಾಜಿ ಸಚಿವ ಆನಂದ್ ಸಿಂಗ್ ರಾಜಕೀಯ ನಿವೃತ್ತಿಯ ಮಾತುಗಳನ್ನಾಡಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆನಂದ್ ಸಿಂಗ್, ಚುನಾವಣೆಗೆ ಸ್ಪರ್ಧೆ ಮಾಡಲ್ಲ. ಆದ್ರೆ ನಾನು ಬಿಜೆಪಿ ಕಾರ್ಯಕರ್ತನಾಗಿಯೇ ಮುಂದುವರಿಯುತ್ತೇನೆ. ಪಕ್ಷದ ಹೇಳಿದವರ ಪರವಾಗಿ ಮುಂದಿನ ದಿನಗಳಲ್ಲಿ ಕೆಲಸ ಮಾಡುವೆ. ಬಿಜೆಪಿ ಹೇಳದೇ ಇದ್ರೂ ನಾನು ಪಕ್ಷದ ವ್ಯಕ್ತಿಯೇ ಎಂದರು. ಬಿಜೆಪಿಯವರು ಹೇಳಲಿ, ಬಿಡಲಿ, ನಾನು ಪಕ್ಷದಲ್ಲಿಯೇ ಮುಂದುವರಿಯುತ್ತೇನೆ. ಪಕ್ಷ ಇಂಥವರ ಪರ ಕೆಲಸ ಮಾಡು ಅಂದ್ರೆ ನಾನು ಮಾಡುತ್ತೇನೆಯೇ ಹೊರತು ಚುನಾವಣೆಗೆ ಸ್ಪರ್ಧೆ ಮಾಡಲ್ಲ ಎಂದು […]







































































































































































































































































































































































































































































































































































































































































































































































































































































































































































































































































































































