ಅಮೆರಿಕ ಅಧ್ಯಕ್ಷೀಯ ಚುನಾವಣೆ ರೇಸ್ನಿಂದ ಹಿಂದೆ ಸರಿದ ವಿವೇಕ್ ರಾಮಸ್ವಾಮಿ
ಭಾರತ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಸದ್ಯಕ್ಕೆ ಈ ಅಧ್ಯಕ್ಷೀಯ ಪ್ರಚಾರವನ್ನು ನಿಲ್ಲಿಸಲಿದ್ದೇವೆ. ನಾನು ಡೊನಾಲ್ಡ್ ಟ್ರಂಪ್‌ಗೆ ಕರೆ ಮಾಡಿ ಅವರ ಗೆಲುವಿಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ. ಟ್ರಂಪ್ ಗೆಲುವು ಮತ್ತು ಅಧ್ಯಕ್ಷೀಯ ಅಭ್ಯರ್ಥಿಯನ್ನು ನಿರ್ಧರಿಸಲು ಅಯೋವಾದ ರಿಪಬ್ಲಿಕನ್ ಕೌಕಸ್‌ನಲ್ಲಿ ನಡೆದ ಮತದಾನದಲ್ಲಿ ಅವರ ಅತ್ಯಂತ ಕಳಪೆ ಪ್ರದರ್ಶನದ ಬೆನ್ನಲ್ಲೇ ರಾಮಸ್ವಾಮಿ ಈ ಘೋಷಣೆ ಮಾಡಿದ್ದಾರೆ. ರಾಮಸ್ವಾಮಿ ಅವರು ಕಳೆದ ವರ್ಷ ಫೆಬ್ರವರಿಯಲ್ಲಿ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಚುನಾವಣೆಗೆ […]







































































































































































































































































































































































































































































































































































































































































































































































































































































































































































































































































































































