ಮೂರ್ಖರಿಗೆ ಜನರು ಚಪ್ಪಾಳೆ ತಟ್ಟಬಾರದು- ಅನಂತ್ ಕುಮಾರ್ ವಿರುದ್ಧ ಸಿಎಂ ಕಿಡಿ
ಬೆಳಗಾವಿ: `ಅವನೊಬ್ಬ ಮೂರ್ಖ’ ಅಂತ ಏಕವಚನದಲ್ಲೇ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಕ್ರಾತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ರಾಯಣ್ಣನ ದೇಶಪ್ರೇಮ, ದೇಶಭಕ್ತಿ ಬೆಳೆಸಿಕೊಳ್ಳಬೇಕು. ಪರಸ್ಪರರು ದ್ವೇಷ ಮಾಡಬಾರದು, ಪ್ರೀತಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಅವನೊಬ್ಬ ಮೂರ್ಖ ಮಸೀದಿ ದ್ವಂಸಗೊಳಿಸಿ ದೇವಸ್ಥಾನ ಕಟ್ಟಿಸುವುದಾಗಿ ಹೇಳಿಕೆ ನೀಡಿದ್ದಾನೆ. ಈ ಹಿಂದೆ ಆದ ಸಣ್ಣ ತಪ್ಪಿನಿಂದ ಆಗಿದ್ದನ್ನೇ ಈಗ ಕೆದಕುತ್ತಿದ್ದಾರೆ. ಇಂತಹ ಮೂರ್ಖರಿಗೆ […]







































































































































































































































































































































































































































































































































































































































































































































































































































































































































































































































































































































