August 1, 2026

ಕುಡಿಯುವ ನೀರಿನ ಟ್ಯಾಂಕ್‌́ನಲ್ಲಿ ಸತ್ತ ಎರಡು ಕೋತಿಗಳು ಪತ್ತೆ..!

ರಾಯಚೂರು: ಕುಡಿಯುವ ನೀರಿನ ಟ್ಯಾಂಕ್‌́ನಲ್ಲಿ ಸತ್ತ ಎರಡು ಕೋತಿಗಳು ಮತ್ತು ಒಂದು ನಾಯಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಖಾನಾಪೂರ ಗ್ರಾಮದಲ್ಲಿ ನಡೆದಿದೆ. ಕುಡಿಯುವ ನೀರಿನಲ್ಲಿ ವಾಸನೆ ಬಂದ ಹಿನ್ನೆಲೆ ಗ್ರಾಮಸ್ಥರು ಟ್ಯಾಂಕ್ನನ್ನು ಪರಿಶೀಲಿಸಿದ್ದಾರೆ. ಈ ವೇಳೆ ಎರಡು ಕೋತಿಗಳು ಸತ್ತು ಬಿದ್ದಿರುವುದು ಬೆಳಕಿಗೆ ಬಂದಿದೆ. ಬಳಿಕ ಸತ್ತ ಕೋತಿಗಳನ್ನು ಹೊರಗಡೆ ತೆಗೆದಿದ್ದಾರೆ. ಅಲ್ಲದೇ ಇದರಿಂದ ಈಗ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಈ ಸಂಬಂಧ ದೂರು ನೀಡಿದ್ರೂ, ಖಾನಾಪೂರ ಪಿಡಿಒ ಸ್ಥಳಕ್ಕೆ ಬಂದಿಲ್ಲ. ಇದಕ್ಕೆ […]

ಪ್ರೀತಿಸಿ ಮದುವೆಯಾದ ಹೆಂಡತಿಯನ್ನ ಕೊಂದ ಗಂಡ..! ಆರೋಪಿ ಪರಾರಿ

ಹುಬ್ಬಳ್ಳಿ: ಪ್ರೀತಿಸಿ ಮದುವೆಯಾದ ಹೆಂಡತಿಯನ್ನ  ಗಂಡ ಕೊಲೆಗೈದು ಪರಾರಿಯಾದ ಘಟನೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಡೆದಿದೆ. ಮೃತಳನ್ನು ಸುಧಾ (20) ಎಂದು ಗುರುತಿಸಲಾಗಿದೆ. ಆರೋಪಿ ಪತಿ ಶಿವಯ್ಯ ನಾಪತ್ತೆಯಾಗಿದ್ದಾನೆ.ಬೆಳಗಿನ ಜಾವ ನೀರು ಬಂದಾಗ ಸುಧಾ ಬಾಗಿಲು ತೆಗಿದಿರಲಿಲ್ಲ. ಅಲ್ಲದೆ ಮಗು ಕೂಡಾ ಒಳಗೆ ಅಳುತ್ತಿರುವುದನ್ನು ಗಮನಿಸಿದ ಅಕ್ಕ ಪಕ್ಕದ ನಿವಾಸಿಗಳು ಬಾಗಿಲು ಒಡೆದಿದ್ದಾರೆ. ಈ ವೇಳೆ ಸುಧಾ ಸಾವಿಗೀಡಾಗಿರುವುದು ಬೆಳಕಿಗೆ ಬಂದಿದೆ.ಶಿವಯ್ಯ ಲಿಂಗಾಯತ ಸಮುದಾಯಕ್ಕೆ ಸೇರಿದ್ದರೆ, ಸುಧಾ ಲಮಾಣಿ ಸಮುದಾಯಕ್ಕೆ ಸೇರಿದ್ದರು. ಈ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. […]

ಇಲಿ ಜ್ಚರಕ್ಕೆ ಮಡಿಕೇರಿಯಲ್ಲಿ ಯುವಕ ಬಲಿ

ಮಡಿಕೇರಿ: ಇಲಿ ಜ್ಚರಕ್ಕೆ  ಯುವಕನೋರ್ವ ಬಲಿಯಾದ ಘಟನೆ ಮಡಿಕೇರಿ ತಾಲೂಕಿನ ಕರಿಕೆ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಸಮೀಪದ ಚೆಂಬೇರಿ ಆನೆಪಾರೆಯ ಯುವಕನೋರ್ವ ಲಿಬೀನ್ ಇಲಿ ಜ್ವರಕ್ಕೆ ಬಲಿಯಾಗಿದ್ದಾನೆ. ಆನೆಪಾರೆ ನಿವಾಸಿ ಕೂಲಿ ಕಾರ್ಮಿಕರಾದ ಬಾಲನ್ ಅವರ ಪುತ್ರ ಲಿಬೀನ್ ಜ್ವರ ಪೀಡಿತನಾಗಿ ಕೇರಳದ ಪೆರಿಯಾರಂ ಸರ್ಕಾರಿ ಆಸ್ಪತ್ರೆಯಲ್ಲಿ  ಚಿಕಿತ್ಸೆಗೆ ದಾಖಲಾಗಿದ್ದು, ಜಾಂಡೀಸ್ ಕಾಯಿಲೆ ಇದೆ ಎಂದು ವೈದ್ಯರು ತಿಳಿಸಿದ್ದರು.ನಂತರ ಇದರೊಂದಿಗೆ ಇಲಿ ಜ್ವರ ಕೂಡ ಬಾಧಿಸಿದ್ದು, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಇಲಿ ಜ್ವರದಿಂದ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಸದ್ಯ […]

ನಮ್ಮ ಜಿಲ್ಲೆಯಲ್ಲಿ .ಪಿ.ರೇಣುಕಾಚಾರ್ಯರಿಗೆ ಜಾಗ ಇಲ್ಲ: ಸಚಿವ ಮಲ್ಲಿಕಾರ್ಜುನ

ಬಾಗಲಕೋಟೆ: ಎಂ.ಪಿ.ರೇಣುಕಾಚಾರ್ಯ ಕಾಂಗ್ರೆಸ್ ಕಡೆ ಮುಖ ಮಾಡುವ ವಿಚಾರವಾಗಿ ಮಾತನಾಡಿದ ತೋಟಗಾರಿಕೆ ಸಚಿವ ಮಲ್ಲಿಕಾರ್ಜುನ, ಅವರು ನಮ್ಮ ಜಿಲ್ಲೆಯವರು, ಬರುತ್ತೀನೆ ಅಂದರೆ ನಾವು ಕರೆದುಕೊಳ್ಳಬೇಕಲ್ಲ. ನಮ್ಮ ಪಕ್ಷದಲ್ಲಿ ಜಾಗ ಇಲ್ಲಪ್ಪ, ನಮ್ಮ ಜಿಲ್ಲೆಯಲ್ಲಿ ಅವರಿಗೆ ಜಾಗ ಇಲ್ಲ. ರೇಣುಕಾಚಾರ್ಯ ಕಾಂಗ್ರೆಸ್ಗೆ ಬರುತ್ಥೇನೆ ಅಂದರೆ ಇಲ್ಲಿ ಜಾಗ ಬೇಕಲ್ಲ. ಒಮ್ಮೆ ಹಾಗೇ ಮಾತಾಡುತ್ತಾರೆ, ಮತ್ತೊಮ್ಮೆ ಬೇರೆ ರೀತಿ ಮಾತಾಡುತ್ತಾರೆ. ಅಧಿಕಾರದಲ್ಲಿ ಇದ್ದಾಗ ಅವರು ಕಾಂಗ್ರೆಸ್ ಬಗ್ಗೆ ಮಾತಾಡಬೇಕಿತ್ತು ಎಂದರು.

2 ನೇ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ

ಲಾಸೆನ್ ;- ಡೈಮಂಡ್ ಲೀಗ್ ಅಥ್ಲೆಟಿಕ್ಸ್‌ನ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಒಲಿಂಪಿಕ್ ಚಾಂಪಿಯನ್‌ ನೀರಜ್‌ ಚೋಪ್ರಾ ಅವರು ಕೊರಳೊಡ್ಡಿದ್ದಾರೆ. ಸ್ಪರ್ಧೆಯ ಮೊದಲ ಯತ್ನದಲ್ಲಿ ಫೌಲ್‌ ಮಾಡಿದ ನೀರಜ್‌, ನಂತರದ ಯತ್ನಗಳಲ್ಲಿ ಕ್ರಮವಾಗಿ 83.52 ಮೀ ಹಾಗೂ 85.04 ಮೀ. ದೂರಕ್ಕೆ ಜಾವೆಲಿನ್‌ ಎಸೆದರು. ನಾಲ್ಕನೇ ಬಾರಿ ಮತ್ತೆ ಫೌಲ್‌ ಮಾಡಿದ ಅವರು 5ನೇ ಯತ್ನದಲ್ಲಿ 87.66 ಮೀ ಎಸೆಯುವುದರೊಂದಿಗೆ ಪದಕ ಖಾತ್ರಿ ಪಡಿಸಿಕೊಂಡರು. ಕೊನೇ ಯತ್ನದಲ್ಲಿ 84.15 ಮೀ. ಜಾವೆಲಿನ್‌ ಥ್ರೋ ಮಾಡಿದರು. ಜರ್ಮನಿಯ […]

ಗುಜರಾತ್‌ ತಂಡಕ್ಕೆ ಸೇರಿದ ತಾರಾ ಲೆಗ್‌ ಸ್ಪಿನ್ನರ್‌ ರವಿ ಬಿಷ್ಣೋಯ್‌

ನವದೆಹಲಿ ;- ತಾರಾ ಲೆಗ್‌ ಸ್ಪಿನ್ನರ್‌ ರವಿ ಬಿಷ್ಣೋಯ್‌ ಅವರು ರಾಜಸ್ಥಾನ ಬಿಟ್ಟು ಗುಜರಾತ್‌ ತಂಡ ಸೇರುವುದಾಗಿ ಘೋಷಿಸಿದ್ದಾರೆ. ತಾರಾ ಲೆಗ್‌ ಸ್ಪಿನ್ನರ್‌ ರವಿ ಬಿಷ್ಣೋಯ್‌ ಈ ಋತುವಿನ ದೇಸಿ ಟೂರ್ನಿ ಆರಂಭಕ್ಕೂ ಮುನ್ನ ರಾಜಸ್ಥಾನ ತಂಡ ತೊರೆದು ಗುಜರಾತ್‌ ತಂಡ ಸೇರ್ಪಡೆಗೊಂಡಿದ್ದಾರೆ. ಕಳೆದ ವರ್ಷ ರಾಜಸ್ಥಾನ ತಂಡದ ಪರ 1 ಪ್ರಥಮ ದರ್ಜೆ ಹಾಗೂ ಕೆಲ ಲಿಸ್ಟ್‌ ‘ಎ’, ಟಿ20 ಪಂದ್ಯಗಳನ್ನಾಡಿದ್ದ 22 ವರ್ಷದ ಬಿಷ್ಣೋಯ್‌, ಇನ್ನು ಗುಜರಾತ್‌ ತಂಡವನ್ನು ಪ್ರತಿನಿಧಿಸುವುದಾಗಿ ಸಾಮಾಜಿಕ ತಾಣಗಳಲ್ಲಿ ಘೋಷಿಸಿದ್ದಾರೆ. ಸ್ಪಿನ್ನರ್ […]

ರೋಹಿತ್ ಶರ್ಮಾ- ಶುಭಮನ್ ಗಿಲ್ ಪರ ಬ್ಯಾಟಿಂಗ್‌ ಮಾಡಿದ ಹರ್ಭಜನ್ ಸಿಂಗ್

ಅಕ್ಟೋಬರ್ 5 ರಂದು ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ಮುಖಾಮುಖಿಯಾಗುವ ಮೂಲಕ 2023ರ ಏಕದಿನ ವಿಶ್ವಕಪ್ ಟೂರ್ನಿ ಅಧಿಕೃತವಾಗಿ ಆರಂಭವಾಗಲಿದೆ. ಅಕ್ಟೋಬರ್ 8 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ತನ್ನ ಮೊದಲನೇ ಪಂದ್ಯದಲ್ಲಿ ಸೆಣಸಲಿದೆ.ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆಲ್ಲಬೇಕೆಂದರೆ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ನಿರ್ಣಾಯಕ ಪಾತ್ರ ವಹಿಸಬೇಕಾಗುತ್ತದೆ ಎಂದು ಭಾರತ ತಂಡದ ಮಾಜಿ ಆಫ್ […]

ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಯಶಸ್ವಿಯಾಗಿ 16 ವರ್ಷ ಪೂರೈಸಿದ ರೋಹಿತ್ ಶರ್ಮಾ

ಮುಂಬೈ: 20ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಯಶಸ್ವಿಯಾಗಿ 16 ವರ್ಷ ಪೂರೈಸಿದ್ದಾರೆ. 2007ರ ಜೂನ್ 23ರಂದು ಭಾರತ ತಂಡದ (Team India) ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ನಾಯಕತ್ವದಲ್ಲಿ ಐರ್ಲೆಂಡ್‌ನಲ್ಲಿ ನಡೆದ ಏಕದಿನ ಪಂದ್ಯದ ಮೂಲಕ ರೋಹಿತ್ ಶರ್ಮಾ ಟೀಂ ಇಂಡಿಯಾಕ್ಕೆ ಎಂಟ್ರಿ ಕೊಟ್ಟಿದ್ದರು. ಅಂದು ಬೆಲ್ಫಾಸ್‌ನಲ್ಲಿ ಪೂರ್ಣ ತೋಳಿನ ಜಂಪರ್‌ಗಳಲ್ಲಿ ರೋಹಿತ್ ಕಾಣಿಸಿಕೊಂಡಿದ್ದರು. ಈ ಪಂದ್ಯದಲ್ಲಿ ಭಾರತ […]

ವೆಸ್ಟ್ ಇಂಡೀಸ್ ತಂಡಕ್ಕೆ ಭಾರೀ ದಂಡ

ಜಿಂಬಾಬ್ವೆ ವಿರುದ್ಧ ನಡೆದ ಐಸಿಸಿ ಏಕದಿನ ಕ್ರಿಕೆಟ್‌ ನ ಹರಾರೆ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ರನ್‌ಚೇಸ್‌ ವೇಳೆ ಮುಗ್ಗರಿಸಿದ ವೆಸ್ಟ್‌ ಇಂಡೀಸ್‌ ತಂಡ 35 ರನ್‌ಗಳ ಹೀನಾಯ ಸೋಲುಂಡಿತು. ಜೊತೆಗೆ ತಂಡದ ಆಟಗಾರರು ಪಂದ್ಯದ ಸಂಭಾವನೆಯ ಶೇ. 60ರಷ್ಟನ್ನು ದಂಡವಾಗಿ ತೆರುವಂತ್ತಾಗಿದೆ. ಐಸಿಸಿ ಅಂತಾರಾಷ್ಟ್ರೀಯ ಪ್ಯಾನೆಲ್ ಆಫ್ ಮ್ಯಾಚ್‌ ರೆಫ್ರಿ ಆಗಿರುವ ಮುಹಮ್ಮದ್‌ ಜಾವೇದ್‌ ವೆಸ್ಟ್‌ ಇಂಡೀಸ್‌ ವಿರುದ್ಧ ದಂಡ ಹೇರಿದ್ದಾರೆ. ನಿಗದಿತ ಸಮಯದ ಅಂತ್ಯಕ್ಕೆ ತನ್ನ ಖಾತೆಯ 50 ಓವರ್‌ಗಳನ್ನು ಪೂರೈಸಲು ವೆಸ್ಟ್‌ ಇಂಡೀಸ್‌ ಇನ್ನು 3 […]

ಬೆಂಬಿಡದೆ ಸುರಿಯುತ್ತಿರುವ ಮಳೆ; ಮಾವು ಬೆಳೆಗಾರರಿಗೆ ನಷ್ಟ

ಕೋಲಾರ: ಬಂಗಾಳಕೊಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಜಿಲ್ಲೆಯಲ್ಲಿ ಬೆಂಬಿಡದೆ ಮಳೆ ಸುರಿಯುತ್ತಿದೆ. ಹೌದು ಜಿಲ್ಲೆಯ ಶ್ರೀನಿವಾಸಪುರ, ಮುಳಬಾಗಿಲು ಕೋಲಾರ‌ ಸೇರಿದಂತೆ ರಾತ್ರಿಯಿಂದಲೂ ಮಳೆ ಸುರಿಯುತ್ತಿದ್ದು, ಮಳೆಯಿಂದ ಮಾವು ಕಟಾವಿಗೆ ತೊಂದರೆಯಾಗಿ, ಮಾವು ಬೆಳೆಗಾರರಿಗೆ ನಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಮಳೆಗಾಗಿ ಕಾದು ಕುಳಿತಿದ್ದ ರೈತರ ಮುಖದಲ್ಲಿ ಸಂತಸ ಮೂಡಿದ್ದು, ಹವಾಮಾನ ಇಲಾಖೆ ಪ್ರಕಾರ ಇನ್ನೂ‌ ಮೂರು‌ ದಿನಗಳ ಕಾಲ‌ ಮಳೆಯಾಗುವ ಸಾಧ್ಯತೆಯಿದೆ.