July 30, 2026

ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿಯಲ್ಲಿ ಸಿದ್ದರಾಮಯ್ಯಗೆ ಸ್ಥಾನ

ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ತಯಾರಿ ಶುರು ಮಾಡಿರುವ ಕಾಂಗ್ರೆಸ್‌ ಪಕ್ಷವು ಹಿರಿಯ ನಾಯಕ ಪಿ.ಚಿದಂಬರಂ ನೇತೃತ್ವದಲ್ಲಿ 16 ಜನರ ಪ್ರಣಾಳಿಕೆ ಸಮಿತಿಯನ್ನ ಪ್ರಕಟ ಮಾಡಿದೆ. ಪ್ರಣಾಳಿಕೆಯಲ್ಲಿ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರಿಗೆ ಸ್ಥಾನ ನೀಡಲಾಗಿದೆ. ಛತ್ತೀಸ್‌ಗಢದ ಮಾಜಿ ಉಪಮುಖ್ಯಮಂತ್ರಿ ಟಿ.ಎಸ್ ಸಿಂಗ್‌ದೇವ್ ಅವರನ್ನು ಚುನಾವಣಾ ಪ್ರಣಾಳಿಕೆ ಸಮಿತಿಯ ಸಂಚಾಲಕರನ್ನಾಗಿ ಮಾಡಲಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಶಶಿ ತರೂರ್, ಜೈರಾಮ್ ರಮೇಶ್, ಆನಂದ್ ಶರ್ಮಾ, ರಂಜಿತ್ ರಂಜನ್, ಜಿಗ್ನೇಶ್ ಮೇವಾನಿ ಸೇರಿದಂತೆ […]

ಕೊರೊನಾ ಆತಂಕದ ನಡುವೆಯೂ ವೈಕುಂಠ ಏಕಾದಶಿ ಸಂಭ್ರಮ – ಮಾಸ್ಕ್‌ ಮರೆತ ಜನ

ಬೆಂಗಳೂರು: ಸ್ವರ್ಗದ ಬಾಗಿಲು ತೆರೆಯುವ ಪುಣ್ಯದಿನವಾದ ಇಂದು ನಾಡಿನಾದ್ಯಂತ ವೈಕುಂಠ ಏಕಾದಶಿಯ ಸಂಭ್ರಮ ಮನೆ ಮಾಡಿದೆ. ಈ ದಿನ ಭಕ್ತರು ವೆಂಕಟೇಶ್ವರನ ದೇಗುಲಕ್ಕೆ ಭೇಟಿ ಕೊಟ್ಟು ಸ್ವರ್ಗದ ದ್ವಾರ ಹಾದು ಹೋಗಿ, ಪುನೀತರಾಗುವ ಕ್ಷಣ ಎಂದೇ ಈ ದಿನವನ್ನ ಭಾವಿಸಲಾಗಿದೆ. ಕೊರೊನಾ ಆತಂಕದ ನಡುವೆಯೂ ಭಕ್ತರು ದೇಗುಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಕೊರೊನಾ ಇರೋದ್ರಿಂದ ಏಕಾದಶಿಯ ಸಂಭ್ರಮದ ಜೊತೆಗೆ ಮುನ್ನೆಚ್ಚರಿಕಾ ಕ್ರಮಗಳನ್ನ ಪಾಲಿಸಲಾಗುತ್ತಿದೆ. ಆದ್ರೆ ಕೆಲ ಭಕ್ತರು ಮಾಸ್ಕ್‌ ಧರಿಸದೇ ದೇವಸ್ಥಾನಕ್ಕೆ ಆಗಮಿಸಿದ್ದ ದೃಶ್ಯಗಳು ಕಂಡುಬಂದಿವೆ. ಈಗಾಗಲೇ […]

ಕೆರೆ ಏರಿ ಮೇಲಿಂದ ಉರುಳಿ ಬಿದ್ದ ಬಸ್- 20ಕ್ಕೂ ಹೆಚ್ಚು ಮಂದಿಗೆ ಗಾಯ

ಆನೇಕಲ್: ಚಾಲಕನ ನಿಯಂತ್ರಣ ತಪ್ಪಿ ಬಸ್ಸೊಂದು ಕೆರೆ ಏರಿ ಮೇಲಿಂದ ಕೆಳಗೆ ಉರುಳಿ ಬಿದ್ದ ಘಟನೆ ಬೆಂಗಳೂರು ಹೊರವಲಯ ಆನೇಕಲ್‍ನಲ್ಲಿ   ನಡೆದಿದೆ. ಆನೇಕಲ್ ತಾಲೂಕಿನ ಅತ್ತಿಬೆಲೆ- ಸರ್ಜಾಪುರ ಮುಖ್ಯ ರಸ್ತೆಯ ಬಿದರಗುಪ್ಪೆ ಕೆರೆ ಏರಿ ಮೇಲೆ ಘಟನೆ ನಡೆದಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.  ಖಾಸಗಿ ಬಸ್ ಚಿಕ್ಕ ಬೆಳಂಡೂರಿನಿಂದ ಓಂ ಶಕ್ತಿಗೆ ಹೋಗುತ್ತಿತ್ತು. ಈ ಬಸ್ಸಿನಲ್ಲಿ ಸುಮಾರು 50 ಮಂದಿ ಪ್ರಯಾಣ ಮಾಡುತ್ತಿದ್ದರು. ಕೆರೆ ಏರಿ ಮೇಲೆ ಬರುತ್ತಿದ್ದಾಗ […]

ಸಿಎಂ, ಸಚಿವರು ಜೆಟ್‍ನಲ್ಲಿ, ಮಕ್ಕಳು ಜೆಸಿಬಿಯಲ್ಲಿ ಪ್ರಯಾಣ.. ಇದೇನಾ ನಿಮ್ಮ ಸಮಾಜವಾದ?: ಅಶೋಕ್ ಕಿಡಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ , ಕೃಷ್ಣಬೈರೇಗೌಡ ಐಷಾರಾಮಿ ಜೆಟ್‍ನಲ್ಲಿ ಪ್ರಯಾಣ ಮಾಡುತ್ತಾರೆ. ಇತ್ತ ಮಕ್ಕಳು ಜೆಸಿಬಿಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇದೇನಾ ನಿಮ್ಮ ಸಮಾಜವಾದ..?, ಈ ರೀತಿಯ ದೌಲತ್ತು ಸಿಎಂ, ಸಚಿವರಿಗೆ ಬೇಕಿತ್ತಾ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಜಮೀರ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಜೆಟ್ ವಿಮಾನ ಪ್ರಯಾಣದ ವೀಡಿಯೋ ಕುರಿತು ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಬರದ ಸಂಕಷ್ಟಕ್ಕೆ ರೈತರು ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. 60 […]

ಮಕ್ಕಳ ಕೈಯಲ್ಲೇ ಶೌಚಾಲಯ ಕ್ಲೀನ್ ಮಾಡಿಸಿದ ಶಿಕ್ಷಕರು; ಪಾಲಕರು ಗರಂ

ಕೋಲಾರ: ಜಿಲ್ಲೆಯಲ್ಲಿ ಶೌಚಗುಂಡಿಗೆ ಮಕ್ಕಳನ್ನ ಇಳಿಸಿದ ಪ್ರಕರಣ ಮಾಸುವ ಬೆನ್ನೆಲ್ಲೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ. ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಸರ್ಕಾರಿ ಶಾಲೆಯಲ್ಲಿ ಮತ್ತೊಂದು ಘಟನೆ ನಡೆದಿದೆ. ಈ ಪ್ರಕಾರ ಮಕ್ಕಳ ಕೈಯಲ್ಲೇ ಶೌಚಾಲಯ ಕ್ಲೀನ್​ ಮಾಡಿಸಲಾಗಿದೆ. ಯಶವಂತ ವಿಧಾನಸಭಾ ಕ್ಷೇತ್ರದ ಆಂದ್ರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕೈಯಿಂದ ಟಾಯ್ಲೇಟ್ ಕ್ಲೀನಿಂಗ್ ಮಾಡಿಸಿದ ಬಗ್ಗೆ ವರದಿಯಾಗಿದೆ.  ಪೋಷಕರಿಗೆ ವಿಷಯ ಗೊತ್ತಾಗಿ, ಶಾಲೆಯ ಮುಂದೆ ಪ್ರತಿಭಟನೆ ಮಾಡಲಾಗುತ್ತಿದೆ.  ಮಕ್ಕಳ ಕೈಯಿಂದ ಶೌಚಾಲಯ ಸ್ವಚ್ಛಗೊಳಿಸಿದ್ದಕ್ಕೆ ಪೋಷಕರು ಅಸಮಾಧಾನಗೊಂಡಿದ್ದಾರೆ.  […]

ಬಿಜೆಪಿಯಲ್ಲಿ ಸೈಲೆಂಟಾಗಿ ಅತೃಪ್ತರ ಟೀಮ್ ಫುಲ್ ಆಕ್ಟಿವ್

ಬೆಂಗಳೂರು: ಬಿಜೆಪಿಯಲ್ಲಿ ಒಂದು ಕಡೆ ಜೆಡಿಎಸ್ ಜೊತೆಗಿನ ದೋಸ್ತಿ ಜೋರಾದ್ರೆ, ಮತ್ತೊಂದು ಕಡೆ ಅತೃಪ್ತರ ಬಣದ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿವೈ ವಿಜಯೇಂದ್ರ‌ ನೇಮಕದಿಂದ ಅಸಮಧಾನಗೊಂಡಿರುವ ನಾಯಕರು ತಮ್ಮದೇ ಹೊಸ ತಂಡ ಕಟ್ಟಿಕೊಳ್ಳುವಂತೆ ಕಾಣಿಸುತ್ತಿದೆ. ರಮೇಶ್‌ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್, ವಿ.ಸೋಮಣ್ಣ, ಸಿಪಿ ಯೋಗೇಶ್ವರ್ ಸೇರಿದಂತೆ ಹಲವರ ತಂಡದ ಸದಸ್ಯರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಾಂಗ್ರೆಸ್ ತೊರೆದಿರುವ ಮಾಜಿ ಸಚಿವ ರೋಷನ್​ ಬೇಗ್ ಅವರನ್ನು ವಿ.ಸೋಮಣ್ಣ ಭೇಟಿಯಾಗಿ […]

ಫೈಟರ್‌ ರವಿ ನಿವಾಸದ ಮೇಲೆ ಐಟಿ ದಾಳಿ

ಬೆಂಗಳೂರು: ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ಟಿಕೆಟ್‌ ಆಕಾಕ್ಷಿಯಾಗಿದ್ದ ರೌಡಿ ಶೀಟರ್‌ ಮಲ್ಲಿಕಾರ್ಜುನ ಅಲಿಯಾಸ್ ಫೈಟರ್ ರವಿ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಇಂದು ಬೆಳ್ಳಂಬೆಳಗ್ಗೆ ವೈಯಾಲಿಕಾವಲ್‌ ನಿವಾಸದ ಮೇಲೆ ದಾಳಿ ಮಾಡಿರುವ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಕಳೆದ ಬಾರಿ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಮೂಲಕ ಸ್ಪರ್ಧಿಸಲು ಫೈಟರ್ ರವಿ ಮುಂದಾಗಿದ್ದರು. ಆದರೆ ರೌಡಿಶೀಟರ್ ಹಿನ್ನೆಲೆ ಇದೆ ಎಂದು ವಿವಾದ ಆಗಿತ್ತು. ನಂತರ ಬಿಜೆಪಿಗೆ ರಾಜೀನಾಮೆ ನೀಡಿ ಪಕ್ಷೇತರವಾಗಿ ನಿಂತು […]

ಗೃಹಲಕ್ಷ್ಮಿ ಯೋಜನೆ ಸಮಸ್ಯೆ ನಿವಾರಣೆಗೆ ಗ್ರಾಮ ಮಟ್ಟದಲ್ಲಿ ಕ್ಯಾಂಪ್ ಆಯೋಜನೆ

ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಲ್ಲಿರೋ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಮುಂದಾಗಿದೆ. ಸಮಸ್ಯೆ ನಿವಾರಣೆಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕ್ಯಾಂಪ್ ಆಯೋಜಸಲು ಸರ್ಕಾರ ಆದೇಶ ಹೊರಡಿಸಿದೆ. ಡಿಸೆಂಬರ್ 27 ರಿಂದ 29ರ ವರೆಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕ್ಯಾಂಪ್ ಆಯೋಜನೆಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಕ ಸುತ್ತೋಲೆ ಹೊರಡಿಸಲಾಗಿದೆ. ಪಿಡಿಓಗಳ ನೇತೃತ್ವದಲ್ಲಿ ಕ್ಯಾಂಪ್ ಆಯೋಜನೆ ಆಗಲಿದ್ದು, ಈ ಕ್ಯಾಂಪ್ ನಲ್ಲಿ ಫಲಾನುಭವಿಗಳಿಗೆ ಇರುವ ಸಮಸ್ಯೆ ಸರಿಪಡಿಸಲು ಸೂಚನೆ ನೀಡಲಾಗಿದೆ. ಗೃಹಲಕ್ಷ್ಮಿ ಕ್ಯಾಂಪ್ ಹೇಗೆ!?: ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ಕ್ಯಾಂಪ್‍ಗಳನ್ನು […]

ಡೀಪ್‌ಫೇಕ್‌, ಡಾರ್ಕ್‌ವೆಬ್‌ ಕಡಿವಾಣಕ್ಕೆ CID ಮಾಸ್ಟರ್‌ ಪ್ಲ್ಯಾನ್‌

ಬೆಂಗಳೂರು: ಇತ್ತೀಚೆಗೆ ಸ್ಟಾರ್‌ ನಟಿಯರನ್ನು ಹೆಚ್ಚಾಗಿ ಕಾಡುತ್ತಿರುವ ಡೀಪ್‌ಫೇಕ್ ಮತ್ತು ಡಾರ್ಕ್‌ವೆಬ್‌ಗೆ ಕಡಿವಾಣ ಹಾಕಲು ಸಿಐಡಿ ಸಜ್ಜಾಗಿದ್ದು, 6 ವಿದೇಶಿ ನುರಿತ ತಜ್ಞರಿಂದ ತರಬೇತಿ ಕೊಡಿಸಲಾಗುತ್ತಿದೆ. ಈ ಮೂಲಕ ಭಾರತದಲ್ಲೇ ದಿ ಬೆಸ್ಟ್‌ ಸೈಬರ್ ಟೆಕ್ನಾಲಜಿ ಹೊಂದಿರುವ ಹೆಮ್ಮೆ ರಾಜ್ಯದ ಸಿಐಡಿಗೆ ದೊರೆತಿದೆ. ಇಲ್ಲಿ ಟ್ರೈನಿಂಗ್ ಪಡೆಯಲು ಮಿಲಿಟರಿ, ಕೇರಳ ಮತ್ತು ರಾಷ್ಟ್ರೀಯ ಗೃಹ ಸಚಿವಾಲಯ ತುದಿಗಾಲಲ್ಲಿ ನಿಂತಿವೆ. ಇನ್ಫೋಸಿಸ್‌, ಸಿಐಡಿ ಹಾಗೂ DSCI (ಡೆಟಾ ಸೆಕ್ಯೂರಿಟಿ ಸೈನ್ಸ್ ಆಫ್ ಇಂಡಿಯಾ) ಸಹಯೋಗದಲ್ಲಿ ನಡೆಯುತ್ತಿರೋ ತರಬೇತಿಯಲ್ಲಿ ಈಗಾಗಲೇ ರಾಜ್ಯದ […]

ಸಿದ್ದು, ಡಿಕೆಶಿಯ ಶಾಸಕರ ಪಟ್ಟಿಗೆ ಹೈಕಮಾಂಡ್‌ ಬ್ರೇಕ್‌ 

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಒಮ್ಮತದ 35 ಶಾಸಕರ ಹೆಸರು ಸೂಚಿಸಿದ ಹೊರತಾಗಿಯೂ ನಿಗಮ ಮಂಡಳಿ ನೇಮಕ‌ ಇನ್ನಷ್ಟು ತಡವಾಗುವ ಸಾಧ್ಯತೆಯಿದೆ. ಸಿಎಂ ಮತ್ತು ಡಿಸಿಎಂ ದೆಹಲಿಗೆ ತೆರಳಿ ಹೈಕಮಾಂಡ್‌ ನಾಯಕರಿಗೆ ಪಟ್ಟಿ ತೋರಿಸಿದ್ದಾರೆ. ಈ ವೇಳೆ ಕಾರ್ಯಕರ್ತರಿಗೂ (ಪಕ್ಷದ ಮುಖಂಡರಿಗೆ) ಅವಕಾಶ ಮಾಡಿಕೊಡಬೇಕು ಎಂದು ಸ್ವತ: ರಾಹುಲ್ ಗಾಂಧಿ ಪಟ್ಟು ಹಿಡಿದಿರುವ ವಿಚಾರ ಮೂಲಗಳಿಂದ ತಿಳಿದುಬಂದಿದೆ. ದೆಹಲಿಯಲ್ಲಿ ಶಾಸಕರ ಹೆಸರಿನ ಪಟ್ಟಿ ನೀಡಿದ ನಂತರ ರಾಹುಲ್ ಗಾಂಧಿ ಹೊಸ ಷರತ್ತು ವಿಧಿಸಿದ್ದಾರೆ. ಇದರಿಂದ […]