July 30, 2026

ಶಾಸಕ ಬಿ.ಆರ್ ಪಾಟೀಲ್ ಆಪ್ತ ಬಸವರಾಜ್ ಚೌಲ್ ಪುತ್ರನ ಹತ್ಯೆ

ಕಲಬುರಗಿ: ಶಾಸಕ ಬಿ.ಆರ್ ಪಾಟೀಲ್ ಆಪ್ತರೂ ಆಗಿರುವ ಕಾಂಗ್ರೆಸ್‌ ಮುಖಂಡ ಬಸವರಾಜ್ ಚೌಲ್ ಪುತ್ರನನ್ನು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಆಳಂದ (Aland) ಪಟ್ಟಣದ ಹೊರವಲಯದ ಜಿಡಗಾ ರಸ್ತೆಯಲ್ಲಿ ಘಟನೆ ನಡೆದಿದ್ದು, ಕಾಂಗ್ರೆಸ್ ಮುಖಂಡನ ಪುತ್ರ ಚಂದ್ರಶೇಖರ್ ಚೌಲ್ (21) ಹತ್ಯೆಗೀಡಾಗಿದ್ದಾನೆ.  ಚಂದ್ರಶೇಖರ್ ಚೌಲ್ ಸ್ನೇಹಿತರಿಂದಲೇ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಆದ್ರೆ ಸಾವಿಗೆ ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ.  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಆಳಂದ ಪಟ್ಟಣದ ಪೊಲೀಸರು ಕೊಲೆ ಪ್ರಕರಣ […]

ಇದು ಕೆಜೆಪಿ ಪಾರ್ಟಿ 2 ಇದ್ದಂತೆ – ಕಳ್ಳರು, ಲಫಂಗರು ಹೆಚ್ಚು ಸೇರ್ತಿದ್ದಾರೆ

ವಿಜಯಪುರ: ಯಡ್ಡಿಯೂರಪ್ಪನವರದ್ದು ಕೆಜೆಪಿ 1, ಇದು ಕೆಜೆಪಿ 2, ಮೊಮ್ಮಗನದು ಕೆಜೆಪಿ 3 ಎಂದು ಹೇಳುವ ಮೂಲಕ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಬಿಜೆಪಿ ರಾಜ್ಯ ಘಟಕದ ನೂತನ ಪಟ್ಟಿಗೆ ವ್ಯಂಗ್ಯವಾಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಪಟ್ಟಿಯ ಆಯುಷ್ಯ 2024ರ ಲೋಕಸಭೆ ಚುನಾವಣೆ. 28 ಸೀಟ್ ತರುತ್ತೇನೆ ಅಂತಾ ಹೇಳಿದ್ದಾರೆ. 28 ರಲ್ಲಿ ಒಂದು ಕಡಿಮೆ ಬಿದ್ದರೂ ಚಿಕ್ಕಮಕ್ಕಳು ಹೇಗೆ ಸಿಗರೇಟ್ ಪ್ಯಾಕ್ ಮನೆ ಮಾಡಿರ್ತಾರೆ ಆ ರೀತಿಯಾಗಿ ಈ ಪಟ್ಟಿ ಹಾಗೆ ಬಿದ್ದು ಹೋಗುತ್ತದೆ […]

ʻಯುವ ನಿಧಿʼಗೆ ಡಿಸೆಂಬರ್‌ 26 ರಿಂದ ಅರ್ಜಿ ಸಲ್ಲಿಕೆ ಆರಂಭ

ಬೆಳಗಾವಿ: ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಯುವನಿಧಿ ಯೋಜನೆಗೆ ಡಿಸೆಂಬರ್‌ 26 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಪದವೀಧರರು ಸೇವಾಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್‌ ತಿಳಿಸಿದ್ದಾರೆ. ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ (Belagavi) 2023ರ ವರ್ಷದಲ್ಲಿ ತೇರ್ಗಡೆಯಾದ ದಿನಾಂಕದಿಂದ 180 ದಿನಗಳು ಕಳೆದರೂ ಉದ್ಯೋಗ ಲಭಿಸದ ಪದವೀಧರರು ಮತ್ತು ಡಿಪ್ಲೋಮಾ ಪಡೆದ ನಿರುದ್ಯೋಗಿ ವಿದ್ಯಾವಂತರಿಗೆ ಕರ್ನಾಟಕ ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಪಾವತಿಸಲಾಗುತ್ತದೆ ಎಂದು ಹೇಳಿದ್ದಾರೆ ಡಿಸೆಂಬರ್ 26ರಿಂದ ಅರ್ಜಿ […]

ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗೆ ಹೋಗುವಂತೆ ನಾನು ಕರೆ ಕೊಡುತ್ತೇನೆ

ಬೆಂಗಳೂರು: ಹಿಜಬ್‌ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆಗೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕಿಡಿಕಾರಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಯತ್ನಾಳ್‌, ಸಿದ್ದರಾಮಯ್ಯನವರು ಹಿಜಬ್ ಧರಿಸಬಹುದು ಎಂದು ಹೇಳುತ್ತಾ ಯಾರು ಯಾವ ಬಟ್ಟೆಯಾದರೂ ಧರಿಸಲು ಅವಕಾಶವಿದೆ ಎಂದು ಹೇಳಿದ್ದಾರೆ. ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗಳಲ್ಲಿ ಭಾಗವಹಿಸಲು ನಾನು ಕರೆ ಕೊಡುತ್ತಿದ್ದೇನೆ. ಅವರಿಗಿಲ್ಲದ ಸಮವಸ್ತ್ರ ನೀತಿ ಹಿಂದೂಗಳಿಗೂ ಇಲ್ಲ ಎಂದು ಪ್ರತಿಪಾದಿಸಿದ್ದಾರೆ.  ಓಲೈಕೆ ರಾಜಕಾರಣಕ್ಕೇನಾದರೂ ಮತ್ತೊಂದು ಹೆಸರು ಇದ್ದರೇ […]

ಗಡಿಯಲ್ಲಿ ನುಸುಳಲು ಯತ್ನಿಸಿದ ಉಗ್ರನ ಹತ್ಯೆ 

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ (ಐಬಿ) ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಒಳನುಸುಳಲು ಯತ್ನಿಸಿದ ಭಯೋತ್ಪಾದಕರನ್ನು ಸೇನೆ ತಡೆದಿದೆ. ಈ ವೇಳೆ ನಡೆದ ಎನ್‍ಕೌಂಟರ್‌ನಲ್ಲಿ ಓರ್ವ ಉಗ್ರ ಬಲಿಯಾಗಿದ್ದಾನೆ. ಆತನ ದೇಹವನ್ನು ಜೊತೆಗಿದ್ದ ಉಗ್ರರು ಪಾಕಿಸ್ತಾನದ ಕಡೆಗೆ ಎಳೆದೊಯ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಲ್ವರು ಶಸ್ತ್ರಸಜ್ಜಿತ ಭಯೋತ್ಪಾದಕರ ಗುಂಪು ಅಖ್ನೂರ್‍ನ ಖೌರ್ ಸೆಕ್ಟರ್‍ನಲ್ಲಿ ಗಡಿಯಿಂದ ಈ ಕಡೆಗೆ ನುಸುಳುತ್ತಿರುವುದನ್ನು ಗಮನಿಸಿದಾಗ ಕಾರ್ಯಾಚರಣೆ ನಡೆದಿದೆ. ಡಿ.23ರ ಮುಂಜಾನೆ ಭಯೋತ್ಪಾದಕರ ಚಲನವಲನಗಳು ಕಂಡು ಬಂದಿದೆ. ಈ ದೃಶ್ಯ ಗಡಿಯಲ್ಲಿನ ಸೇನೆಯ ಕ್ಯಾಮೆರಾಗಳಲ್ಲಿ […]

ಹಿಜಬ್ ವಿಚಾರ ಸುಪ್ರೀಂ ಕೋರ್ಟ್‍ನಲ್ಲಿರುವಾಗ ಅನುಮತಿ ಕೊಡೋದು ಎಷ್ಟು ಸರಿ?

ಬೆಂಗಳೂರು: ಬ್ರಿಟೀಷರು ದೇಶ, ರಾಜ್ಯವನ್ನು ವಿಭಜಿಸಿ ಆಳಿದ ಮಾದರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾತಿ, ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ಇದನ್ನು ಬಿಜೆಪಿ ಖಂಡಿಸುತ್ತದೆ ಎಂದು ಬಿಜೆಪಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ತಿಳಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹಿಜಬ್ ವಿಷಯ ಇದೀಗ ಸುಪ್ರೀಂ ಕೋರ್ಟಿನಲ್ಲಿದೆ. ಇಂತಹ ಸಂದರ್ಭದಲ್ಲಿ ಹಿಜಬ್‍ಗೆ ಅನುಮತಿ ಕೊಡುವುದು ಎಷ್ಟು ಸರಿ […]

ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಾಫಿಕ್‌ ಜಾಮ್‌ – 3 ಕಿಮೀ ವರೆಗೆ ನಿಂತ ವಾಹನಗಳು; 2 ಗಂಟೆ ಪ್ರಯಾಣಿಕರ ಪರದಾಟ

ಮೈಸೂರು: ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಸಂಚಾರ ದಟ್ಟಣೆ ಉಂಟಾಗಿ, ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ. ಬೆಂಗಳೂರು ಕಡೆಯಿಂದ ಶನಿವಾರ ಸಾವಿರಾರು ವಾಹನಗಳು ಮೈಸೂರು ಕಡೆಗೆ ಪ್ರಯಾಣಿಸಿದವು. ಇದರಿಂದಾಗಿ ಮೈಸೂರು ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಯಿತು. ಟೋಲ್‌ ಬಳಿ ಸುಮಾರು 3 ಕಿ.ಮೀ.ನಷ್ಟು ಟ್ರಾಫಿಕ್‌ ಜಾಮ್‌ ಆಯಿತು.  ಸುಮಾರು 2 ಗಂಟೆಗಳ ವರೆಗೆ ವಾಹನ ಸವಾರರು ಸಂಚಾರ ದಟ್ಟಣೆಯಲ್ಲಿ ಸಿಲುಕಿ ಪರದಾಡಿದರು. ರಸ್ತೆಯುದ್ದಕ್ಕೂ ವಾಹನಗಳು ಕಿಕ್ಕಿರಿದು ನಿಂತಿದ್ದ ದೃಶ್ಯದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ […]

ಬಿಜೆಪಿ ಮುಖಂಡನಿಗೆ ಕೊರೊನಾ ಪಾಸಿಟಿವ್

ಚಿಕ್ಕಬಳ್ಳಾಪುರ: ನಗರದ ಖಾಸಗಿ ಆಸ್ಪತ್ರೆಯ ಮಾಲೀಕ ಹಾಗೂ ಬಿಜೆಪಿ ಮುಖಂಡರೊಬ್ಬರಿಗೆ ಕೊರೊನಾ ಪಾಸಿಟಿವ್ ಧೃಡವಾಗಿದೆ. ಇತ್ತೀಚೆಗಷ್ಟೇ ದೆಹಲಿ ಹಾಗೂ ತಮಿಳುನಾಡಿಗೆ ಹೋಗಿ ಬಂದಿದ್ದ 69 ವರ್ಷದ ಬಿಜೆಪಿ ಮುಖಂಡನಿಗೆ ಜ್ವರ ಕಾಣಿಸಿಕೊಂಡಿತ್ತು. ಸತತ 5 ದಿನಗಳ ನಿರಂತರ ಜ್ವರ ಹಿನ್ನೆಲೆಯಲ್ಲಿ ಕೋವಿಡ್ ಟೆಸ್ಟ್ ಗೆ ಮಾಡಿಸಿದ್ದಾರೆ. ಕೊರೊನಾ ಟೆಸ್ಟ್ ನ ವರದಿ ಇಂದು ಬಂದಿದ್ದು ಪಾಸಿಟಿವ್ ಎಂಬುದು ಧೃಡವಾಗಿದೆ. ಸದ್ಯ ಬಿಜೆಪಿ ಮುಖಂಡ ಹೋಂ ಕ್ವಾರಂಟೈನಲ್ಲಿದ್ದಾರೆ. ಹೊಸ ತಳಿ ಜೆಎನ್.1 ಆತಂಕ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನ […]

ಮದ್ಯಪ್ರಿಯರ ಬೇಡಿಕೆಗಳು ನ್ಯಾಯಯುತವಾಗಿವೆ

ಧಾರವಾಡ: ಮದ್ಯಪ್ರಿಯರ ಕೆಲವೊಂದಿಷ್ಟು ಬೇಡಿಕೆಗಳು ನ್ಯಾಯಯುತವಾಗಿವೆ. ಮದ್ಯದ ಬಾಟಲಿಯ ಮೇಲೆ ವಿಮೆ ಮಾಡುವಂತೆ ಮದ್ಯಪ್ರಿಯರು ಬೇಡಿಕೆ ಇಟ್ಟಿದ್ದಾರೆ. ಇದು ಚರ್ಚಿಸುವ ವಿಚಾರ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ಸುವರ್ಣಸೌಧದ ಎದುರು ಮದ್ಯಪ್ರಿಯರು ಪ್ರತಿಭಟನೆ ನಡೆಸಿ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಮದ್ಯದ ಬಾಟಲಿ ಮೇಲೆ ವಿಮೆ ಮಾಡಿದರೆ, ವಿಮೆ ಕಟ್ಟಲು ಅವರು ತಯಾರಿದ್ದಾರೆ. ಇದು ಎರಡೂ ಕಡೆ ಲಾಭ ಆಗುತ್ತದೆ. […]

‘ಸಲಾರ್’ ಮೊದಲ ದಿನದ ಗಳಿಕೆ 178 ಕೋಟಿ ರೂಪಾಯಿ

ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನ ಸಲಾರ್ ಸಿನಿಮಾ ನಿನ್ನೆಯಷ್ಟೇ ವಿಶ್ವದಾದ್ಯಂತ ರಿಲೀಸ್ ಆಗಿದೆ. ಜೊತೆ ಶಾರುಖ್ ಖಾನ್ ನಟನೆ ಡಂಕಿ ಕೂಡ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಹಾಗಾಗಿ ಈ ಎರಡೂ ಚಿತ್ರಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಸಹಜವಾಗಿಯೇ ಎಲ್ಲರಿಗೂ ಕುತೂಹಲವಿತ್ತು. ಇದೀಗ ಸಲಾರ್ ಅಧಿಕೃತ ಎಕ್ಸ್ ಖಾತೆಯಲ್ಲಿ ಒಂದು ದಿನದ ವಿಶ್ವದ ಗಳಿಕೆಯನ್ನು ಪೋಸ್ಟ್ ಮಾಡಲಾಗಿದೆ. ಮೊದಲ ದಿನ ಸಲಾರ್ ಚಿತ್ರ 178.7 ಕೋಟಿ ಗಳಿಸಿದೆ ಎಂದು ಘೋಷಿಸಿದೆ. ವಿಶ್ವದ್ದು 178.7 ಕೋಟಿ […]