September 12, 2026

ಗಗನಕ್ಕೇರಿದ ಟೊಮ್ಯಾಟೋ ಬೆಲೆ: ಕಂಗಾಲಾದ ಗೃಹಿಣಿಯರು

ಸಿದ್ದು ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರತಿಯೊಂದು ವಸ್ತುವಿನ ದರವು ಹೆಚ್ಚುತ್ತಿದೆ. ಇದರಿಂದ ಗೃಹಿಣಿಯರು ಕಂಗಾಲಾಗಿದ್ದು ದಿನಸಿ ಸಾಮಾನುಗಳನ್ನು ಖರೀದಿಸಲು ಹಿಂದು ಮುಂದು ನೋಡುವಂತಾಗಿದೆ. ಅದರಲ್ಲೂ ತರಕಾರ ಬೆಲೆ ಗಗನಕ್ಕೇರಿದೆ. ಯಾವುದೇ ತರಕಾರಿ ತೆಗೆದುಕೊಳ್ಳಲು ಹೋದರು ದರ ಕೇಳಿಯೇ ಹಿಂದೆ ಸರಿಯುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ವಾರವಷ್ಟೇ ಕೆಜಿಗೆ 20 ರೂಪಾಯಿ ಇದ್ದ ಟೊಮ್ಯಾಟೋ ಧರ ಏಕಾಏಕಿ ನೂರರ ಗಡಿ ದಾಟಿರುವುದರಿಂದ ಗೃಹಿಣಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿನನಿತ್ಯದ ಅಡುಗೆಯಲ್ಲಿ ಟೊಮ್ಯಾಟೋ ಬೇಕೆ ಬೇಕು ಅನ್ನುವಷ್ಟರ ಮಟ್ಟಿಗೆ ಟೊಮ್ಯಾಟೋ […]

ನಟ ರಾಮ್ ಚರಣ್ ಪುತ್ರಿಗೆ ದುಬಾರಿ ಉಡುಗೊರೆ ನೀಡಿದ ಮುಖೇಶ್ ಅಂಬಾನಿ

ಇತ್ತೀಚೆಗೆ ರಾಮ್ ಚರಣ್ ಉಪಾಸನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಿನ್ನೆ ತಾನೆ ಮಗಳಿಗೆ ನಾಮಕರಣ ಮಾಡಲಾಗಿದ್ದು ಇದೀಗ ರಾಮ್ ಚರಣ್ ಪುತ್ರಿಗೆ ಜಗತ್ತಿನ ಅತೀ ಶ್ರೀಮಂತರ ಪಟ್ಟಿಯಲ್ಲಿರುವ ಭಾರತೀಯ ಮುಖೇಶ್ ಅಂಬಾನಿ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ.ಮುಖೇಶ್ ಅಂಬಾನಿ ದಂಪತಿಗಳು ರಾಮ್ ಚರಣ್ ಮಗಳಿಗೆ ಒಂದು ಕೋಟಿ ರೂಪಾಯಿ ಬೆಲೆಬಾಳುವ ಚಿನ್ನದ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ರಾಮ್ ಚರಣ್ ಆಗಲಿ ಅಥವಾ ಅಂಬಾನಿಯಾಗಲಿ ಯಾವುದೇ ಮಾಹಿತಿ ನೀಡಿಲ್ಲ.ಮಗಳು ಹುಟ್ಟಿದ […]

ಶೂಟಿಂಗ್ ವೇಳೆ ನಟ ಪೃಥ್ವಿರಾಜ್ ಗೆ ಗಂಭೀರ ಗಾಯ: ಸರ್ಜರಿಗೆ ಸೂಚನೆ

ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಶೂಟಿಂಗ್ ನಲ್ಲಿದ್ದ ವೇಳೆ ಕಾಲಿಗೆ ಬಲವಾದ ಪೆಟ್ಟು ಮಾಡಿಕೊಂಡಿದ್ದರು. ವಿಲಾಯತ್ ಬುದ್ದ ಸಿನಿಮಾದ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದ್ದು ಶಸ್ತ್ರ ಚಿಕಿತ್ಸೆ ಮಾಡಬೇಕಾಗಿ ವೈದ್ಯರು ಸೂಚನೆ ನೀಡಿದ್ದರು.ಅದರಂತೆ ಇಂದು ನಟ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಮಲಯಾಳಂನ ನಿರೀಕ್ಷಿತ ವಿಲಾಯತ್ ಬುದ್ದ ಸಿನಿಮಾದಲ್ಲಿ ಸಾಕಷ್ಟು ಸಾಹಸ ಪ್ರಧಾನ ದೃಶ್ಯಗಳಿದ್ದು ಅವುಗಳ ಚಿತ್ರೀಕರಣದ ವೇಳೆ ಪೃಥ್ವಿರಾಜ್ ಸುಕುಮಾರನ್ ಪೆಟ್ಟು ಮಾಡಿಕೊಂಡಿದ್ದಾರೆ. ಇದೀಗ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿರುವ ನಟನಿಗೆ ವೈದ್ಯರು ಕೆಲ ವಾರಗಳ ಕಾಲ ವಿಶ್ರಾಂತಿ […]

ಮಯೋಸೈಟೀಸ್ ಕಾಯಿಲೆಯಿಂದ ಹೊರ ಬರಲು ಐಸ್ ಥೆರಪಿ ಮೊರೆ ಹೋದ ನಟಿ ಸಮಂತಾ

ಟಾಲಿವುಡ್ ಬ್ಯೂಟಿ ನಟಿ ಸಮಂತಾ ಕಳೆದ ಕೆಲ ಸಮಯದಿಂದ ಮಯೋಸೈಟೀಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದಕ್ಕಾಗಿ ಸಮಂತಾ ಅನೇಕ ರೀತಿಯ ಚಿಕಿತ್ಸೆಯ ಚಿಕಿತ್ಸೆಗಳ ಮೊರೆ ಹೋಗಿದ್ದು ಇದೀಗ ಮತ್ತೊಂದು ಥೆರಪಿಗೆ ಒಳಗಾಗಿದ್ದಾರೆ. ಕಾಯಿಲೆಯಿಂದ ಹೊರ ಬರಲು ಸಮಂತಾ ಐಸ್ ಥೆರಫಿಗೆ ಒಳಗಾಗಿದ್ದು ಅದರ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೊಂದು ಯಾತನೆ ಥೆರಪಿ ಎಂದು ಸಮಂತಾ ಬರೆದುಕೊಂಡಿದ್ದಾರೆ. ಅಲ್ಲದೇ, ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಕುರಿತು ತಿಳಿಸಿದ್ದಾರೆ. ಈ ಐಸ್ ಬಾತ್ ಥೆರಪಿಯು ಚಿತ್ರಹಿಂಸೆಯಿಂದ ಕೂಡಿರುವಂಥದ್ದು. ಆದರೂ, ಅನಿವಾರ್ಯ […]

ದಕ್ಷಿಣ ಕಾಶಿ ನಂಜನಗೂಡಿಗೆ ನಟ ಯಶ್ ದಂಪತಿ ಭೇಟಿ

ಮೈಸೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಕುಟುಂಬ ಸಮೇತ ಇಂದು ನಂಜನಗೂಡಿಗೆ ಆಗಮಿಸಿ, ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಕ್ಕಳು ಹಾಗೂ ಅತ್ತೆ ಮಾವ ಸಮೇತ ದೇವಸ್ಥಾನಕ್ಕೆ ಆಗಮಿಸಿದ್ದ ಯಶ್ ಕೆಲ ಹೊತ್ತು ದೇವಸ್ಥಾನದಲ್ಲೇ ಇದ್ದು ನಂಜುಂಡೇಶ್ವರನ ದರ್ಶನ ಪಡೆದರು. ಸಿನಿಮಾ ಕೆಲಸಗಳ ಮಧ್ಯೆಯೇ ಬಿಡುವು ಮಾಡಿಕೊಂಡು ಫ್ಯಾಮಿಲಿಗೆ ಟೈಮ್ ಕೊಟ್ಟಿದ್ದಾರೆ ಯಶ್. ಕಳೆದ ಮೂರು ದಿನಗಳಿಂದ ಅವರು ಮೈಸೂರು ಭಾಗದಲ್ಲಿ ಪ್ರವಾಸದಲ್ಲಿದ್ದರು. ನಾಗರ ಹೊಳೆ, ಬಂಡೀಪುರ ಅರಣ್ಯದಲ್ಲಿ ಸಫಾರಿ […]

ನವರಂಗ್ ಥಿಯೇಟರ್ ಮಾಲೀಕ, ನಿರ್ಮಾಪಕ ಕೆಸಿಎನ್ ಮೋಹನ್ ಇನ್ನಿಲ್ಲ

ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆಸಿಎನ್ ಗೌಡ್ರು ಅವರ ಕುಟುಂಬದ ಕೆಸಿಎನ್ ಮೋಹನ್ ಅವರು ಸಾವನ್ನಪ್ಪಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೋಹನ್ ವಿಧಿವಶರಾಗಿದ್ದಾರೆ. ಕೆಸಿಎನ್ ಮೋಹನ್ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದೆ. ಪ್ರದರ್ಶಕರಾಗಿ, ನಿರ್ಮಾಪಕರಾಗಿ, ವಿತರಕರಾಗಿ ಮೋಹನ್ ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಮಾಡಿದ್ದರು. ಬೆಂಗಳೂರಿನ ನವರಂಗ್ ಚಿತ್ರಮಂದಿರದ ಮಾಲೀಕರಾಗಿದ್ದ ಮೋಹನ್, ಈಚೆಗೆ ಅದನ್ನು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನವೀಕರಣ ಮಾಡಿದ್ದರು.