ಹೆಚ್ಚು ಭಕ್ತರು ಬರುವ ದೇವಳಗಳಿಗೆ ಪ್ರಾಧಿಕಾರ ರಚನೆ
ಕುಂದಾಪುರ:ಹೆಚ್ಚೆಚ್ಚು ಭಕ್ತರು ಆಗಮಿಸುವ ಮೈಸೂರಿನ ಚಾಮುಂಡೇಶ್ವರಿ, ಕೊಪ್ಪಳದ ಹುಲಿಗೆಮ್ಮ ಹಾಗೂ ದೊಡ್ಡಬಳ್ಳಾಪುರದ ಘಾಟಿ ಸುಬ್ರಮಣ್ಯ ದೇವಸ್ಥಾನಗಳ ಉಸ್ತುವಾರಿಗೆ ಪ್ರಾಧಿಕಾರ ರಚನೆ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ರಾಜ್ಯ ಮುಜರಾಯಿ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.ಇಲ್ಲಿನ ಮಾರಣಕಟ್ಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಜರಾಯಿ ಇಲಾಖೆ ದೇವಸ್ಥಾನಗಳ ಆಸ್ತಿ ಸರ್ವೇ ಮಾಡಲು ಈಗಾಗಲೇ ಕಂದಾಯ ಇಲಾಖೆ ಜೊತೆ ಕ್ರಮ ವಹಿಸಲಾಗಿದೆ. ಇಲಾಖೆಗೆ ಆಸ್ತಿಗಳು ಪರಭಾರೆ ಅಥವಾ ಅತಿಕ್ರಮಣವಾಗಿದ್ದರೆ ಹಿಂಪಡೆಯಲು ಸ್ವಷ್ಟ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.ಮುಜರಾಯಿ ದೇವಸ್ಥಾನದ ಎ, ಬಿ ದರ್ಜೆಯ […]







































































































































































































































































































































































































































































































































































































































































































































































































































































































































































































































































































































