November 4, 2026

ರೋಹಿತ್ ಶರ್ಮಾ- ಶುಭಮನ್ ಗಿಲ್ ಪರ ಬ್ಯಾಟಿಂಗ್‌ ಮಾಡಿದ ಹರ್ಭಜನ್ ಸಿಂಗ್

ಅಕ್ಟೋಬರ್ 5 ರಂದು ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ ಅಪ್ ನ್ಯೂಜಿಲೆಂಡ್ ಮುಖಾಮುಖಿಯಾಗುವ ಮೂಲಕ 2023ರ ಏಕದಿನ ವಿಶ್ವಕಪ್ ಟೂರ್ನಿ ಅಧಿಕೃತವಾಗಿ ಆರಂಭವಾಗಲಿದೆ. ಅಕ್ಟೋಬರ್ 8 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ತನ್ನ ಮೊದಲನೇ ಪಂದ್ಯದಲ್ಲಿ ಸೆಣಸಲಿದೆ.ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆಲ್ಲಬೇಕೆಂದರೆ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ನಿರ್ಣಾಯಕ ಪಾತ್ರ ವಹಿಸಬೇಕಾಗುತ್ತದೆ ಎಂದು ಭಾರತ ತಂಡದ ಮಾಜಿ ಆಫ್ […]

ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಯಶಸ್ವಿಯಾಗಿ 16 ವರ್ಷ ಪೂರೈಸಿದ ರೋಹಿತ್ ಶರ್ಮಾ

ಮುಂಬೈ: 20ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಯಶಸ್ವಿಯಾಗಿ 16 ವರ್ಷ ಪೂರೈಸಿದ್ದಾರೆ. 2007ರ ಜೂನ್ 23ರಂದು ಭಾರತ ತಂಡದ (Team India) ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ನಾಯಕತ್ವದಲ್ಲಿ ಐರ್ಲೆಂಡ್‌ನಲ್ಲಿ ನಡೆದ ಏಕದಿನ ಪಂದ್ಯದ ಮೂಲಕ ರೋಹಿತ್ ಶರ್ಮಾ ಟೀಂ ಇಂಡಿಯಾಕ್ಕೆ ಎಂಟ್ರಿ ಕೊಟ್ಟಿದ್ದರು. ಅಂದು ಬೆಲ್ಫಾಸ್‌ನಲ್ಲಿ ಪೂರ್ಣ ತೋಳಿನ ಜಂಪರ್‌ಗಳಲ್ಲಿ ರೋಹಿತ್ ಕಾಣಿಸಿಕೊಂಡಿದ್ದರು. ಈ ಪಂದ್ಯದಲ್ಲಿ ಭಾರತ […]

ವೆಸ್ಟ್ ಇಂಡೀಸ್ ತಂಡಕ್ಕೆ ಭಾರೀ ದಂಡ

ಜಿಂಬಾಬ್ವೆ ವಿರುದ್ಧ ನಡೆದ ಐಸಿಸಿ ಏಕದಿನ ಕ್ರಿಕೆಟ್‌ ನ ಹರಾರೆ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ರನ್‌ಚೇಸ್‌ ವೇಳೆ ಮುಗ್ಗರಿಸಿದ ವೆಸ್ಟ್‌ ಇಂಡೀಸ್‌ ತಂಡ 35 ರನ್‌ಗಳ ಹೀನಾಯ ಸೋಲುಂಡಿತು. ಜೊತೆಗೆ ತಂಡದ ಆಟಗಾರರು ಪಂದ್ಯದ ಸಂಭಾವನೆಯ ಶೇ. 60ರಷ್ಟನ್ನು ದಂಡವಾಗಿ ತೆರುವಂತ್ತಾಗಿದೆ. ಐಸಿಸಿ ಅಂತಾರಾಷ್ಟ್ರೀಯ ಪ್ಯಾನೆಲ್ ಆಫ್ ಮ್ಯಾಚ್‌ ರೆಫ್ರಿ ಆಗಿರುವ ಮುಹಮ್ಮದ್‌ ಜಾವೇದ್‌ ವೆಸ್ಟ್‌ ಇಂಡೀಸ್‌ ವಿರುದ್ಧ ದಂಡ ಹೇರಿದ್ದಾರೆ. ನಿಗದಿತ ಸಮಯದ ಅಂತ್ಯಕ್ಕೆ ತನ್ನ ಖಾತೆಯ 50 ಓವರ್‌ಗಳನ್ನು ಪೂರೈಸಲು ವೆಸ್ಟ್‌ ಇಂಡೀಸ್‌ ಇನ್ನು 3 […]

ಬೆಂಬಿಡದೆ ಸುರಿಯುತ್ತಿರುವ ಮಳೆ; ಮಾವು ಬೆಳೆಗಾರರಿಗೆ ನಷ್ಟ

ಕೋಲಾರ: ಬಂಗಾಳಕೊಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಜಿಲ್ಲೆಯಲ್ಲಿ ಬೆಂಬಿಡದೆ ಮಳೆ ಸುರಿಯುತ್ತಿದೆ. ಹೌದು ಜಿಲ್ಲೆಯ ಶ್ರೀನಿವಾಸಪುರ, ಮುಳಬಾಗಿಲು ಕೋಲಾರ‌ ಸೇರಿದಂತೆ ರಾತ್ರಿಯಿಂದಲೂ ಮಳೆ ಸುರಿಯುತ್ತಿದ್ದು, ಮಳೆಯಿಂದ ಮಾವು ಕಟಾವಿಗೆ ತೊಂದರೆಯಾಗಿ, ಮಾವು ಬೆಳೆಗಾರರಿಗೆ ನಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಮಳೆಗಾಗಿ ಕಾದು ಕುಳಿತಿದ್ದ ರೈತರ ಮುಖದಲ್ಲಿ ಸಂತಸ ಮೂಡಿದ್ದು, ಹವಾಮಾನ ಇಲಾಖೆ ಪ್ರಕಾರ ಇನ್ನೂ‌ ಮೂರು‌ ದಿನಗಳ ಕಾಲ‌ ಮಳೆಯಾಗುವ ಸಾಧ್ಯತೆಯಿದೆ.

ಕೈಕೊಟ್ಟ ಮಳೆರಾಯ: ರೈತ ಸಂಪರ್ಕ ಕೇಂದ್ರದಲ್ಲಿ ರೈತರ ಸುಳಿವೆ ಇಲ್ಲ

ಹಾವೇರಿ: ಹಾವೇರಿ ಜಿಲ್ಲೆ ಹಿರೇಕೆರೂರು(Haveri) ತಾಲ್ಲೂಕಿನಾದ್ಯಂತ ಮಳೆಯಾಗದೇ ಇದ್ದುದರಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಪರಿಣಾಮ ರೈತ ಸಂಪರ್ಕ ಕೇಂದ್ರದಲ್ಲಿ(Farmer Contact Centre) ರೈತರ ಸುಳಿವೆ ಇಲ್ಲ.ತಾಲ್ಲೂಕಿನ ಜೀವನಾಡಿಯಾದ ಕುಮದ್ವತಿ ನದಿ ನೀರಿಲ್ಲದೆ ಒಣಗಿದೆ. ಅಶ್ವಿನಿ, ಭರಣಿ, ಕೃತಿಕಾ ಮಳೆಗಳು ಕೈಕೊಟ್ಟಿವೆ.ತಿಂಗಳ ಅಂತ್ಯದಲ್ಲಿ ಮುಂಗಾರಿನ ಮುನ್ಸೂಚನೆ ನೀಡುತ್ತಿದ್ದ ಮೃಗಶಿರಾ ಮುನಿಸಿಕೊಂಡಿದೆ. ಇನ್ನೂ ತಿಂಗಳ ಕೊನೆವಾರದಲ್ಲಿ ಬರುವ ಅರಿದ್ರ ಮಳೆ ಭೂಮಿಯತ್ತ ಮುಖ ತೋರಿಸುವುದೇ ಎಂದು ರೈತರು ಚಿಂತೆಗೀಡಾಗಿದ್ದಾರೆ. ವಿವಿಧ ಬೀಜಗಳನ್ನು ಬಿತ್ತೆನೆ ಮಾಡಿದ್ದರು. ಬರು ಬರುತ್ತಾ ಮಳೆಯ ಪ್ರಮಾಣ […]

ಸ್ಥಗಿತಗೊಂಡಿದ್ದ ಮೈಶುಗರ್ ಕಾರ್ಖಾನೆ ಜೂನ್ 30ರಂದು ಪುನಾರಂಭ

ಮಂಡ್ಯ: ಮೈಸೂರು ಸಕ್ಕರೆ ಕಾರ್ಖಾನೆಯಲ್ಲಿ(ಮೈಶುಗರ್) 2023-23ನೇ ಸಾಲಿನ ಕಬ್ಬು ಅರೆಯುವಿಕೆ ಕಾರ್ಯವನ್ನು ಜೂನ್ 30ರಿಂದ ಆರಂಭಿಸಲಾಗುವುದು. ಕಬ್ಬು ಪೂರೈಸಿದರೆ ರೈತರಿಗೆ ನಿಯಮದಂತೆ 14 ದಿನಗಳಿಗೊಮ್ಮೆ ಹಣ ಪಾವತಿಸಲಾಗುವುದು ಎಂದು ಮೈಶುಗರ್ ವ್ಯವಸ್ಥಾಪಕ ನಿರ್ದೇಶಕ ಅಪ್ಪಾ ಸಾಹೇಬ್ ಚನ್ನಪ್ಪಗೌಡ ಪಾಟೀಲ್ ತಿಳಿಸಿದರು.‘‘ಕಬ್ಬು ಅರೆಯಲು ಕಾರ್ಖಾನೆಯಲ್ಲಿ ಎಲ್ಲ ರೀತಿಯಿಂದಲೂ ಸರ್ವಸನ್ನದ್ಧವಾಗಿದೆ. ಯಾವುದೇ ತಾಂತ್ರಿಕ ದೋಷಗಳಿಲ್ಲ. ಎಲ್ಲ ಯಂತ್ರೋಪಕರಣಗಳನ್ನು ದುರಸ್ತಿ, ಓವರ್ಆಯಿಲ್ ಮಾಡಲಾಗಿದೆ. ಕಬ್ಬು ಕಟಾವು ಕಾರ್ಮಿಕರ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ. ಕಬ್ಬು ಸಾಗಾಣಿಕೆಗೆ, ಟ್ರ್ಯಾಕ್ಟರ್, ಲಾರಿಗಳನ್ನು ಗೊತ್ತುಪಡಿಸಲಾಗಿದೆ,’’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.‘ಕಬ್ಬು […]

ಕನ್ಯೆ ಸಿಗದಿದ್ದಕ್ಕೆ ಮನನೊಂದು ರೈತ ಆತ್ಮಹತ್ಯೆ

ಹಾವೇರಿ: ರಾಜ್ಯದಲ್ಲಿ ರೈತರನ್ನು ಮದುವೆಯಾಗಲು ವಧುವೇ ಸಿಗುತ್ತಿಲ್ಲ ಎಂಬ ವಿಷಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದೇ ಕಾರಣಕ್ಕೆ ಸಾಕಷ್ಟು ರೈತರು ಹಳ್ಳಿಗಳನ್ನು ತೊರೆದು ಉದ್ಯೋಗ ಅರಸಿ ಪಟ್ಟಣದತ್ತ ಮುಖ ಮಾಡುತ್ತಿದ್ದಾರೆ. ಇದೀಗ ರೈತರೊಬ್ಬರು ಮದುವೆಯಾಗಲು ಹೆಣ್ಣು ಸಿಗಲಿಲ್ಲ ಎಂಬ ಕಾರಣಕ್ಕೆ ಮನ ನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದಲ್ಲಿ ನಡೆದಿದೆ.. ಮಂಜುನಾಥ ನಾಗನೂರು ಆತ್ಮಹತ್ಯೆಗೆ ಶರಣಾದ ರೈತ. ಮಂಜುನಾಥನಿಗೆ ಮದುವೆ ಮಾಡಲು ಕುಟುಂಬಸ್ಥರು ಕಳೆದ ಏಳೆಂಟು ವರ್ಷಗಳಿಂದ ಹುಡುಗಿಯನ್ನು ಹುಡುಕುತ್ತಿದ್ದರಂತೆ. […]

ಗಗನಕ್ಕೇರಿದ ಟೊಮ್ಯಾಟೋ ಬೆಲೆ: ಕಂಗಾಲಾದ ಗೃಹಿಣಿಯರು

ಸಿದ್ದು ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪ್ರತಿಯೊಂದು ವಸ್ತುವಿನ ದರವು ಹೆಚ್ಚುತ್ತಿದೆ. ಇದರಿಂದ ಗೃಹಿಣಿಯರು ಕಂಗಾಲಾಗಿದ್ದು ದಿನಸಿ ಸಾಮಾನುಗಳನ್ನು ಖರೀದಿಸಲು ಹಿಂದು ಮುಂದು ನೋಡುವಂತಾಗಿದೆ. ಅದರಲ್ಲೂ ತರಕಾರ ಬೆಲೆ ಗಗನಕ್ಕೇರಿದೆ. ಯಾವುದೇ ತರಕಾರಿ ತೆಗೆದುಕೊಳ್ಳಲು ಹೋದರು ದರ ಕೇಳಿಯೇ ಹಿಂದೆ ಸರಿಯುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ವಾರವಷ್ಟೇ ಕೆಜಿಗೆ 20 ರೂಪಾಯಿ ಇದ್ದ ಟೊಮ್ಯಾಟೋ ಧರ ಏಕಾಏಕಿ ನೂರರ ಗಡಿ ದಾಟಿರುವುದರಿಂದ ಗೃಹಿಣಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿನನಿತ್ಯದ ಅಡುಗೆಯಲ್ಲಿ ಟೊಮ್ಯಾಟೋ ಬೇಕೆ ಬೇಕು ಅನ್ನುವಷ್ಟರ ಮಟ್ಟಿಗೆ ಟೊಮ್ಯಾಟೋ […]

ನಟ ರಾಮ್ ಚರಣ್ ಪುತ್ರಿಗೆ ದುಬಾರಿ ಉಡುಗೊರೆ ನೀಡಿದ ಮುಖೇಶ್ ಅಂಬಾನಿ

ಇತ್ತೀಚೆಗೆ ರಾಮ್ ಚರಣ್ ಉಪಾಸನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಿನ್ನೆ ತಾನೆ ಮಗಳಿಗೆ ನಾಮಕರಣ ಮಾಡಲಾಗಿದ್ದು ಇದೀಗ ರಾಮ್ ಚರಣ್ ಪುತ್ರಿಗೆ ಜಗತ್ತಿನ ಅತೀ ಶ್ರೀಮಂತರ ಪಟ್ಟಿಯಲ್ಲಿರುವ ಭಾರತೀಯ ಮುಖೇಶ್ ಅಂಬಾನಿ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ.ಮುಖೇಶ್ ಅಂಬಾನಿ ದಂಪತಿಗಳು ರಾಮ್ ಚರಣ್ ಮಗಳಿಗೆ ಒಂದು ಕೋಟಿ ರೂಪಾಯಿ ಬೆಲೆಬಾಳುವ ಚಿನ್ನದ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ರಾಮ್ ಚರಣ್ ಆಗಲಿ ಅಥವಾ ಅಂಬಾನಿಯಾಗಲಿ ಯಾವುದೇ ಮಾಹಿತಿ ನೀಡಿಲ್ಲ.ಮಗಳು ಹುಟ್ಟಿದ […]

ಶೂಟಿಂಗ್ ವೇಳೆ ನಟ ಪೃಥ್ವಿರಾಜ್ ಗೆ ಗಂಭೀರ ಗಾಯ: ಸರ್ಜರಿಗೆ ಸೂಚನೆ

ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಶೂಟಿಂಗ್ ನಲ್ಲಿದ್ದ ವೇಳೆ ಕಾಲಿಗೆ ಬಲವಾದ ಪೆಟ್ಟು ಮಾಡಿಕೊಂಡಿದ್ದರು. ವಿಲಾಯತ್ ಬುದ್ದ ಸಿನಿಮಾದ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದ್ದು ಶಸ್ತ್ರ ಚಿಕಿತ್ಸೆ ಮಾಡಬೇಕಾಗಿ ವೈದ್ಯರು ಸೂಚನೆ ನೀಡಿದ್ದರು.ಅದರಂತೆ ಇಂದು ನಟ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಮಲಯಾಳಂನ ನಿರೀಕ್ಷಿತ ವಿಲಾಯತ್ ಬುದ್ದ ಸಿನಿಮಾದಲ್ಲಿ ಸಾಕಷ್ಟು ಸಾಹಸ ಪ್ರಧಾನ ದೃಶ್ಯಗಳಿದ್ದು ಅವುಗಳ ಚಿತ್ರೀಕರಣದ ವೇಳೆ ಪೃಥ್ವಿರಾಜ್ ಸುಕುಮಾರನ್ ಪೆಟ್ಟು ಮಾಡಿಕೊಂಡಿದ್ದಾರೆ. ಇದೀಗ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿರುವ ನಟನಿಗೆ ವೈದ್ಯರು ಕೆಲ ವಾರಗಳ ಕಾಲ ವಿಶ್ರಾಂತಿ […]