November 4, 2026

ಕಾವೇರಿ ಕಿಚ್ಚು – ಶನಿವಾರ ಮಂಡ್ಯ ಬಂದ್‌ಗೆ ಕರೆ

ಮಂಡ್ಯ: ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಬೆನ್ನಲ್ಲೇ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಶನಿವಾರ ಮಂಡ್ಯ ಜಿಲ್ಲೆಯ ಬಂದ್‌ಗೆ ಕರೆ ನೀಡಿದೆ. ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ವರ್ತಕರು, ಸಂಘಟನೆಗಳ ಮುಖಂಡರೊಂದಿಗೆ ಗುರುವಾರ (ಇಂದು) ನಡೆದ ಸಭೆಯಲ್ಲಿ ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಬಂದ್‌ ನಿರ್ಧಾರ ಕೈಗೊಂಡಿದೆ. ಶುಕ್ರವಾರ (ಸೆ.22) ಮತ್ತೊಂದು ಸುತ್ತಿನ ಸಭೆಯಲ್ಲಿ ಬಂದ್‌ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಲು ನಿರ್ಧರಿಸಲಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವ […]

ಕಾವೇರಿ ಪ್ರತಿಭಟನೆ ವೈಲೆಂಟ್ ಆದ್ರೆ ಕಾನೂ‌ನು ಕ್ರಮ

ಬೆಂಗಳೂರು: ಕಾವೇರಿ ನೀರಿಗಾಗಿ ಹೋರಾಟ ಮಾಡುವವರು ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು. ಪ್ರತಿಭಟನೆ ವೈಲೆಂಟ್ ಆದ್ರೆ ಕಾನೂ‌ನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಎಚ್ಚರಿಕೆ ನೀಡಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ (Supreme Court) ತೀರ್ಪಿನಿಂದ ಮಂಡ್ಯ ಸೇರಿದಂತೆ ಅನೇಕ ಕಡೆ ಪ್ರತಿಭಟನೆ ಆಗ್ತಿದೆ. ಪ್ರತಿಭಟನೆ ಮಾಡೋದು ಅವರ ಹಕ್ಕು. ಆದರೆ ಪ್ರತಿಭಟನೆ ವೈಲೆಂಟ್ ಆಗಬಾರದು. ಅಹಿತಕರ ಘಟನೆ ಆದ್ರೆ ಕಾನೂನಿನ ಅನ್ವಯ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು. ತಮಿಳುನಾಡಿಗೆ ನೀರು ಬಿಡಬೇಕು ಎಂಬ […]

ಸಲ್ಮಾನ್ ಖಾನ್ ಚಿತ್ರಕ್ಕೆ ಸಮಂತಾ ನಾಯಕಿನಾ? 

ಸಮಂತಾ ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿರೋದು ಎಲ್ಲರಿಗೂ ಗೊತ್ತೇ ಇದೆ. ಇತ್ತೀಚೆಗೆ ಸಮಂತಾ ಬಾಲಿವುಡ್‌ನ ಬಿಗ್ ಸ್ಟಾರ್ ಸಲ್ಮಾನ್ ಖಾನ್‌ಗೆ ನಾಯಕಿಯಾಗ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಈ ಸುದ್ದಿ ನಿಜಾನಾ? ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ. ‘ ಶೇರ್‌ಷಾ’ ನಿರ್ದೇಶಕ ವಿಷ್ಣುವರ್ಧನ್ ಅವರ ಮುಂಬರುವ ಸಿನಿಮಾಗೆ ಸಲ್ಮಾನ್ ಖಾನ್ ಹೀರೋ ಆಗಿ ಫಿಕ್ಸ್ ಆಗಿದ್ದಾರೆ. ಸಲ್ಲು ಜೊತೆ ಡ್ಯುಯೇಟ್ ಹಾಡೋ ನಾಯಕಿ ಸಮಂತಾ ಎಂಬ ಸುದ್ದಿಗೆ ಈಗ ಕ್ಲ್ಯಾರಿಟಿ ಸಿಕ್ಕಿದೆ. ಇನ್ಸ್ಟಾಗ್ರಾಂ ಲೈವ್‌ನಲ್ಲಿ ಸಮಂತಾ, ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ್ದಾರೆ. […]

ಟಿಕೆಟ್‌ಗೆ ನೀಡಿದ್ದು ಹವಾಲಾ ಹಣ – ಗೋವಿಂದ ಬಾಬು ವಿರುದ್ಧವೇ ಇಡಿಗೆ ದೂರು

ಬೆಂಗಳೂರು: ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಪಡೆಯಲು ಹೋಗಿ 5 ಕೋಟಿ ರೂ. ಕಳೆದುಕೊಂಡಿರುವುದಾಗಿ ದೂರು ನೀಡಿರುವ ಗೋವಿಂದ ಬಾಬು ಪೂಜಾರಿ ವಿರುದ್ಧವೇ ಈಗ ಜಾರಿ ನಿರ್ದೇಶನಾಲಯದಲ್ಲಿ (ED) ದೂರು ದಾಖಲಾಗಿದೆ. 5 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಟಿಕೆಟ್‌ಗೆ ನೀಡಿದ್ದು ಹವಾಲಾ ಹಣ. ಅವರು ನಗದು ರೂಪದಲ್ಲಿ ನೀಡಿರುವುದು ಅಪರಾಧವಾಗಿದ್ದು ಅವರ ವಿರುದ್ಧ ತನಿಖೆ ನಡೆಸಬೇಕೆಂದು ಕೋರಿ ವಕೀಲ ನಟರಾಜ ಶರ್ಮಾ ದೂರು ನೀಡಿದ್ದಾರೆ.  ದೂರು ನೀಡಿದ ಬಳಿಕ ಪ್ರತಿಕ್ರಿಯಿಸಿದ ನಟರಾಜ ಶರ್ಮಾ, ಗೋವಿಂದ ಪೂಜಾರಿ […]

ಎರಡು ಸಲ ನೀರು ಬಿಟ್ಟು ಈಗ ಸುಪ್ರೀಂಕೋರ್ಟ್‌ಗೆ ಹೋಗಿದ್ದಾರೆ

ಬೆಂಗಳೂರು: ಸುಪ್ರೀಂಕೋರ್ಟ್  ಆದೇಶ ದುರದೃಷ್ಟಕರ. ಮತ್ತೊಮ್ಮೆ ನಮ್ಮ ರಾಜ್ಯದ ಕಾನೂನು ತಂಡ ಸುಪ್ರೀಂಕೋರ್ಟ್ ಮುಂದೆ ವಸ್ತುಸ್ಥಿತಿ ತಿಳಿಸಲು ವಿಫಲವಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೊದಲ ಸಿಡಬ್ಲ್ಯೂಸಿ ಆದೇಶ ಬಂದಾಗ ಕರ್ನಾಟಕ ಸುಪ್ರೀಂಕೋರ್ಟ್‌ಗೆ ಹೋಗಬೇಕಿತ್ತು. ನೀರು ಬಿಡಲು ಆಗಲ್ಲ ಎಂದು ಅಫಿಡವಿಟ್ ಹಾಕಬೇಕಿತ್ತು. ಎರಡು ಸಲ ನೀರು ಬಿಟ್ಟು ಈಗ ಸುಪ್ರೀಂಕೋರ್ಟ್‌ಗೆ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾವೇರಿ ನೀರು ನಿಯಂತ್ರಣ ಸಮಿತಿ (CWRC), ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ […]

ಕಾವೇರಿ ವಿಚಾರವಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು

ಬೆಂಗಳೂರು: ಕಾವೇರಿ ವಿಚಾರವಾಗಿ ಕೇಂದ್ರ ಸರ್ಕಾರ ಕೂಡಲೇ ಮಧ್ಯ ಪ್ರವೇಶ ಮಾಡಿ ಸಂಕಷ್ಟ ಸೂತ್ರ ಸಿದ್ಧ ಮಾಡಬೇಕು ಅಂತ ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಒತ್ತಾಯ ಮಾಡಿದ್ದಾರೆ. ಸುಪ್ರೀಂಕೋರ್ಟ್ (Supreme Court) ನಿಂದ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಆದೇಶಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸುಪ್ರೀಂಕೋರ್ಟ್ ತೀರ್ಪು ಅತ್ಯಂತ ದುರಾದೃಷ್ಟಕರ. ನಮ್ಮಲ್ಲಿ ಕುಡಿಯೋಕೆ ನೀರಿಲ್ಲ. ಕೆಲವೇ ತಿಂಗಳಲ್ಲಿ ಬೆಂಗಳೂರಿಗೂ ಕುಡಿಯೋ ನೀರಿಗೂ ಸಮಸ್ಯೆ ಆಗುತ್ತದೆ. ಇಂತಹ ಸಮಯದಲ್ಲಿ ಎರಡು ಬೋರ್ಡ್ ಗಳು ಮತ್ತು ಸುಪ್ರೀಂಕೋರ್ಟ್ ವಾಸ್ತವ […]

ಕ್ವಾರ್ಟರ್ ಫೈನಲ್‍ಗೆ ಜಿಗಿದ ಟೀಂ ಇಂಡಿಯಾ

ನವದೆಹಲಿ: ಏಷ್ಯನ್ ಗೇಮ್ಸ್ ಕ್ರಿಕೆಟ್ 2023 ಟೂರ್ನಿಯಲ್ಲಿ ಚೀನಾದ ಹಾಂಗ್‍ಝೌನ ಪಿಂಗ್‍ಫೆಂಗ್ ಕ್ಯಾಂಪಸ್ ಕ್ರಿಕೆಟ್ ಮೈದಾನದಲ್ಲಿ ಇಂದು (ಗುರುವಾರ) ನಡೆದ ಪಂದ್ಯದಲ್ಲಿ ಭಾರತ ಮತ್ತು ಮಲೇಷ್ಯಾ ಮಹಿಳಾ ತಂಡಗಳ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ರನ್ ರೇಟ್ ಆಧಾರದ ಮೇಲೆ ಭಾರತ ತಂಡ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಈ ಮೂಲಕ ಮಹಿಳಾ ಕ್ರಿಕೆಟ್ ಟೂರ್ನಿಯ ಮೊದಲ ಕ್ವಾರ್ಟರ್ ಫೈನಲ್ ಪಂದ್ಯ ಮಳೆಯಿಂದಾಗಿ ಫಲಿತಾಂಶವಿಲ್ಲದೆ ರದ್ದಾಗಿದೆ. ಆದರೂ ಭಾರತ ತಂಡ ಸೆಮಿಫೈನಲ್ ತಲುಪುವಲ್ಲಿ ಯಶಸ್ವಿಯಾಗಿದೆ. ಟಾಸ್ ಗೆದ್ದ ಭಾರತ […]

ಕೂಲಿ ಹೊತ್ತು ನಡೆದ ರಾಹುಲ್ ಗಾಂಧಿ

ನವದೆಹಲಿ: ಇಲ್ಲಿನ ಆನಂದ್ ವಿಹಾರ್ ರೈಲು ನಿಲ್ದಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಇಂದು ಕೂಲಿಗಳ ಸಮಸ್ಯೆಗಳನ್ನು ಆಲಿಸಿದರು. ರೈಲ್ವೇ ನಿಲ್ದಾಣದಲ್ಲಿ ಕೂಲಿಗಳಂತೆ ಕೆಂಪು ಅಂಗಿ ಧರಿಸಿ, ಸೂಟ್ ಕೇಸ್ ತಲೆ ಮೇಲೆ ಹೊತ್ತು ನಡೆಯುತ್ತಿರುವ ವೀಡಿಯೋ ಹಾಗೂ ಫೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವಯನಾಡು ಸಂಸದರೂ ಆಗಿರುವ ರಾಹುಲ್ ಗಾಂಧಿಯವರು ಟ್ರೋಲಿ ಬ್ಯಾಗ್ ಅನ್ನು ತಲೆ ಮೇಲೆ ಹೊತ್ತುಕೊಂಡು ಹೋಗುತ್ತಿರುವುದನ್ನು ಗಮನಿಸಬಹುದು. ಈ ವೇಳೆ ಅಲ್ಲಿನ ಕಾರ್ಮಿಕರು ‘ರಾಹುಲ್ ಗಾಂಧಿ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗುತ್ತಿದ್ದಾರೆ. […]

ಆ ನೋವು ಎಂದಿಗೂ ಕಮ್ಮಿಯಾಗಲ್ಲ

ಬಹುಭಾಷಾ ನಟಿ ಭಾವನಾ ಮೆನನ್ (Bhavana Menon) ಅವರು ಕನ್ನಡ, ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕಾಡುವ ತಂದೆಯ ಅನುಪಸ್ಥಿತಿ ಬಗ್ಗೆ ಜಾಕಿ ಭಾವನಾ ಮಾತನಾಡಿದ್ದಾರೆ. ತಂದೆ ಜೊತೆಗಿನ ನೆನಪುಗಳನ್ನ ನಟಿ ಮೆಲುಕು ಹಾಕಿದ್ದಾರೆ. ನಟಿ ಭಾವನಾ ಮಾತನಾಡಿ, ನನ್ನ ತಂದೆಯ ಸಾವಿನ ನೋವು ಯಾವಾಗಲೂ ಹಾಗೆಯೇ ಇರುತ್ತದೆ. ಹೊರಗೆ ಎಷ್ಟೇ ಖುಷಿಯಾಗಿದ್ದರೂ ಒಳಗಿನ ನೋವು ಹಾಗೆಯೇ ಇದೆ. ಇಷ್ಟು ವರ್ಷ ಕಳೆದರೂ ಆ ದುಃಖದಿಂದ ಹೊರಬರಲು ಸಾಧ್ಯವಾಗಿಲ್ಲ. ಜೀವನ ಸಂಪೂರ್ಣವಾಗಿ ಬದಲಾಗಿದೆ. […]

ಕಾವೇರಿ ವಿಚಾರದಲ್ಲಿ ಸುಪ್ರೀಂ ತೀರ್ಪು ಕರ್ನಾಟಕಕ್ಕೆ ಗಾಯದ ಮೇಲೆ ಬರ ಎಳೆದಂತಾಗಿದೆ: ಸಿ.ಟಿ.ರವಿ

ಬೆಂಗಳೂರು: ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಕೊಟ್ಟ ತೀರ್ಪು ಕರ್ನಾಟಕಕ್ಕೆ ಗಾಯದ ಮೇಲೆ ಬರ ಎಳೆದಂತೆ ಆಗಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. Advertisement: 0:51Close Player ಕಾವೇರಿ ವಿಚಾರದಲ್ಲಿ ರಾಜಕಾರಣ ಮಾಡಬೇಕೆಂಬ ದುರುದ್ದೇಶ ನಮಗೆ ಇಲ್ಲ. ಕಾಂಗ್ರೆಸ್ ಸರ್ಕಾರದ ವೈಫಲ್ಯ ಮುಂದಿಡಬೇಕಾದ ಉದ್ದೇಶ ಇದೆ. ನಾವು 42% ರಷ್ಟು ಮಳೆ ಕೊರತೆ ಇದ್ದರು ಕೂಡ, ವಾಸ್ತವ ಪರಿಸ್ಥಿತಿ ವಿವರಿಸಲಿಲ್ಲ. ಸಂಕಷ್ಟದ ಸ್ಥಿತಿಯಲ್ಲಿ ಇದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.  ಸುಪ್ರೀಂ ಕೋರ್ಟ್‌ನಲ್ಲೂ ನಮಗೆ ಸಹಾಯ ಆಗಲಿಲ್ಲ. ತಮಿಳುನಾಡು […]