ಮಹಾರಾಷ್ಟ್ರಕ್ಕೆ ಕೆಕೆಆರ್ಟಿಸಿ ಬಸ್ ಸಂಚಾರ ಸ್ಥಗಿತ – ಕನ್ನಡಿಗರ ಪರದಾಟ
ಕಲಬುರಗಿ: ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಕೆಕೆಆರ್ಟಿಸಿ ಬಸ್ ಸಂಚಾರ ಸ್ಥಗಿತಗೊಂಡ ಹಿನ್ನಲೆ, ತುಳಜಾಪುರದ ಅಂಬಾಭವಾನಿ ದೇವಿ ದರ್ಶನಕ್ಕೆ ತೆರಳಿದ ನೂರಾರು ಕನ್ನಡಿಗರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕದಿಂದ ಮಹಾರಾಷ್ಟ್ರದ ತುಳಜಾಪುರಕ್ಕೆ ಬಸ್ (Bus) ಸೇವೆ ಸ್ಥಗಿತವಾಗಿರುವುದರಿಂದ ನೂರಾರು ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ತುಳಜಾಪುರದ ಬಸ್ ನಿಲ್ದಾಣದಲ್ಲಿಯೇ ಕುಳಿತಿದ್ದಾರೆ. ನಮ್ಮ ಊರಿಗೆ ಹೋಗಲು ಬಸ್ ಬಿಡಿ ಎಂದು ಮಹಿಳೆಯರು ಆಗ್ರಹಿಸುತ್ತಿದ್ದಾರೆ. ನಾವು ಫ್ರೀ ಬಸ್ ಎಂಬ ಕಾರಣಕ್ಕೆ ಹೆಚ್ಚಿನ ದುಡ್ಡು ಕೂಡ ತಂದಿಲ್ಲ. ಈಗ ಖಾಸಗಿ ವಾಹನದವರು 500 – […]







































































































































































































































































































































































































































































































































































































































































































































































































































































































































































































































































































































