November 3, 2026

ಓವರ್ ಮೇಕಪ್‌ಗೆ ಟ್ರೋಲ್ ಆದ ಊರ್ವಶಿ ರೌಟೇಲಾ

‘ಐರಾವತ’ ಬೆಡಗಿ ಊರ್ವಶಿ ರೌಟೇಲಾ ಅವರು ಇದೀಗ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಹೊಸ ಫೋಟೋದಲ್ಲಿನ ಊರ್ವಶಿ ಓವರ್ ಮೇಕಪ್ ನೋಡಿ ನೆಟ್ಟಿಗರು ಸಖತ್ ಟ್ರೋಲ್ ಮಾಡ್ತಿದ್ದಾರೆ. ಸದ್ಯ ನಟಿಯ ನಯಾ ಲುಕ್ ಸಖತ್ ವೈರಲ್ ಆಗುತ್ತಿದೆ. ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಊರ್ವಶಿ ರೌಟೇಲಾ ಸದ್ದು ಮಾಡುತ್ತಲೇ ಇರುತ್ತಾರೆ. ಈಗ ಸುಂದರವಾದ ಮಿನುಗುವ ಡ್ರೆಸ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ. ಗ್ಲ್ಯಾಮರಸ್ ಆಗಿ ಊರ್ವಶಿ ಕಾಣಿಸಿಕೊಂಡಿದ್ದಾರೆ. ಈ ಹೊಸ ಫೋಟೋ ಶೇರ್ ಮಾಡ್ತಿದ್ದಂತೆ ಐರಾವತ […]

ನನ್ನ ಮಣ್ಣು, ನನ್ನ ಹಕ್ಕು- ‘ಕಾಟೇರ’ ಸಾಂಗ್ ಔಟ್

ಡಿಬಾಸ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾದ ಸಾಂಗ್ ರಿಲೀಸ್ ಆಗಿದೆ. ಮಂಡ್ಯದ ಜನತೆಯ ಎದುರು ‘ಕಾಟೇರ’ ಥೀಮ್ ಸಾಂಗ್ ಅನ್ನು ಸುಮಲತಾ ಅಂಬರೀಶ್ ರಿಲೀಸ್ ಮಾಡಿದ್ದಾರೆ.  ನೆತ್ತರಲ್ಲಿ ನೆಂದ ಭೂಮಿ ಎಂದು ಶುರುವಾಗುವ ಸಾಂಗ್ ಸಖತ್ ಥ್ರಿಲ್ಲಿಂಗ್ ಆಗಿ ಮೂಡಿ ಬಂದಿದೆ. ನನ್ನ ಮಣ್ಣು, ನನ್ನ ಹಕ್ಕು ಮೊದಲಾದ ರೈತರ ಭಾವನೆಗಳನ್ನ ಈ ಹಾಡು ಒಳಗೊಂಡಿದೆ. ವಿಶೇಷ ಅಂದರೆ, ರೈತರ ದಿನದಂದೇ ಈ ಹಾಡನ್ನ ರಿಲೀಸ್ ಮಾಡಲಾಗಿದೆ. ನನ್ನ ಮಣ್ಣು, ನನ್ನ ಹಕ್ಕು ಹಾಡಿಗೆ ಪುನೀತ್ ಆರ್ಯ […]

ಇಂದ್ರಜಿತ್ ಲಂಕೇಶ್ ಸಿನಿಮಾದಲ್ಲಿ ‘ಸಲಗ’ ಬ್ಯೂಟಿ ಸಂಜನಾ ಆನಂದ್‌

ಸ್ಯಾಂಡಲ್‌ವುಡ್‌ಗೆ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ನಾಯಕ ನಟನಾಗಿ ಎಂಟ್ರಿ ಕೊಡ್ತಿದ್ದಾರೆ. ಚೊಚ್ಚಲ ಸಿನಿಮಾ ‘ಗೌರಿ’ ಶೂಟಿಂಗ್ ಕೂಡ ಭರದಿಂದ ನಡೆಯುತ್ತಿದೆ. ‘ಗೌರಿ’ ಸಿನಿಮಾದಲ್ಲಿ ಸಲಗ ಸುಂದರಿ ಸಂಜನಾ ಆನಂದ್ ಕೂಡ ನಟಿಸುತ್ತಿದ್ದಾರೆ. ಇಂದ್ರಜಿತ್ ನಿರ್ದೇಶನದ ಈ ಸಿನಿಮಾದಲ್ಲಿ ಸಮರ್ಜಿತ್‌ಗೆ ನಾಯಕಿಯಾಗಿ ಸಾನ್ಯ ಅಯ್ಯರ್ (Saanya Iyer) ನಟಿಸುತ್ತಿದ್ದಾರೆ. ಲವ್ ಸ್ಟೋರಿ ಜೊತೆ ಆ್ಯಕ್ಷನ್ ಓರಿಯೆಂಟೆಡ್ ಸಿನಿಮಾವಾಗಿದೆ. ಇದೇ ಚಿತ್ರದಲ್ಲಿ ಸಂಜನಾ ಆನಂದ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.  ಚಿತ್ರದಲ್ಲಿ ಸಂಜನಾ ಪಾತ್ರ ತಿರುವು ಕೊಡಲಿದೆ. […]

ಹೊಸವರ್ಷ ಆಚರಣೆ – ಮಹಿಳೆಯರ ರಕ್ಷಣೆಗೆ ಮುಂದಿನ ವಾರದಲ್ಲಿ ಗೈಡ್‌ಲೈನ್ಸ್‌

ಬೆಂಗಳೂರು: ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಭಾಗವಹಿಸುವ ಮಹಿಳೆಯರಿಗೆ ಯಾವುದೇ ತೊಂದರೆ ಮತ್ತು ಕಿರುಕುಳ ಆಗದಂತೆ ನೋಡಿಕೊಳ್ಳಲು ವಿಶೇಷ ಗೈಡ್‌ಲೈನ್ಸ್‌ ಬಿಡುಗಡೆ ಮಾಡುವುದಾಗಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ  ಬಿ. ದಯಾನಂದ್‌ ತಿಳಿಸಿದ್ದಾರೆ. ನಗರದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಅವರು, ವರ್ಷಾಚರಣೆ ವೇಳೆ ಮಹಿಳೆಯರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮುಂದಿನ ವಾರದಲ್ಲೇ ಅದಕ್ಕೆ ಸಂಬಂಧಿಸಿದಂತೆ ಸೂಕ್ತ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಹೊಸ ವರ್ಷ ಸಂಭ್ರಮಾಚರಣೆ ಬಗ್ಗೆ ಬಿಬಿಎಂಪಿ, ಬೆಸ್ಕಾಂ, ಬಿಎಂಟಿಸಿ, ಮೆಟ್ರೋ ಹಾಗೂ ಅಬಕಾರಿ […]

ಕಲುಷಿತ ಕಾಂಗ್ರೆಸ್‌ಗೆ ಹಿಂದುತ್ವ ರುಚಿಸಲ್ಲ

ಬೆಂಗಳೂರು: ಕಲುಷಿತ ಕಾಂಗ್ರೆಸ್‌ಗೆ ಹಿಂದುತ್ವ ರುಚಿಸುವುದಿಲ್ಲ, ವಿದೇಶಿ ಜೀನ್ಸ್‌ ಎಂದೂ ಭಾರತೀಯತೆಯನ್ನು ಒಪ್ಪುವುದಿಲ್ಲ ಎಂದು ಹೇಳುವ ಮೂಲಕ ಜೆಡಿಎಸ್‌ ಕಿಡಿ ಕಾರಿದೆ. ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರು ಕಲ್ಲಡ್ಕ ಪ್ರಭಾಕರ ಭಟ್ ಅವರ ಶಾಲೆಗೆ ಭೇಟಿ ನೀಡಿದ್ದಕ್ಕೆ ಕಾಂಗ್ರೆಸ್‌ ಕಿಡಿಕಾರಿತ್ತು. ಈ ಸಂಬಂಧ ಜೆಡಿಎಸ್‌ ಇಂದು ಎಕ್ಸ್‌ನಲ್ಲಿ ಸರಣಿ ಪೋಸ್ಟ್‌ ಮಾಡಿ ಆಕ್ರೋಶ ಹೊರ ಹಾಕಿದೆ. ಪೋಸ್ಟ್‌ಗಳಲ್ಲಿ ಏನಿದೆ?ಕಲುಷಿತ ಮನಸ್ಸಿನ ಕಾಂಗ್ರೆಸ್‌ ಕಣ್ಣಿಗೆ ಸದಾ ಕಾಮಾಲೆಯೇ. ಹೆಚ್‌ಡಿ ಕುಮಾರಸ್ವಾಮಿ ಅವರ ನಿಂದನೆಯೇ ಅದಕ್ಕೆ ಅಂಟಿದ ಬೇನೆ. ದೇಶವನ್ನೇ […]

ಬೈರತಿ ಸುರೇಶ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

ಚಿತ್ರದುರ್ಗ: ನಗರಾಭಿವೃದ್ಧಿ ಸಚಿವ ಬೈರತಿ ‌ಸುರೇಶ್ ತೆರಳುತ್ತಿದ್ದ‌ಹೆಲಿಕಾಪ್ಟರ್‌ ಹಿರಿಯೂರು ತಾಲೂಕಿನ ಹಾರನಕಟ್ಟೆ ಗ್ರಾಮದ ಬಳಿ ತುರ್ತು ಭೂಸ್ಪರ್ಶ ಮಾಡಿದೆ. ಗದಗದ ಲಕ್ಷ್ಮೇಶ್ವರದ ರಾಮಗಿರಿಯಲ್ಲಿ ಆಯೋಜನೆಗೊಂಡಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೆಳಗ್ಗೆ ಬೆಂಗಳೂರಿನ ಜಕ್ಕೂರು ಏರೋಡ್ರಂನಿಂದ ಸುರೇಶ್‌ ಅವರಿದ್ದ ಹೆಲಿಕಾಪ್ಟರ್‌ ಟೇಕಾಫ್‌ ಆಗಿತ್ತು.  ದಾರಿ ಮಧ್ಯೆ ತಾಂತ್ರಿಕ ಸಮಸ್ಯೆ ಕಾಣಿಸಿದ ಹಿನ್ನೆಲೆಯಲ್ಲಿ ಪೈಲೆಟ್‌ ಸುರಕ್ಷಿತವಾಗಿ ಹಾರನಕಟ್ಟೆ ಗ್ರಾಮದಲ್ಲಿ ಸೇಫ್ ಲ್ಯಾಂಡಿಂಗ್ ಮಾಡಿದ್ದಾರೆ. ಅಪಾಯದಿಂದ ಪಾರಾದ ಬೈರತಿ ಸುರೇಶ್‌ ಅವರು ರಸ್ತೆ ಮಾರ್ಗವಾಗಿ ಗದಗಕ್ಕೆ ತೆರಳಿದ್ದಾರೆ. ಈ ವಿಷಯ ತಿಳಿದ […]

ಮತ್ತೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಹೆಗಡೆ

ಕಾರವಾರ: ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಾಯ ಮಾಡಿದಾಗ ತಿರಸ್ಕರಿಸುವುದು ಮೂರ್ಖತನವಾಗುತ್ತದೆ ಎಂದು ಉತ್ತರ ಕನ್ನಡದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದಾರೆ. ಆರೋಗ್ಯದ ಸಮಸ್ಯೆಯಿಂದಾಗಿ ಚುನಾವಣಾ ರಾಜಕಾರಣ, ಪಕ್ಷದ ರಾಜಕಾರಣದಿಂದ ದೂರವಿದ್ದೆ. ಅಭಿಮಾನಿಗಳಿಂದ ಚುನಾವಣೆಗೆ ನಿಲ್ಲಬೇಕೆಂಬ ಒತ್ತಡ ಬರುತ್ತಿದೆ ಎಂದು ಅವರು ಹೇಳಿದರು.   ಪಕ್ಷ ಹಾಗೂ ರಾಜಕಾರಣದಿಂದ ಮೂರು ವರ್ಷದಿಂದ ದೂರ ಉಳಿದಿದ್ದ ಅನಂತ್‌ಕುಮಾರ್ ಹೆಗಡೆ ಇಂದು ಶಿರಸಿಯ ಕೆ.ಹೆಚ್.ಬಿ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು. ಈ ಬಾರಿಯ ಲೋಕಸಭಾ […]

ಬೆಂಗಳೂರು ಉತ್ಸಾಹಭರಿತ ವಾಸ್ತುಶಿಲ್ಪ ನಗರಿ: ಪ್ರಧಾನಿ ಮೋದಿ ಬಣ್ಣನೆ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ಗೆ ಯುನೆಸ್ಕೋದ ವಿಶೇಷ ವಿಶ್ವ ಮನ್ನಣೆ ಸಿಕ್ಕಿದೆ. ಇದಕ್ಕೆ ತಮ್ಮ ಎಕ್ಸ್ ಖಾತೆಯಲ್ಲಿ ಪ್ರಧಾನಿ ‌ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಜಗತ್ತಿನ ಅತ್ಯಂತ ಸುಂದರ ವಿಮಾನ ನಿಲ್ದಾಣಗಳ ಪೈಕಿ ಇದೂ ಒಂದು ಎಂಬ ಕೀರ್ತಿಗೆ ನಮ್ಮ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾಜನವಾಗಿದೆ ಎಂದು ಕಳೆದ ವರ್ಷ ಟರ್ಮಿನಲ್ ಕಟ್ಟಡ ಉದ್ಘಾಟನೆಯ ಫೋಟೋಗಳನ್ನ ಶೇರ್‌ ಮಾಡಿ ಮೋದಿ ಹರ್ಷವನ್ನ ವ್ಯಕ್ತಪಡಿಸಿದ್ದಾರೆ. ಉತ್ಸಾಹಭರಿತ ನಗರದ ಜೊತೆಗೆ ವಾಸ್ತುಶಿಲ್ಪದಲ್ಲಿ ತನ್ನ ಜಾಣ್ಮೆಯನ್ನ ಇಲ್ಲಿ ತೋರಿಸಲಾಗಿದೆ. […]

ಹಿಜಬ್‌ ವಾಪಸ್‌- ಕಾನೂನು ಪರಿಶೀಲಿಸಿಯೇ ಕ್ರಮ

ಬೆಂಗಳೂರು: ಹಿಜಬ್‌ ವಿಚಾರದಲ್ಲಿ ಕಾನೂನು ಪರಿಶೀಲಿಸಿಯೇ ಕ್ರಮ ತಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ನಿಲುವನ್ನು ತಿಳಿಸಿದ್ದಾರೆ. ಹಾಗಾಗಿ ಎಲ್ಲರಿಗೂ ಈಗ ಗೊತ್ತಾಗಿದೆ. ಪ್ರತಿಯೊಬ್ಬ ಪ್ರಜೆಗೂ ತಾನು ಏನು ಸೇವಿಸಬೇಕು ತಾನು ಏನು ಧರಿಸಬೇಕು ಎನ್ನುವುದು ಅವರವರಿಗೆ ಬಿಟ್ಟಿದ್ದು. ಈ ಹಕ್ಕು ಸಂವಿಧಾನದಲ್ಲೇ ಇದೆ. ಇದು ಅವರ ಮೂಲಭೂತ ಹಕ್ಕು. ಹಾಗಾಗಿ ಮುಖ್ಯಮಂತ್ರಿಗಳು ಆ ಅರ್ಥದಲ್ಲಿ ಹೇಳಿದ್ದಾರೆ ಎಂದರು.  ಬಿಜೆಪಿಯವರು ಅದನ್ನೇ ಮೂಲವಾಗಿ ಇಟ್ಟುಕೊಂಡು ದೊಡ್ಡ […]

ಮದುವೆಯಾಗೋದಾಗಿ ಹೇಳಿ ಪ್ರಭು ಚೌಹಾಣ್ ಪುತ್ರನಿಂದ ವಂಚನೆ?

ಬೀದರ್: ಮಾಜಿ ಸಚಿವ ಪ್ರಭು ಚೌಹಾಣ್ 26 ಎಕರೆ ಜಮೀನನ್ನು ಖರೀದಿಸಿದ್ದು, ಹಣ ಕೇಳಿದರೆ ಸಂಬಂಧ ಬೆಳೆಸುವುದಾಗಿ ಹೇಳಿ ವಂಚನೆ ಮಾಡಿದ್ದಾರೆ ಎಂದು ಗಂಗಾಧರ್ ರಾಥೋಡ್ ಎಂಬವರು ಗಂಭೀರ ಆರೋಪ ಮಾಡಿದ್ದಾರೆ.ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಗಂಗಾಧರ್ ಕುಟುಂಬಸ್ಥರು, ಪುತ್ರ ಪ್ರತೀಕ್ ಜೊತೆ ಗಂಗಾಧರ್ ರಾಥೋಡ್ ಮಗಳನ್ನ ಮದುವೆ ( ಮಾಡಿಕೊಳ್ಳುವುದಾಗಿ ಹೇಳಿ ಚೌಹಾಣ್ ಆಸ್ತಿ ಪಡೆದುಕೊಂಡಿದ್ದಾರೆ. ಸಹೋದರ ಮಾರುತಿ ಹಾಗೂ ಪತ್ನಿ ಹೆಸರಲ್ಲಿ ಜಮೀನು ಖರೀದಿಸಿದ್ದಾರೆ ಎಂದು ಆರೋಪಿಸಿದ್ದಾರೆ.  ಏ.23 ರಂದು ಮಗಳ ಜೊತೆ ಚೌಹಾಣ್ ಮಗನ […]