ಮಸ್ಕ್ನ ಸ್ಪೇಸ್‌ಎಕ್ಸ್ ರಾಕೆಟ್‌ನಲ್ಲಿ ಶೀಘ್ರ ಇಸ್ರೋ ಉಪಗ್ರಹ ಉಡಾವಣೆ
ನವದೆಹಲಿ:ಭಾರತದ ಸಂಪರ್ಕ ಉಪಗ್ರಹ ಜಿಸ್ಯಾಟ್-20 ಉಪಗ್ರಹದ ಉಡಾವಣೆಗಾಗಿ ಮೊದಲ ಬಾರಿಗೆ ಸ್ಪೇಸ್ ಎಕ್ಸ್ ಸಂಸ್ಥೆಯ ಫಾಲ್ಕನ್ – ೯ ರಾಕೆಟ್ ಬಳಕೆ ಮಾಡಿಕೊಳ್ಳಲು ಇಸ್ರೋ ಒಪ್ಪಂದ ಮಾಡಿಕೊಂಡಿದೆ.ಸುಮಾರು 230ಕ್ಕೂ ಹೆಚ್ಚು ಉಪಗ್ರಹಗಳನ್ನು ಯಶಸ್ವಿಯಾಗಿ ಭೂ ಸ್ಥಿರ ಕಕ್ಷೆಗೆ ತಲುಪಿಸಿರುವ ಹೆಗ್ಗಳಿಕೆ ಫಾಲ್ಕನ್-9 ರಾಕೆಟ್‌ನದ್ದಾಗಿದೆ. ಸೂಕ್ತ ಸಮಯದಲ್ಲಿ ಬೇರೆ ರಾಕೆಟ್‌ಗಳು ಲಭ್ಯವಿಲ್ಲದೇ ಇರುವುದರಿಂದ ಸ್ಪೇಸ್ ಎಕ್ಸ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ರಾಕೆಟ್ ಭಾರತದ ಉಪಗ್ರಹವನ್ನು ಹೊತ್ತು ಫ್ಲೋರಿಡಾದಿಂದ ಉಡಾವಣೆಯಾಗುವ ಸಾಧ್ಯತೆಗಳಿವೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದ್ದಾರೆ. […]







































































































































































































































































































































































































































































































































































































































































































































































































































































































































































































































































































































