October 28, 2026
#ಬೆಂಗಳೂರು

ನಾವು ಭಾವನೆ ಮೇಲೆ ರಾಜಕಾರಣ ಮಾಡಲ್ಲ

ಬೆಂಗಳೂರು:
ಇಂದಿನಿAದ ಬೆಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದ್ದು, ಇಂದು ಕೆ.ಆರ್.ಪುರಂನ ಐಟಿಐ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಿದರು. ಶಾಸಕರಾದ ಭೈರತಿ ಬಸವರಾಜ್ ಹಾಗೂ ಮಂಜುಳಾ ಲಿಂಬಾವಳಿ, ಮಾಜಿ ಶಾಸಕರಾದ ನಾಗೇಶ್, ಪೂರ್ಣಿಮಾ, ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್, ವಿವಿಧ ಪ್ರಾಧಿಕಾರಿಗಳ ಅಧ್ಯಕ್ಷ ರಾಕೇಶ್ ಸಿಂಗ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ವೇಳೆ ಮಾತನಾಡಿದ ಡಿಸಿಎಂ ಡಿಕೆಶಿ, ಏನೇ ಸಮಸ್ಯೆ ಇದ್ರೂ ಹೇಳಿ. ನಾವು ಭಾವನೆ ಮೇಲೆ ರಾಜಕಾರಣ ಮಾಡಲ್ಲ ಎಂದಿದ್ದಾರೆ.
ನೀವು ನಮ್ಮನ್ನು ಭೇಟಿ ಮಾಡಲು ಬಹಳ ಕಷ್ಟ ಆಗುತ್ತೆ. ಶಾಸಕರಿಗೆ ಬಹಳಷ್ಟು ಒತ್ತಡ ಇರುತ್ತೆ. ಹೀಗಾಗಿ ಎಲ್ಲಾ ಅಧಿಕಾರಿಗಳನ್ನು ಕರೆದುಕೊಂಡು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ. ಇವತ್ತು ಸಾಯಂಕಾಲದವರೆಗೂ ನಾನು ಇಲ್ಲೇ ಇರ್ತಿನಿ. ನಿಮ್ಮ ಸಮಸ್ಯೆ ಕೇಳಿಯೇ ಹೋಗ್ತಿನಿ. ಮೊದಲು ಕೌಂಟರ್ ಗೆ ಹೋಗಿ ರಿಜಿಸ್ಟ್ರೇಷನ್ ಮಾಡಿಕೊಳ್ಳಿ. ನಿಮ್ಮ ಕ್ಷೇತ್ರದ ಶಾಸಕರಾದ ಬೈರತಿ ಬಸವರಾಜ್ ಹಾಗೂ ಮಂಜುಳಾ ಲಿಂಬಾವಳಿ ಸಾಕಷ್ಟು ಬೇಡಿಕೆ ಇಟ್ಟಿದ್ದಾರೆ. ನನಗೆ ರಾಜಕಾರಣ ಮುಖ್ಯ ಅಲ್ಲ. ನಿಮ್ಮ ಬದುಕಿನ ಮೇಲೆ ರಾಜಕಾರಣ ಮಾಡಲ್ಲ. ನಾನು ನಿಮ್ಮ ಕಷ್ಟ ಕೇಳಲು ಇಲ್ಲಿಗೆ ಬಂದಿದ್ದೇನೆ ಎಂದು ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟ ಬಳಿಕ ಡಿಕೆ ಶಿವಕುಮಾರ್ ಅವರು ಜನರನ್ನುದ್ಧೇಶಿಸಿ ವಿಶ್ವಾಸದ ನುಡಿಗಳನ್ನಾಡಿದ್ದಾರೆ.
ಗ್ಯಾರಂಟಿ ಸಮಸ್ಯೆ ಇದ್ದರೂ ತೆಗೆದುಕೊಂಡು ಬನ್ನಿ. ಬೆಂಗಳೂರು ನಗರದಲ್ಲಿ ನಾನೇ ೧೦ ಕಡೆ ಹೋಗಿ ಸಮಸ್ಯೆ ಆಲಿಸುತ್ತೇನೆ. ಮುಖ್ಯವಾಗಿ ಕುಡಿಯುವ ನೀರು, ಫ್ಲೈ ಓವರ್, ಕಾಮಗಾರಿ ನಿಲ್ಲಿಸಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಕಸ ದೊಡ್ಡ ಸಮಸ್ಯೆ ಆಗಿದೆ. ಕಸವನ್ನು ತುಂಬಿಕೊAಡು ಹೋದರೆ ಮತ್ತೆ ಸಮಸ್ಯೆ ಆಗುತ್ತೆ. ಕಸವನ್ನು ಸುಡುವ ಕೆಲಸ ಮಾಡಬೇಕಾಗಿದೆ. ಅದಕ್ಕೆ ಟೆಂಡರ್ ಕರೆಯುತ್ತಿದ್ದೇನೆ. ಕೆರೆ ಹೂಳು ತೆಗೆಯುವ ಬಗ್ಗೆ ಮಂಜುಳಾ ಲಿಂಬಾವಳಿ ಹೇಳಿದ್ರು. ಬೃಹತ್ ರಾಜ ಕಾಲುವೆಯ ಮಧ್ಯದಿಂದ ೫೦ ಮೀಟರ್ ಏನು ಕಟ್ಟುವಂತಿಲ್ಲ. ಬಫರ್ ಜೋನ್ ಬಿಟ್ಟು ಮನೆಗಳ ನಿರ್ಮಾಣವಾಗಬೇಕು. 30*40 ನಿವೇಶನದಲ್ಲಿ ಐದಾರು ಮಹಡಿ ಕಟ್ಟುತ್ತೀರ. ಆದರೆ ಟ್ಯಾಕ್ಸ್ ಸರಿಯಾಗಿ ಕಟ್ಟುತ್ತಿಲ್ಲ. ಹೆಚ್ಚಿನ ಟ್ಯಾಕ್ಸ್ ಕಟ್ಟಿಲ್ಲ ಅಂದರೆ ನಾವು ಅಭಿವೃದ್ಧಿ ಮಾಡೋಕೆ ಆಗಲ್ಲ. ಒಂದು ವರ್ಷದ ಒಳಗಡೆ ಉಚಿತವಾಗಿ ಖಾತೆ ಮಾಡಿ ಮನೆ ಬಾಗಿಲಿಗೆ ತಂದು ಕೊಡುತ್ತೇವೆ. ಅನೇಕ ಭಾಗ್ಯಗಳು ಜನರಿಗೆ ಸಿಕ್ಕಿದೆ. 1 ಕೋಟಿ ಜನರಿಗೆ ಗೃಹ ಲಕ್ಷ್ಮಿ ಯೋಜನೆ ತಲುಪಿದೆ ಎಂದರು.

Leave a comment

Your email address will not be published. Required fields are marked *