October 28, 2026
#ಜಿಲ್ಲೆ

ಮನೆಗೆ ಬರಲು ನಿರಾಕರಿಸಿದ ಪತ್ನಿ – ಮನನೊಂದು ಪತಿ ಆತ್ಮಹತ್ಯೆ

ಚಾಮರಾಜನಗರ: ಎಷ್ಟೇ ಕರೆದರೂ ತನ್ನ ಮನೆಗೆ ಬರಲು ಪತ್ನಿ ನಿರಾಕರಿಸಿದ್ದಕ್ಕೆ ಪತಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಹೊನ್ನಹಳ್ಳಿಯಲ್ಲಿ ನಡೆದಿದೆ.

https://imasdk.googleapis.com/js/core/bridge3.608.2_en.html#goog_923016441

ವಸಂತಕುಮಾರ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕಳೆದ 3 ವರ್ಷದ ಹಿಂದೆ ವಸಂತಕುಮಾರ್ ಬೆಂಗಳೂರಿನ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ ಕೆಲ ದಿನಗಳಿಂದ ಪತ್ನಿ ಗಂಡನ ಮನೆಗೆ ಬರಲು ನಿರಾಕರಿಸಿದ್ದಾಳೆ. 

ಪತ್ನಿ ಮನೆಗೆ ಬಾರದ ಕಾರಣ ಪತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಬಗ್ಗೆ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Leave a comment

Your email address will not be published. Required fields are marked *