ಅಭಿವೃದ್ಧಿ ವಿಚಾರವಾಗಿ ಬೆಂಗಳೂರಿಗೆ ಕನಕಪುರ ಸೇರಿಸೋದು ಸರಿ: ಪ್ರದೀಪ್ ಈಶ್ವರ್
ಚಿಕ್ಕಬಳ್ಳಾಪುರ: ಅಭಿವೃದ್ಧಿ ವಿಚಾರವಾಗಿ ಕನಕಪುರ ಬೆಂಗಳೂರಿಗೆ ಸೇರಿಸೋದು ಸರಿ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ ನೀಡಿದ್ದಾರೆ.
ಕನಕಪುರ ಬೆಂಗಳೂರಿಗೆ ಸೇರಿಸುವ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಸಂಬಂಧ ಚಿಕ್ಕಬಳ್ಳಾಪುರದಲ್ಲಿ ಪ್ರತಿಕ್ರಿಯಿಸಿದ ಶಾಸಕ ಪ್ರದೀಪ್ ಈಶ್ವರ್, ಅಭಿವೃದ್ಧಿ ವಿಚಾರವಾಗಿ ಕನಕಪುರ ಬೆಂಗಳೂರಿಗೆ ಸೇರಿಸೋದು ಸರಿ. ಡಿಸಿಎಂ ಡಿಕೆ ಶಿವಕುಮಾರ್ ಹೇಳಿರೋದು ಸರಿ ಇದೆ. ಉದ್ಯಮಿಗಳು ಧೈರ್ಯದಿಂದ ಬಂದು ಕನಕಪುರದಲ್ಲಿ ಬಂಡವಾಳ ಹೂಡುತ್ತಾರೆ. ಇದರಿಂದ ಕನಕಪುರ ಅಭಿವೃದ್ಧಿ ಆಗಲಿದೆ ಎಂದು ತಿಳಿಸಿದರು.
ಕನಕಪುರ ಬೇರೆ ಜಿಲ್ಲೆ ಅಂದಾಗ ಬಂಡವಾಳ ಹೂಡಿಕೆದಾರರು ಹಿಂಜರಿಯುತ್ತಾರೆ. ಬೆಂಗಳೂರು ಅಂದಾಗ ಜನರ ಮೈಂಡ್ ಸೆಟ್ ಬೇರೆ ಇರಲಿದೆ. ವಿಶಾಲವಾದ ದೃಷ್ಟಿಕೋನದಲ್ಲಿ ಡಿಕೆಶಿ ಇದನ್ನು ಹೇಳಿದ್ದಾರೆ. ಆದರೆ ವಿರೋಧ ಪಕ್ಷದವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರನ್ನು ಬೈಯೋದೇ ಅವರ ಕೆಲಸ ಎಂದು ಪ್ರದೀಪ್ ವಿರೋಧ ಪಕ್ಷದವರಿಗೆ ತಿರುಗೇಟು ನೀಡಿದರು.








































































































































































































































































































































































































































































































































































































































































































































































































































































































































































































































































































































