ಬೆಂಗಳೂರಿನ ಹಲವೆಡೆ ಇಂದು ಮದ್ಯ ನಿಷೇಧ
ಬೆಂಗಳೂರು: ದೇಶದೆಲ್ಲೆಡೆ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಏರಿಯಾ ಏರಿಯಾಗಳಲ್ಲಿ ಗಣೇಶ ಕೂರಿಸಿ ಅದ್ದೂರಿ ಪೂಜೆ ಮಾಡಿ, ಪ್ರಸಾದ ಹಂಚಿ ಡಿಜೆಗೆ ಡ್ಯಾನ್ಸ್ ಮಾಡಿ ಕುಣಿದು ಕುಪ್ಪಳಿಸಿದ್ದಾಗಿದೆ. ಸದ್ಯ ಪ್ರತಿಷ್ಟಾಪನೆ ಮಾಡಿದ್ದ ಗಣೇಶನಿಗೆ ಮೆರವಣಿಗೆ ಮೂಲಕ ವಿಸರ್ಜನೆ ಮಾಡುವ ಸಮಯ ಬಂದಿದೆ. ಇಂದು ಬೆಂಗಳೂರಿನ ಹಲವೆಡೆ ಗಣೇಶ ವಿಸರ್ಜನೆ ಮಾಡಲಾಗುತ್ತಿದೆ. ಈ ಹಿನ್ನೆಲೆ ಇಂದು ಮದ್ಯ ನಿಷೇಧ ಹೇರಲಾಗಿದೆ. ಬೆಂಗಳೂರಿನ ಕೇಂದ್ರ, ಉತ್ತರ, ಪೂರ್ವ ಮತ್ತು ಈಶಾನ್ಯ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧ ವಿಧಿಸಲಾಗಿದೆ. ಗಣೇಶ […]












































































































































































































































































































































































































































































































































































































































































































































































































































































































































































































































































































































