July 30, 2026

ನಾನು ಯಾವತ್ತೂ ಮಂಡ್ಯ ಬಿಡಲ್ಲ, ರಕ್ತದಲ್ಲಿ ಬರೆದು ಕೊಡಬೇಕಾ: ಸುಮಲತಾ ಪ್ರಶ್ನೆ

ಮಂಡ್ಯ: ನಾನು ಮಂಡ್ಯದ ಸೊಸೆ, ಯಾವತ್ತೂ ಮಂಡ್ಯವನ್ನು ಬಿಡುವುದಿಲ್ಲ. ರಾಜಕಾರಣ ಬಿಟ್ಟರೂ ಸ್ವಾಭಿಮಾನ ಹಾಗೂ ಸಿದ್ಧಾಂತವನ್ನು ಬಿಡುವುದಿಲ್ಲ. ಇದನ್ನೂ ರಕ್ತದಲ್ಲಿ ಬರೆದು ಕೊಡಬೇಕಾ? ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಕುಟುಂಬಕ್ಕೆ ಮಂಡ್ಯ ಜನರು ಸಾಕಷ್ಟು ಪ್ರೀತಿ ಕೊಟ್ಟು ಹರಸಿದ್ದಾರೆ. ಮಂಡ್ಯ ಬಿಟ್ಟು ನಾನು ಬೇರೆಲ್ಲೂ ಹೋಗುವುದಿಲ್ಲ. ಜೆಡಿಎಸ್ (JDS) ಬಿಜೆಪಿ ಮೈತ್ರಿ ಆಗಿದೆ. ಆದರೆ ಕ್ಷೇತ್ರ ಹಂಚಿಕೆ ಇನ್ನೂ ಆಗಿಲ್ಲ. ಈ ಬಗ್ಗೆ ಈಗ ಎದ್ದಿರುವ ಊಹಾಪೋಹಗಳಿಗೆ ನಾನು ಪ್ರತಿಕ್ರಿಯೆ […]

ನಿತ್ಯ 2 ಗಂಟೆ ಮಾತ್ರ ಪಟಾಕಿ ಸಿಡಿಸಲು ಅವಕಾಶ; ದೀಪಾವಳಿಗೆ ಟಫ್‌ ರೂಲ್ಸ್‌

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದೆ. ಪರಿಸರ ಮತ್ತು ಶಬ್ದಮಾಲಿನ್ಯ ತಡೆಗಟ್ಟುವ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ರಾಜ್ಯದಲ್ಲಿ ದೀಪಾವಳಿ ಹಬ್ಬವನ್ನು ನ.11 ರಿಂದ 15 ರ ವರೆಗೆ ಆಚರಿಸಲಿದ್ದು, ಸುಪ್ರೀಂ ಕೋರ್ಟ್‌ ಆದೇಶವನ್ನು ಯಥಾಸ್ಥಿತಿ ಪಾಲನೆ ಮಾಡಲು ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿದೆ.  ನಿಯಮಗಳೇನು?ಪಟಾಕಿಯನ್ನು ರಾತ್ರಿ 8 ರಿಂದ 10 ಗಂಟೆ ವರೆಗೆ ಮಾತ್ರ ಹೊಡೆಯಲು ಅವಕಾಶ ಇರಲಿದೆ. ಅಧಿಕಾರಿಗಳು ಪರಿಶೀಲನೆ ವೇಳೆ ಹಸಿರು ಪಟಾಕಿ ಹೊರತುಪಡಿಸಿ ಬೇರೆ ಪಟಾಕಿ ಮಾರುತ್ತಿದ್ದರೆ […]

ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ್ ಅರೆಸ್ಟ್

ಸದಾ ತುಂಡುಡುಗೆ ಹಾಕಿಕೊಂಡು ಓಡಾಡುವ ಬಿಗ್ ಬಾಸ್ ಮಾಜಿ ಸ್ಪರ್ಧಿ ಉರ್ಫಿ ಜಾವೇದ್ ಅರೆಸ್ಟ್ ಆಗಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಕಾಫಿ ಕುಡಿಯಲೆಂದು ಹೋಟೆಲ್ ಗೆ ಬಂದಿದ್ದ ಉರ್ಫಿಯನ್ನು ಮಹಿಳಾ ಪೊಲೀಸ್ ಪೇದೆಗಳು ಕರೆದುಕೊಂಡು ಹೋಗಿ ಪೊಲೀಸ್ ವ್ಯಾನ್ ನಲ್ಲಿ ಕೂರಿಸುವ ವಿಡಿಯೋ ಅದಾಗಿದ್ದು, ಪೊಲೀಸರು ಉರ್ಫಿಯನ್ನು ಅರೆಸ್ಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ರೆಸ್ಟೋರೆಂಟ್ ಮುಂದೆಯೇ ಮಹಿಳಾ ಪೊಲೀಸರಿಗೆ ಉರ್ಫಿ ಪ್ರಶ್ನೆ ಮಾಡುತ್ತಾರೆ. ಯಾಕಾಗಿ ನನ್ನನ್ನು ಅರೆಸ್ಟ್ (Arrest) ಮಾಡುತ್ತಿದ್ದೀರಿ ಎಂದು ಕೇಳುತ್ತಾರೆ. ಅರೆಬರೆ ಬಟ್ಟೆ […]

ಜಲ್‍ಜೀವನ್ ಮಿಷನ್ ಹಗರಣ- ರಾಜಸ್ಥಾನದ 25 ಕಡೆಗಳಲ್ಲಿ ಇಡಿ ದಾಳಿ

ಜೈಪುರ: ಇಂದು ಬೆಳ್ಳಂಬೆಳಗ್ಗೆ ರಾಜಸ್ಥಾನದ 25 ಕಡೆಗಳಲ್ಲಿ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜಲ್ ಜೀವನ್ ಮಿಷನ್ ಹಗರಣಕ್ಕೆ (Jal Jeevan Mission Scam) ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಇಡಿ ಅಧಿಕಾರಿಗಳು ಚುನಾವಣೆಗೆ ಒಳಪಟ್ಟಿರುವ ಹಿರಿಯ ಐಎಎಸ್ ಅಧಿಕಾರಿಯೊಬ್ಬರ ಮನೆ ಮೇಲೆ ದಾಳಿ ನಡೆಸಿವೆ. ಮನಿ ಲಾಂಡರಿಂಗ್ ತಡೆ ಕಾಯ್ದೆಯ (PMLA) ನಿಬಂಧನೆಗಳ ಅಡಿಯಲ್ಲಿ ಇತರ ಕೆಲವು ಸಂಪರ್ಕಿತ ವ್ಯಕ್ತಿಗಳನ್ನು ಒಳಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಪ್ರಕರಣದಲ್ಲಿ ತನಿಖಾ ಸಂಸ್ಥೆ […]

ಕರಾಳ ದಿನ ಆಚರಿಸಿದ MES ಪುಂಡರಿಗೆ ಬಿಸಿ ಮುಟ್ಟಿಸಿದ ಪೊಲೀಸರು 

ಬೆಳಗಾವಿ: ಜಿಲ್ಲೆಯ ಮಹಾರಾಷ್ಟ್ರ ಗಡಿ ಭಾಗದಲ್ಲಿ MES ಪುಂಡರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಕನ್ನಡ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಕರಾಳ ದಿನಾಚರಣೆ ಮಾಡಿದ 18 ಮಂದಿ ಎಂಇಎಸ್ ಪುಂಡರ ವಿರುದ್ಧ ಕೇಸ್ ದಾಖಲಾಗಿದೆ. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ (Market Police Station) ಎಂಇಎಸ್ ಕಿಡಿಗೇಡಿಗಳ ವಿರುದ್ಧ FIR ದಾಖಲಾಗಿದೆ. ಕನ್ನಡ ರಾಜ್ಯೋತ್ಸವ ದಿನದಂದು ಕರಾಳ ದಿನ ಆಚರಿಸಿ ನಾಡದ್ರೋಹ ಘೋಷಣೆ ಕೂಗಿದ್ದ 18 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.  ಜಿಲ್ಲಾಡಳಿತದಿಂದ ಎಂಇಎಸ್ ಕರಾಳ ದಿನಾಚರಣೆಗೆ ಅನುಮತಿ ನಿರಾಕರಿಸಲಾಗಿತ್ತು‌. ಅನುಮತಿ […]

5 ವರ್ಷ ಸಿಎಂ ಆಗಿ ಮುಂದುವರಿಯೋ ವಿಚಾರ ಗೊತ್ತಿರೋದು ಸಿದ್ದರಾಮಯ್ಯ, ಡಿಸಿಎಂಗೆ ಮಾತ್ರ: ಪರಂ

ಬೆಂಗಳೂರು: 5 ವರ್ಷ ಸಿಎಂ ಆಗಿ ಮುಂದುವರಿಯುವ ವಿಚಾರ ಗೊತ್ತಿರುವುದು ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ಗೆ ಮಾತ್ರ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ. ಸಿಎಂ ಆಗಿ ನಾನೇ 5 ವರ್ಷ ಮುಂದುವೆಯುತ್ತೇಂಬ ಸಿದ್ದರಾಮಯ್ಯ ಹೇಳಿಕೆ ವಿಚಾರದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ನಮಗೆ ಯಾರಿಗೂ ಗೊತ್ತಿಲ್ಲ ದೆಹಲಿಯಲ್ಲಿ ಸರ್ಕಾರ ರಚನೆ ಯಾದಾಗ ಏನೂ ತೀರ್ಮಾನ ಮಾಡಿದ್ದಾರೆ ಗೊತ್ತಿಲ್ಲ. ಅದು ಗೊತ್ತಿರೋದು ಸಿಎಂ ಹಾಗೂ ಡಿಸಿಎಂಗೆ ಮಾತ್ರ. ಅವರಿಗೆ ಮಾತ್ರ ಎಲ್ಲ ಗೊತ್ತಿರೋದು. ಆ ವಿಚಾರದಲ್ಲಿ ನಾವು […]

ಹೈಕಮಾಂಡ್ ನೀನು ಸಿಎಂ ಆಗು ಅಂದ್ರೆ ನಾನು ಸಿದ್ಧ: ಪ್ರಿಯಾಂಕ್ ಖರ್ಗೆ

ಮೈಸೂರು: ಹೈಕಮಾಂಡ್ ಯಾರು ಸಿಎಂ ಆಗಬೇಕು ಅಥವಾ ಮುಂದುವರಿಯಬೇಕು ಎಂಬುದನ್ನು ನಿರ್ಧರಿಸುತ್ತದೆ. ಒಂದು ವೇಳೆ ಹೈಕಮಾಂಡ್ ನೀನು ಸಿಎಂ ಆಗು ಅಂದರೆ ನಾನು ಸಿದ್ಧನಿದ್ದೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ನಾಲ್ಕು ಜನ ಕುಳಿತು ಮಾತನಾಡಿದ್ದಾರೆ. ಅವರಿಗೆ ಮಾತ್ರ ಈ ವಿಚಾರದ ಬಗ್ಗೆ ಸ್ಪಷ್ಟತೆ ಇದೆ. ಸಿಎಂ ಅವರದ್ದು ವೈಯಕ್ತಿಕ ಅಭಿಪ್ರಾಯ. ಜಿಲ್ಲಾ ಪಂಚಾಯತ್ ಸದಸ್ಯರಿಂದ ಹಿಡಿದು ಶಾಸಕರವರೆಗೆ ಎಲ್ಲರಿಗೂ ತಮ್ಮ ಅಭಿಪ್ರಾಯ ಹೇಳಲು ಸ್ವಾತಂತ್ರವಿದೆ. ಇದರಲ್ಲಿ ತಪ್ಪು ಏನು ಇಲ್ಲ. […]

ಮೂರ್ನಾಲ್ಕು ದಿನದಲ್ಲಿ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಸಿದ್ಧ: ಡಿಸಿಎಂ

ಹುಬ್ಬಳ್ಳಿ: ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಸಿದ್ಧವಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಕ ಮಾಡಲಾಗಿತ್ತು. 75% ಕ್ಷೇತ್ರಕ್ಕೆ ಹೋಗಿ ಕಾರ್ಯಕರ್ತರನ್ನು ಭೇಟಿ ಆಗಿ ಬಂದಿದ್ದಾರೆ. ಅವರೆಲ್ಲರೂ ಈಗಾಗಲೇ ಅಭ್ಯರ್ಥಿಗಳ ವರದಿ ತಯಾರಿ ಮಾಡಿಕೊಂಡಿದ್ದಾರೆ. ವೀಕ್ಷಕರು ಇನ್ನೂ ಅಭ್ಯರ್ಥಿಗಳ ವರದಿ ಕೊಟ್ಟಿಲ್ಲ, ಈ ಬಗ್ಗೆ ನಮ್ಮ ವರಿಷ್ಠರು ಸಹ ಕೆಲವು ಸಲಹೆ ನೀಡಿದ್ದಾರೆ ಎಂದಿದ್ದಾರೆ. ಕರ್ನಾಟಕಕ್ಕೆ 50ನೇ ವರ್ಷ, […]

ಗಂಡನಿಗೆ ಹೆಂಡ್ತಿ ಮೇಲೆ ಸಂಶಯ, ಮಾವನಿಗೆ ಸೊಸೆ ಮೇಲೆ ಅನುಮಾನ- ಸಿಕ್ಕ ಫಲಿತಾಂಶ ಆತ್ಮಹತ್ಯೆ

ಬೆಂಗಳೂರು: ಕುಟುಂಬದಲ್ಲಿ ಹಣಕಾಸಿಗೇನು ಕೊರತೆ ಇರಲಿಲ್ಲ. ಕೋಟಿ ಕೋಟಿಯಷ್ಟು ಹಣ ಇದ್ರೂ ಹಣದ ದಾಹ ತೀರಲಿಲ್ಲ. ಹಣದ ದಾಹದ ಜೊತೆಗೆ ಗಂಡನಿಗೆ ಹೆಂಡತಿ ಮೇಲೆ ಸಂಶಯ. ಮಾವನಿಗೆ ಸೊಸೆ ಮೇಲೆ ಅನುಮಾನ. ಕೊನೆಗೆ ಸಿಕ್ಕ ಫಲಿತಾಂಶ ಆತ್ಮಹತ್ಯೆ. ಅಮೇರಿಕಾದಲ್ಲಿ ಚೆನ್ನಾಗಿ ಓದಿ ಉನ್ನತ ವ್ಯಾಸಂಗ ಮಾಡಿದ್ದ ಐಶ್ವರ್ಯ ಚಂದ್ರಲೇಔಟ್ ನ ನಿವಾಸಿ ಸುಬ್ರಹ್ಮಣಿಯವರ ಏಕೈಕ ಪುತ್ರಿ. ಸುಬ್ರಹ್ಮಣಿಯೂ ಆಸ್ತಿ ಅಂತಸ್ತಿನಲ್ಲಿ ಸ್ವಲ್ಪ ಚೆನ್ನಾಗಿಯೇ ಇದ್ದರು. ತನ್ನ ಮಗಳನ್ನ ತನಗಿಂತ ಸಿರಿವಂತನಿಗೆ ಕೊಟ್ಟು ಮದುವೆ ಮಾಡಬೇಕು ಅನ್ನೋ ಆಸೆ ಇತ್ತು. […]

ಪಬ್‌ನಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ಹಲ್ಲೆ

ಬೆಂಗಳೂರು: ಪಬ್‌ವೊಂದರಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಆರ್‌ಆರ್ ನಗರದ ಐಡಿಯಲ್ ಹೋಮ್ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಐಡಿಯಲ್ ಹೋಮ್ ಬಳಿಯ ಪಬ್‌ನಲ್ಲಿ ಅಕ್ಟೋಬರ್ 25ರಂದು ಘಟನೆ ನಡೆದಿದ್ದು, ಪಬ್‌ನಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಶ್ರೇಯಸ್ ಹಾಗೂ ಆತನ ಸ್ನೇಹಿತರು ರಾತ್ರಿ 10:45ರ ಸುಮಾರಿಗೆ ಪಬ್‌ಗೆ ಬಂದಿದ್ದರು. ಈ ವೇಳೆ ಪಬ್‌ನಲ್ಲಿ ಕನ್ನಡ ಹಾಡು ಹಾಕಲಾಗಿತ್ತು. […]