July 30, 2026

ಬೆಸ್ಕಾಂ ಬಿಲ್ ಹೆಸರಲ್ಲಿ ಸೈಬರ್ ಹ್ಯಾಕ್ 

ಬೆಂಗಳೂರು: ವಿದ್ಯುತ್ ಬಿಲ್ ಹೆಸರಲ್ಲಿ ಜನರನ್ನು ವಂಚಿಸಿರುವ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ವಿದ್ಯುತ್ ಬಿಲ್ ಬಾಕಿ ಇದ್ದರೆ ಕರೆಂಟ್ ಡಿಸ್ಕನೆಕ್ಟ್ ಮಾಡ್ತೀವಿ ಎಂದು ಹೆದರಿಸಿ ಹಣ ದೋಚುವ ಜಾಲವೊಂದು ಬೀಡುಬಿಟ್ಟಿದೆ. ಆಧುನಿಕತೆ ಬೆಳದಂತೆ ವಂಚನೆ ಜಾಲ ಹೆಚ್ಚಾಗುತ್ತಿದೆ. ಓಟಿಪಿ ಹ್ಯಾಕ್, ಆಧಾರ್ ಹ್ಯಾಕ್, ಲೋನ್ ಆಪ್ ಹ್ಯಾಕ್ ಮಾಡಿ ಹಣ ದೋಚುವ ಪ್ರಕರಣ, ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಿ ಹಣ ದೋಚುವ ಪ್ರಕರಣ ಹೆಚ್ಚಾಗುತ್ತಿದೆ. ಇದರ ಮಧ್ಯೆ ಈಗ ಕೆಇಬಿ ಹೆಸರಲ್ಲಿ ಹಣ ದೋಚುವ ಜಾಲ ಬೀಡು […]

ಬೆಂಗಳೂರಿನಲ್ಲಿ ಆಪರೇಷನ್ ಶಾಪಿಂಗ್ ಹಬ್

ಬೆಂಗಳೂರು: ಕಳೆದ ಒಂದು ವಾರದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿನ ಬೀದಿಬದಿ ವ್ಯಾಪಾರ ತೆರವು ಕಾರ್ಯಾಚರಣೆ ಮುಂದುವರೆದಿದೆ. ಈ ಬಿಸಿ ಈಗ ಮಲ್ಲೇಶ್ವರಂ ಮಾರ್ಕೆಟ್‌ಗೂ ತಟ್ಟಿದ್ದು, ಬೀದಿಬದಿ ವ್ಯಾಪಾರಿಗಳ ಗೋಳು ಹೇಳತೀರದಂತಿದೆ. ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಬಿಬಿಎಂಪಿ ಅಧಿಕಾರಿಗಳಿಂದ ನಡೆಯುತ್ತಿರುವ ಬೀದಿಬದಿ ವ್ಯಾಪಾರ ತೆರವು ಕಾರ್ಯಾಚರಣೆ ಮಲ್ಲೇಶ್ವರಂ ಮಾರ್ಕೆಟ್‌ಗೂ ಕಾಲಿಟ್ಟಿದೆ. ಮಲ್ಲೇಶ್ವರಂ 8ನೇ ಕ್ರಾಸ್‌ನಲ್ಲಿ ನೂರಾರು ಸಂಖ್ಯೆಯ ಬೀದಿಬದಿ ವ್ಯಾಪಾರಿಗಳನ್ನು ವ್ಯಾಪಾರ ಮಾಡದಂತೆ ಅಂಗಡಿಗಳನ್ನು ಎತ್ತಿಸಲಾಗಿದ್ದು, ವ್ಯಾಪಾರಿಗಳು ಸರ್ಕಾರ ಮತ್ತು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ನಗರದ ಬೇರೆ […]

ನಮ್ಮ ಕ್ಷೇತ್ರದ 126 ಕೋಟಿ ರೂ. ಅನುದಾನ ಇನ್ನೂ ಹಿಂತಿರುಗಿಸಿಲ್ಲ: ಮುನಿರತ್ನ

ಬೆಂಗಳೂರು: ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸುಮಾರು 126 ಕೋಟಿ ರೂ. ಅನುದಾನವನ್ನು ನಮ್ಮ ಸರ್ಕಾರ ಮಂಜೂರಾತಿ ಮಾಡಿ ಆದೇಶ ಹೊರಡಿಸಿದ್ದ ಕಾಮಗಾರಿಗಳನ್ನು ರದ್ದುಪಡಿಸಿ, 126 ಕೋಟಿ ಹಣವನ್ನು ಬೇರೆ ಕ್ಷೇತ್ರಕ್ಕೆ ವರ್ಗಾವಣೆ ಮಾಡಿದ್ದಾರೆ. ಸತ್ಯಾಗ್ರಹ ಮಾಡಿ ಮನವಿ ಮಾಡಿದರೂ ಸಹ ಈವರೆಗೆ ಕ್ಷೇತ್ರದ 126 ಕೋಟಿ ಅನುದಾನ ನನಗೆ ಹಿಂತಿರುಗಿಸಿಲ್ಲ ಎಂದು ಶಾಸಕ ಮುನಿರತ್ನ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ನನ್ನ ಬಳಿ ಅನುದಾನ ಹಿಂತಿರುಗಿಸಿದ್ದಾರ ಎಂದು ಕೇಳಿದ ಸಂದರ್ಭ ನಾನು ಇಲ್ಲ ಎಂದು […]

ಗ್ರಾಹಕರಿಗೆ ರಶೀದಿ ನೀಡದೆ 1.62 ಕೋಟಿ ರೂ. ವಂಚನೆ – ಬ್ಯಾಂಕ್ ಮ್ಯಾನೇಜರ್ ಅರೆಸ್ಟ್

ಹಾವೇರಿ: ಬ್ಯಾಂಕ್‍ನ ಗ್ರಾಹಕರ ಎಫ್‍ಡಿ ಹಣ , ಚಿನ್ನದ ಲೋನ್‍ನ ಹಣ ಸೇರಿದಂತೆ ಗ್ರಾಹಕರ ಖಾತೆಗೆ ಹಾಕಿದ್ದ ಹಣವನ್ನು ವಂಚನೆ ಮಾಡಿರುವ ಕುರುಬಗೊಂಡು ಗ್ರಾಮದ ಯೂನಿಯನ್ ಬ್ಯಾಂಕ್‍ನ ಹಳೆಯ ಮ್ಯಾನೇಜರ್‌ನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಅರ್ಚನಾ ಬೇಟಗೇರಿ ಎಂದು ಗುರುತಿಸಲಾಗಿದೆ. ಬ್ಯಾಂಕ್‍ನಲ್ಲಿ ಗ್ರಾಹಕರ ಎಫ್‍ಡಿ ಹಣ, ಚಿನ್ನದ ಲೋನ್ ಹಣ ಹಾಗೂ ಖಾತೆಗೆ ಜಮೆ ಮಾಡಿದ ಹಣಕ್ಕೆ ರಶೀದಿ ಹಾಗೂ ಎಫ್‍ಡಿಗೆ ಬಾಂಡ್ ನೀಡದೆ ವಂಚಿಸಲಾಗಿದೆ ಎಂದು ತಿಳಿದು ಬಂದಿದೆ. ಗ್ರಾಹಕರ ಸುಮಾರು 1.62 […]

ಮುರುಘಾ ಶ್ರೀಗಳಿಗೆ ಹೈಕೋರ್ಟ್​​ನಿಂದ ಜಾಮೀನು, ಮುಂದೇನು?

ಬೆಂಗಳೂರು, ನವೆಂಬರ್ 8: ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರಿಗೆ ಕರ್ನಾಟಕ ಹೈಕೋರ್ಟ್ ಬುಧವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಶ್ರೀಗಳಿಗೆ ಏಳು ಷರತ್ತುಗಳನ್ನು ಹೈಕೋರ್ಟ್ ವಿಧಿಸಿದೆ. ಅದರಂತೆ, ಚಿತ್ರದುರ್ಗ ಮುರುಘಾ ಮಠಕ್ಕೆ ಶ್ರೀಗಳು ಪ್ರವೇಶಿಸುವಂತಿಲ್ಲ. ಪಾಸ್‌ಪೋರ್ಟ್ ಅನ್ನು ಕೋರ್ಟ್ ವಶಕ್ಕೆ ನೀಡಬೇಕು. ಇಬ್ಬರ ಶ್ಯೂರಿಟಿಗಳನ್ನು ಒದಗಿಸಬೇಕು ಎಂದು ಹೈಕೋರ್ಟ್​ ಸೂಚಿಸಿದೆ. ಇಷ್ಟೇ ಅಲ್ಲದೆ, ಕೋರ್ಟ್‌ ವಿಚಾರಣೆಗೆ‌ ವಿಡಿಯೋ ಕಾನ್ಫರೆನ್ಸ್ ಮೂಲಕ‌ ಹಾಜರಾಗಬೇಕು. ಇಂತಹ ಕೃತ್ಯಗಳನ್ನು ಪುನರಾವರ್ತನೆ ಮಾಡುವಂತಿಲ್ಲ ಎಂದು […]

ಬಿಜೆಪಿಯವ್ರು ಪಕ್ಷಕ್ಕೆ ಬರುವಾಗ ಜಾಮೂನು ಕೊಡ್ತಾರೆ, ಅಧಿಕಾರ ಮುಗಿದಾಗ ವಿಷ ಕೊಡ್ತಾರೆ

ಮೈಸೂರು: ಬಿಜೆಪಿಯವರು ಪಕ್ಷಕ್ಕೆ ಬರುವಾಗ ಜಾಮೂನು ಕೊಡುತ್ತಾರೆ. ಅಧಿಕಾರ ಮುಗಿದ ಮೇಲೆ ವಿಷ ಕೊಡುತ್ತಾರೆ ಎಂದು ಸ್ವಪಕ್ಷದ ವಿರುದ್ಧವೇ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಕಿಡಿಕಾರಿದರು. ನಗರದಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್‌ನಲ್ಲಿದ್ದವನು. ಅವರಾಗೆ ಪಕ್ಷಕ್ಕೆ ಸೇರಿಸಿಕೊಂಡರು. ಈಗ ಎಸ್.ಟಿ.ಸೋಮಶೇಖರ್ ಹೋದರೆ ಹೋಗಲಿ ಎಂದು ಮಾತನಾಡುತ್ತಿದ್ದಾರೆ. ನನ್ನನ್ನ ಪಕ್ಷ ಬಿಡಿಸಲು ರೆಡಿಯಾಗಿದ್ದಾರೆ. ನಾನು ಕ್ಷೇತ್ರದ ಅನುಕೂಲಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಸಿಎಂ, ಡಿಸಿಎಂ ಹತ್ತಿರ ಹೋಗುತ್ತೇನೆ. ಇದರಲ್ಲಿ ತಪ್ಪೇನಿದೆ? ಜೊತೆಗೆ ನಾನು ಸಿಎಂ, ಡಿಸಿಎಂ ಹೊಗಳುವುದನ್ನು ಸಹಿಸುತ್ತಿಲ್ಲ. […]

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಆರ್.ಡಿ ಪಾಟೀಲ್

ಕಲಬುರಗಿ: ಕೆಇಎ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್‍ಪಿನ್ ಆರ್.ಡಿ ಪಾಟೀಲ್ ನಗರದಲ್ಲೇ ಅಡಗಿಕೊಂಡು ಮೊಬೈಲ್‍ನ್ನು ಬೇರೊಬ್ಬರ ಬಳಿ ಕೊಟ್ಟು ಉತ್ತರ ಪ್ರದೇಶಕ್ಕೆ ಕಳಿಸಿದ ವಿಚಾರ ಬೆಳಕಿಗೆ ಬಂದಿದೆ. ಆರೋಪಿ ಕಲಬುರಗಿಯಲ್ಲೇ ಇರುವ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಎಚ್ಚೆತ್ತಿದ್ದಾರೆ. ಕೂಡಲೇ ಆತನನ್ನು ಬಂಧಿಸಲು ತೆರಳಿದ್ದಾರೆ. ಈ ವೇಳೆಗಾಗಲೇ ಆರೋಪಿ ತಪ್ಪಿಸಿಕೊಂಡಿದ್ದು ಮಹಾರಾಷ್ಟ್ರಕ್ಕೆ ಪರಾರಿಯಾಗಿದ್ದಾನೆ. ಮಹಾರಾಷ್ಟ್ರಕ್ಕೆ ಕರೆದುಕೊಂಡು ಬಿಟ್ಟ ಇಬ್ಬರು ಬಲಗೈ ಬಂಟರನ್ನು ಕಲಬುರಗಿಯ ವಿಶ್ವವಿದ್ಯಾಲಯ ಪೊಲೀಸರು ಈಗ ವಶಕ್ಕೆ ಪಡೆದಿದ್ದಾರೆ.  ಆರೋಪಿ ರವಿ ಊಕುಲಿ ಹಾಗೂ […]

ಬೆಂಗಳೂರು ಕುಡಿಯುವ ನೀರಿಗೆ ಕಾವೇರಿಯಿಂದ 24 ಟಿಎಂಸಿ ಬಳಕೆ: ಡಿಕೆಶಿ

ನವದೆಹಲಿ: ಬೆಂಗಳೂರಿನಲ್ಲಿ   ಕುಡಿಯುವ ನೀರಿಗಾಗಿ ಕಾವೇರಿ ಜಲಾನಯನ ಪ್ರದೇಶಗಳಿಂದ 24 ಟಿಎಂಸಿ ನೀರು ಮೀಸಲಿಡಲು ಸರ್ಕಾರ ಆದೇಶಿಸಿದ್ದು, ಈ ನೀರಿನ ಬಳಕೆಗೆ ಬೆಂಗಳೂರು ಜಲ ಮಂಡಳಿಗೆ ಅಧಿಕಾರ ನೀಡಿದೆ ಎಂದು ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿಗೆ ಕುಡಿಯುವ ನೀರಿಗಾಗಿ 24 ಟಿಎಂಸಿ ನೀರು ಬಳಕೆಗೆ ಸುಪ್ರೀಂ ಕೋರ್ಟ್ (Supreme Court) ಆದೇಶಿಸಿದೆ. ಈ ನೀರಿನ ಬಳಕೆಗೆ ಸರ್ಕಾರ ಈಗ ಆದೇಶಿಸಿದೆ. ಇನ್ಮುಂದೆ ಕಡ್ಡಾಯವಾಗಿ […]

ರಶ್ಮಿಕಾ ನಂತರ ಕತ್ರಿನಾಗೆ ಡೀಪ್ ಫೇಕ್ ಕಾಟ

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವಿಡಿಯೋ ಸಂಚಲನವನ್ನೇ ಸೃಷ್ಟಿ ಮಾಡಿತ್ತು. ರಶ್ಮಿಕಾ ಪರ ಅನೇಕರು ಮಾತನಾಡಿದ್ದರು. ದುರುಳರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಕೇಂದ್ರ ಸರಕಾರ ಕೂಡ ಇದನ್ನು ಗಂಭೀರವಾಗಿ ತೆಗೆದುಕೊಂಡು, ಡೀಪ್ ಫೇಕ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುವುದಾಗಿ ಹೇಳಿತ್ತು. ಆದರೂ, ಡೀಪ್ ಫೇಕ್ ಕಾಟ ಮುಂದುವರೆದಿದೆ. ಬಾಲಿವುಡ್ (Bollywood) ನಟಿ ಕತ್ರಿನಾ ಕೈಫ್‍  (Katrina Kaif) ಫೋಟೋ ಕೂಡ ಡೀಪ್ ಫೇಕ್ ಮಾಡಲಾಗಿದೆ. ಡೀಪ್‌ನೆಕ್ ಬ್ಲಾಕ್ ಡ್ರೆಸ್‌ನಲ್ಲಿದ್ದ ಯುವತಿಯೊಬ್ಬರ ವಿಡಿಯೋವನ್ನು […]

ಜೆಡಿಎಸ್‌ನಲ್ಲಿ ಮುಂದುವರಿದ ಶಾಸಕ ಶರಣಗೌಡ ಕಂದಕೂರು ಅಸಮಾಧಾನ – ಸಭೆಗೆ ಹಾಜರಾಗದೇ ವರಿಷ್ಠರಿಗೆ ಸೆಡ್ಡು

ಯಾದಗಿರಿ: ಇಂದು (ಬುಧವಾರ) ಹಾಸನದಲ್ಲಿ ಜೆಡಿಎಸ್ ಶಾಸಕರ ಮಹತ್ವದ ಸಭೆ ನಡೆಯುತ್ತಿದ್ದರೂ ಸಭೆಗೆ ಯಾದಗಿರಿಯ ಗುರುಮಿಟ್ಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಗೈರಾಗುವ ಮೂಲಕ ತಮ್ಮ ಹೈಕಮಾಂಡ್‌ಗೆ ಶಾಕ್ ನೀಡಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‌ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿನ ಮೈತ್ರಿ ಕುರಿತು ಮಹತ್ವ ಪಡೆದುಕೊಂಡಿದೆ. ಆದರೆ ಬಿಜೆಪಿ-ಜೆಡಿಎಸ್ ಮೈತ್ರಿಗೆ ವಿರೋಧಿಸಿದ್ದ ಶಾಸಕ ಶರಣಗೌಡ ಕಂದಕೂರು ಮೊದಲಿನಿಂದಲೂ ಪಕ್ಷದ ಜೊತೆ ಅಂತರ ಕಾಯ್ದುಕೊಂಡಿದ್ದಾರೆ.  ಜೆಡಿಎಸ್ ಪಕ್ಷದೊಂದಿಗೆ ಅಂತರ ಕಾಯ್ದಕೊಳ್ಳುತ್ತಿರುವ ಶಾಸಕ ಶರಣಗೌಡ ಕಂದಕೂರು […]