July 30, 2026

ಜಾತಿಗಣತಿ ವರದಿ ಬಂದ ಬಳಿಕ‌ವೇ ಅನುಷ್ಠಾನಕ್ಕೆ ತೀರ್ಮಾನ 

ಬೆಂಗಳೂರು: ಜಾತಿಗಣತಿ ವರದಿ ಬಂದ ಬಳಿಕ ಜಾರಿ ಮಾಡಬೇಕಾ? ಬೇಡವಾ ಅಂತ ಸಿಎಂ ಸಿದ್ದರಾಮಯ್ಯ ತೀರ್ಮಾನ ಮಾಡ್ತಾರೆ ಅಂತ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟಪಡಿಸಿದ್ದಾರೆ. ಜಾತಿಗಣತಿ ವರದಿ ಜಾರಿ ವಿಚಾರ‌ವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗಾಗಲೇ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರ ಅಧಿಕಾರ ಜನವರಿವರೆಗೆ ವಿಸ್ತರಣೆ ಮಾಡಲಾಗಿದೆ. ಅವರು ಮೊದಲು ಜಾತಿಗಣತಿ ವರದಿ ಕೊಡಲಿ ಆಮೇಲೆ ಬಿಡುಗಡೆ ಮಾಡಬೇಕಾ, ಬೇಡ್ವಾ? ಅನ್ನೋದನ್ನ ಚರ್ಚೆ ಮಾಡ್ತೀವಿ. ನಾನು, ‌ಸಿಎಂ ಯಾರು ಕೂಡಾ ವರದಿ ನೋಡಿಲ್ಲ. […]

ಮತಗಟ್ಟೆಯಲ್ಲಿ ಕೈ, ಬಿಜೆಪಿ, ಬಿಆರ್‌ಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ

ಹೈದರಾಬಾದ್: ತೆಲಂಗಾಣದಲ್ಲಿ 119 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ಈ ನಡುವೆ ಮತಗಟ್ಟೆಯೊಂದರಲ್ಲಿ ಮೂರು ಪಕ್ಷದ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಜನಗಾಂವ್‍ನ ಮತಗಟ್ಟೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಬಿಆರ್ ಎಸ್ ಕಾರ್ಯಕರ್ತರ  ನಡುವೆ ಮಾರಾಮಾರಿ ನಡೆದಿದೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ನಡೆಯುತ್ತಿದ್ದಂತೆಯೇ ಮತಗಟ್ಟೆಯಲ್ಲಿದ್ದ ಪೊಲೀಸರು ಕೂಡಲೇ ಮಧ್ಯಪ್ರವೇಶ ಮಾಡಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ವೀಡಿಯೊದಲ್ಲಿ, ರಾಜಕೀಯ ಪಕ್ಷಗಳ ಕಾರ್ಯಕರ್ತರು ಜನಾಂವ್‍ನ ಮತಗಟ್ಟೆಯ ಹೊರಗೆ ಪರಸ್ಪರ ತಳ್ಳಿಕೊಳ್ಳುತ್ತಿರುವುದನ್ನು ಕಾಣಬಹುದು. ಆದರೆ […]

ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯವರು ಒಬ್ಬರೂ ತ್ಯಾಗ ಬಲಿದಾನ ಮಾಡಿಲ್ಲ: ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ಸ್ವಾತಂತ್ರ್ಯ ಹೋರಾಟದಲ್ಲಿ ‘ಕೈ’ ನಾಯಕರು ತ್ಯಾಗ ಬಲಿದಾನ ಮಾಡಿದ್ದಾರೆ‌‌. ಬಿಜೆಪಿಯವರು ಒಬ್ಬರೂ ತ್ಯಾಗ ಬಲಿದಾನ ಮಾಡಿಲ್ಲ. ಇಂದಿರಾ ಗಾಂಧಿರವರು ಬಾಲ್ಯದಿಂದಲೇ ಜನಪರ ಧೋರಣೆ ಹೊಂದಿದ್ದರು. ದೇಶಕ್ಕಾಗಿ ಇಂದಿರಾ ಗಾಂಧಿ ಬಹಳ ದೃಢವಾದ ನಿರ್ಧಾರ ತೆಗೆದುಕೊಳ್ತಿದ್ದರು. ಹೀಗಾಗಿ ಇಂದಿರಾ ಗಾಂಧಿರವರನ್ನು ಉಕ್ಕಿನ ಮಹಿಳೆ ಎಂದು ಕರೆಯುತ್ತಿದ್ದರು ಎಂದು ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಉಕ್ಕಿನ ಮಹಿಳೆ, ಮಾಜಿ ಪ್ರಧಾನಿ […]

ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ-ಮಗಳು ಬಲಿ

ಬೆಂಗಳೂರು: ಬೆಸ್ಕಾಂ ನಿರ್ಲಕ್ಷ್ಯಕ್ಕೆ ತಾಯಿ-ಮಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್‌ನ ಕಾಡುಗೋಡಿಯಲ್ಲಿ ನಡೆದಿದೆ. ತಾಯಿ ಸೌಂದರ್ಯ ಹಾಗೂ ಮಗಳು ಲೀಲಾ ಸಾವನ್ನಪ್ಪಿದ ದುರ್ದೈವಿಗಳು. ಇಂದು ಬೆಳಗಿನ ಜಾವ 5 ಗಂಟೆ ವೇಳೆಗೆ ದುರ್ಘಟನೆ ನಡೆದಿದೆ. ನೆಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಕಾಣಿಸದೇ ಅದನ್ನು ತುಳಿದ ಕಾರಣ ವಿದ್ಯುತ್ ಪ್ರವಹಿಸಿ ಇಬ್ಬರು ಸಾವನ್ನಪ್ಪಿದ್ದಾರೆ.  ತಾಯಿ ಹಾಗೂ ಮಗಳು ತಮಿಳುನಾಡಿನಿಂದ ಬೆಂಗಳೂರಿನ ಮನೆಗೆ ಬತ್ತಿದ್ದ ವೇಳೆ ವಿದ್ಯುತ್ ತಂತಿ ತುಳಿದಿದ್ದಾರೆ. ರಸ್ತೆ ಬದಿ ತಂತಿ ತುಂಡಾಗಿ ನೆಲದಲ್ಲಿ ಬಿದ್ದಿತ್ತು. […]

ಮುಸ್ಲಿಂ ಸ್ಪೀಕರ್ ಬಗೆಗಿನ ಜಮೀರ್ ಹೇಳಿಕೆಗೆ ಖಾದರ್ ಆಕ್ಷೇಪ

ಮಂಗಳೂರು: ನಾನು ಎಲ್ಲರ ಸ್ಪೀಕರ್. ಸ್ಪೀಕರ್ ಸ್ಥಾನವನ್ನು ರಾಜಕೀಯ, ಜಾತಿ ಧರ್ಮದಿಂದ ನೋಡುವಂತಿಲ್ಲ ಎಂದು ಹೇಳುವ ಮೂಲಕ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಸ್ಪೀಕರ್ ಯು.ಟಿ ಖಾದರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸ್ಪೀಕರ್ ಸ್ಥಾನದ ಬಗ್ಗೆ ಜಮೀರ್ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲವನ್ನು ಕೂಡ ಮೆಟ್ಟಿ ನಿಂತು ನೋಡಬೇಕಾದ ಸಂವಿಧಾನ ಬದ್ಧವಾದ ಸ್ಥಾನ ಇದಾಗಿದೆ. ನನಗೆ ಗೌರವ ಕೊಡುವುದು ಯು.ಟಿ ಖಾದರ್ ಗೆ ಗೌರವ ಕೊಡೋದು ಅಲ್ಲ. ಸಂವಿಧಾನ ಪೀಠಕ್ಕೆ ಮತ್ತು ಸಭಾಧ್ಯಕ್ಷ ಸ್ಥಾನಕ್ಕೆ ಹಾಗೂ ಅಲ್ಲಿ […]

ಕುಮಾರಸ್ವಾಮಿ ಹೇಳಿದ ವಿವೇಕಾನಂದರೇ ಬೇರೆ, ವರ್ಗಾವಣೆಯಾದ ವಿವೇಕಾನಂದರೇ ಬೇರೆ: ಸಿದ್ದರಾಮಯ್ಯ ಸ್ಪಷ್ಟನೆ

ಮೈಸೂರು: ಯತೀಂದ್ರ ಅವರ ವಿಡಿಯೋ ವೈರಲ್ ಆದ ನಂತರ ವಿವೇಕಾನಂದ ಎಂಬ ಅಧಿಕಾರಿಯ ಹೆಸರು ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮಾಜಿ ಸಿಎಂ ಹೆಚ್.​ಡಿ. ಕುಮಾರಸ್ವಾಮಿ ಅವರು ಈ ಹೆಸರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರು ವಿವೇಕಾನಂದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ವಿವೇಕಾನಂದ ಅನ್ನೋರು ಮೈಸೂರು ಬಿಇಒ. ಈಗ ವರ್ಗಾವಣೆ ಆಗಿರುವ ವಿವೇಕಾನಂದ ಪೊಲೀಸ್ ಅಧಿಕಾರಿಯಾಗಿದ್ದಾರೆ. ಇವರು ವಿವಿ ಪುರಂಗೆ ಪೊಲೀಸ್ ಇನ್ಸ್​ಪೆಕ್ಟರ್ ಆಗಿ ವರ್ಗಾವಣೆ […]

ವಿವೇಕಾನಂದ ಯಾರು? ಅದು ನನಗೆ ಈಗಲೂ ಗೊತ್ತಿಲ್ಲ: ಯತೀಂದ್ರ ಸಿದ್ದರಾಮಯ್ಯ

ಮೈಸೂರು: ವಿವೇಕಾನಂದ ಯಾರು? ಅದು ನನಗೆ ಈಗಲೂ ಗೊತ್ತಿಲ್ಲ. ವಿವೇಕಾನಂದರ ವರ್ಗಾವಣೆ ಎಲ್ಲಿಗೆ ಆಗಿದೆ? ಆ ಕ್ಷೇತ್ರದ ವ್ಯಾಪ್ತಿ ಯಾವುದು? ಅದರ ಬಗ್ಗೆ ಕ್ಷೇತ್ರದ ಶಾಸಕರನ್ನ ಕೇಳಿಕೊಳ್ಳಿ. ಅದಕ್ಕೂ ನನಗೂ ಏನೂ ಸಂಬಂಧ ಎಂದು ಸಿಎಂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ ವಿಡಿಯೋ ವೈರಲ್ ಬಗ್ಗೆ ಮೈಸೂರಿನಲ್ಲಿ ಮೊದಲ ಬಾರಿಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೋಪಗಳನ್ನು ಮಾಡುವಾಗ ದಾಖಲೆ ಇಟ್ಟು ಆರೋಪ ಮಾಡಲಿ. ದಾಖಲೆ ಇಲ್ಲದೇ ಸುಖಾಸುಮ್ಮನೆ ಆರೋಪ ಮಾಡಬೇಡಿ. ನಾನು ನನ್ನ ಪಾಡಿಗೆ ಕ್ಷೇತ್ರದ ಕೆಲಸ […]

ಉದ್ಯಮಿಗೆ ಕೋಟಿ ಕೋಟಿ ವಂಚನೆ ಪ್ರಕರಣ- ಸಿಸಿಬಿ ವಿಚಾರಣೆ ವೇಳೆ ಚೈತ್ರಾ ತಪ್ಪೊಪ್ಪಿಗೆ

ಬೆಂಗಳೂರು: ಉದ್ಯಮಿಗೆ ಕೋಟಿ ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆ ವೇಳೆ ಚೈತ್ರಾ ತಪ್ಪೊಪ್ಪಿಗೆ ನೀಡಿದ್ದಾರೆ. ಸಿಸಿಬಿ ಎದುರು ಚೈತ್ರಾ ನೀಡಿದ ಸ್ವ-ಇಚ್ಛಾ ಹೇಳಿಕೆ ಏನು..?, ವಿಷದ ಬಾಟಲಿ ನಾಟಕದ ಬಗ್ಗೆ ಚೈತ್ರಾ ಹೇಳಿದ್ದೇನು..?, ಯಾರ್ಯಾರನ್ನ ಬಳಸಿಕೊಂಡು ಎಲ್ಲೆಲ್ಲಿ ಹಣ ವಸೂಲಿಗೆ ನಿಂತಿದ್ರು..?, ಡೀಲ್ ಮಾಡೋದಕ್ಕೆ ಸಿಮ್ ಖರೀದಿ ಮಾಡಿಸಿಕೊಟ್ಟಿದ್ದು ಯಾರು ಎಂಬುದರ ಇಂಚಿಂಚು ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ. ತಪ್ಪೊಪ್ಪಿಗೆ ಪ್ರತಿಯಲ್ಲಿ ಏನಿದೆ..?: 2018ರಲ್ಲಿ ಅಭಿನವ ಹಾಲಶ್ರೀಯನ್ನು ಭೇಟಿ ಮಾಡಿದ್ದೆ. ನನಗೂ ಬಿಜೆಪಿಯ ಕೆಲ ನಾಯಕರು ಗೊತ್ತಿದ್ರಿಂದ […]

ಮತೀಯ ವಿಚಾರಗಳ ವಿರುದ್ಧ ಹೋರಾಟದ ಎಚ್ಚರಿಕೆ 

ಬೆಂಗಳೂರು: ಮುಸ್ಲಿಂ ಸಮುದಾಯದ ಯು.ಟಿ. ಖಾದರ್ ಅವರನ್ನು ಸ್ಪೀಕರ್ ಮಾಡುವ ಮೂಲಕ ಬಿಜೆಪಿಯ ದೊಡ್ಡ ದೊಡ್ಡ ಶಾಸಕರೂ ಅವರಿಗೆ ನಮಸ್ಕರಿಸಿ ನಿಲ್ಲುವಂತೆ ಮಾಡಿದ್ದೇವೆ ಎಂಬ ವಸತಿ ಸಚಿವ ಜಮೀರ್ ಖಾನ್ ಹೇಳಿಕೆಗೆ ಸಂಬಂಧಿಸಿದಂತೆ ನಾವು ಸ್ಪೀಕರ್​ ಸ್ಥಾನಕ್ಕೆ ಗೌರವವನ್ನು ಕೊಡುತ್ತೇವೆ. ಈ ರೀತಿಯ ಮತೀಯ ವಿಚಾರಗಳ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ವಿಪಕ್ಷ ನಾಯಕ ಆರ್​ ಅಶೋಕ್​ ತಿರುಗೇಟು ನೀಡಿದ್ದಾರೆ. ನೆಲಮಂಗಲದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಮೇರು ವ್ಯಕ್ತಿತ್ವಕ್ಕೆ ಗೌರವ ಕೊಡುತ್ತೇವೆ. ಈ […]

ಬೆಳಗಾವಿಯಲ್ಲಿ ಬರ ನಿರ್ವಹಣೆಗಾಗಿ ಕರೆದ ಸಭೆಗೆ “ಶಾಸಕರ ಬರ”!

ಬೆಳಗಾವಿ: ಕುಂದಾ ನಗರಿ ಬೆಳಗಾವಿ (Belagavi) ಜಿಲ್ಲೆಯ ಬರ ನಿರ್ವಹಣೆಗಾಗಿ ಕರೆದ ಸಭೆಗೆ “ಶಾಸಕರ ಬರ” ಎದುರಾಗಿದ್ದು ಇಂತಹ ಜನಪ್ರತಿನಿಧಿಗಳಿಂದ ಪ್ರಜ್ಞೆಗಳು ಏನನ್ನ ನಿರೀಕ್ಷೆ ಮಾಡಬಹುದು ಎಂದು ಪ್ರಶ್ನೆ ಮೂಡಿದೆ. ತಾಲೂಕಿನ ಹಲಗಾ ಮತ್ತು ಬಸ್ತವಾಡ್ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಸುವರ್ಣ ವಿಧಾನಸೌಧದಲ್ಲಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಬರ ನಿರ್ವಹಣಾ ಸಭೆ ಕರೆಯಲಾಗಿದೆ. ಆದರೆ ಸಚಿವರ ಸಭೆಗೆ ಬಹುತೇಕ ಶಾಸಕರು ಗೈರಾಗಿದ್ದಾರೆ. ಸಭೆಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಮಹೇಂದ್ರ ತಮ್ಮಣ್ಣವರ, […]