July 30, 2026

ಜಾತಿಗಣತಿ ವಿರೋಧದ ನಡುವೆಯೇ ಮತ್ತೆ ಶುರುವಾಗುತ್ತಾ ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು?

ಬೆಂಗಳೂರು: ಜಾತಿ ಜನಗಣತಿ ವಿರೋಧದ ನಡುವೆಯೇ ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ಜೋರಾಗುವ ಸಾಧ್ಯತೆ ಇದೆ. ಹಿಂದೂ ಧರ್ಮ ಅಲ್ಲಾ ಬಸವ ಧರ್ಮ ಎನ್ನುವ ಮೂಲಕ ಮತ್ತೆ ಪ್ರತ್ಯೇಕ ಧರ್ಮದ ಕೂಗು ಮುನ್ನಲೆಗೆ ತರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಲಿಂಗಾಯತ ಸಮುದಾಯದ ಜಾತಿ ಜನಗಣತಿ ವಿರೋಧದ ನಡುವೆಯೇ ಮತ್ತೆ ಪ್ರತ್ಯೇಕ ಧರ್ಮದ ಕೂಗು ಜೋರಾಗುವ ಲಕ್ಷಣಗಳು ಕಾಣುತ್ತಿವೆ. ವೀರ ಶೈವ ಲಿಂಗಾಯತ ಧರ್ಮದ ಕೂಗು ಜೋರಾದರೆ ಜಾತಿಗಣತಿಗೂ ಕಂಟಕ ಎದುರಾಗುವ ಸಾಧ್ಯತೆ ಇದೆ. ವೀರ ಶೈವ ಲಿಂಗಾಯತರ […]

ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಹತ್ಯೆ – ಸ್ಥಳದಲ್ಲಿ ಬಿಗುವಿನ ವಾತಾವರಣ

ಬೆಂಗಳೂರು: ಸಿನಿಮಾ ಶೈಲಿಯಲ್ಲಿ ಕಿಲೋಮೀಟರ್‌ಗಟ್ಟಲೇ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ ಘಟನೆ ಲಕ್ಕಸಂದ್ರದಲ್ಲಿ ನಡೆದಿದೆ. ಹತ್ಯೆಯಾದವನನ್ನು ಜೈಪ್ರಕಾಶ್ ಅಲಿಯಾಸ್ ಅಪ್ಪಿ ಎಂದು ಗುರುತಿಸಲಾಗಿದೆ. ಆತನನ್ನು ಹಂತಕರು ಸುಮಾರು ಕಿಲೋಮೀಟರ್ ದೂರದಿಂದಲೇ ಅಟ್ಟಿಸಿಕೊಂಡು ಬಂದಿದ್ದಾರೆ. ಈ ವೇಳೆ ಲಕ್ಕಸಂದ್ರದ ಹೋಟೆಲೊಂದರ ಒಳಗೆ ಆತ ನುಗ್ಗಿದ್ದು, ಅಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ. ಬಳಿಕ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.  ಹತ್ಯೆಯಾದ ಜೈಪ್ರಕಾಶ್ ಲಕ್ಕಸಂದ್ರ ಬಸ್ ನಿಲ್ದಾಣದ ಬಳಿ ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿಯ ಅನ್ನದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ. ಈ ವೇಳೆ […]

ಕಾಂಗ್ರೆಸ್‍ನ ಮೊದಲ ಅಧ್ಯಕ್ಷರೇ ಬ್ರಿಟಿಷರು, ಹಾಗಾದ್ರೆ ಕಾಂಗ್ರೆಸ್ಸಿಗರು ಬ್ರಿಟಿಷರ ಬೂಟು ನೆಕ್ಕಿದ್ರಾ? 

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಯೋಜನೆಗಳಿಗೆ ಅಡಿಗಲ್ಲು ಹಾಕುವ ಬದಲು ಕನ್ನಡಿಗರ ತಲೆಯ ಮೇಲೆ ಕಲ್ಲು ಹಾಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೂ-ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಳು ಕೋಟಿ ಕನ್ನಡಿಗರ ತಲೆ ಮೇಲೆ ಕಲ್ಲು ಹಾಕಿರುವ ಸರ್ಕಾರ, ಅಭಿವೃದ್ಧಿ ಕಾಮಗಾರಿಗೆ ಒಂದು ಅಡಿಗಲ್ಲನ್ನೂ ಹಾಕಿಲ್ಲ. ಜನರು ಸರ್ಕಾರದ ಬಗ್ಗೆ ಛೀ, ಥೂ ಎಂದು ಮಾತನಾಡುತ್ತಿದ್ದಾರೆ. ಸರ್ಕಾರ ಹಿಂದೂ-ಮುಸ್ಲಿಮರ ನಡುವೆ ಬೆಂಕಿ […]

ಆಳ್ವಾಸ್ ಕಾಲೇಜಿನ ಪಿಯು ವಿದ್ಯಾರ್ಥಿ ಆತ್ಮಹತ್ಯೆ

ದಕ್ಷಿಣ ಕನ್ನಡ: ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ದ್ವಿತೀಯ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆದಿದೆ. ಮನೋಜ್ (18) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ತರ್ಚಿಹಾಳ ಮೂಲದ ಮಲ್ಲಪ್ಪ ಎಂಬುವರ ಮಗ. ಮನೋಜ್ ಮೂಡಬಿದ್ರೆಯ ಖಾಸಗಿ ಕಾಲೇಜ್ ಆಳ್ವಾಸ್ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ.  ಮನೋಜ್ ಇಂದು ಕಾಲೇಜಿನ ಹಾಸ್ಟೆಲ್ ಬಾತ್‌ರೂಂ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಯ ಹಿಂದಿನ ಕಾರಣಗಳು ತಿಳಿದು ಬಂದಿಲ್ಲ. ತಾವು ಬರುವವರೆಗೂ […]

ನೂತನ ಕುಸ್ತಿ ಫೆಡರೇಶನ್‌ ಸಮಿತಿಯನ್ನೇ ಅಮಾನತುಗೊಳಿಸಿದ ಕ್ರೀಡಾ ಸಚಿವಾಲಯ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಹೊಸದಾಗಿ ಆಯ್ಕೆಯಾದ ಸಂಜಯ್‌ ಸಿಂಗ್ ನೇತೃತ್ವದ ಭಾರತೀಯ ಕುಸ್ತಿ ಫೆಡರೇಶನ್‌ ಸಮಿತಿಯನ್ನು ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದೆ. ಡಬ್ಲ್ಯೂಎಫ್‌ಐ ಸಂವಿಧಾನ ಮತ್ತು ನಿಯಮವನ್ನು ಉಲ್ಲಂಘಿಸಿ ನಿರ್ಧಾರವನ್ನು ಕೈಗೊಂಡಿದ್ದಕ್ಕೆ ಭಾನುವಾರ ಕ್ರೀಡಾ ಸಚಿವಾಲಯ ಅಮಾನತುಗೊಳಿಸಿ ಆದೇಶ ಪ್ರಕಟಿಸಿದೆ. ಭಾರತದ ಕುಸ್ತಿ ಫೆಡರೇಶನ್‌ನ ಹೊಸದಾಗಿ ಚುನಾಯಿತರಾದ ಸಂಜಯ್ ಕುಮಾರ್ ಸಿಂಗ್ ಅವರು ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ 15 ಮತ್ತು 20 ವರ್ಷದ ಒಳಗಿನ ರಾಷ್ಟ್ರೀಯ ಕುಸ್ತಿ ಪಂದ್ಯಾಟ ಉತ್ತರ ಪ್ರದೇಶದದ ಗೊಂಡಾದ ನಂದಿನಿ ನಗರದಲ್ಲಿ ನಡೆಸಲಾಗುವುದು ಎಂದು ಘೋಷಿಸಿದ್ದರು. […]

ನಾಯಕನಾದ ಬೆನ್ನಲ್ಲೇ ಮುಂಬೈಗೆ ಶಾಕ್‌ ಕೊಟ್ಟ ಪಾಂಡ್ಯ – ಮತ್ತೆ ಕ್ಯಾಪ್ಟನ್‌ ಆಗ್ತಾರಾ ಹಿಟ್‌ಮ್ಯಾನ್‌?

ಮುಂಬೈ: ಪಾದದ ಗಾಯದಿಂದ ಬಳಲುತ್ತಿರುವ ಟೀಂ ಇಂಡಿಯಾ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಅವರು ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿ ಹಾಗೂ 2024ರ ಐಪಿಎಲ್‌ ಟೂರ್ನಿಗೆ ಅಲಭ್ಯರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುಜರಾತ್‌ ಟೈಟಾನ್ಸ್‌ನಿಂದ ಟ್ರೇಡ್‌ ವಿಂಡೋ (ಆಟಗಾರರ ಬದಲಾವಣೆ ಮಾಡಿಕೊಳ್ಳುವ ನಿಯಮ) ಮೂಲಕ ಮುಂಬೈ ಇಂಡಿಯನ್ಸ್‌ಗೆ ಮರಳಿ ನಾಯಕತ್ವ ಪಡೆದುಕೊಂಡಿದ್ದ ಹಾರ್ದಿಕ್‌ ಪಾಂಡ್ಯ ಅವರು ಮತ್ತೆ ಗಾಯದ ಸಮಸ್ಯೆಗೆ ತುತ್ತಾಗಿರುವುದು ಫ್ರಾಂಚೈಸಿಗೆ ತಲೆನೋವು ಉಂಟುಮಾಡಿದೆ.  2023ರ ಏಕದಿನ ವಿಶ್ವಕಪ್ ಟೂರ್ನಿ ವೇಳೆ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ […]

ಓವರ್ ಮೇಕಪ್‌ಗೆ ಟ್ರೋಲ್ ಆದ ಊರ್ವಶಿ ರೌಟೇಲಾ

‘ಐರಾವತ’ ಬೆಡಗಿ ಊರ್ವಶಿ ರೌಟೇಲಾ ಅವರು ಇದೀಗ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಹೊಸ ಫೋಟೋದಲ್ಲಿನ ಊರ್ವಶಿ ಓವರ್ ಮೇಕಪ್ ನೋಡಿ ನೆಟ್ಟಿಗರು ಸಖತ್ ಟ್ರೋಲ್ ಮಾಡ್ತಿದ್ದಾರೆ. ಸದ್ಯ ನಟಿಯ ನಯಾ ಲುಕ್ ಸಖತ್ ವೈರಲ್ ಆಗುತ್ತಿದೆ. ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಊರ್ವಶಿ ರೌಟೇಲಾ ಸದ್ದು ಮಾಡುತ್ತಲೇ ಇರುತ್ತಾರೆ. ಈಗ ಸುಂದರವಾದ ಮಿನುಗುವ ಡ್ರೆಸ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ. ಗ್ಲ್ಯಾಮರಸ್ ಆಗಿ ಊರ್ವಶಿ ಕಾಣಿಸಿಕೊಂಡಿದ್ದಾರೆ. ಈ ಹೊಸ ಫೋಟೋ ಶೇರ್ ಮಾಡ್ತಿದ್ದಂತೆ ಐರಾವತ […]

ನನ್ನ ಮಣ್ಣು, ನನ್ನ ಹಕ್ಕು- ‘ಕಾಟೇರ’ ಸಾಂಗ್ ಔಟ್

ಡಿಬಾಸ್ ದರ್ಶನ್ ನಟನೆಯ ‘ಕಾಟೇರ’ ಸಿನಿಮಾದ ಸಾಂಗ್ ರಿಲೀಸ್ ಆಗಿದೆ. ಮಂಡ್ಯದ ಜನತೆಯ ಎದುರು ‘ಕಾಟೇರ’ ಥೀಮ್ ಸಾಂಗ್ ಅನ್ನು ಸುಮಲತಾ ಅಂಬರೀಶ್ ರಿಲೀಸ್ ಮಾಡಿದ್ದಾರೆ.  ನೆತ್ತರಲ್ಲಿ ನೆಂದ ಭೂಮಿ ಎಂದು ಶುರುವಾಗುವ ಸಾಂಗ್ ಸಖತ್ ಥ್ರಿಲ್ಲಿಂಗ್ ಆಗಿ ಮೂಡಿ ಬಂದಿದೆ. ನನ್ನ ಮಣ್ಣು, ನನ್ನ ಹಕ್ಕು ಮೊದಲಾದ ರೈತರ ಭಾವನೆಗಳನ್ನ ಈ ಹಾಡು ಒಳಗೊಂಡಿದೆ. ವಿಶೇಷ ಅಂದರೆ, ರೈತರ ದಿನದಂದೇ ಈ ಹಾಡನ್ನ ರಿಲೀಸ್ ಮಾಡಲಾಗಿದೆ. ನನ್ನ ಮಣ್ಣು, ನನ್ನ ಹಕ್ಕು ಹಾಡಿಗೆ ಪುನೀತ್ ಆರ್ಯ […]

ಇಂದ್ರಜಿತ್ ಲಂಕೇಶ್ ಸಿನಿಮಾದಲ್ಲಿ ‘ಸಲಗ’ ಬ್ಯೂಟಿ ಸಂಜನಾ ಆನಂದ್‌

ಸ್ಯಾಂಡಲ್‌ವುಡ್‌ಗೆ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ನಾಯಕ ನಟನಾಗಿ ಎಂಟ್ರಿ ಕೊಡ್ತಿದ್ದಾರೆ. ಚೊಚ್ಚಲ ಸಿನಿಮಾ ‘ಗೌರಿ’ ಶೂಟಿಂಗ್ ಕೂಡ ಭರದಿಂದ ನಡೆಯುತ್ತಿದೆ. ‘ಗೌರಿ’ ಸಿನಿಮಾದಲ್ಲಿ ಸಲಗ ಸುಂದರಿ ಸಂಜನಾ ಆನಂದ್ ಕೂಡ ನಟಿಸುತ್ತಿದ್ದಾರೆ. ಇಂದ್ರಜಿತ್ ನಿರ್ದೇಶನದ ಈ ಸಿನಿಮಾದಲ್ಲಿ ಸಮರ್ಜಿತ್‌ಗೆ ನಾಯಕಿಯಾಗಿ ಸಾನ್ಯ ಅಯ್ಯರ್ (Saanya Iyer) ನಟಿಸುತ್ತಿದ್ದಾರೆ. ಲವ್ ಸ್ಟೋರಿ ಜೊತೆ ಆ್ಯಕ್ಷನ್ ಓರಿಯೆಂಟೆಡ್ ಸಿನಿಮಾವಾಗಿದೆ. ಇದೇ ಚಿತ್ರದಲ್ಲಿ ಸಂಜನಾ ಆನಂದ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.  ಚಿತ್ರದಲ್ಲಿ ಸಂಜನಾ ಪಾತ್ರ ತಿರುವು ಕೊಡಲಿದೆ. […]

ಹೊಸವರ್ಷ ಆಚರಣೆ – ಮಹಿಳೆಯರ ರಕ್ಷಣೆಗೆ ಮುಂದಿನ ವಾರದಲ್ಲಿ ಗೈಡ್‌ಲೈನ್ಸ್‌

ಬೆಂಗಳೂರು: ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಭಾಗವಹಿಸುವ ಮಹಿಳೆಯರಿಗೆ ಯಾವುದೇ ತೊಂದರೆ ಮತ್ತು ಕಿರುಕುಳ ಆಗದಂತೆ ನೋಡಿಕೊಳ್ಳಲು ವಿಶೇಷ ಗೈಡ್‌ಲೈನ್ಸ್‌ ಬಿಡುಗಡೆ ಮಾಡುವುದಾಗಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ  ಬಿ. ದಯಾನಂದ್‌ ತಿಳಿಸಿದ್ದಾರೆ. ನಗರದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಅವರು, ವರ್ಷಾಚರಣೆ ವೇಳೆ ಮಹಿಳೆಯರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮುಂದಿನ ವಾರದಲ್ಲೇ ಅದಕ್ಕೆ ಸಂಬಂಧಿಸಿದಂತೆ ಸೂಕ್ತ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಹೊಸ ವರ್ಷ ಸಂಭ್ರಮಾಚರಣೆ ಬಗ್ಗೆ ಬಿಬಿಎಂಪಿ, ಬೆಸ್ಕಾಂ, ಬಿಎಂಟಿಸಿ, ಮೆಟ್ರೋ ಹಾಗೂ ಅಬಕಾರಿ […]