July 30, 2026

ಹೆತ್ತ ಮಕ್ಕಳನ್ನು ಕೊಂದು ತಾಯಿ ನೇಣಿಗೆ ಶರಣು

ಚಿತ್ರದುರ್ಗ: ಹೆತ್ತ ತಾಯಿಯೇ ಇಬ್ಬರು ಮಕ್ಕಳನ್ನು ಕೊಂದು, ಬಳಿಕ ತಾನು ನೇಣಿಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಯಾದಲಘಟ್ಟ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಯಾದಲಗಟ್ಟ ಗ್ರಾಮದ ಲತಾ ಹಾಗೂ ಪತಿ ತಿಪ್ಪೇಸ್ವಾಮಿಗೆ ಇಬ್ಬರು ಮಕ್ಕಳಿದ್ದು, ಬೆಳಗ್ಗೆ ಎಂದಿನಂತೆ ತಿಪ್ಪೇಸ್ವಾಮಿ ಜಮೀನಿಗೆ ತೆರಳಿದ್ದರು. ಹೀಗಾಗಿ ಎಂದಿನಂತೆ ಪತ್ನಿ ಊಟ ತೆಗೆದುಕೊಂಡು ಬರುವಳೆಂಬ ನಿರೀಕ್ಷೆಯಲ್ಲಿದ್ದ ಪತಿಗೆ ಮನೆಯಲ್ಲಿ ನಡೆದಿರುವ ಘಟನೆ ಕೇಳಿ ಶಾಕ್ ಆಗಿದೆ. ಗ್ರಾಮಸ್ಥರಿಂದ ವಿಷಯ ತಿಳಿದು ಮನೆಗೆ ಧಾವಿಸಿ, ಗಮನಿಸಿದಾಗ ಪತ್ನಿ ಲತಾ ಹಾಗೂ […]

ಮೋಡ ಬಿತ್ತನೆಗೆ ಸರ್ಕಾರ ಹಣ ಕೊಡದಿದ್ರೆ ನಾನೇ ಮಾಡಿಸ್ತೀನಿ

ಬೆಳಗಾವಿ: ಮೋಡ ಬಿತ್ತನೆಗೆ ಸರ್ಕಾರ ಹಣ ಕೊಡದಿದ್ದರೆ, ನಾನೇ ಹಣ ಹಾಕಿ ಮೋಡ ಬಿತ್ತನೆ ಮಾಡಿಸುತ್ತೇನೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದ್ದಾರೆ. ಅಧಿವೇಶನದ ಶೂನ್ಯವೇಳೆಯಲ್ಲಿ ಸರ್ಕಾರದ ಗಮನ ಸೆಳೆದ ಅವರು, ಮುಂದಿನ ನಾಲ್ಕು ದಿನಗಳ ಕಾಲ ಉತ್ತಮ ಮೋಡಗಳು ಇರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಮೋಡ ಬಿತ್ತನೆ ಮಾಡುವುದರಿಂದ ಕಡಿಮೆ ವೆಚ್ಚದಲ್ಲಿ ಮಳೆ ತರಿಸಿ ರೈತರಿಗೆ ಅನುಕೂಲ ಮಾಡಬಹುದು. ಅದಕ್ಕಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ. […]

ಸರ್ಕಾರದಲ್ಲಿ ಪೇ-ಸಿಎಂ, ಪೇ-ಡಿಸಿಎಂ ಹೆಸ್ರಲ್ಲಿ ಕಮಿಷನ್‌ ಹಗರಣ – ಸದನದಲ್ಲಿ ಯತ್ನಾಳ್‌ ಬಾಂಬ್‌

ಬೆಳಗಾವಿ: ರಾಜ್ಯ ಸರ್ಕಾರದಲ್ಲಿ ಪೇ-ಸಿಎಂ, ಪೇ-ಡಿಸಿಎಂ ಹೆಸರಿನಲ್ಲಿ ಕಮಿಷನ್‌ ಹಗರಣ ನಡೀತಿದೆ. ಕಮಿಷನ್ ಪಡೆದು ಆಂಧ್ರದ ಗುತ್ತಿಗರದಾರರಿಗೆ ಹಣ ಬಿಡುಗಡೆ ಮಾಡಲಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸರ್ಕಾರದ ವಿರುದ್ಧ ಮತ್ತೆ ಕಮಿಷನ್‌ ಬಾಂಬ್‌ ಸಿಡಿಸಿದ್ದಾರೆ. ವಿಧಾನಸಭೆ ಕಲಾಪ ಶೂನ್ಯವೇಳೆಯಲ್ಲಿ ಮಾತನಾಡಿದ ಶಾಸಕ ಯತ್ನಾಳ್‌, ಟೆಂಡರ್/ಕಾಮಗಾರಿ ಬಾಕಿ ಬಿಲ್‌ಗಳಿಗೆ ಆಗ್ರಹಿಸಿದ್ದು, ಈ ವೇಳೆ ಕಮೀಷನ್ ಆರೋಪದ ಬಗ್ಗೆ ಪ್ರಸ್ತಾಪಿಸಿದ್ದಾರೆ.  ಸಣ್ಣ ನೀರಾವರಿ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲಿ ಸರ್ಕಾರ ಕಾಮಗಾರಿಗಳಿಗೆ ಅಗತ್ಯ ಹಣ ಬಿಡುಗಡೆ ಮಾಡಿಲ್ಲ. ಗುತ್ತಿಗೆದಾರರಿಗೆ […]

ಶಿರಸಿಯಲ್ಲಿ ಭೀಕರ ಅಪಘಾತಕ್ಕೆ ಐವರು ಬಲಿ

ಕಾರವಾರ: ಕಾರು ಮತ್ತು ಸರ್ಕಾರಿ ಬಸ್ಸಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಐವರು ಮೃತಪಟ್ಟಿರುವ ಘಟನೆ ಶುಕ್ರವಾರ (ಇಂದು) ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಂಡಲದಲ್ಲಿ ನಡೆದಿದೆ. ಶಿರಸಿಯಿಂದ ಕುಮಟಾ ಕಡೆಗೆ ಹೋಗುತ್ತಿದ್ದ ಸರ್ಕಾರಿ ಬಸ್ಸು ಹಾಗೂ ಕುಮಟಾ ಕಡೆಯಿಂದ ಶಿರಸಿಗೆ ಬರುತ್ತಿದ್ದ ಮಾರುತಿ ಸ್ವಿಫ್ಟ್ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಬಸ್ಸಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಐವರು ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ವ್ಯಕ್ತಿಗಳು ಮಂಗಳೂರು ಸಮೀಪದವರು […]

ಮೆಟ್ರೋದಲ್ಲಿ ಯುವತಿ ಹಿಂದಿನಿಂದ ಮೈ,ಕೈ ಮುಟ್ಟಿ ಎಸ್ಕೇಪ್‍ಗೆ ಯತ್ನ- ಯುವಕ ಅರೆಸ್ಟ್

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಯುವತಿಯೊಬ್ಬಳ ಹಿಂದಿನಿಂದ ಮೈ, ಕೈ ಮುಟ್ಟಿ ಬಳಿಕ ಪರಾರಿಯಾಗಲು ಯತ್ನಿಸಿದವನನ್ನು ಬಂಧಿಸಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿಯನ್ನು ಲೊಕೇಶ್ ಆಚಾರ್ ಎಂದು ಗುರುತಿಸಲಾಗಿದೆ. ಈ ಘಟನೆ ಗುರುವಾರ ಬೆಳಗ್ಗೆ 9.40ರ ಸುಮಾರಿಗೆ ನಡೆದಿದೆ. ನಡೆದಿದ್ದೇನು..?: 22 ವರ್ಷದ ಐಟಿ ಮಹಿಳಾ ಉದ್ಯೋಗಿ ರಾಜಾಜಿನಗರದಲ್ಲಿ ನಿನ್ನೆ ಬೆಳಗ್ಗೆ 9.40ಕ್ಕೆ ಮೆಟ್ರೋ ಹತ್ತಿದ್ದಾರೆ. ಈ ವೇಳೆ ಆರೋಪಿ ಲೋಕೇಶ್ ಹಿಂಬದಿಯಲ್ಲಿ ನಿಂತು ಯುವತಿಯ ಮೈ ಕೈ ಮುಟ್ಟಿದ್ದಾನೆ. ಇದು ಗಮನಕ್ಕೆ ಬರುತ್ತಿದ್ದಂತೆಯೇ ಯುವತಿ ಜೋರಾಗಿ ಕಿರುಚಿದ್ದಾಳೆ. ಇದರಿಂದ […]

ಪೊಲೀಸ್ ಸೂಚನೆ ನಡುವೆಯೂ ಮೌಲ್ವಿ ಮನೆಗೆ ಸಿಎಂ ಭೇಟಿ – ಯತ್ನಾಳ್ ತೀವ್ರ ಖಂಡನೆ

ಬೆಂಗಳೂರು: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಪಾಲ್ಗೊಂಡಿದ್ದ ತನ್ವೀರ್ ಪೀರ್ ಅವರ ನಿವಾಸಕ್ಕೆ ಯಾರೂ ಭೇಟಿ ನೀಡಿದಂತೆ ಪೊಲೀಸರು ಸೂಚನೆ ಕೊಟ್ಟಿದ್ದಾರೆ. ಇದರ ನಡುವೆಯೂ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಮೌಲ್ವಿ ಕುಟುಂಬದ ಜೊತೆಗೆ ವ್ಯವಹಾರ ಹೊಂದಿದ್ರಾ? ತನ್ವೀರ್ ಹಾಶ್ಮಿ ಮತ್ತು ಯತ್ನಾಳ್ ಉದ್ಯಮ ಪಾಲುದಾರರಾಗಿದ್ರಾ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ.  ಆ ಮೌಲ್ವಿಗೂ ನನಗೂ ಯಾವುದೇ ಸಂಬಂಧವಿಲ್ಲ. ಅವನೊಬ್ಬ ಭಯೋತ್ಪಾದಕ, ನಾನು ಅದರಲ್ಲಿ ಪಾಲುದಾರನಲ್ಲ. […]

ಕಾಂಗ್ರೆಸ್ ಪಕ್ಷದವರು ಕೋಮುವಾದಿಗಳು

ಬೆಳಗಾವಿ: ಸಿಎಂ ಸಿದ್ದರಾಮಯ್ಯ ಅವರು ಒಂದೇ ಆಡಳಿತ ಕೊಡಬೇಕು. ಅವರು ಎಲ್ಲಾ ಸಮುದಾಯವನ್ನೂ ಸಮನಾಗಿ ನೋಡಿಕೊಳ್ಳಬೇಕು. ಆದರೆ ರಾಜಕೀಯ ಪ್ರೇರಿತವಾಗಿ ಮುಸ್ಲಿಂ ಸಮುದಾಯಕ್ಕೆ ತುಷ್ಟೀಕರಣ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದವರು ಕೋಮುವಾದಿಗಳು ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ ಹೇಳಿದ್ದಾರೆ. ಮುಸ್ಲಿಂ ಸಮುದಾಯಕ್ಕೆ 10,000 ಕೋಟಿ ರೂ. ಖರ್ಚು ಮಾಡಲು ಸಿದ್ಧ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಬೆಳಗಾವಿಯಲ್ಲಿ ಮಾತನಾಡಿದ ಅವರು, ಸಿಎಂ ಸಮಾನವಾಗಿ ಎಲ್ಲರನ್ನೂ ನೋಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷದ ಕೋಮುವಾದಿಗಳಿಂದ ರಾಜ್ಯದಲ್ಲಿ ಅಸ್ವಾಸ್ತ್ಯ ಇದೆ. ಬರಗಾಲ, ರೈತರ […]

ಸಿಎಂ ಸಿದ್ದರಾಮಯ್ಯ ಮುಸ್ಲಿಮರನ್ನಷ್ಟೇ ಓಲೈಕೆ ಮಾಡುವುದು ಸರಿಯಲ್ಲ

ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಟಿಪ್ಪು ಅಂದ್ರೆ ಬಹಳ ಪ್ರೀತಿ. ಅವರದ್ದು ಟಿಪ್ಪು ಅಜೆಂಡಾ. ಅವರು ಹಿಂದೂಗಳನ್ನ ಎರಡನೇ ದರ್ಜೆ ಥರಾ ನೋಡ್ತಾ ಇದ್ದಾರೆ. ಸಿದ್ದರಾಮಯ್ಯ ಅವರು ಮುಸ್ಲಿಮರನ್ನಷ್ಟೇ ಓಲೈಕೆ ಮಾಡುವುದು ಸರಿಯಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು. ಬೆಳಗಾವಿಯಲ್ಲಿ ಮಾತನಾಡಿದ ಅವರು, ಮುಸ್ಲಿಂ ಮತಕ್ಕಾಗಿ ಸಿದ್ಧರಾಮಯ್ಯ ಈ‌ ರೀತ ರಾಜಕಾರಣ ಮಾಡುತ್ತಿದ್ದಾರೆ. ಅವರು ಮುಸ್ಲಿಮರ ಓಲೈಕೆ ಜೊತೆಗೆ ಟಿಪ್ಪು ಜಯಂತಿ, ಶಾದಿ ಭಾಗ್ಯ, ಇವೆಲ್ಲಾ ಕೈ ಬಿಡಬೇಕು ಎಂದರು.  ರಾಜ್ಯದಲ್ಲಿ 13 ತಾಲೂಕು ಬಿಟ್ರೆ ಉಳಿದ ಎಲ್ಲಾ […]

ಕಾಕನ ಕೋಟೆಯ ಭೀಮ – ಶೌರ್ಯ ಸಾಹಸಕ್ಕೆ ನಿಸ್ಸೀಮ

ಮೈಸೂರು/ಬೆಂಗಳೂರು: ಮೈಸೂರು ದಸರಾ ಮಹೋತ್ಸವದಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್‌ ಅರ್ಜುನನ (Arjuna Elephant) ಹಠಾತ್ ನಿಧನಕ್ಕೆ ನಾಡಿನ ಜನರು ಕಂಬನಿ ಮಿಡಿದಿದ್ದಾರೆ. ಪುಂಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆಯ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅರ್ಜುನ ತನ್ನೊಂದಿಗೆ ತೆರಳಿದ್ದ ಹಲವರ ಜೀವ ಉಳಿಸಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದೆ. ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲೂ ಶೌರ್ಯ, ಸಾಹಸಕ್ಕೆ ಹೆಸರು ವಾಸಿಯಾಗಿದ್ದ ಅರ್ಜುನ, ಸಾಯುವ ಕೊನೇ ಕ್ಷಣದಲ್ಲೂ ತನ್ನ ಪ್ರಾಣ ತ್ಯಾಗ ಮಾಡಿ ಹಲವರ ಜೀವ ಉಳಿಸಿರುವುದು ಸುಳ್ಳಲ್ಲ. 2012 ರಿಂದ […]

ಕಾರು ನಿಲ್ಲಿಸೋಕೆ 100*100 ಸೈಟು, ಕೋಟಿ-ಕೋಟಿ ಆಸ್ತಿ

ಮೈಸೂರು: ಬೆಳ್ಳಂಬೆಳಗ್ಗೆ ಮೈಸೂರು ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಭರ್ಜರಿ ಕಾರ್ಯಾಚರಣೆ ನಡೆಸಿದೆ. ನಂಜನಗೂಡಿನ ಸರ್ಕಾರಿ ಕಾಲೇಜು ಉಪನ್ಯಾಸಕ ಮಹದೇವಸ್ವಾಮಿ ಮನೆ ಮೇಲೆ ದಾಳಿ ನಡೆದಿದೆ. ಇದರೊಂದಿಗೆ ಮೈಸೂರಿನ ಗುರುಕುಲ ಬಡಾವಣೆ ನಿವಾಸ ಸೇರಿ 12 ಕಡೆ ದಾಳಿ ನಡೆದಿದೆ. ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಮಹದೇವಸ್ವಾಮಿ ವಿರುದ್ಧ ಕುಟುಂಬದ ಹೆಸರಿನಲ್ಲಿ MS Group ಕಂಪನಿ ನಡೆಸುತ್ತಿದ್ದು, ಆದಾಯಕ್ಕೂ ಮೀರಿ ಅಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದು, ಆಸ್ತಿ ಪರಿಶೀಲನೆ ನಡೆಸಲಾಗುತ್ತಿದೆ.  ಲೋಕಾಯುಕ್ತ ADGP […]