`ಕೈ ಕಮಲ’ ಕ್ರೆಡಿಟ್ ಗಲಾಟೆ – ಬಿಜೆಪಿ ಶಾಸಕ ಚಾಲನೆ ನೀಡಿದ್ದ ಕಾಮಗಾರಿಗೆ ಮತ್ತೆ ಭೂಮಿ ಪೂಜೆ
ಚಿಕ್ಕೋಡಿ: ಲಕ್ಷ್ಮಣ್ ಸವದಿ ಕ್ಷೇತ್ರ ಅಥಣಿಯಲ್ಲಿ ಕೈ ಕಮಲ ಮಧ್ಯೆ ಕ್ರೆಡಿಟ್ ಕಿತ್ತಾಟ ಶುರುವಾಗಿದೆ. ಯಕ್ಕಂಚಿ – ಮುಸಲ್ಯಾನಖೋಡಿ ಗ್ರಾಮದವರೆಗಿನ ರಸ್ತೆ ಕಾಮಗಾರಿ ವಿಚಾರವಾಗಿ ಈಗಾಗಲೇ ಅಂದಿನ ಶಾಸಕ ಮಹೇಶ್ ಕುಮಟಳ್ಳಿ ಚಾಲನೆ ನೀಡಿದ್ದ ಕಾಮಗಾರಿಗೆ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ ಸವದಿ ಮತ್ತೆ ಭೂಮಿ ಪೂಜೆ ನೆರವೇರಿಸಿದ್ದಾರೆ.PauseUnmute ಈ ವಿಚಾರಕ್ಕೆ ಮಹೇಶ್ ಕುಮಟಳ್ಳಿ ಗರಂ ಆಗಿದ್ದಾರೆ. ಈ ಬಗ್ಗೆ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಮಹೇಶ್ ಕುಮಟಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಗೆ ಲಕ್ಷ್ಮಣ್ ಸವದಿ […]







































































































































































































































































































































































































































































































































































































































































































































































































































































































































































































































































































































