September 15, 2026

ಜಾತ್ಯಾತೀತ ನಿಲುವು ಬಿಡುವ ಪ್ರಶ್ನೆಯೇ ಇಲ್ಲ

ಬೆಂಗಳೂರು: ನಾವು ಜಾತ್ಯಾತೀತ ನಿಲುವು ಬಿಡುವ ಪ್ರಶ್ನೇಯೇ ಇಲ್ಲ, ಈ ವಿಚಾರವನ್ನು ಮೊದಲೇ ಸ್ಪಷ್ಟವಾಗಿ ಹೇಳಿದ್ದೇನೆ ಇದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿಯೇ ಮಾತನಾಡಿದ್ದೇನೆ. ಅದಾದ ಬಳಿಕ ಕುಮಾರಸ್ವಾಮಿಯವರು ಭೇಟಿಯಾಗಲಿದ್ದಾರೆ ಎಂದು ಅವರ ಬಳಿ ಹೇಳಿದ್ದೇ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 60 ವರ್ಷ ಹೋರಾಟದಲ್ಲಿ ಯಾವುದೇ ಸಮುದಾಯಕ್ಕೂ ಅನ್ಯಾಯ ಆಗಲು ನಮ್ಮ ಪಕ್ಷ ಬಿಟ್ಟಿಲ್ಲ. ಆದರೆ ಕರ್ನಾಟಕದಲ್ಲಿ ಕುಮಾರಸ್ವಾಮಿ ಸರ್ಕಾರ […]

ರಾಜ್ಯದ ಜನತೆಗೆ ದ್ರೋಹ ಮಾಡ್ತಿದ್ದಾರೆ

ಬೆಂಗಳೂರು: ಸ್ಟಾಲಿನ್ ಸ್ನೇಹಕ್ಕಾಗಿ ನೀರು ಹರಿಸಿ ರಾಜ್ಯದ ಜನತೆಗೆ ದ್ರೋಹ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಕಾವೇರಿ ನೀರು ನಿಯಂತ್ರಣ ಸಮಿತಿಯು  ನಿನ್ನೆ ನೀರು ಬಿಡುವ ಆದೇಶ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಂಗಳವಾರ ಬಂದ್ ಶಾಂತಿಯುತವಾಗಿ ಆಚರಿಸಲಾಗಿದೆ. ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ನೀರು ಬಿಡ್ತಿದೆ. ಸರ್ಕಾರ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾಗಿದೆ. ಸ್ಟಾಲಿನ್ ಸ್ನೇಹಕ್ಕಾಗಿ ನೀರು ಹರಿಸಿ ರಾಜ್ಯದ ಜನತೆಗೆ ದ್ರೋಹ ಮಾಡುತ್ತಿದ್ದಾರೆ ಎಂದರು. ತಮಿಳುನಾಡಿಗೆ 32 ಟಿಎಂಸಿ ಅಡಿ ನೀರು ಮಾತ್ರ 1.8 ಲಕ್ಷ ಹೆಕ್ಟೇರ್ […]

ಭೇಟಿಗೆ ಬರುವವರು ಹಾರ, ಪೇಟ ತರಬೇಡಿ, ನೋಟ್ ಬುಕ್ಸ್ ತನ್ನಿ

ಮೈಸೂರು: ತಮ್ಮನ್ನು ಭೇಟಿ ಮಾಡಲು ಬರುವಾಗ ಹಾರ ಹಾಗೂ ಪೇಟಗಳನ್ನು ತರಬೇಡಿ. ಅದರ ಬದಲು 200 ಪುಟಗಳ ನೋಟ್ ಬುಕ್ ತನ್ನಿ ಎಂದು ಮೈಸೂರು ಜಿಲ್ಲಾ ಉಸ್ತವಾರಿ ಸಚಿವ ಡಾ. ಹೆಚ್.ಸಿ ಮಹದೇವಪ್ಪ ಮನವಿ ಮಾಡಿದ್ದಾರೆ. ಈ ಸಂಬಂಧ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ಪೇಟ ಹಾಗೂ ಶಾಲಿಗೆ ದುಂದು ವೆಚ್ಚ ಮಾಡಬೇಡಿ. ಅದೇ ಹಣದಲ್ಲಿ ನೋಟ್ ಬುಕ್ ಹಾಗೂ ಶೈಕ್ಷಣಿಕ ಸಾಮಗ್ರಿಗಳನ್ನು ತೆಗೆದುಕೊಂಡು ಬನ್ನಿ. ಬಳಿಕ ಈ ಪುಸ್ತಕಗಳನ್ನು ಹಾಗೂ ಸಾಮಗ್ರಿಗಳನ್ನು ಮಕ್ಕಳಿಗೆ ಹಂಚಲಾಗುವುದು ಎಂದು ಬರೆದುಕೊಂಡಿದ್ದಾರೆ.  ಈ […]

ಸಿದ್ದರಾಮಯ್ಯ, ಡಿಕೆಶಿಯವರೇ ತಮಿಳುನಾಡಿಗೆ ಹೋಗಿ: ಸಿ.ಟಿ ರವಿ ಆಗ್ರಹ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ತಮಿಳುನಾಡಿಗೆ ಹೋಗಿ ಎಂದು ಮಾಜಿ ಸಚಿವ ಸಿ.ಟಿ ರವಿ ಆಗ್ರಹಿಸಿದ್ದಾರೆ. ಕಾವೇರಿ ನದಿ (Cauvery Water) ನೀರು ವಿವಾದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರೇ ಸ್ಟಾಲಿನ್‍ಗೂ ನಿಮಗೂ ಸಂಬಂಧ ಚೆನ್ನಾಗಿದೆ. ನೀವು, ಡಿಕೆ ಶಿವಕುಮಾರ್ (D.K Shivakumar) ಇಬ್ಬರೂ ತಮಿಳುನಾಡಿಗೆ ಹೋಗಿ. ಅಲ್ಲಿ ಸ್ಟಾಲಿನ್ ಭೇಟಿ ಮಾಡಿ ರಾಜ್ಯದ ಜನರ ಕಷ್ಟ ವಿವರಿಸಿ. ನೀವು ಕುರುವೈ ಬೆಳೆಗೆ ನೀರು ಕೇಳ್ತಿದ್ದೀರಿ, ಇಲ್ಲಿ ನಮಗೆ ಕುಡಿಯೋಯಲು ನೀರಿಲ್ಲ. […]

ಭಯೋತ್ಪಾದಕ ಚಟುವಟಿಕೆ- 6 ರಾಜ್ಯಗಳ 51 ಸ್ಥಳಗಳಲ್ಲಿ NIA ದಾಳಿ

ನವದೆಹಲಿ: ಭಯೋತ್ಪಾದಕರು ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡವರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯು ತೀವ್ರ ಕಾರ್ಯಾಚರಣೆ ನಡೆಸುತ್ತಿದೆ. ಉತ್ತರದ ರಾಜ್ಯಗಳಲ್ಲಿ ಕಾರ್ಯಚರಿಸುತ್ತಿರುವ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರು ರಾಜ್ಯಗಳಲ್ಲಿ ಇಂದು ಎನ್‌ಐಎ ಪ್ರಮುಖ ದಾಳಿ ನಡೆಸುತ್ತಿದೆ. ಲಾರೆನ್ಸ್ ಬಿಷ್ಣೋಯ್, ಬಾಂಬಿಹಾ ಮತ್ತು ಅರ್ಷದೀಪ್ ದಲ್ಲಾ ಗ್ಯಾಂಗ್‌ಗಳ ಸಹಚರರಿಗೆ ಸೇರಿದ 51 ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಮಾರ್ಚ್‌ನಲ್ಲಿ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ದೆಹಲಿಯಲ್ಲಿ ಕಾರ್ಯಾಚರಿಸುತ್ತಿರುವ ಗ್ಯಾಂಗ್‌ಸ್ಟರ್‌ಗಳಿಗೆ ಸೇರಿರುವ ಆಸ್ತಿಯನ್ನು ಎನ್‌ಐಎ […]

ನೀರು ಹಂಚಿಕೆ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ

ಚಾಮರಾಜನಗರ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಮಾದಪ್ಪನ ಸನ್ನಿಧಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಮಿಳುನಾಡಿಗೆ 18 ದಿನಗಳ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದರು. ಸುಪ್ರೀಂ ಕೋರ್ಟ್ ನಲ್ಲಿ ಈ ವಿಚಾರದ ಕುರಿತು ಚಾಲೆಂಜ್ ಮಾಡುತ್ತೇವೆ. ಸದ್ಯ ನಮ್ಮ ಬಳಿ ನೀರು ಇಲ್ಲ ಎಂದರು. ಈಗಾಗ್ಲೆ ಕಾನೂನು ತಜ್ಞರ ಸಲಹೆ ಪಡೆದಿದ್ದೇವೆ. ನೀರು ಹಂಚಿಕೆ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ. ಕಾವೇರಿ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ […]

ಮದುವೆ ಹಾಲ್‍ನಲ್ಲಿ ಅಗ್ನಿ ಅವಘಡ- 100 ಮಂದಿ ದುರ್ಮರಣ

ಬಾಗ್ದಾದ್: ಮದುವೆ ಹಾಲ್‍ನಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ 100 ಮಂದಿ ಸಾವನ್ನಪ್ಪಿ 150ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಉತ್ತರ ಇರಾಕ್‍ನಲ್ಲಿ ನಡೆದಿದೆ. ಇರಾಕ್‍ನ ನಿನೆವೆ ಪ್ರಾಂತ್ಯದ ಹಮ್ದನಿಯಾ (Nineveh Province) ಪ್ರದೇಶದಲ್ಲಿ ಬೆಂಕಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಪ್ರಧಾನವಾಗಿ ಕ್ರಿಶ್ಚಿಯನ್ ಪ್ರದೇಶವಾಗಿದ್ದು, ಮೊಸುಲ್ ನಗರದ ಹೊರಗೆ ರಾಜಧಾನಿ ಬಾಗ್ದಾದ್‍ನ ವಾಯುವ್ಯಕ್ಕೆ ಸುಮಾರು 335 ಕಿಲೋಮೀಟರ್ (205 ಮೈಲುಗಳು) ದೂರದಲ್ಲಿದೆ. ಈ ಎಲ್ಲಾ ದೃಶ್ಯಗಳು ಹಾಲ್‍ನಲ್ಲಿದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಘಟನೆ ನಡೆದ ಕೂಡಲೇ […]

ರೌಡಿಯಂತೆ ವರ್ತಿಸಿದ್ರಾ ಬಾಲಯ್ಯ? ನಟನ ವಿರುದ್ಧ ಮಾಧವಿ ಲತಾ ಗರಂ

ತೆಲುಗು ನಟ ಬಾಲಯ್ಯ ಎಕ್ಸ್‌ಪ್ರೆಸ್ಸಿವ್ ಮತ್ತು ಅಗ್ರೆಸ್ಸಿವ್ ಅನ್ನೋದು ಎಲ್ರಿಗೂ ಗೊತ್ತಿರೋ ವಿಚಾರವೇ. ಆದರೆ ಮೊನ್ನೆ ಮೊನ್ನೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಆಂಧ್ರಪ್ರದೇಶದ ಹಿಂದುಪುರಂ ಶಾಸಕ- ನಟ ಅಗ್ರೆಸ್ಸಿವ್ ಆಗಿ ವರ್ತಿಸಿ ಓರ್ವ ನಟಿಯಿಂದ ಟೀಕೆಗೆ ಒಳಗಾಗಿದ್ದಾರೆ. ಆ ನಟಿ ಮಾಧವಿ, ಬಾಲಯ್ಯ ವಿಧಾನಸಭೆಯಲ್ಲಿ ರೌಡಿಯಂತೆ ವರ್ತಿಸಿದ್ದಾರೆ ಎಂದಿದ್ದಾರೆ. ನಟಿಯ ಹೇಳಿಕೆ ಬಾಲಯ್ಯ ಫ್ಯಾನ್ಸ್‌ ಕಿಡಿಕಾರಿದ್ದಾರೆ. 60ರಲ್ಲೂ ಸೂಪರ್ ಸ್ಟಾರ್ ನಂದಿಮೂರಿ ಬಾಲಕೃಷ್ಣ. ನಟರಾಗಿಯೂ ಜನಪ್ರತಿನಿಧಿಯಾಗಿಯೂ ಗುರುತಿಸಿಕೊಂಡಿರೋ ಬಾಲಯ್ಯ ಆಂಧ್ರದಲ್ಲಿ ಅಪಾರ ಅಭಿಮಾನಿ ಬಳಗವನ್ನ ಹೊಂದಿರುವ ಲೀಡರ್. […]

ಭದ್ರಾ ಬಲದಂಡೆ , ಎಡದಂಡೆ ನಾಲೆಗಳಿಗೆ ನೀರು ಬಿಡುಗಡೆ

ದಾವಣಗೆರೆ: 2023-24 ನೇ ಸಾಲಿನಲ್ಲಿ ಶಿವಮೊಗ್ಗ ಭದ್ರಾ ಜಲಾಶಯದ ಮುಂಗಾರು ಬೆಳೆಗಳಿಗೆ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ ನೀರನ್ನು ಸರದಿಯನ್ವಯ ಹರಿಸಲಾಗುವುದು ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಹಾಗೂ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಸುಜಾತ ಅವರು ತಿಳಿಸಿದ್ದಾರೆ. ಭದ್ರಾ ಬಲದಂಡೆ ನಾಲೆಗಳಿಗೆ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 15 ರವರೆಗೆ ಒಟ್ಟು 20 ದಿನಗಳು ಹಾಗೂ ಅಕ್ಟೋಬರ್ 26 ರಿಂದ ನವೆಂಬರ್ 17 ರವರೆಗೆ ಒಟ್ಟು […]

ರಾಜ್ಯ ಸರ್ಕಾರಕ್ಕೆ ಕಾವೇರಿ ಬಗ್ಗೆ ಕಾಳಜಿಯಿಲ್ಲ

ಕಲಬುರಗಿ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಸರ್ಕಾರ ತನ್ನ ವಾದ ಮಂಡಿಸಲು ವಿಫಲವಾಗಿದ್ದು, ರಾಜ್ಯ ಸರ್ಕಾರಕ್ಕೆ ಕಾವೇರಿ ಬಗ್ಗೆ ಕಾಳಜಿಯಿಲ್ಲದಂತಾಗಿದೆ ಎಂದು ಜೆಡಿಎಸ್ (JDS) ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರೇ ಇಲ್ಲದಿದ್ದರೆ ಜನರಿಗೆ ಕುಡಿಯುವ ನೀರು ಸಿಗುತ್ತಾ? ರಾಜ್ಯದ ಜನರಿಗೆ ಕುಡಿಯುವ ನೀರು ಕೊಡಲಿಲ್ಲ ಎಂದಾಗ ರಾಜ್ಯ ಸರ್ಕಾರ ಉಳಿಯುತ್ತಾ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಲಿದೆ ಎಂದು ಮೊದಲೇ ಹವಾಮಾನ ಇಲಾಖೆ ವರದಿ ನೀಡಿದಾಗಲೇ ರಾಜ್ಯ […]