September 13, 2026
#ಜಿಲ್ಲೆ

ನನ್ನ ಸೋಲಿಗೆ ನಮ್ಮೊಳಗಿನ ಪಿತೂರಿಯೇ ಕಾರಣಭಾವುಕರಾದ ಬಿಜೆಪಿ ಮಾಜಿ ಶಾಸಕಿ

ತುಮಕೂರು:
ವಿಧಾನಸಭಾ ಚುನಾವಣೆ ನಡೆದು ಏಳು ತಿಂಗಳು ಕಳೆದರೂ ಸಹ ಇನ್ನೂ ಕೂಡ ಪರಾಜಿತ ಅಭ್ಯರ್ಥಿಗಳ ಹೊಟ್ಟೆಯೊಳಗಿನ ನೋವು ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಬಿಜೆಪಿ ಮಾಜಿ ಶಾಸಕಿ ರೂಪಾಲಿ ನಾಯಕ್ ಆಡಿರುವ ಮಾತು.
ಹೌದು.. ಬಿಜೆಪಿ ಪಕ್ಷದ ಮಾಜಿ ಶಾಸಕಿ ರೂಪಾಲಿ ನಾಯಕ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮೊಳಗಿನ ಪಿತೂರಿಯಿಂದಲೇ ನಾನು ಸೋಲು ಅನುಭವಿಸಿದೆ ಎಂದು ಬಾಂಬ್ ಸಿಡಿಸಿದ್ದಾರೆ. ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕಿ ರೂಪಾಲಿ ನಾಯಕ್, ನಮ್ಮ ಬೆಳವಣಿಗೆಯನ್ನು ಸಹಿಸದ ಕಾರಣ ನಾನು ಸೋತೆ. ನನ್ನ ಸೋಲಿಗೆ ನಮ್ಮ ಪಕ್ಷದೊಳಗೆ ನಡೆಸಿದ ಪಿತೂರಿಯೇ ಕಾರಣ ಎಂದು ಆರೋಪ ಮಾಡಿದ್ದಾರೆ.
ನಾನು ನನ್ನ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೆ ಎಂದ ಮಾಜಿ ಶಾಸಕಿ ರೂಪಾಲಿ ನಾಯಕ್, ಇವತ್ತು ಕಾಂಗ್ರೆಸ್ ನಲ್ಲಿ ಕೆಲಸ ಆಗ್ತಿಲ್ಲ. ಶಾಸಕರ ಅನುದಾನವನ್ನು ಕಿತ್ತುಕೊಂಡು ಐದು ಗ್ಯಾರಂಟಿಗಳಿಗೆ ನೀಡಲಾಗುತ್ತಿದೆ. ಮೊದಲು ಅಯೋಧ್ಯೆಯಲ್ಲಿ ತಾತ್ಕಾಲಿಕ ರಾಮನನ್ನ ಶೆಡ್ಡಿನಲ್ಲಿ ಕೂರಿಸುವಂತಾಗಿತ್ತು. ಇದನ್ನ ನೋಡಿದ್ರೆ ಅಳು ಬರುತ್ತಿತ್ತು. ಪ್ರಧಾನಿ ಮೋದಿಯವರು ದೇವಮಾನವರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದ್ರು. ರಾಮಲಲ್ಲಾ ವಿಗ್ರಹ ನೋಡಿದ್ರೆ ಮನಸಿಗೆ ಖುಷಿಯಾಗುತ್ತೆ ಎಂದರು.
ಇನ್ನು, ಮಾಜಿ ಸಚಿವ ಮಾಧುಸ್ವಾಮಿ, ಬಿ.ಸಿ ನಾಗೇಶ್ ಸೋಲಲು ಕಾಂಗ್ರೆಸ್ ಗ್ಯಾರಂಟಿಗಳೇ ಕಾರಣ ಎಂದ ಮಾಜಿ ಶಾಸಕಿ ರೂಪಾಲಿ ನಾಯಕ್, ಮಾಧುಸ್ವಾಮಿ, ನಾಗೇಶ್ ಅವರು ಸೋಲ್ತಾರೆ. ಕಾಂಗ್ರೆಸ್‌ಗೆ ಮತ ಹಾಕಿ ನಮ್ಮೊಂದಿಗೆ ಪೋಟೋ ತೆಗೆಸಿಕೊಳ್ಳುವವರು ಇದ್ದಾರೆ. ಅವರೆಲ್ಲಾ ನಮ್ಮ ಬಿಜೆಪಿ ಮುಖಂಡರಲ್ಲ. ಚುನಾವಣೆಗೆ ಸನ್ನದ್ಧರಾಗಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ದೇವರ ರೂಪದಲ್ಲಿ ಇದ್ದಾರೆ. ಅವರನ್ನು ನೋಡುವುದೇ ಖುಷಿ ಎಂದರು.
ಇನ್ನು, ಮತ್ತೊಮ್ಮೆ ಮೋದಿ ಅಧಿಕಾರಕ್ಕೆ ಬರಬೇಕು. ರಾಮರಾಜ್ಯ ನಿರ್ಮಾಣವಾಗಬೇಕು ಎಂದು ಬಿಜೆಪಿ ಕಾರ್ಯಕಾರಣಿಯಲ್ಲಿ ರೂಪಾಲಿ ನಾಯಕ್ ಹೇಳಿದರು.

Leave a comment

Your email address will not be published. Required fields are marked *