July 29, 2026
#ಬೆಂಗಳೂರು

ಹಲವು ಕ್ಷೇತ್ರಗಳಲ್ಲಿ ಹೊಸಬರಿಗೆ ಟಿಕೆಟ್ ಫಿಕ್ಸ್

ಬೆಂಗಳೂರು:
ಈ ಬಾರಿಯೂ 25 ಅಥವಾ ಅಧಿಕ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಗುರಿಯನ್ನು ಹೊಂದಿರುವ ರಾಜ್ಯ ಬಿಜೆಪಿ ಎರಡು ಸಮೀಕ್ಷೆಗಳನ್ನು ನಡೆಸಿದೆ. ಎರಡೂ ಸರ್ವೇ ಆಧಾರದ ಮೇಲೆ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಈ ಪೈಕಿ 10 ರಿಂದ 15 ಕ್ಷೇತ್ರಗಳಲ್ಲಿ ಹೊಸಬರಿಗೆ ಟಿಕೆಟ್ ನೀಡೋದು ಬಹುತೇಕ ಖಚಿತ ಎಂಬ ಸುದ್ದಿ ಹರಿದಾಡುತ್ತಿದೆ. ಇನ್ನುಳಿದ ಕ್ಷೇತ್ರದ ಬಗ್ಗೆ ಅಂತಿಮವಾಗಬೇಕಿದೆ. 13 ಕ್ಷೇತ್ರಗಳಿಗಾಗಿ ಕೊನೆಯ ಸಮೀಕ್ಷೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಲೋಕಸಭಾ ಚುನಾವಣೆಯಲ್ಲಿ 25ಕ್ಕೂ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ ಶತ ಪ್ರಯತ್ನ ಮಾಡುತ್ತಿದೆ. 28 ಕ್ಷೇತ್ರಗಳಲ್ಲೂ ಸಮೀಕ್ಷೆ ನಡೆಸಿರೋ ಬಿಜೆಪಿ ಗೆಲುವಿನ ಮಾನದಂಡ ಆಧಾರದಲ್ಲಿ ಟಿಕೆಟ್ ಹಂಚಿಕೆಗೆ ಸಿದ್ಧತೆ ಮಾಡಿಕೊಂಡಿದೆ.
ಎರಡು ಸಮೀಕ್ಷೆಯ ಆಧಾರದಲ್ಲಿ 10 ರಿಂದ 15 ಹಾಲಿ ಸಂಸದರಿಗೆ ಕೊಕ್ ಕೊಡುವ ಸಾಧ್ಯತೆಗಳಿವೆಯಂತೆ. ಆ ಕ್ಷೇತ್ರಗಳಿಗೂ ಹೊಸ ಅಭ್ಯರ್ಥಿಗಳ ಹೆಸರು ಕೇಳಿ ಬಂದಿದ್ದು, ಅವುಗಳಲ್ಲಿ ರಾಜ್ಯ ನಾಯಕರು 2 ರಿಂದ 3 ಹೆಸರುಗಳನ್ನು ಅಂತಿಮಗೊಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಎರಡರಿಂದ ಮೂರು ಕ್ಷೇತ್ರ ಅಂತಿಮವಾಗಿರೋ ಕ್ಷೇತ್ರಗಳು
ಚಾಮರಾಜನಗರ, ಉತ್ತರ ಕನ್ನಡ, ಹಾವೇರಿ, ಬೆಳಗಾವಿ, ವಿಜಯಪುರ, ಬೀದರ್, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಕೇಂದ್ರ, ದಕ್ಷಿಣ ಕನ್ನಡ, ರಾಯಚೂರು ಮತ್ತು ಚಿತ್ರದುರ್ಗ
ಈ ಮೇಲಿನ 15 ಕ್ಷೇತ್ರಗಳಲ್ಲಿ ಬಹುತೇಕರಿಗೆ ಟಿಕೆಟ್ ತಪ್ಪುವುದು ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಕ್ಷೇತ್ರಗಳಿಗೆ ೨ ರಿಂದ ೩ ಹೆಸರುಗಳನ್ನು ನಾಯಕರು ಫೈನಲ್ ಮಾಡಿದ್ದಾರೆ ಎನ್ನಲಾಗಿದೆ.
ವರದಿ ಕೇಳಿರುವ ಹೈಕಮಾಂಡ್
ಕ್ಷೇತ್ರದಲ್ಲಿ ಶಕ್ತಿ, ಪ್ರಭಾವ, ಜಾತಿ, ಸಂಘಟನೆ, ಗೆಲ್ಲುವ ಶಕ್ತಿಯ ಬಗ್ಗೆ ವರದಿಯನ್ನು ಹೈಕಮಾಂಡ್ ಕೇಳಿದೆ ಎನ್ನಲಾಗಿದೆ. ಇನ್ನುಳಿದ ಕ್ಷೇತ್ರಗಳ ಹಾಲಿ ಸಂಸದರ ಬಗ್ಗೆ ಸಮೀಕ್ಷೆ ನಡೆಯುತ್ತಿದೆ.
ಮೂರನೇ ವರದಿ ಆಧಾರದಲ್ಲಿ ಟಿಕೆಟ್ ಹಂಚಿಕೆ?
ಈ ಎಲ್ಲದರ ಜೊತೆಯಲ್ಲಿ ಹಾಲಿ ಸಂಸದರ ಕಾರ್ಯವೈಖರಿ, ಪ್ಲಸ್, ಮೈನಸ್ ಬಗ್ಗೆಯೂ ಹೈಕಮಾಂಡ್ ವರದಿ ಕೇಳಿದೆ ಎನ್ನಲಾಗಿದೆ. ಎರಡು ಆಂತರಿಕ ವರದಿಗಳನ್ನು ಸಂಗ್ರಹಿಸಿರುವ ಬಿಜೆಪಿ, ಮೂರನೇ ವರದಿಯ ಆಧರಿಸಿ ಟಿಕೆಟ್ ಫೈನಲ್‌ಗೆ ತಯಾರಿ ನಡೆಸುವ ಸಾಧ್ಯತೆಗಳಿವೆ.

Leave a comment

Your email address will not be published. Required fields are marked *