July 29, 2026
#ಬೆಂಗಳೂರು

ಬೆಂಗಳೂರಿನಲ್ಲಿ ಇನ್ನೂ ಉಳಿದಿವೆ 7878 ರಸ್ತೆ ಗುಂಡಿ

ಬೆಂಗಳೂರು
ಬೆಂಗಳೂರಿನ ರಸ್ತೆ ಗುಂಡಿಗಳು ಜನರ ಜೀವಕ್ಕಾಗಿ ಕಾದು ಕುಳಿತಂತಿದೆ. ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿದರೂ ರಸ್ತೆಗುಂಡಿಗಳನ್ನು ಮುಚ್ಚಲು ಪಾಲಿಕೆ ವಿಫಲವಾಗುತ್ತಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ಈ ಯಮ ಗುಂಡಿಗಳಿAದಾಗಿ ವಾಹನ ಸವಾರರು ಸರ್ಕಸ್ ಮಾಡುತ್ತಲೇ ಓಡಾಡುವಂತಾಗಿದೆ. ಸ್ವಲ್ಪ ಯಾಮಾರಿದ್ರು ಕೂಡ ಅನಾಹುತ ಆಗೊದಂತು ತಪ್ಪಿದ್ದಲ್ಲ, ಇನ್ನೂ ಬನ್ನೆರುಘಟ್ಟ ಮುಖ್ಯರಸ್ತೆಯ ಮಧ್ಯದಲ್ಲೆ ಗುಂಡಿಗಳು ಬಿದ್ದಿದ್ದು ವಾಹನ ಸವಾರರು ಓಡಾಡಲು ಕೂಡ ಭಯ ಪಡುವಂತಾಗಿದೆ. ಈ ಬಗ್ಗೆ ಸ್ಥಳೀಯರು ಮಾತನಾಡಿ ಇಲ್ಲಿ ಗುಂಡಿಗಳು ಇವೆ ಇದರಿಂದ ಓಡಾಡಲು ತೊಂದರೆ ಆಗುತ್ತದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರು ಯಾರೊಬ್ಬರು ಇತ್ತ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಪ್ರತಿ ಬಾರಿ ಎಲ್ಲಾ ಗುಂಡಿ ಮುಚ್ಚಲಾಗಿದೆ ಎನ್ನುವ ಪಾಲಿಕೆಯೇ ಕೊಟ್ಟಿರುವ ವರದಿಯಲ್ಲಿ ಇನ್ನೂ ಕೂಡ ನಗರದಲ್ಲಿ 5961 ರಸ್ತೆಗುಂಡಿಗಳು ಮುಚ್ಚುವುದು ಬಾಕಿ ಇದೆ. ಡಿಸೆಂಬರ್ ನಲ್ಲಿ ಪಾಲಿಕೆ ಮುಚ್ಚಿದ್ದು ಕೇವಲ 1917 ಗುಂಡಿಗಳು ಮಾತ್ರ. ಆದರೆ ನಗರದಲ್ಲಿ 5961 ಗುಂಡಿಗಳು ಮುಚ್ಚಲು ಬಾಕಿ ಇದ್ದು ಒಟ್ಟು ಈ ತಿಂಗಳು 7878 ಗುಂಡಿಗಳು ಬಿದ್ದಿವೆ.
ಬೊಮ್ಮನಹಳ್ಳಿಯಲ್ಲಿ 643 ರಸ್ತೆ ಗುಂಡಿ, ದಾಸರಹಳ್ಳಿಯಲ್ಲಿ ೬೪೫ ರಸ್ತೆ ಗುಂಡಿ, ಪೂರತಣ ವಲಯದಲ್ಲಿ ೧೯೮೮ ರಸ್ತೆ ಗುಂಡಿ, ಮಹಾದೇವಪುರದಲ್ಲಿ 1145 ರಸ್ತೆ ಗುಂಡಿ, ಆರ್ ಆರ್ ನಗರದಲ್ಲಿ ೫೮೯ ರಸ್ತೆ ಗುಂಡಿ, ದಕ್ಷಿಣ ವಲಯದಲ್ಲಿ ೭೦೬ ರಸ್ತೆ ಗುಂಡಿ, ಪಶ್ಚಿಮ ವಲಯದಲ್ಲಿ 739 ರಸ್ತೆ ಗುಂಡಿ, ಯಲಹಂಕದಲ್ಲಿ 1423 ರಸ್ತೆ ಗುಂಡಿ ಸೇರಿ ಒಟ್ಟು 7878 ರಸ್ತೆಗುಂಡಿಗಳು ಬಿದ್ದಿವೆ.
ಇನ್ನೂ ಈ ಬಗ್ಗೆ ಬಿಬಿಎಂಪಿ ಚೀಫ್ ಇಂಜಿನಿಯರ್ ರನ್ನ ಕೇಳಿದರೆ ತ್ವರಿತಗತಿಯಲ್ಲಿ ಗುಂಡಿ ಮುಚ್ಚಲು ಬಿಬಿಎಂಪಿ ಹೊಸ ಟೆಂಡರ್ ಕರೆಯಲು ಮುಂದಾಗಿದೆ. ಇದಕ್ಕಂತಲೇ ಪ್ರತಿ ವಾರ್ಡ್ 15 ಲಕ್ಷ ಅನುದಾನವನ್ನೂ ಪಾಲಿಕೆ ನಿಗದಿ ಮಾಡಿದೆ. ವಾರ್ಡ್ ಮಟ್ಟದಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲು ವಿಶೇಷ ನಿಗಾವಹಿಸಲಿದ್ದು, ಶೀಘ್ರವೇ ರಸ್ತೆಗುಂಡಿ ಮುಚ್ಚಲಿದ್ದಾರೆ ಎಂದು ತಿಳಿಸಿದ್ದಾರೆ.
ಒಟ್ಟಾರೆ ರಸ್ತೆಗುಂಡಿಗಳಿAದ ಬೆಂಗಳೂರಿಗೆ ಮುಕ್ತಿ ಇಲ್ಲ ಎಂಬAತಾಗಿದೆ. ಇದಕ್ಕಂತಲೇ ಪ್ರತಿ ವರ್ಷ ಬಜೆಟ್ ನಲ್ಲಿ ನೂರಾರು ಕೋಟಿ ಪಾಲಿಕೆ ಮೀಸಲಿಡುತ್ತೆ. ಆದರೂ ಇದಕ್ಕೊಂದು ಶಾಶ್ವತ ಪರಿಹಾರ ನೀಡಲು ಬಿಬಿಎಂಪಿ ಎಡವುತ್ತಿರುವುದು ವಿಪರ್ಯಾಸ.

Leave a comment

Your email address will not be published. Required fields are marked *