July 29, 2026
#ಬೆಂಗಳೂರು

ಬರ ಪರಿಹಾರಕ್ಕೆ ರಾಜ್ಯ ಸರ್ಕಾರದಿಂದ 324 ಕೋಟಿ ಅನುದಾನ ಬಿಡುಗಡೆ 

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ದ ಬರ ಪರಿಹಾರಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ ಅಂತ ಆರೋಪ ಮಾಡುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಬರ ಪರಿಹಾರಕ್ಕೆ ಅನುದಾನ ಬಿಡುಗಡೆ ಮಾಡಿದೆ. SDRF ಅಡಿ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

31 ಜಿಲ್ಲೆಗಳಿಗೆ 324 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಈ ಬಾರಿ 235 ತಾಲೂಕುಗಳ ಪೈಕಿ 216 ತಾಲೂಕುಗಳು ಬರ ಪೀಡಿತ ಅಂತ ರಾಜ್ಯ ಸರ್ಕಾರ (Karnataka Govt) ಘೋಷಣೆ ಮಾಡಿತ್ತು. ಅಲ್ಲದೆ, ಕೇಂದ್ರ ಸರ್ಕಾರಕ್ಕೆ ಬರ ಪರಿಹಾರಕ್ಕೆ ಅಂತ 17 ಸಾವಿರ ಕೋಟಿ ರೂ. ಪರಿಹಾರ ಕೇಳಿದೆ. ಈವರೆಗೂ ಕೇಂದ್ರ ಸರ್ಕಾರ ಒಂದೂ ರೂಪಾಯಿ ಅನುದಾನ ಬಿಡುಗಡೆ ಮಾಡಿಲ್ಲ ಅಂತ ಸಿಎಂ ಹಾದಿಯಾಗಿ ಸಚಿವರು ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಬರ ಪರಿಹಾರಕ್ಕೆ ಅಂತ 324 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. 

ಯಾವ ಜಿಲ್ಲೆಗೆ ಎಷ್ಟು ಅನುದಾನ?
ಬೆಂಗಳೂರು ನಗರ- 7.50 ಕೋಟಿ.
ಬೆಂಗಳೂರು ಗ್ರಾಮಾಂತರ- 6 ಕೋಟಿ.
ರಾಮನಗರ-7.50 ಕೋಟಿ.
ಕೋಲಾರ – 9 ಕೋಟಿ.
ಚಿಕ್ಕಬಳ್ಳಾಪುರ- 9 ಕೋಟಿ.
ತುಮಕೂರು-15 ಕೋಟಿ.
ಚಿತ್ರದುರ್ಗ- 9 ಕೋಟಿ.
ದಾವಣಗೆರೆ- 9 ಕೋಟಿ.
ಚಾಮರಾಜನಗರ-7.50 ಕೋಟಿ
ಮೈಸೂರು – 13.50 ಕೋಟಿ.
ಮಂಡ್ಯ- 10.50 ಕೋಟಿ.
ಬಳ್ಳಾರಿ- 7.50 ಕೋಟಿ.
ಕೊಪ್ಪಳ- 10.50 ಕೋಟಿ.
ರಾಯಚೂರು- 9 ಕೋಟಿ.
ಕಲಬುರ್ಗಿ- 16.50 ಕೋಟಿ.
ಬೀದರ್- 4.50 ಕೋಟಿ.
ಬೆಳಗಾವಿ- 22.50 ಕೋಟಿ.
ಬಾಗಲಕೋಟೆ- 13.50 ಕೋಟಿ.
ವಿಜಯಪುರ- 18 ಕೋಟಿ.
ಗದಗ-10.50 ಕೋಟಿ.
ಹಾವೇರಿ-12 ಕೋಟಿ.
ಧಾರವಾಡ-12 ಕೋಟಿ.
ಶಿವಮೊಗ್ಗ-10.50 ಕೋಟಿ.
ಹಾಸನ- 12 ಕೋಟಿ.
ಚಿಕ್ಕಮಗಳೂರು-12 ಕೋಟಿ.
ಕೊಡಗು-7.50 ಕೋಟಿ.
ದಕ್ಷಿಣ ಕನ್ನಡ- 3 ಕೋಟಿ.
ಉಡುಪಿ- 4.50 ಕೋಟಿ.
ಉತ್ತರ ಕನ್ನಡ-16.50 ಕೋಟಿ.
ಯಾದಗಿರಿ-9 ಕೋಟಿ.
ವಿಜಯನಗರ-9 ಕೋಟಿ.

Leave a comment

Your email address will not be published. Required fields are marked *