ರಾಜ್ಯದ ಜನರಿಗೆ ಅನ್ಯಾಯವಾಗ್ತಿದೆ; ಸರ್ಕಾರ ಸ್ಪಷ್ಟ ನಿಲುವಿಗೆ ಬರಲಿ
ಮಂಡ್ಯ: ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಮೊದಲಿನಿಂದಲೂ ಎಡವಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ನಡುವೆ ಬಹಳ ವ್ಯತ್ಯಾಸ ಇದೆ. ಆದ್ದರಿಂದ ರಾಜ್ಯದ ಜನರಿಗೆ ಅನ್ಯಾಯವಾಗ್ತಿದೆ ಎಂದು ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಕಾವೇರಿ ವಿಚಾರವಾಗಿ ಇನ್ನೂ ಸುಪ್ರೀಂಕೋರ್ಟ್ಗೆ ಅರ್ಜಿ ಹಾಕಿಲ್ಲ. ಜನರ ರಕ್ಷಣೆ ಮಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಸರ್ಕಾರ ಸ್ಪಷ್ಟ ನಿಲುವಿಗೆ ಬರಲಿ, ನಾವು ಸಹಕಾರ ನೀಡುತ್ತೇವೆ ಎಂದು ಮಾಜಿ ಸಿಎಂ ಬೊಮ್ಮಾಯಿ ಹೇಳಿದರು.
ಮಂಡ್ಯದಲ್ಲಿ ಕಾವೇರಿ ವಿಚಾರವಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ಸರ್ಕಾರ ಮೊದಲಿಂದಲೂ ಎಡವಿದೆ. ಸಿಎಂ, ಡಿಸಿಎಂ ನಡುವೆ ವ್ಯತ್ಯಾಸ ಇದೆ. ಅದರಿಂದ ಜನರಿಗೆ ಅನ್ಯಾಯವಾಗುತ್ತಿದೆ. ಸುಪ್ರಿಂ ಕೋರ್ಟ್ ಗೆ ಇನ್ನು ಅರ್ಜಿ ಹಾಕಿಲ್ಲ. ಜನರ ರಕ್ಷಣೆ ಮಾಡಲು ವಿಫಲವಾಗಿದ್ದಾರೆ. ಡಿಕೆ ಶಿವಕುಮಾರ್ ನೀರು ಬಿಡುತ್ತಿಲ್ಲ ಎನ್ನುತ್ತಾರೆ. ಆದರೆ ಅಧಿಕಾರಿ ಬಳಿ ಮಾಹಿತಿ ಕೇಳಿದ್ರೆ ಎರಡು ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ ಎನ್ನುತ್ತಿದ್ದಾರೆ. ಯಾಕೆ ಈ ರೀತಿ ಸುಳ್ಳು ಹೇಳುತ್ತಿದ್ದೀರಿ. ಜನರನ್ನ ಯಾಕೆ ದಾರಿ ತಪ್ಪಿಸುತ್ರಿದ್ದೀರಿ. ಸರ್ಕಾರ ಸ್ಪಷ್ಟ ನಿಲುವಿಗೆ ಬರಲಿ. ನಾವು ಸಹಕಾರ ಕೊಡುತ್ತೇವೆ. ಏನು ಮಾಡಬೇಕು ಎಂದು ನಿಲುವು ತೆಗೆದುಕೊಳ್ಳಿ ಎಂದರು.
ನಮ್ಮ ಸರ್ಕಾರ ಇದ್ದಾಗ ಮೇಕೆದಾಟು ಯೋಜನೆ ಡಿಪಿಆರ್ಗೆ ಅನುಮತಿ ಕೊಟ್ಟಿದ್ದೇವು. ಜಲಶಕ್ತಿ ಇಲಾಖೆಯಿಂದ ಏನು ಸಹಕಾರ ಬೇಕೋ ಅದನ್ನ ನಾವು ಮಾಡುತ್ತೇವೆ. ಬೆಂಗಳೂರು ನೀರಿಗೆ ಪ್ಲಾನ್ ಮಾಡಬೇಕು. ಬ್ರಾಂಡ್ ಬೆಂಗಳೂರು ಅಂದರೇ ಸಾಲದು. ನೀರಿಗೆ ತೊಂದರೆ ಆಗಲಿದೆ. 2018ರಲ್ಲಿ ಸಂಕಷ್ಟ ಸೂತ್ರದ ಬಗ್ಗೆ ಚರ್ಚೆ ಮಾಡಿದ್ದೇವು. ಸಭೆಯಲ್ಲಿ ನೀರು ಬಿಡಲ್ಲ ಎಂದು ನೀರು ಬಿಟ್ಟಿದ್ದಾರೆ. ತಮಿಳುನಾಡು ಸರ್ಕಾರವನ್ನ ಒಪ್ಪಿಸಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಲಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಎಲ್ಲ ತಾಲೂಕುಗಳನ್ನ ಬರಗಾಲ ಎಂದು ಘೋಷಣೆ ಮಾಡಿದೆ. ಒಂದು ಎಕರೆಗೆ 25 ಸಾವಿರ ಪರಿಹಾರ ಕೊಡುಬೇಕು ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.














































































































































































































































































































































































































































































































































































































































































































































































































































































































































































































































































































































