September 15, 2026

ಚುನಾವಣಾ ಅಖಾಡಕ್ಕಿಳಿಯಲು ಸರ್ಕಾರಿ ಹುದ್ದೆ ತೊರೆದಸಂಸದ ಶ್ರೀನಿವಾಸ್ ಪ್ರಸಾದ್ ಅಳಿಯ

ಚಾಮರಾಜನಗರ:ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯ ಸರ್ಕಾರಿ ವೈದ್ಯರೊಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.ಆಸ್ಪತ್ರೆಯ ಖ್ಯಾತ ಬೆನ್ನುಹುರಿ ತಜ್ಞ ಹಾಗೂ ಪ್ರಾಧ್ಯಾಪಕರಾಗಿದ್ದ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಅಳಿಯ ಡಾ.ಎನ್.ಎಸ್.ಮೋಹನ್ ಅವರು ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಇದೀಗ ಚುನಾವಣಾ ಅಖಾಡಕ್ಕಿಳಿಯಲು ಲಕ್ಷಾಂತರ ರೂ. ವೇತನದ ಸರ್ಕಾರಿ ಹುದ್ದೆಯನ್ನು ತೊರೆದಿದ್ದಾರೆ.ಅವರು ಹುದ್ದೆಗೆ ಸೇರಿ ಕೇವಲ ೧೫ ವರ್ಷಗಳಾಗಿತ್ತು. ಇನ್ನೂ ಉನ್ನತ ಹುದ್ದೆಗೇರುವ ಅವಕಾಶವಿದ್ದರೂ ಸಹ ರಾಜಕೀಯದಲ್ಲಿ ಸಕ್ರಿಯರಾಗಲು ಹುದ್ದೆಯನ್ನು ತೊರೆದಿದ್ದಾರೆ. ಟಿಕೆಟ್ […]

ಹೋಟೆಲ್‌ಗೆ ಊಟಕ್ಕೆ ಹೋಗೋಣ ಎಂದ ಮ್ಯಾನೇಜರ್ಮನೆಗೆ ಕರೆದೊಯ್ದು ರೇಪ್ ಮಾಡ್ದ!

ಬೆಂಗಳೂರು:ಹೋಟೆಲ್‌ಗೆ ಊಟಕ್ಕೆ ಹೋಗೋಣ ಎಂದು ಹೇಳಿ ಕಂಪೆನಿ ವ್ಯವಸ್ಥಾಪಕನೇ ಮಹಿಳಾ ಸಹೋದ್ಯೋಗಿಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೊಸ ವರ್ಷದ ಮುನ್ನಾ ದಿನ ಡಿಸೆಂಬರ್ ೩೧ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅತ್ಯಾಚಾರಕ್ಕೀಡಾದ ಸಂತ್ರಸ್ತೆಯ ಪತಿಯೂ ಇದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂಬ ವಿಚಾರವೂ ಬೆಳಕಿಗೆ ಬಂದಿದೆ.ಘಟನೆ ವಿವರ: ಡಿಸೆಂಬರ್ 31ರಂದು ಊಟಕ್ಕೆ ಕರೆದೊಯ್ದು ಮಹಿಳಾ ಸಹೋದ್ಯೋಗಿ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಬಸವೇಶ್ವರ ನಗರದಲ್ಲಿರುವ ಕಾಲ್ ಸೆಂಟರ್ ಕಂಪೆನಿ ವ್ಯವಸ್ಥಾಪಕ ಕೆ.ಆರ್ .ಪುರಂ […]

ಸರಣಿ ಅಪಘಾತ – ನಾಲ್ವರು ದುರ್ಮರಣ

ಹುಬ್ಬಳ್ಳಿ:ಎರಡು ಕಾರು ಮತ್ತು ಲಾರಿ ನಡುವೆ ಸರಣಿ ಅಪಘಾತ ನಡೆದ ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಬೆಳ್ಳಿಗಟ್ಟಿ ಕ್ರಾಸ್ ಬಳಿ ನಡೆದಿದೆ.ಬೆಂಗಳೂರು-ಮುAಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಕುಂದಗೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಲ್ಲಿ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇನ್ನೂ ನಾಲ್ವರಿಗೆ ಗಂಭೀರ ಗಾಯಗಳಿವೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು, ಸ್ಥಳಕ್ಕೆ ಧಾರವಾಡ ಎಸ್ಪಿ ಡಾ.ಗೋಪಾಲ ಬ್ಯಾಕೋಡ್ ಭೇಟಿ ನೀಡಿದ್ದಾರೆ.ಈ ಘಟನೆಯಲ್ಲಿ ಹಾಸನ […]

ರಾಮ್ ಚರಣ್ ಚಿತ್ರದಲ್ಲಿ ಶಿವಣ್ಣಸದ್ಯಕ್ಕೆ ಏನೂ ಹೇಳಲಾರೆ ಎಂದ ನಟ

ಈಗಾಗಲೇ ಎರಡು ತಮಿಳು ಸಿನಿಮಾದಲ್ಲಿ ನಟಿಸಿರುವ ಕನ್ನಡದ ಹೆಸರಾಂತ ನಟ ಶಿವರಾಜ್ ಕುಮಾರ್, ಇದೀಗ ತೆಲುಗು ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿತ್ತು. ತೆಲುಗಿನ ಹೆಸರಾಂತ ನಟ ರಾಮ್ ಚರಣ್ ನಟನೆಯ ಹೊಸ ಚಿತ್ರದಲ್ಲಿ ಶಿವಣ್ಣ ಪ್ರಮುಖ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಈ ಕುರಿತಂತೆ ಸ್ವತಃ ಶಿವರಾಜ್ ಕುಮಾರ್ ಮಾತನಾಡಿದ್ದಾರೆ.ರಾಮ್ ಚರಣ್ ಜೊತೆಗಿನ ಸಿನಿಮಾ ಬಗ್ಗೆ ಮಾತನಾಡಿರುವ ಶಿವರಾಜ್ ಕುಮಾರ್, ‘ತೆಲುಗಿನಲ್ಲಿ ಆಫರ್ ಬಂದಿದ್ದು ನಿಜ. ರಾಮ್ ಚರಣ್ ಅವರ ಚಿತ್ರವನ್ನು ನಿರ್ದೇಶನ […]

‘ಮ್ಯಾಕ್ಸ್’ ಚಿತ್ರದಲ್ಲಿ ಸುದೀಪ್ ಕ್ಲೈ’ಮ್ಯಾಕ್ಸ್’ ಲುಕ್ ಔಟ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ‘ಮ್ಯಾಕ್ಸ್’ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. ‘ಮ್ಯಾಕ್ಸ್’ ಚಿತ್ರದಲ್ಲಿನ ಸುದೀಪ್ ಲುಕ್ ರಿವೀಲ್ ಆಗಿದ್ದು, ಸಖತ್ ರಗಡ್ ಲುಕ್‌ನಲ್ಲಿ ಕಿಚ್ಚ ಕಾಣಿಸಿಕೊಂಡಿದ್ದಾರೆ. ಮ್ಯಾಕ್ಸ್ ಚಿತ್ರದ ಕಿಚ್ಚನ ಕ್ಲೈಮ್ಯಾಕ್ಸ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.ಬಿಗ್ ಬಾಸ್ ರಿಯಾಲಿಟಿ ಶೋ ನಡುವೆಯೂ ಕಿಚ್ಚ ಸುದೀಪ್ ‘ಮ್ಯಾಕ್ಸ್’ ಸಿನಿಮಾದ ಕೊನೆಯ ಹಂತದ ಚಿತ್ರೀಕರಣಕ್ಕೆ ಸುದೀಪ್ ಸಾಥ್ ನೀಡಿದ್ದಾರೆ. ಚಿತ್ರದಲ್ಲಿನ ಲುಕ್ ಹೇಗಿದೆ ಎಂಬುದನ್ನ ಕೂಡ ರಿವೀಲ್ ಮಾಡಿದ್ದಾರೆ. ವಿಜಯ್ ಕಾರ್ತಿಕೇಯ ನಿರ್ದೇಶದ ಸಿನಿಮಾದಲ್ಲಿ ಇದೇ […]

ತಂದೆ ರೀತಿಯೇ ಫೀಲ್ ಆಯಿತುಅಚ್ಯುತ್ ಕುಮಾರ್‌ನ ಹೊಗಳಿದ ನಯನತಾರಾ

ಕಾಲಿವುಡ್ ನಟಿ ನಯನತಾರಾ ಹೊಸ ಬಗೆಯ ಪಾತ್ರಗಳಲ್ಲಿ ಮಿಂಚುತ್ತಿರುತ್ತಾರೆ. ಲೇಡಿ ಸೂಪರ್ ಸ್ಟಾರ್ ಆಗಿ ಮಹಿಳಾ ಪ್ರಧಾನ ಪಾತ್ರಗಳಲ್ಲಿಯೂ ನಟಿಸಿ ಗೆದ್ದಿದ್ದಾರೆ. ಡಿಸೆಂಬರ್‌ನಲ್ಲಿ ‘ಅನ್ನಪೂರ್ಣಿ’ ಎಂಬ ಸಿನಿಮಾ ರಿಲೀಸ್ ಆಗಿದೆ. ಈಗ ಒಟಿಟಿಯಲ್ಲಿ ರಿಲೀಸ್ ಆಗಿ ಪ್ರೇಕ್ಷಕರ ಮೆಚ್ಚುಗೆ ಪಡೆಯುತ್ತಿದೆ. ಚಿತ್ರದಲ್ಲಿ ನಯನತಾರಾ ತಂದೆ ಪಾತ್ರದಲ್ಲಿ ಕನ್ನಡದ ನಟ ಅಚ್ಯುತ್ ಕುಮಾರ್ ನಟಿಸಿದ್ದರು. ಅವರ ಮನೋಜ್ಞ ನಟನೆಗೆ ನಯನತಾರಾ ಮೆಚ್ಚುಗೆ ಸೂಚಿಸಿದ್ದಾರೆ.ಹಿರಿಯ ನಟ ಅಚ್ಯುತ್ ಕುಮಾರ್, ಕನ್ನಡ ಸಿನಿಮಾ ಮಾತ್ರವಲ್ಲದೇ ಬಹುಭಾಷಾ ಕಲಾವಿದನಾಗಿ ಸಾಕಷ್ಟು ಪಾತ್ರಗಳಲ್ಲಿ ನಟಿಸಿ […]

ಡಿಕೆ ಶಿವಕುಮಾರ್ ವಿರುದ್ಧ ಆಸ್ತಿ ಗಳಿಕೆ ಕೇಸ್ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್ಗೆ ಸಿಬಿಐ ಅರ್ಜಿ

ಬೆಂಗಳೂರುಡಿಕೆ ಶಿವಕುಮಾರ್ ವಿರುದ್ಧ ಆದಾಯ ಮೀರಿದ ಆಸ್ತಿ ಗಳಿಕೆ ಕೇಸ್‌ಗೆ ಸಂಬAಧಿಸಿದAತೆ ಸರ್ಕಾರದ ಆದೇಶದ ವಿರುದ್ಧ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿದೆ. ಡಿಕೆ ಶಿವಕುಮಾರ್‌ನ್ನು ಲೋಕಾಯುಕ್ತ ತನಿಖೆಗೆ ವಹಿಸುವ ಸರ್ಕಾರದ ಕ್ರಮ ಪ್ರಶ್ನಿಸಿ ಇಂದು ಸಿಬಿಐ ಹೈಕೋರ್ಟ್ಗೆ ಮನವಿ ಸಲ್ಲಿಸಲಾಗಿದೆ. ಇದೇ ವೇಳೆ ಡಿಕೆ ಶಿವಕುಮಾರ್ ವಿರುದ್ಧ ಅಃI ತನಿಖೆಗೆ ಸಮ್ಮತಿ ಹಿಂಪಡೆದ ಸರ್ಕಾರದ ಕ್ರಮ ಪ್ರಶ್ನಿಸಿ ಶಾಸಕ ಯತ್ನಾಳ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಕೂಡ ನಡೆಯಲಿದೆ.ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ಸರ್ಕಾರ ಸಮ್ಮತಿ ನೀಡಿತ್ತು. ಸಮ್ಮತಿ […]

ತಾಳಿ ಕಟ್ಟಿದ ಬಳಿಕ ಅನಾರೋಗ್ಯ ಕಾರಣ ಕೊಟ್ಟು ವರ ಎಸ್ಕೇಪ್

ಮಂಗಳೂರು:ತಾಳಿ ಕಟ್ಟಿದ ಬಳಿಕ ವರನೊಬ್ಬ ಅನಾರೋಗ್ಯ ಕಾರಣ ಕೊಟ್ಟು ಎಸ್ಕೇಪ್ ಆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಬೀರಿ ಬಳಿ ನಡೆದಿದೆ.ಕೇರಳದ ಕೊಝಿಕ್ಕೋಡ್ ಮೂಲದ ಅಕ್ಷಯ್ ಮದುವೆ ಮಂಗಳೂರು ಮೂಲದ ಯುವತಿ ಜೊತೆ ನಡೆಯಬೇಕಿತ್ತು. ಅಂತೆಯೇ ಯುವತಿ ಕರ್ನಾಟಕದ-ಕೇರಳ ಗಡಿಭಾಗ ಬೀರಿಯ ಖಾಸಗಿ ಹಾಲ್ ಗೆ ಬಂದಿದ್ದಾರೆ. ಆದರೆ ವರ ತಾಳಿ ಕಟ್ಟಿದ ಬಳಿಕ ಭಾರೀ ಹೈಡ್ರಾಮಾ ನಡೆಸಿದ್ದಾನೆ.ನಡೆದಿದ್ದೇನು..?:ಕಲ್ಯಾಣ ಮಂಟಪದಲ್ಲಿ ಅಕ್ಷಯ್ ಮಂಗಳೂರು ಮೂಲದ ಯುವತಿ ಜೊತೆ ಮದುವೆಯಾಗುತ್ತಿರುವ ವಿಚಾರ ಮಾಜಿ ಪ್ರೇಯಸಿ ಗಮನಕ್ಕೆ […]

ಹಿಂದೂಪುರ ಕ್ಷೇತ್ರದ ಸಂಭವನೀಯ ಪಟ್ಟಿಯಲ್ಲಿ ಹೆಸರಿದೆಟಿಕೆಟ್ ನೀಡುವ ವಿಶ್ವಾಸವಿದೆ

ಬಳ್ಳಾರಿ:ಬಿಜೆಪಿ ಬಗ್ಗೆ ಮಾತನಾಡಲ್ಲ. ಇದೀಗ ನನ್ನ ಕುಟುಂಬ ವೈಎಸ್‌ಆರ್ ಪಕ್ಷವಾಗಿದೆ. ಹಿಂದೂಪುರ ಕ್ಷೇತ್ರದ ಸಂಭವನೀಯ ಪಟ್ಟಿಯಲ್ಲಿ ನನ್ನ ಹೆಸರಿದೆ. ಟಿಕೆಟ್ ನೀಡುವ ವಿಶ್ವಾಸವಿದೆ ಎಂದು ಶ್ರೀರಾಮುಲು ಸಹೋದರಿ, ಮಾಜಿ ಸಂಸದೆ ಜೆ.ಶಾಂತಾ ಹೇಳಿಕೆ ನೀಡಿದ್ದಾರೆ.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ರಾಜಕೀಯ ಮಾಡಿದೆ. ಇದೀಗ ಆಂಧ್ರದ ಕಡೆ ರಾಜಕೀಯ ಮಾಡುತ್ತಿರುವೆ. ವೈಎಸ್‌ಆರ್ ಪಕ್ಷ ಸೇರುವ ಬಗ್ಗೆ ಶ್ರೀರಾಮುಲು ಜೊತೆಗೆ ಚರ್ಚೆ ಮಾಡಿಲ್ಲ. ಬಳ್ಳಾರಿ ತವರು ಮನೆ. ಆಂಧ್ರ ಗಂಡನ ಮನೆ. ತವರು ಮನೆ ರಾಜಕೀಯ ಮುಗೀತು. […]

2030ರ ವೇಳೆಗೆ 5,000 ಕೋಟಿ ರೂ. ವಹಿವಾಟು ಗುರಿ

ಬೆಂಗಳೂರು:ಯಶವಂತಪುರದಲ್ಲಿ ಇರುವ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಆವರಣದಲ್ಲಿ ಸರ್ಕಾರಿ ಕಚೇರಿಗಳಿಗೆ ಜಾಗ ಒದಗಿಸಲು ಸುಸಜ್ಜಿತ ಸಂಕೀರ್ಣ ನಿರ್ಮಿಸಲಾಗುವುದು. ಮುಂದಿನ 100 ವರ್ಷಗಳ ಅವಧಿಗೆ ಕಾರ್ಖಾನೆಯ ವಿಸ್ತರಣೆಗೆ ಬೇಕಾದ ಜಾಗವನ್ನು ಮೀಸಲಿಟ್ಟುಕೊಂಡು ಈ ಕೆಲಸ ಕೈಗೊಳ್ಳಲಾಗುವುದು ಎಂದು ಕಾರ್ಖಾನೆ ಅಧ್ಯಕ್ಷರೂ ಆಗಿರುವ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಹೇಳಿದರು.100 ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತದ ಸಿಬ್ಬಂದಿ ವರ್ಗಕ್ಕೆ ಇದೇ ಮೊದಲ ಬಾರಿಗೆ ಏರ್ಪಡಿಸಿದ್ದ […]