ಹುಬ್ಬಳ್ಳಿ-ಪುಣೆ-ಹುಬ್ಬಳ್ಳಿ: ವಾರದಲ್ಲಿ 4 ಬಾರಿ ವಿಮಾನ ಸಂಚಾರ ಆರಂಭ
ಹುಬ್ಬಳ್ಳಿ: ಹುಬ್ಬಳ್ಳಿ- ಪುಣೆ- ಹುಬ್ಬಳ್ಳಿ ಮಾರ್ಗವಾಗಿ ಇನ್ನು ವಾರಕ್ಕೆ ನಾಲ್ಕು ವಿಮಾನಗಳು ನಿರಂತರವಾಗಿ ಸಂಚರಿಸಲಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದ್ದಾರೆ. ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಅವರ ಪ್ರಸ್ತಾವನೆ ಮೇರೆಗೆ ಕೇಂದ್ರ ವಿಮಾನಯಾನ ಸಚಿವಾಲಯ ಹುಬ್ಬಳ್ಳಿ- ಪುಣೆ-ಹುಬ್ಬಳ್ಳಿ ಮಾರ್ಗವಾಗಿ ವಿಮಾನ ಸಂಚಾರ ಆರಂಭಕ್ಕೆ ಕ್ರಮ ಕೈಗೊಂಡಿದೆ. 2024 ಫೆಬ್ರವರಿ 2ರಿಂದ ಈ ವಾಯು ಮಾರ್ಗದಲ್ಲಿ ನಾಲ್ಕು ವಿಮಾನಗಳು ಸಂಚಾರ ಪುನರಾರಂಭ ಮಾಡಲಿವೆ ಎಂದು ಸಚಿವ ಪ್ರಹ್ಲಾದ್ ಜೋಶಿ ಅವರು ಟ್ವೀಟ್ ಮಾಡಿದ್ದಾರೆ. […]







































































































































































































































































































































































































































































































































































































































































































































































































































































































































































































































































































































