ಬಾಲರಾಮನ ಪ್ರಾಣಪ್ರತಿಷ್ಠಾ ದಿನ ಗೈರಾದ್ರೆ 1 ಸಾವಿರ ಫೈನ್ ಪ್ರಕರಣ- ಶಾಲೆಯ ಪ್ರಾಂಶುಪಾಲರ ಸ್ಪಷ್ಟನೆ ಏನು?
ಚಿಕ್ಕಮಗಳೂರು: ಜಿಲ್ಲೆಯ ಕ್ರೈಸ್ತ ಶಾಲೆಯೊಂದರಲ್ಲಿ ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಯ ದಿನ ಗೈರಾದ್ರೆ 1 ಸಾವಿರ ದಂಡ ಹಾಕಲಾಗುವುದು ಎಂಬ ವಿಚಾರ ಇಂದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಬೆನ್ನಲ್ಲೇ ಇದೀಗ ಶಾಲೆಯ ಪ್ರಾಂಶುಪಾಲರು ಸ್ಪಷ್ಟನೆ ಕೊಟ್ಟಿದ್ದು, ಅಯೋಧ್ಯೆಗೂ ಮಕ್ಕಳಿಗೆ ಎಚ್ಚರಿಕೆ ನೀಡಿದ್ದಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ದಂಡ ಪ್ರಕರಣ: ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ದಿನ ಯಾರಾದರೂ ಶಾಲೆಗೆ ರಜೆ ಹಾಕಿದ್ರೆ 1,000 ದಂಡ (Fone) ಎಂದು ಚಿಕ್ಕಮಗಳೂರು ನಗರದ ಕ್ರೈಸ್ತ ಶಾಲೆ ಮಕ್ಕಳಿಗೆ ಎಚ್ಚರಿಕೆ ನೀಡಿದೆ ಎನ್ನಲಾಗಿತ್ತು. […]







































































































































































































































































































































































































































































































































































































































































































































































































































































































































































































































































































































