September 15, 2026

ಡಿವೈಡರ್‌ಗೆ ಡಿಕ್ಕಿಯಾಗಿ ಟ್ಯಾಂಕರ್ ಪಲ್ಟಿಫ್ಲೈಓವರ್ ಮೇಲೆ ಧಗಧಗಿಸಿದ ಬೆಂಕಿ

ಚAಡೀಗಢ:ಪಂಜಾಬ್‌ನ ಲೂಧಿಯಾನದಲ್ಲಿ ಫ್ಲೈಓವರ್ ಮೇಲೆ ಬೆಂಕಿಯ ಕೆನ್ನಾಲಿಗೆ ಧಗಧಗಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.ಲೂಧಿಯಾನದ ಖನ್ನಾ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಯಿಲ್ ತುಂಬಿ ಹೊರಟಿದ್ದ ಟ್ಯಾಂಕರ್ ಫ್ಲೈಓವರ್‌ನ ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಪರಿಣಾಮ ಬೆಂಕಿ ಹೊತ್ತಿ ಉರಿದಿದೆ.ಘಟನೆಯ ಹಿನ್ನೆಲೆಯಲ್ಲಿ ಕೆಲ ಕಾಲ ಆ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಇನ್ನು ಫ್ಲೈಓವರ್‌ನಲ್ಲಿ ಬೆಂಕಿಯ ಕೆನ್ನಾಲಿಗೆ ಆಕಾಶದೆತ್ತರಕ್ಕೆ ಹೊತ್ತಿ ಉರಿಯುತ್ತಿದ್ದರೆ,ಇದರ ಕೆಳಗೆ ವಾಹನಗಳು ಚಲಿಸುತ್ತಿದ್ದವು. ಸದ್ಯಕ್ಕೆ ಯಾವುದೇ ಪ್ರಾಣಹಾನಿ ಅಥವಾ ಗಂಭೀರ ಗಾಯಗಳ ಬಗ್ಗೆ ವರದಿಯಾಗಿಲ್ಲ.ಘಟನೆಯ […]

ಅಕ್ರಮ ಹಣ ವರ್ಗಾವಣೆ ಆರೋಪಇಡಿ ಮೂರನೇ ಸಮನ್ಸ್ಗೂ ಜಗ್ಗದ ಕೇಜ್ರಿವಾಲ್

ನವದೆಹಲಿ:ದೆಹಲಿಯ ಹೊಸ ಮದ್ಯ ನೀತಿ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬAಧಿಸಿದAತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಜಾರಿ ನಿರ್ದೇಶನಾಲಯ ಮೂರನೇ ಬಾರಿಗೆ ಸಮನ್ಸ್ ನೀಡಿದ್ದು, ಈ ಬಾರಿಯೂ ವಿಚಾರಣೆಗೆ ಹಾಜರಾಗಲು ಅವರು ನಿರಾಕರಿಸಿದ್ದಾರೆ.ಇಂದು ದೆಹಲಿಯ ಇಡಿ ಕಚೇರಿಗೆ ಆಗಮಿಸಿ ಹೇಳಿಕೆ ನೀಡುವಂತೆ ಕೋರಿ ಸಮನ್ಸ್ ಜಾರಿ ಮಾಡಿತ್ತು, ಆದರೆ ವಿಚಾರಣೆಗೆ ಆಗಮಿಸಲು ಸಾಧ್ಯವಾಗುವುದಿಲ್ಲ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ. ಇದೇ ವೇಳೆ ನಾನು ತನಿಖೆಗೆ ಸಹಕರಿಸಲು ಸಿದ್ಧನಿದ್ದೇನೆ. ಈ ಸಮನ್ಸ್ ಕಾನೂನುಬಾಹಿರ ಎಂದು ಅವರು […]

ಕೊನೆಗೂ ಬಾಯ್‌ಫ್ರೆಂಡ್ ಬಗ್ಗೆ ಬಾಯ್ಬಿಟ್ಟ ಜಾನ್ವಿ

ಬಾಲಿವುಡ್ ನಟಿ ಜಾನ್ವಿ ಕಪೂರ್ ಸಿನಿಮಾಗಿಂತ ಹೆಚ್ಚೆಚ್ಚು ತಮ್ಮ ಖಾಸಗಿ ವಿಚಾರವಾಗಿಯೇ ಚಾಲ್ತಿಯಲ್ಲಿರುತ್ತಾರೆ. ಇದೀಗ ‘ಕಾಫಿ ವಿತ್ ಕರಣ್’ ಸೀಸನ್ ೮ರಲ್ಲಿ ಬಾಯ್‌ಫ್ರೆಂಡ್ ಬಗ್ಗೆ ಬಾಯ್ಬಿಟ್ಟಿದ್ದಾರೆ.ಸೆನ್ಸೇಷನಲ್ ಶೋ ಅಂದರೆ ಅದು ಕಾಫಿ ವಿತ್ ಕರಣ್ ಕಾರ್ಯಕ್ರಮ. ಏನಾದರೂ ವಿವಾದಗಳ ಅಥವಾ ಸ್ಟಾರ್‌ಗಳ ಸೀಕ್ರೆಟ್ ರಿವೀಲ್ ಆಗುವ ಮೂಲಕ ಶೋ ಅಭಿಮಾನಿಗಳ ಗಮನ ಸೆಳೆದಿದೆ. ಹೀಗಿರುವಾಗ ಕರಣ್ ಶೋಗೆ ಶ್ರೀದೇವಿ ಪುತ್ರಿಯರು ಜಾನ್ವಿ-ಖುಷಿ ಕಪೂರ್ ಎಂಟ್ರಿ ಕೊಟ್ಟಿದ್ದಾರೆ. ಇದೀಗ ತಮ್ಮ ರಿಯಲ್ ಲೈಫ್ ಲವ್ ಬಗ್ಗೆ ಜಾನ್ವಿ ರಿವೀಲ್ […]

ಹೊಸ ವರ್ಷದ ಆರಂಭದಲ್ಲೇ ಶ್ರೀಲೀಲಾ ಹೊಸ ಶಪಥ

ಕನ್ನಡದ ನಟಿ ಶ್ರೀಲೀಲಾ ಹೊಸ ವರ್ಷದಲ್ಲಿ ಹೊಸ ಶಫಥ ಮಾಡಿದ್ದಾರೆ. ಇನ್ನೇನು ನನ್ನನ್ನು ಹಿಡಿಯೋರು ಯಾರೂ ಇಲ್ಲ ಎಂದು ಶ್ರೀಲೀಲಾ ಮೆರೆಯುತ್ತಿದ್ದರು. ಆದರೆ ಕಳೆದ ವರ್ಷ ಮೂರು ಸಿನಿಮಾ ಮಕಾಡೆ ಮಲಗಿತ್ತು. ಇದೇ ಕಂಟಿನ್ಯೂ ಆದರೆ ಬಣ್ಣದ ಲೋಕವೂ ದೂರ ಸರಿಸುವುದು ನಿಶ್ಚಿತ. ಅದು ಶ್ರೀಲೀಲಾ ಅರಿವಿಗೂ ಬಂದಿದೆ. ಹಾಗಾಗಿ ಹೊಸ ವರ್ಷದ ಆರಂಭದಲ್ಲೇ ಹೊಸ ಶಪಥ ಮಾಡಿದ್ದಾರೆ.ಶ್ರೀಲೀಲಾ ಟಾಲಿವುಡ್‌ನ ಹಾಟ್ ಬ್ಯೂಟಿ. ಒಂದೇ ಒಂದು ಸಿನಿಮಾದಿಂದ ಹತ್ತತ್ತು ಸಿನಿಮಾ ಹೊಸಿಲಿಗೆ ಬಂದು ಬಿದ್ದವು. ಬಂದಾಗಲೇ ಬಾಚಿಕೊಳ್ಳಬೇಕೆನ್ನುವ […]

ಬೋಲ್ಡ್ ಆದ ‘ಟೋಬಿ’ ಸುಂದರಿಕನ್ನಡದ ಆಲಿಯಾ ಭಟ್ ಎಂದ ಫ್ಯಾನ್ಸ್

ಸ್ಯಾಂಡಲ್‌ವುಡ್ ನಟಿ ಚೈತ್ರಾ ಆಚಾರ್ ಮತ್ತೆ ಹೊಸ ಫೋಟೋಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ. ಬೋಲ್ಡ್ ಆಗಿ ‘ಟೋಬಿ’ ಸುಂದರಿ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ನ್ಯೂ ಲುಕ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ.ಬಿಳಿ ಬಣ್ಣದ ಶರ್ಟ್- ಲೈಟ್ ಕಲರ್ ಸ್ಕರ್ಟ್ ಧರಿಸಿದ್ದಾರೆ ಚೈತ್ರಾ. ಮಾದಕ ನೋಟ ಬೀರುವ ಮೂಲಕ ಸಖತ್ ಬೋಲ್ಡ್ & ಬ್ಯೂಟಿಫುಲ್ ಆಗಿ ಚೈತ್ರಾ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಚೈತ್ರಾ ಫೋಟೋ ನೋಡ್ತಿದ್ದಂತೆ ಬಾಲಿವುಡ್ ನಟಿ ಆಲಿಯಾ ಭಟ್‌ಗೆ ಹೋಲಿಸಿ ಹೊಗಳಿದ್ದಾರೆ ಫ್ಯಾನ್ಸ್. ಕನ್ನಡದ ಆಲಿಯಾ ಭಟ್ ಎಂದು […]

60 ಕೋಟಿ ರೂ. ಮೌಲ್ಯದ ಅರಣ್ಯ ಭೂಮಿ ಒತ್ತುವರಿ ತೆರವು

ಬೆಂಗಳೂರು:ನಗರದ ಕೆಂಗೇರಿ ಬಳಿಯ ತುರಹಳ್ಳಿ ಮೀಸಲು ಬಿ.ಎಂ. ಕಾವಲು ಬಫರ್ ವಲಯದಲ್ಲಿ 60 ಕೋಟಿ ರೂ. ಮೌಲ್ಯದ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿ ಜಪ್ತಿ ಮಾಡಿಕೊಳ್ಳಲಾಗಿದೆ. ನಿನ್ನೆ ಸಭೆ ನಡೆಸಿ ಒತ್ತುವರಿ ತೆರವುಗೊಳಿಸಲು ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದರು. ಹಾಗಾಗಿ ೬.೫ ಎಕರೆ ಒತ್ತುವರಿ ಭೂಮಿ ತೆರವು ಮಾಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.ಬೆAಗಳೂರು ನಗರ ಡಿಸಿಎಫ್ ರವೀಂದ್ರಕುಮಾರ್, ಎಸಿಎಫ್ ಸುರೇಶ್ ಆರ್‌ಎಫ್‌ಒ ಗೋವಿಂದರಾಜ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿ ಅರಣ್ಯ ಇಲಾಖೆಯ 20ಕ್ಕೂ ಹೆಚ್ಚು ಸಿಬ್ಬಂದಿಯಿAದ ಒತ್ತುವರಿ ತೆರವು […]

ಕರ್ನಾಟಕದಲ್ಲಿ ತುಘಲಕ್ ಸರ್ಕಾರ

ಬೆಂಗಳೂರು:ಕರ್ನಾಟಕದಲ್ಲಿ ತುಘಲಕ್ ಸರ್ಕಾರ ನಡೆಯುತ್ತಿದೆ. ಅದಕ್ಕಾಗಿ ಸರ್ಕಾರ ಕರ ಸೇವಕರ ಬಂಧನ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ದ ಮಾಜಿ ಸಚಿವ ರೇಣುಕಾಚಾರ್ಯ ಕಿಡಿಕಾರಿದ್ದಾರೆ.ಕರ ಸೇವಕರ ಬಂಧನ ವಿಚಾರಕ್ಕೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತ ಮಾಡುತ್ತಿಲ್ಲ. ಇದು ತುಘಲಕ್ ದರ್ಬಾರ್ ಸರ್ಕಾರ. ಸದ್ದಾಂ ಹುಸೇನ್ ತರಹ ಆಡಳಿತ ಮಾಡುತ್ತಿದ್ದಾರೆ. ೩೧ ವರ್ಷದ ಕೇಸ್ ಈಗ ರೀ ಓಪನ್ ಮಾಡುತ್ತಾರೆ. ದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಇಡೀ ದೇಶದ ಜನ ಖುಷಿ […]

ಮಕ್ಕಳ ಭವಿಷ್ಯಕ್ಕೆ ಎರವಾದ ಅಗ್ಗದ ಗ್ಯಾರಂಟಿ

ಬೆAಗಳೂರು:ಚುನಾವಣಾ ಲಾಭಕ್ಕಾಗಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಅಗ್ಗದ ಗ್ಯಾರಂಟಿಗಳು ಮಕ್ಕಳ ಭವಿಷ್ಯಕ್ಕೆ ಎರವಾಗಿದೆ ಎಂದು ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಶಾಲಾ ವಿದ್ಯಾರ್ಥಿಗಳು ಬಸ್ ಹತ್ತಲಾಗದೆ ಪರದಾಡುತ್ತಿರುವ ಮತ್ತು ಮಕ್ಕಳು ಹತ್ತುತ್ತಿಂದತೆಯೇ ಬಸ್ ಮುಂದಕ್ಕೆ ಚಲಿಸುತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಂಚಿಕೊAಡಿರುವ ಅವರು, ಮಹಿಳೆಯರಿಗೆ ಶಕ್ತಿ ತುಂಬುತ್ತೇವೆAದು ಹೊರಟ ಕಾಂಗ್ರೆಸ್ ಪಕ್ಷದ ಸರ್ಕಾರ ಹೆತ್ತ ಮಕ್ಕಳ ಜೀವ ತೆಗೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಶಕ್ತಿ ಯೋಜನೆ ಬಗ್ಗೆ ನನ್ನ ತಕರಾರು ಇಲ್ಲ. ಆದರೆ, […]

ಬಿ.ಕೆ ಹರಿಪ್ರಸಾದ್ ಹಿಂದೂವೇ ಅಲ್ಲ, ದೇಶದ್ರೋಹಿ

ಉಡುಪಿ:ಬಿ.ಕೆ ಹರಿಪ್ರಸಾದ್ ಹಿಂದೂವೇ ಅಲ್ಲ. ಅವರು ದೇಶದ್ರೋಹಿ. ಕಾಂಗ್ರೆಸ್ ನಲ್ಲಿ ನಿರ್ಲಕ್ಷಕ್ಕೆ ಒಳಪಟ್ಟ ನಾಯಕ ಇದ್ದರೆ ಅದು ಬಿ.ಕೆ ಹರಿಪ್ರಸಾದ್ ಎಂದು ಶಾಸಕ ಯಶ್ ಪಾಲ್ ಸುವರ್ಣ ವಾಗ್ದಾಳಿ ನಡೆಸಿದ್ದಾರೆ.ಅಯೋಧ್ಯೆ ಬಿಜೆಪಿ ಪಕ್ಷದ ರಾಜಕೀಯ ಮಂದಿರ. ರಾಮಲಲ್ಲಾ ಪ್ರತಿಷ್ಠಾಪನೆ ಮಾಡುವ ಮೋದಿ, ಅಮಿತ್ ಶಾ ಅವರದ್ದು ಯಾವ ಧರ್ಮ ಎಂದು ಹರಿಪ್ರಸಾದ್ ಪ್ರಶ್ನೆ ಮಾಡಿದ್ದಾರೆ. ಈ ವಿಚಾರಕ್ಕೆ ಯಶ್ ಪಾಲ್ ಸುವರ್ಣ ಇಂದು ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ ನವರೇ ಹರಿಪ್ರಸಾದ್ ಅನ್ನು ಲೆಕ್ಕಿಸುವುದಿಲ್ಲ, ಬದಿಗಿಟ್ಟಿದ್ದಾರೆ. ರಾಮ ಮಂದಿರ […]

ನಾವು ಭಾವನೆ ಮೇಲೆ ರಾಜಕಾರಣ ಮಾಡಲ್ಲ

ಬೆಂಗಳೂರು:ಇಂದಿನಿAದ ಬೆಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದ್ದು, ಇಂದು ಕೆ.ಆರ್.ಪುರಂನ ಐಟಿಐ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಿದರು. ಶಾಸಕರಾದ ಭೈರತಿ ಬಸವರಾಜ್ ಹಾಗೂ ಮಂಜುಳಾ ಲಿಂಬಾವಳಿ, ಮಾಜಿ ಶಾಸಕರಾದ ನಾಗೇಶ್, ಪೂರ್ಣಿಮಾ, ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್, ವಿವಿಧ ಪ್ರಾಧಿಕಾರಿಗಳ ಅಧ್ಯಕ್ಷ ರಾಕೇಶ್ ಸಿಂಗ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ವೇಳೆ ಮಾತನಾಡಿದ ಡಿಸಿಎಂ ಡಿಕೆಶಿ, ಏನೇ ಸಮಸ್ಯೆ ಇದ್ರೂ ಹೇಳಿ. ನಾವು ಭಾವನೆ ಮೇಲೆ ರಾಜಕಾರಣ […]